ರಗಡ್ ಲುಕ್‌ನಲ್ಲಿ ಮಿಂಚಲಿದೆ ಇನೋವಾ ಕ್ರಿಸ್ಟಾ: ಯಾವುದೇ ಕಾರು ಬಂದರೂ ಅಲುಗಾಡಿಸಲು ಸಾಧ್ಯವಿಲ್ಲ!
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಬಜೆಟ್ ಬೆಲೆಯಲ್ಲಿ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವ ವಿವಿಧ ಕಾರುಗಳನ್ನು ಮಾರಾಟಗೊಳಿಸುವ ಮೂಲಕ ಭಾರಿ ಜನಪ್ರಿಯತೆ ಗಳಿಸಿದೆ. ಅದರಲ್ಲೂ ಟೊಯೊಟಾ ಕಂಪನಿಯು ಇನೋವಾ ಕಾರು ಬಿಡುಗಡೆಯಾದಗಿನಿಂದಲೂ ಬಹುಬೇಡಿಕೆಯ ಎಂಪಿವಿಯಾಗಿದೆ. ಈ ಕಾರಿಗೆ ಸರಿಯಾದ ಪೈಪೋಟಿಗೆ ಯಾವುದು ಇಲ್ಲ ಎಂದು ಹೇಳಬಹುದು. ಟೋಯೊಟಾ ಇನೋವಾ ಲಕ್ಷಾಂತರ ಕಿ.ಮೀ ಚಲಿಸಿದರೂ ಎಂಜಿನ್ ಉತ್ತಮ ಸ್ಥಿತಿಯಲ್ಲಿರುತ್ತದೆ. ಅಲ್ಲದೇ ಟೊಯೊಟಾ ಇನೋವಾ ಉತ್ತಮ ಫ್ಯಾಮಿಲಿ ಕಾರ್ ಆಗಿದೆ. ನಂತರದಲ್ಲಿ ಬಂದ ಇನೋವಾ ಕ್ರಿಸ್ಟಾ ಎಂಪಿವಿ ಕೂಡ ಭರ್ಜರಿಯಾಗಿ ಮಾರಾಟವಾಗುತ್ತಿದೆ.
ಈ ಜನಪ್ರಿಯ ಟೂಯೊಟಾ ಇನೋವಾ ಕ್ರಿಸ್ಟಾ ಸದ್ಯಕ್ಕೆ ಡೀಸೆಲ್ ರೂಪದಲ್ಲಿ ಮಾರಾಟವಾಗುತ್ತಿದೆ. ಈ ಟೊಯೊಟಾ ಇನೋವಾ ಕ್ರಿಸ್ಟಾ ಲ್ಯಾಡರ್ ಫ್ರೇಮ್ ಚಾಸಿಸ್, ಪವರ್ ಫುಲ್, ಡೀಸೆಲ್ ಎಂಜಿನ್, ಅತ್ಯುತ್ತಮ ಸವಾರಿ ಸೌಕರ್ಯ ಮತ್ತು ವಿಶ್ವಾಸಾರ್ಹ ಪರ್ಫಾಮೆನ್ಸ್ ಸಂಯೋಜನೆಯನ್ನು ಹೊಂದಿದೆ. ಭಾರತದಲ್ಲಿ ಜಪಾನಿನ ವಾಹನ ತಯಾರಕರಿಗೆ ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಎಂಪಿವಿ ಪ್ರಸ್ತುತ ಐದನೇ ಸ್ಥಾನದಲ್ಲಿದೆ. ಟೊಯೋಟಾದ ಒಟ್ಟು ಮಾರಾಟಕ್ಕೆ ಕ್ರಿಸ್ಟಾ ಸುಮಾರು 12.5 ಪ್ರತಿಶತ ಕೊಡುಗೆ ನೀಡುತ್ತದೆ.

ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನಲ್ಲಿ ಕೆಲವು ಮಾರ್ಪಾಡುಗಳೊಂದಿಗೆ ಮಾರಾಟವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಿದೆ. ಇನೋವಾ ಕ್ರಿಸ್ಟಾ ಕಾರನ್ನು ಹೆಚ್ಚು ಒರಟಾಗಿ ಮಾಡಲು ಟೊಯೊಟಾ ತಶಾನ್ ಬಾಡಿ ಕಿಟ್ ಅನ್ನು ಮಾರುಕಟ್ಟೆಗೆ ತಂದಿದೆ. ಈ ಒರಟಾದ ಬಾಡಿ ಕಿಟ್ ಇನೋವಾ ಕ್ರಿಸ್ಟಾದ ಒಟ್ಟಾರೆ ನೋಟ ಮತ್ತು ಅನುಭವವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಈ ಕ್ರಿಸ್ಟಾ ಕಾರಿನ ಮುಂಭಾಗದ ಗ್ರಿಲ್ ಮತ್ತು ಹುಡ್ ಕೂಡ ಕ್ರೋಮ್ ಅಸ್ಸೆಂಟ್ ಗಳನ್ನು ಹೊಂದಿದೆ.
ಈ ಟೊಯೊಟಾ ಇನ್ನೋವಾ ಕ್ರಿಸ್ಟಾದ ತಾಶನ್ (Toyota Innova Crysta Tashan) ಬಾಡಿ ಕಿಟ್ ನಲ್ಲಿ ಓವರ್‌ಫೆಂಡರ್‌ಗಳೊಂದಿಗೆ ಅಡ್ಡ ಗೋಚರತೆಯನ್ನು ಸುಧಾರಿಸಿದೆ. ಹೊಸ ನ್ನೋವಾ ಕ್ರಿಸ್ಟಾದ ತಾಶನ್ ಎಡಿಷನ್ ಮಾದರಿಯ ಗೀರುಗಳು ಮತ್ತು ಡೆಂಟ್‌ಗಳಿಂದ ರಕ್ಷಿಸುತ್ತದೆ ಎಂದು ಟೊಯೊಟಾ ಹೇಳಿಕೊಂಡಿದೆ. ಹಿಂಭಾಗದಲ್ಲಿ, ಬ್ರ್ಯಾಂಡ್ ಒರಟಾದ ಕಿಟ್‌ನಲ್ಲಿ ಸ್ಪೋರ್ಟಿ ರಿಯರ್ ಸ್ಪಾಯ್ಲರ್ ಅನ್ನು ನೀಡುತ್ತದೆ.

ಟೊಯೊಟಾ ಇನ್ನೋವಾ ತಾಶನ್ ಬಾಡಿ ಕಿಟ್ ನಿಂದ ಹೊರಭಾಗದಲ್ಲಿ ಹುಡ್ ಸ್ಕೂಪ್, ಸಿಲ್ವರ್ ಫಿನಿಶ್‌ನಲ್ಲಿ ಬಂಪರ್ ಲೋಗೋ. ಮಫ್ಲರ್ ಕಟ್ಟರ್ ಮತ್ತು ರೂಫ್ ಸ್ಪಾಯ್ಲರ್ ಗಾರ್ನಿಶ್ ಅನ್ನು ಸೇರಿಸಿದೆ. ಬ್ರ್ಯಾಂಡ್ ಕೆಲವು ವಿಶೇಷ ಅಕ್ಸೆಸರೀಸ್ ಗಳೊಂದಿಗೆ ಒಳಾಂಗಣವನ್ನು ಸಹ ಹೊಂದಿದೆ. ಈ ಎಡಿಷನ್ ಮಾದರಿಯ ಡ್ಯಾಶ್‌ಬೋರ್ಡ್‌ನಲ್ಲಿ ವುಡ್ ಪ್ಯಾನೆಲ್, 3D ಫ್ಲೋರ್ ಮ್ಯಾಟ್ಸ್ ಮತ್ತು ಸ್ಕಫ್ ಪ್ಲೇಟ್ ಮುಖ್ಯಾಂಶಗಳನ್ನು ಹೊಂದಿದೆ.
ಇದರ ಜೊತೆಗೆ, ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ವ್ಯಾಪಕ ಸರಣಿಯ ಅಕ್ಸೆಸರೀಸ್ ಗಳನ್ನು ಸಹ ಹೊಂದಿದ್ದಾರೆ. ಟೊಯೊಟಾ ಕಾರಿನ ಹಿಂಬದಿಯಲ್ಲಿ ಕ್ಯಾಮೆರಾ, ವೆಲ್‌ಕಮ್ ಡೋರ್ ಲ್ಯಾಂಪ್, ಲೆಗ್ ರೂಮ್ ಲ್ಯಾಂಪ್, ವೈರ್‌ಲೆಸ್ ಚಾರ್ಜರ್, ಡಿಜಿಟಲ್ ವಿಡಿಯೋ ರೆಕಾರ್ಡರ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಇಲ್ಯುಮಿನೇಟೆಡ್ ಸ್ಕಫ್ ಪ್ಲೇಟ್, ಫಾಗ್ ಲ್ಯಾಂಪ್ ವಿತ್ ಫಿಟ್ಟಿಂಗ್ ಕಿಟ್ ಮತ್ತು ಏರ್ ಪ್ಯೂರಿಫೈಯರ್ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಇದಲ್ಲದೇ ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಟಾರ್ಟ್/ಸ್ಟಾಪ್ ಬಟನ್ ಜೊತೆಗೆ ಕಾಂಬಿನೇಷನ್ ಮೀಟರ್ ಮತ್ತು TFT MID, ಆಂಬಿಯೆಂಟ್ ಲೈಟಿಂಗ್, ಲೆದರ್ ಸ್ಟೀರಿಂಗ್ ವೀಲ್, ಶಿಫ್ಟ್ ಲಿವರ್, ಡೋರ್ ಇಂಟೀರಿಯರ್ ಗಾರ್ನಿಶ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಪವರ್ ಅಡ್ಜಸ್ಟಬಲ್ ಅನ್ನು ಪಡೆಯುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








