ಟೊಯೊಟಾ ಇನ್ನೋವಾ ಹೈಕ್ರಾಸ್ ಖರೀದಿಸಬಹುದೇ? ಮೋಸಹೋಗಬೇಡಿ, ಯಾರೂ ತಿಳಿಸದ ಮಾಹಿತಿ!

ಜನಪ್ರಿಯ ವಾಹನ ತಯಾರಕರಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor - TKM) ಭಾರತದಲ್ಲಿ ಫಾರ್ಚುನರ್, ಇನ್ನೋವಾ, ಗ್ಲಾಂಜಾ, ರೂಮಿಯಾನ್‌ನಂತಹ ಹಲವಾರು ಕಾರುಗಳೊಂದಿಗೆ ಜನಪ್ರಿಯತೆಯನ್ನು ಗಳಿಸಿದೆ. ಇದರಲ್ಲಿ ಅತಿಮುಖ್ಯವಾಗಿ ಇನ್ನೋವಾ ಕಾರು, ಕಂಪನಿಗೆ ಭರವಸೆಯ ಮಾದರಿಯೆಂದರೂ ತಪ್ಪಾಗುವುದಿಲ್ಲ. ಇದೇ ಮಾದರಿಯನ್ನು ತುಸು ಪ್ರೀಮಿಯಂ ಆಗಿ ನೀಡಲು ಮುಂದಾಗಿ ಇನ್ನೋವಾ ಹೈಕ್ರಾಸ್ ಅನ್ನು ಗ್ರಾಹಕರಿಗೆ ಪರಿಚಯಿಸಲಾಗಿದೆ. ಸದ್ಯ ಇನ್ನೋವಾ ಹೈಕ್ರಾಸ್ (Innova Hycross) ಎಂವಿಪಿಗೆ ಭಾರೀ ಬೇಡಿಕೆಯಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ.

ಟೊಯೊಟಾ ಇನ್ನೋವಾ ಹೈಕ್ರಾಸ್ 2024 ರ ಮೊದಲ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) ದೇಶಾದ್ಯಂತ ಒಟ್ಟು 28,482 ಹೈಬ್ರಿಡ್ ಕಾರುಗಳನ್ನು ಮಾರಾಟ ಮಾಡಲಾಗಿದೆ. ಇದು ಕ್ರಿಸ್ಟಾಗಿಂತ ಸಂಪೂರ್ಣವಾಗಿ ವಿಭಿನ್ನವಾದ ಕಾರಾಗಿದ್ದು, ಈ ಕಾರನ್ನು ಖರೀದಿಸಲು ಮುಂದಾಗುವವರಿಗೆ ಅದರ ಸಾಧಕ ಬಾಧಕಗಳನ್ನು ಇಲ್ಲಿ ವಿವರಿಸಲಾಗಿದೆ. ಇದನ್ನು ಓದಿದ್ರೆ, ಖರೀದಿಸಲು ನೋಡುತ್ತಿರುವವರಿಗೆ ಒಂದು ಸ್ಪಷ್ಟತೆ ಸಿಗಬಹುದು.

toyota-innova-hycross-price-and-features-details

ಟೊಯೊಟಾ ಇನ್ನೋವಾ ಹೈಕ್ರಾಸ್ ಪ್ಲಸ್‌ಗಳು: ವಿನ್ಯಾಸಕ್ಕೆ ಸಂಬಂಧಿಸಿದಂತೆ ಇದು ಎಸ್‌ಯುವಿ ಸ್ಟೈಲಿಂಗ್ ಮತ್ತು ಉತ್ತಮ ರಸ್ತೆ ಉಪಸ್ಥಿತಿಯೊಂದಿಗೆ ಸುಂದರವಾಗಿ ಕಾಣುವ ಎಂಪಿವಿಯಾಗಿದೆ. ಒಳಾಂಗಣದ 3 ಸಾಲುಗಳಲ್ಲಿ ಆರಾಮದಾಯಕ ಜಾಗವಿದ್ದು, 3 ನೇ ಸಾಲಿನಲ್ಲಿಯೂ ಬಳಸಬಹುದಾದ ಬೂಟ್ ಸ್ಪೇಸ್ ಇದೆ. ಇದು ಹೈಬ್ರಿಡ್ ಪವರ್ ಟ್ರೇನ್‌ನೊಂದಿಗೆ 23 ಕಿ.ಮೀ ಮೈಲೇಜ್ ನೀಡುತ್ತದೆ. ಕೇವಲ 9.5 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪುವುದಾಗಿ ಟೊಯೊಟಾ ಹೇಳಿಕೊಂಡಿದೆ.

ಪನೋರಮಿಕ್ ಸನ್ ರೂಫ್, ವೆಂಟಿಲೇಟೆಡ್ ಸೀಟ್‌ಗಳು, ಮಲ್ಟಿ-ಝೋನ್ ಕ್ಲೈಮೇಟ್ ಕಂಟ್ರೋಲ್, ಲೆದರ್ ಅಪ್ ಹೋಲ್ಸ್ಟರಿ, ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಹಿಂಭಾಗದ ಸೀಟುಗಳು, ಕನೆಕ್ಟೆಡ್ ಕಾರ್ ವೈಶಿಷ್ಟ್ಯಗಳು, ಡ್ರೈವ್ ಮೋಡ್‌ಗಳು, ADAS, 6 ಏರ್‌ಬ್ಯಾಗ್‌ಗಳು, ಎಬಿಎಸ್, ಇಎಸ್‌ಪಿ, ಆಲ್ ವೀಲ್ ಡಿಸ್ಕ್ ಬ್ರೇಕ್‌ಗಳು, ಹಿಲ್ ಹೋಲ್ಡ್ ಮತ್ತು ಇನ್ನೂ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ.

toyota-innova-hycross-price-and-features-details

ಟೊಯೊಟಾ ಇನ್ನೋವಾ ಹೈಕ್ರಾಸ್ ಮೈನಸ್‌ಗಳು: ಈ ಕಾರು ಡೀಸೆಲ್ / ಪೆಟ್ರೋಲ್ MT ಆಯ್ಕೆಯಲ್ಲಿ ಸಿಗುವುದಿಲ್ಲ. ಇದು 2.0 ಲೀಟರ್ ಪೆಟ್ರೋಲ್ ಮತ್ತು 2.0 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಮಾತ್ರ ಹೊಂದಿದೆ. ಸಿವಿಟಿ ಮತ್ತು ಇ-ಸಿವಿಟಿ ಟ್ರಾನ್ಸ್‌ಮಿಷನ್ ನೊಂದಿಗೆ ಬರುತ್ತದೆ. ಆಯ್ಕೆ ಮಾಡಲು ಯಾವುದೇ ಡೀಸೆಲ್ ಎಂಜಿನ್ ಅಥವಾ ಪೆಟ್ರೋಲ್ MT ಆಯ್ಕೆ ಇಲ್ಲ.

ಇದು ಉತ್ತಮ ಸವಾರಿ ಗುಣಮಟ್ಟವನ್ನು ನೀಡುತ್ತದೆಯಾದರೂ, ಉನ್ನತ-ಪ್ರೊಫೈಲ್ ಟೈರ್‌ಗಳನ್ನು ನೀಡಿದ್ದರೆ ಇನ್ನೂ ಉತ್ತಮವಾಗಿರುತ್ತಿತ್ತು. 50 ಪ್ರೊಫೈಲ್ ಟೈರ್‌ಗಳನ್ನು ಹೊಂದಿರುವ 18-ಇಂಚಿನ ವೀಲ್‌ಗಳು ಒಟ್ಟಾರೆ ನಿಲುವನ್ನು ರಾಜಿ ಮಾಡಿಕೊಳ್ಳುತ್ತವೆ. ವಾಹನದ ಗಾತ್ರಕ್ಕೆ ಹೋಲಿಸಿದರೆ ಅವು ಚಿಕ್ಕದಾಗಿ ಕಾಣುತ್ತವೆ. ಕಳಪೆ ಕ್ಯಾಮೆರಾ ರೆಸಲ್ಯೂಶನ್ ನೊಂದಿಗೆ ಸರಾಸರಿ ಗುಣಮಟ್ಟದ ಜೆಬಿಎಲ್ ಸೌಂಡ್ ಸಿಸ್ಟಮ್ ಮತ್ತು ಬೇಸಿಕ್ ಇನ್ಫೋಟೈನ್ ಮೆಂಟ್ ಸಿಸ್ಟಮ್ ಡಿಸ್ ಪ್ಲೇ ನೀಡಲಾಗಿದೆ.

toyota-innova-hycross-price-and-features-details

ಬೆಲೆ ಶ್ರೇಣಿಯನ್ನು (ರೂ 19.77 ಲಕ್ಷ - ರೂ 30.98 ಲಕ್ಷ) ಪರಿಗಣಿಸಿದರೆ, ರೈನ್ ಸೆನ್ಸಾರ್ ವೈಪರ್‌ಗಳು ಮತ್ತು ಸೊಂಟದ ಹೊಂದಾಣಿಕೆ (Waist adjustment) ಮುಂತಾದ ಕೆಲವು ವೈಶಿಷ್ಟ್ಯಗಳನ್ನು ನೀಡಬಹುದಿತ್ತು. ಏಕೆಂದರೆ ಇದೇ ಬೆಲೆಯೆ ಇತರ ಪ್ರೀಮಿಯಂ ಕಾರುಗಳಲ್ಲಿ ಇವೆಲ್ಲವನ್ನು ನಾವು ನೊಡಬಹುದು. ಈ ಮಾಹಿತಿಯನ್ನು ನೋಡಿದ ಮೇಲೆ ಈ ಕಾರನ್ನು ಯಾವೆಲ್ಲಾ ವಿಷಯಗಳಿಗಾಗಿ ಖರೀದಿಸಬಹುದು ಎಂಬುದಕ್ಕೆ ನಿಮಗೆ ಉತ್ತರ ಸಿಕ್ಕಿರಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, May 31, 2024, 14:01 [IST]
English summary
Toyota innova hycross price and features details
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+