Toyota: ಭಾರತದ ಬೆಸ್ಟ್ ಡೀಸೆಲ್ MPV ಕಾರು: 8-ಮಂದಿಗೆ ಆರಾಮ ಪ್ರಯಾಣ, ಬೆಲೆಯೆಷ್ಟು?
ಭಾರತೀಯ ವಾಹನ ಉದ್ಯಮದಲ್ಲಿ ಹೊಸ ಅಲೆ ಎಬ್ಬಿಸಿದ್ದ ಟೊಯೋಟಾ ಇನ್ನೋವಾ ಕ್ರಿಸ್ಟಾ, ಎಂಪಿವಿ ವಿಭಾಗದ ಅತ್ಯಂತ ಬೇಡಿಕೆಯ ವಾಹನವಾಗಿದೆ. 2005ರಲ್ಲಿ ಹೆಚ್ಚು ಜನಪ್ರಿಯವಾದ ಕ್ವಾಲಿಸ್ ಅನ್ನು ಬದಲಾಯಿಸಿ ಪ್ರೀಮಿಯಂ ಎಂಪಿವಿಯಾಗಿ ಟೊಯೊಟಾ ಇನೋವಾ ಕಾರನ್ನು ಪರಿಚಯಿಸಿದರು. ಬಳಿಕ 2016 ರಲ್ಲಿ, ಮೊದಲ ಬಾರಿಗೆ ಗಂಭೀರವಾದ ನವೀಕರಣಗಳ ನಂತರ, ಮೊದಲ ತಲೆಮಾರಿನ ಇನ್ನೋವಾ ಅಂತಿಮವಾಗಿ ಇನ್ನೋವಾ ಕ್ರಿಸ್ಟಾ ಆಗಿ ವಿಕಸನಗೊಂಡಿತು. ಅಂದಿನಿಂದ ಇಂದಿನವರೆಗೆ ಎಂಪಿವಿ ವಿಭಾಗದಲ್ಲಿ ಟೊಯೋಟಾ ಇನ್ನೋವಾ ಕ್ರಿಷ್ಟಾದಷ್ಟು ಜನಪ್ರಿಯತೆ ಪಡೆದ ಮತ್ತೊಂದು ಕಾರು ಬಂದಿಲ್ಲ.
ಇನ್ನೋವಾ ಕ್ರಿಸ್ಟಾ ಭಾರತದಲ್ಲಿ ಪ್ರಸ್ತುತ ಕಿಯಾ ಕ್ಯಾರೆನ್ಸ್‌ಗೆ ಪ್ರೀಮಿಯಂ ಆಯ್ಕೆಯಾಗಿದೆ. ಹಾಗೆಯೇ ಟೊಯೊಟಾ ಇನ್ನೋವಾ ಹೈಕ್ರಾಸ್ ಮತ್ತು ಮಾರುತಿ ಇನ್ವಿಕ್ಟೊ ಕಾರುಗಳಲ್ಲಿ ಡೀಸೆಲ್ ಎಂಜಿನ್ ಇಲ್ಲವಾದ ಕಾರಣ ಇವುಗಳಿಗೂ ಪರ್ಯಾಯವಾಗಿದೆ. ಉತ್ತಮ ಪ್ರಯಾಣಕ್ಕೂ ಜನಪ್ರಿಯತೆ ಪಡೆದಿರುವ ಇನ್ನೋವಾ ಕ್ರಿಸ್ಟಾ ಕಾರಿನ ಸದ್ಯದ ಬೆಲೆ, ಫೀಚರ್ಸ್ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.

ಟೊಯೋಟಾ ಇನ್ನೋವಾ ಕ್ರಿಸ್ಟಾ ಬೆಲೆಯು ಭಾರತದಲ್ಲಿ ರೂ. 19.99 ಲಕ್ಷದಿಂದ ಆರಂಭವಾಗಿ ಟಾಪ್ ವೇರಿಯೆಂಟ್‌ಗೆ ರೂ. 26.55 ಲಕ್ಷ (ಎಕ್ಸ್ ಶೋ ರೂಂ) ಬೆಲೆಯಿದೆ. ಇದು ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, GX, GX Plus, VX, ಮತ್ತು ZX ರೂಪಾಂತರಗಳನ್ನು ಗ್ರಾಹಕರು ತಮ್ಮ ಆಯ್ಕೆಗೆ ತಕ್ಕಂತೆ ಆರಿಸಿಕೊಳ್ಳಬಹುದು. ಹಾಗೆಯೇ ಈ ಕಾರನ್ನು 7 ಮತ್ತು 8 ಆಸನಗಳ ವಿನ್ಯಾಸದಲ್ಲಿ ನೀಡಲಾಗುತ್ತದೆ.
ಹೊಸ ಟೊಯೋಟಾ ಇನ್ನೋವಾ ಕ್ರಿಸ್ಟಾವನ್ನು ಪ್ಲಾಟಿನಂ ವೈಟ್ ಪರ್ಲ್, ಸೂಪರ್ ವೈಟ್, ಸಿಲ್ವರ್ ಮೆಟಾಲಿಕ್, ಆಟಿಟ್ಯೂಡ್ ಬ್ಲ್ಯಾಕ್ ಮೈಕಾ ಮತ್ತು ಅವಂತ್ ಗಾರ್ಡೆ ಬ್ರಾಂಜ್ ಎಂಬ ಐದು ಮೊನೊಟೋನ್ ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಈ ಐದು ಬಣ್ಣಗಳೊಂದಿಗೆ ಇನ್ಯಾವುದೇ ಹೆಚ್ಚುವರಿ ಬಣ್ಣಗಳು ಇಲ್ಲದಿದ್ದರೂ ಗ್ರಾಹಕರು ಈ ಕಾರನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ.

ಟೊಯೋಟಾ ಇನ್ನೋವಾ ಕ್ರಿಸ್ಟಾದಲ್ಲಿ 2.4-ಲೀಟರ್ ಡೀಸೆಲ್ ಎಂಜಿನ್ ನೀಡಲಾಗಿದ್ದು, ಈ ಎಂಜಿನ್ 150 PS ಪವರ್ ಮತ್ತು 343 Nm ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಸುರಕ್ಷತೆಗಾಗಿ ಏಳು ಏರ್‌ಬ್ಯಾಗ್‌ಗಳು, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (ವಿಎಸ್‌ಸಿ), ಹಿಲ್-ಸ್ಟಾರ್ಟ್ ಅಸಿಸ್ಟ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಬ್ರೇಕ್ ಅಸಿಸ್ಟ್ ನೀಡಲಾಗಿದೆ.
ಫೀಚರ್ಸ್ ವಿಷಯಕ್ಕೆ ಬಂದರೆ ಇನ್ನೋವಾ ಕ್ರಿಸ್ಟಾದಲ್ಲಿ, ಹಿಂಭಾಗದ AC ವೆಂಟ್‌ಗಳೊಂದಿಗೆ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, 8 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 8 - ವೇ ಪವರ್-ಅಡ್ಜಸ್ಟಬಲ್ ಡ್ರೈವರ್ ಸೀಟ್, ಬ್ಲಾಕ್ ಲೈನ್‌ನೊಂದಿಗೆ ಇನ್‌ಸ್ಟ್ರುಮೆಂಟ್ ಪೇನ್, ಡ್ರೈವರ್ ಮಾಹಿತಿಯೊಂದಿಗೆ ಡಾಟ್ ಟೈಪ್ MID, 4 ಸ್ಪೀಕರ್‌ಗಳು ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಹೊಂದಿದೆ.

ಈ ಟೊಯೊಟಾ ಇನೋವಾ ಕ್ರಿಸ್ಟಾ ಕಾರು ಭಾರೀ ಬೇಡಿಕೆಯನ್ನು ಹೊಂದಿರುವುದರಿಂದ ಇದಕ್ಕೆ ಕಾಯುವಿಕೆ ಅವಧಿ (Waiting Period) ಕೂಡ ಹೆಚ್ಚಾಗಿದೆ. ಇನೋವಾ ಕ್ರಿಸ್ಟಾ ಕಾರನ್ನು ಈಗ ಬುಕ್ ಮಾಡಿದರೆ ಸುಮಾರು 3 ರಿಂದ 4 ತಿಂಗಳ ಕಾಲ ಕಾದು ವಿತರಣೆ ಪಡೆಯಬೇಕಾಗುತ್ತದೆ. ಈ ಅಸಮಾನ್ಯ ಎಂಪಿವಿ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications