'ಬಾಹುಬಲಿ' ಟೊಯೊಟಾ ಪಿಕ್‌ಟಪ್ ಟ್ರಕ್‌ಗೆ ಭರ್ಜರಿ ಬೇಡಿಕೆ: ಮನೆಗೆ ತರಲು ಎಷ್ಟು ತಿಂಗಳು ಕಾಯಬೇಕು?
ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಮಹೀಂದ್ರಾ, ಹ್ಯುಂಡೈ, ಹೋಂಡಾ ಹಾಗೂ ಕಿಯಾದಂತೆ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಕೂಡ ಪ್ರಮುಖ ವಾಹನ ತಯಾರಕ ಕಂಪನಿಯಾಗಿದೆ. ಟೊಯೊಟಾ ಕಂಪನಿಯು ಭಾರತದಲ್ಲಿ ಹಲವು ಜನಪ್ರಿಯ ಕಾರುಗಳನ್ನು ಮಾರಾಟ ಮಾಡುತ್ತಿದೆ. ಭಾರತದಲ್ಲಿ ಟೊಯೊಟಾ (Toyota) ದಶಕಗಳಿಂದ ಜನಪ್ರಿಯ ಕಾರು ತಯಾರಕ ಕಂಪನಿಯಾಗಿ ಮನೆಮಾತಾಗಿದೆ. ಟೊಯೊಟಾ ಕಂಪನಿ ಮಾರಾಟಗೊಳಿಸುವ ಇನ್ನೋವಾ, ರೂಮಿಯನ್ ಸೇರಿದಂತೆ ಇತರೆ ಕಾರುಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಇನ್ನು ಟೊಯೊಟಾ ಹೈಲಿಕ್ಸ್ ಪಿಕ್‌ಟಪ್ ಟ್ರಕ್ ಮಾದರಿಯನ್ನು ಬಿಡುಗಡೆಗೊಳಿಸಿತು.
ಟೊಯೊಟಾ ಹೈಲಿಕ್ಸ್ ಮಾದರಿಯು ಆಫ್-ರೋಡ್ ಟ್ರಕ್ ಪ್ರೇಮಿಗಳನ್ನು ಸೆಳೆಯುವಲ್ಲಿ ಯಶಸ್ಬಿಯಾದರು. ಈ ನಡುವೆ ಟೊಯೊಟಾ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ನವೆಂಬರ್ 1ಕ್ಕೆ ಅನ್ವಯವಾಗುವಂತೆ ಎಲ್ಲ ಕಾರುಗಳ ಕಾಯುವಿಕೆ ಅವಧಿ (Waiting Period) ಕುರಿತ ವಿವರಗಳನ್ನು ಪ್ರಕಟಿಸಿದೆ. ಇದರಲ್ಲಿ ಟೊಯೊಟಾ ಹೈಲಿಕ್ಸ್ ಪ್ರೀಮಿಯಂ ಪಿಕ್ಅಪ್ ಟ್ರಕ್ ಆಗಿದ್ದು, ಬುಕ್ಕಿಂಗ್ ಮಾಡಿದ 1 ತಿಂಗಳ ನಂತರ ಈ ಕಾರನ್ನು ಗ್ರಾಹಕರಿಗೆ ವಿತರಿಸಲಾಗುತ್ತದೆ.

ಈ ಟೊಯೊಟಾ ಹೈಲಿಕ್ಸ್ ಮಾದರಿಗೆ ರೂ.30.40 ರಿಂದ ರೂ.37.90 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ದೊರೆಯುತ್ತದೆ. ಈ ಟೊಯೊಟಾ ಹೈಲಿಕ್ಸ್ (Toyota Hilux) ಪಿಕ್‌ಟಪ್ ಟ್ರಕ್ ಮಾದರಿಯು ಸ್ಟ್ಯಾಂಡರ್ಡ್ (Standard) ಹಾಗೂ ಹೈ (High) ಎಂಬ 2 ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಗ್ರಾಹಕರು ತಮ್ಮ ಆದ್ಯತೆಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು.
ಟೊಯೊಟಾ ಹೈಲಿಕ್ಸ್ ಮಾದರಿಯು ಎಮೋಷನಲ್ ರೆಡ್, ವೈಟ್ ಪರ್ಲ್ ಕ್ರಿಸ್ಟಲ್ ಶೈನ್, ಸೂಪರ್ ವೈಟ್ ಒಳಗೊಂಡಂತೆ 5 ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಟೊಯೊಟಾ ಹೈಲಿಕ್ಸ್, 2.8 - ಲೀಟರ್ ಟರ್ಬೊ ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. 6 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುವ ಮಾದರಿ 204 PS ಗರಿಷ್ಠ ಪವರ್, 420 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಪಡೆದಿರುವ ಮಾದರಿಯು 204 PS ಪವರ್, 500 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಟೊಯೊಟಾ ಹೈಲಿಕ್ಸ್ ಪಿಕ್-ಅಪ್ ಟ್ರಕ್ ಆಗಿದ್ದರೂ 5 ಮಂದಿ ಆರಾಮದಾಯವಾಗಿ ಪ್ರಯಾಣಿಸಬಹುದಾಗಿದೆ. ಈ ಪಿಕ್-ಅಪ್ ಟ್ರಕ್ ವಿನ್ಯಾಸದ ದೃಷ್ಟಿಯಿಂದ ಕೂಡ ಅತ್ಯುತ್ತಮವಾಗಿದ್ದು, ಮುಂಭಾಗ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, ದೊಡ್ಡದಾದ ಗ್ರಿಲ್, ಎಲ್ಇಡಿ ಫಾಗ್ ಲ್ಯಾಂಪ್ಸ್ ಹೊಂದಿದೆ.
ಇದರೊಂದಿಗೆ 18 - ಇಂಚಿನ ಮಲ್ಟಿ ಸ್ಪೋಕ್ ಅಲಾಯ್ ವೀಲ್ಸ್, ಆಕರ್ಷಕ ಡೋರ್ ಹ್ಯಾಂಡಲ್‌ನ್ನು ಪಡೆದಿದೆ. ಹಿಂಭಾಗದ ವಿನ್ಯಾಸವು ಚೆನ್ನಾಗಿದ್ದು, ಅತ್ಯಾಧುನಿಕ ಟೈಲ್‌ಗೇಟ್‌ನ್ನು ಒಳಗೊಂಡಿದೆ. ಈ ಟೊಯೊಟಾ ಹೈಲಿಕ್ಸ್, ಫಾರ್ಚುನರ್ ಎಸ್‌ಯುವಿ ರೀತಿಯಲ್ಲಿಯೇ ವೈಶಿಷ್ಟ್ಯ (Features) ಗಳನ್ನು ಪಡೆದಿದೆ. 8 - ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಅನ್ನು ಒಳಗೊಂಡಿದೆ.

ಇದರೊಂದಿಗೆ ಪುಶ್ - ಬಟನ್ ಸ್ಟಾರ್ಟ್/ ಸ್ಟಾಪ್, ಡುಯಲ್ - ಝೋನ್ ಆಟೋ ಕ್ಲೈಮೇಟ್ ಕಂಟ್ರೋಲ್, ರೇರ್ ಎಸಿ ವೆಂಟ್ಸ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಆಕರ್ಷಕ ಫೀಚರ್ಸ್ ಗಳನ್ನು ಹೊಂದಿವೆ. ಸುರಕ್ಷತೆಯಲ್ಲಿಯೂ ಈ ಹೈಲಿಕ್ಸ್ ಪಿಕ್-ಅಪ್ ಟ್ರಕ್ ಸರಿ ಸಾಟಿಯೇ ಇಲ್ಲ ಎಂದು ಹೇಳಬಹುದು. ಈ ಟೊಯೊಟಾ ಹಿಲಕ್ಸ್ 12 ಕಿ.ಮೀ ವರೆಗೆ ಮೈಲೇಜ್ ಅನ್ನು ನೀಡುತ್ತದೆ.
ಇದರೊಂದಿಗೆ 7 ಏರ್‌ಬ್ಯಾಗ್, VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ಬ್ರೇಕ್ ಅಸಿಸ್ಟ್, ಫ್ರಂಟ್, ರೇರ್ ಪಾರ್ಕಿಂಗ್ ಸೇನಾರ್ಸ್, ರಿವರ್ಸಿಂಗ್ ಕ್ಯಾಮೆರಾನಂತಹ ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿದೆ. ಇನ್ನು ಈ ಟೊಯೊಟಾ ಹೈಲಿಕ್ಸ್ ಪಿಕ್‌ಟಪ್ ಟ್ರಕ್ ಮಾದರಿಯು ಭರ್ಜರಿ ಬೇಡಿಕೆಯೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.


Click it and Unblock the Notifications