ಏನ್ ಗುರು ಇನ್ನೋವಾ ಗತ್ತು... 1 ಲಕ್ಷ ಕಾರುಗಳ ಮಾರಾಟ... ಹೊಸ ಫೀಚರ್ಸ್‌ಗೆ ಮುಗಿಬಿದ್ದ ಜನ!
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ಭಾರತದಲ್ಲಿ ಇನ್ನೋವಾ ಹೈಕ್ರಾಸ್ (Innova HyCross)ನ 1,00,000 ವಾಹನಗಳ ಮಾರಾಟ ಮೈಲಿಗಲ್ಲನ್ನು ಸಾಧಿಸಿದೆ. ಈ ನವೆಂಬರ್‌ಗೆ ಕಾರು ಬಿಡುಗಡೆಯಾಗಿ ಎರಡು ವರ್ಷ ಕಳೆದಿದ್ದು, ಇಷ್ಟು ಕಡಿಮೆ ಅವಧಿಯಲ್ಲಿ ದೊಡ್ಡ ಮೈಲಿಗಲ್ಲು ಸಾಧಿಸಿದ ಎಂಪಿವಿ ಎಂಬ ಖ್ಯಾತಿಯನ್ನು ಟೊಯೋಟಾ ಹೈಕ್ರಾಸ್ ದಕ್ಕಿಸಿಕೊಂಡಿದೆ. ಇನ್ನೋವಾ ಹೈಕ್ರಾಸ್‌ನ ಆಧುನಿಕ ತಂತ್ರಜ್ಞಾನ, ಸಾಟಿಯಿಲ್ಲದ ಸೌಕರ್ಯ, ಉತ್ತಮ ಪರ್ಫಾಮೆನ್ಸ್ ಮತ್ತು ಪ್ರೀಮಿಯಂ ಅನುಭವ ಒಂದು ಲಕ್ಷ ಗ್ರಾಹಕರ ಮನಗೆದ್ದಿದೆ ಎಂದು ಕಂಪನಿ ಹೇಳಿದೆ.
ಭರ್ಜರಿ ಮಾರಾಟಕ್ಕೆ ಪ್ರಮುಖ ಕಾರಣಗಳು: ಟೊಯೊಟಾದ ಸುಧಾರಿತ ಗ್ಲೋಬಲ್ ಆರ್ಕಿಟೆಕ್ಚರ್ ಮೇಲೆ ನಿರ್ಮಿಸಲಾದ ಇನ್ನೋವಾ ಹೈಕ್ರಾಸ್ 5ನೇ ತಲೆಮಾರಿನ ಆಟೋಮ್ಯಾಟಿಕ್ ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಸಿಸ್ಟಮ್‌ನಿಂದ ನಿರ್ಮಿತವಾಗಿದೆ. ಇದು 2.0-ಲೀಟರ್ 4-ಸಿಲಿಂಡರ್ ಎಂಜಿನ್ ಮತ್ತು ಇ-ಡ್ರೈವ್ ಸೀಕ್ವೆನ್ಷಿಯಲ್ ಶಿಫ್ಟ್‌ನೊಂದಿಗೆ ಸುಸಜ್ಜಿತವಾಗಿದ್ದು, 137 kW (186 PS)ನ ಎಲೆಕ್ಟ್ರಿಕ್ ಪವರ್ ಉತ್ಪಾದಿಸುತ್ತದೆ. ಈ ಮೂಲಕ ತನ್ನ ವಿಭಾಗದಲ್ಲಿಯೇ ಅತ್ಯುತ್ತಮ ಮೈಲೇಜ್ ನೀಡುತ್ತದೆ.

ಹೈಕ್ರಾಸ್‌ನಲ್ಲಿರುವ ಹೈಬ್ರಿಡ್ ವ್ಯವಸ್ಥೆಯು ವಾಹನದಲ್ಲಿ ಶೇ60 ರಷ್ಟು ಎಲೆಕ್ಟ್ರಿಕ್ (EV) ಮೋಡ್‌ನಲ್ಲಿ ಕಾರ್ಯನಿರ್ವಹಿಸಲು ಸಹಕರಿಸುತ್ತದೆ. ಹೆಚ್ಚುವರಿಯಾಗಿ, ಕಾರು 2.0-ಲೀಟರ್ ಎಂಜಿನ್ ಅನ್ನು ಆಯ್ದ ವೇರಿಯೆಂಟ್‌ಗಳಲ್ಲಿ ಡೈರೆಕ್ಟ್ ಶಿಫ್ಟ್ CVT ಯೊಂದಿಗೆ ನೀಡುತ್ತದೆ. ಇದು 129 kW (174 PS) ಪವರ್ ಉತ್ಪಾದನೆಯೊಂದಿಗೆ ಮಾಲೀಕರಿಗೆ ಅವರ ಚಾಲನಾ ಅಗತ್ಯಗಳಿಗೆ ಸರಿಹೊಂದುವಂತೆ ವೈವಿಧ್ಯಮಯ ಆಯ್ಕೆಗಳನ್ನು ನೀಡುತ್ತದೆ.
ಇದು ಮಾತ್ರವಲ್ಲದೇ Innova HyCross ತನ್ನ ಗ್ರಾಹಕರ ಆದ್ಯತೆಗಳನ್ನು ಪೂರೈಸುವ ಪ್ರೀಮಿಯಂ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಪವರ್ಡ್ ಒಟ್ಟೋಮನ್ ಎರಡನೇ ಸಾಲಿನ ಸೀಟ್‌ಗಳು, ಮುಂಭಾಗದ ವೆಂಟಿಲೇಟೆಡ್ ಸೀಟುಗಳು, ಡ್ಯುಯಲ್-ಝೋನ್ ಏರ್ ಕಂಡೀಷನಿಂಗ್, ಟೊಯೋಟಾ ಸೇಫ್ಟಿ ಸೆನ್ಸ್, 65ಕ್ಕೂ ಹೆಚ್ಚು ಸಂಪರ್ಕಿತ ವೈಶಿಷ್ಟ್ಯಗಳನ್ನು ಹೊಂದಿದೆ. ಹಾಗೆಯೇ ಸುರಕ್ಷತೆ, ನಾವೀನ್ಯತೆ ಮತ್ತು ಪ್ರೀಮಿಯಂ ಡಿಸೈನ್ ಟೊಯೋಟಾ ಇನ್ನೋವಾ ಹೈಕ್ರಾಸ್ ಅನ್ನು ಮತ್ತೊಂದು ಹಂತ್ತಕ್ಕೆ ಕೊಂಡೊಯ್ದಿದೆ.

Innova HyCross ನಲ್ಲಿನ ಹೈಬ್ರಿಡ್ ತಂತ್ರಜ್ಞಾನದ ಆಯ್ಕೆಯು ತನ್ನ ಪರ್ಫಾಮೆನ್ಸ್ ಮತ್ತು ಗಮನಾರ್ಹ ಮೈಲೇಜ್ ಜೊತೆಗೆ ಒಳಾಂಗಣದಲ್ಲಿ ಉತ್ತಮ ಸ್ಥಳಾವಕಾಶ ಮತ್ತು ಐಷಾರಾಮಿ ಅನುಭವ ನೀಡುತ್ತದೆ. ಇದು ಕುಟುಂಬದ ವೈವಿಧ್ಯಮಯ ಅಗತ್ಯಗಳಿಗೆ ಅನುಗುಣವಾಗಿ ಪ್ರಾಯೋಗಿಕ ಆಯ್ಕೆಯಾಗಿದೆ. ಇದರ ಉನ್ನತ ನಿರ್ವಹಣೆ, ಸಾಟಿಯಿಲ್ಲದ ಸೌಕರ್ಯ ಮತ್ತು ಉನ್ನತ ದರ್ಜೆಯ ಸುರಕ್ಷತಾ ವೈಶಿಷ್ಟ್ಯಗಳು ಗ್ರಾಹಕರನ್ನು ಸೆಳೆದಿದೆ.
ಬೆಲೆ: ಹೊಸ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ ಬೆಲೆಯು ರೂ.19.77 ಲಕ್ಷದಿಂದ ರೂ.30.98 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 16.13 ರಿಂದ 23.24 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 7/ 8 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿರುವ ಈ ಕಾರು, ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್‌ನಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ.

ಒಂದು ಲಕ್ಷ ವಾಹನಗಳ ಮಾರಾಟದ ಕುರಿತು ಪ್ರತಿಕ್ರಿಯಿಸಿದ ಟೊಯೊಟಾ ಮಾರಾಟ-ಸೇವೆ-ಬಳಕೆ, ಕಾರು ವ್ಯಾಪಾರ ಉಪಾಧ್ಯಕ್ಷ ಶಬರಿ ಮನೋಹರ್, ಇನೋವಾ ಹೈಕ್ರಾಸ್ 1,00,000 ವಾಹನಗಳ ಮೈಲಿಗಲ್ಲನ್ನು ಸಾಧಿಸಿದೆ ಎಂದು ಹಂಚಿಕೊಳ್ಳಲು ನಾವು ರೋಮಾಂಚನಗೊಂಡಿದ್ದೇವೆ. ನಮ್ಮ ಗ್ರಾಹಕರ ನಂಬಿಕೆ ಮತ್ತು ಬೆಂಬಲಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








