Toyota: ಸದ್ದಿಲ್ಲದೇ ಟೊಯೊಟಾ ಇನ್ನೋವಾ ಹೈಕ್ರಾಸ್ ಕಾರಿನ ಬೆಲೆ ಏರಿಕೆ.. ಎಷ್ಟು?

ಟೊಯೊಟಾ (Toyota), ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ವಿವಿಧ ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಕಳೆದ ತಿಂಗಳು (ನವೆಂಬರ್ - 2024) ಕಂಪನಿಯು 25,586 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. 2023ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 17,818 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ (YoY) ಶೇಕಡ 44 ಬೆಳವಣಿಗೆ ಸಾಧಿಸಿದೆ. ಸದ್ಯ, ಟೊಯೊಟಾ 'ಇನ್ನೋವಾ ಹೈಕ್ರಾಸ್' ಎಂಪಿವಿ ಬೆಲೆಯನ್ನು ಹೆಚ್ಚಳ ಮಾಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಎಂಪಿವಿಯ ವಿವಿಧ ರೂಪಾಂತರಗಳ (ವೇರಿಯೆಂಟ್) ದರ ರೂ.36,000 ವರೆಗೆ ಏರಿಕೆಯಾಗಿದೆ. ಇದರೊಂದಿಗೆ ಹೊಸ ಇನ್ನೋವಾ ಹೈಕ್ರಾಸ್ ಕಾರು ಕನಿಷ್ಠ ರೂ.19.94 ಲಕ್ಷ ಹಾಗೂ ಗರಿಷ್ಠ ರೂ.31.34 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

Toyota Innova Hycross Mpv Price Hike Check Details

ಯಾವ ರೂಪಾಂತರಕ್ಕೆ ಎಷ್ಟು ದರ ಏರಿಕೆ: ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿಯ ಆರಂಭಿಕ ಶ್ರೇಣಿ ರೂಪಾಂತರಗಳಾದ ಜಿಎಕ್ಸ್ ಮತ್ತು ಜಿಎಕ್ಸ್(ಒ) ಬೆಲೆ ರೂ.17,000 ಹೆಚ್ಚಳವಾಗಿದೆ. ಮಧ್ಯಮ ಶ್ರೇಣಿ ರೂಪಾಂತರಗಳಾದ ವಿಎಕ್ಸ್ ಹಾಗೂ ವಿಎಕ್ಸ್(ಒ) ಬೆಲೆ ರೂ.35,000, ಗರಿಷ್ಠ ಶ್ರೇಣಿ ರೂಪಾಂತರಗಳಾದ ಝಡ್ಎಕ್ಸ್ ಹಾಗೂ ಝಡ್ಎಕ್ಸ್ (ಒ) ದರ ರೂ.36,000 ಅಧಿಕಗೊಂಡಿದೆ.

ಕಾಯುವಿಕೆ ಅವಧಿ ಇಳಿಕೆ: ನೂತನ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ ಆದಷ್ಟು ಬೇಗ ಗ್ರಾಹಕರ ಮನೆ ಸೇರಲಿದೆ. ಪೆಟ್ರೋಲ್ ಚಾಲಿತ ರೂಪಾಂತರಗಳು 45 ದಿನಗಳಿಂದ 2 ತಿಂಗಳು, ಪೆಟ್ರೋಲ್ ಹೈಬ್ರಿಡ್ ರೂಪಾಂತರಗಳಾದ ವಿಎಕ್ಸ್ ಮತ್ತು ವಿಎಕ್ಸ್ (ಒ) 45 ದಿನಗಳು, ಗರಿಷ್ಠ ಶ್ರೇಣಿ ರೂಪಾಂತರಗಳಾದ ಝಡ್ಎಕ್ಸ್ ಹಾಗೂ ಝಡ್ಎಕ್ಸ್ (ಒ) ಬುಕ್ಕಿಂಗ್ ಮಾಡಿದ 6 ತಿಂಗಳೊಳಗೆ ವಿತರಣೆಯಾಗುತ್ತವೆ.

Toyota Innova Hycross Mpv Price Hike Check Details

ಈ ಇನ್ನೋವಾ ಹೈಕ್ರಾಸ್ ಎಂಪಿವಿ ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದೆ. ಪ್ಲಾಟಿನಂ ವೈಟ್ ಪರ್ಲ್, ಸಿಲ್ವರ್ ಮೆಟಾಲಿಕ್ ಮತ್ತು ಆಟಿಟ್ಯೂಡ್ ಬ್ಲ್ಯಾಕ್ ಮೈಕಾ ಸೇರಿದಂತೆ ಹಲವು ಬಣ್ಣಗಳೊಂದಿಗೂ ಲಭ್ಯವಿದೆ. ಇದು ಫ್ಯಾಮಿಲಿ ಕಾರಾಗಿದ್ದು, 7/ 8 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದೆ.

ನೂತನ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ ಶಕ್ತಿಯುತವಾದ 2-ಲೀಟರ್ ಸಾಮರ್ಥ್ಯದ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ಮತ್ತು 2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. ಸಿವಿಟಿ ಮತ್ತು ಇ-ಸಿವಿಟಿ ಗೇರ್‌ಬಾಕ್ಸ್‌ನ್ನು ಪಡೆದಿದೆ. 16.13 ರಿಂದ 23.24 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

Toyota Innova Hycross Mpv Price Hike Check Details

ಹೊಸ ಕಾರು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ, ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, December 8, 2024, 15:16 [IST]
English summary
Toyota innova hycross mpv price hike check details
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+