ಕರ್ನಾಟಕದಲ್ಲಿ ತಯಾರಾಗುವ ಬಹುಬೇಡಿಕೆಯ ಇನ್ನೋವಾ ಹೈಕ್ರಾಸ್: ನಿಮಗೆ ಬೇಕು ಅಂದ್ರೆ ಕಾಯಲೇಬೇಕು!

ಭಾರತದಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಅದರಲ್ಲೂ ಕಂಪನಿಯು ದಶಕಗಳಿಂದ ಮಾರಾಟಗೊಳಿಸುತ್ತಿರುವ ಇನ್ನೋವಾ (Innova) ಎಂಪಿವಿಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಟೊಯೊಟಾ ಕಂಪನಿಯು ಹೊಸ ಮಾದರಿಯ ಇನೋವಾ ಕಾರ್ ಆಗಿ ಇನ್ನೋವಾ ಹೈಕ್ರಾಸ್ ಮಾದರಿಯನ್ನು ಪರಿಚಯಿಸಿದರು. ಈ ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಕಾರ್ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಈ ಕಾರಿಗೆ ಭರ್ಜರಿ ಬೇಡಿಕೆಯನ್ನು ಹೊಂದಿರುವುದರಿಂದ ಯುವಿಕೆ ಅವಧಿ (Waiting Period) ಅನ್ನು ಹೊಂದಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ ಮಾದರಿಯು ಕಂಪನಿಯ ಪ್ರಮುಖ ಕಾರ್ ಆಗಿದೆ. ಈ ಟೊಯೊಟಾ ಇನ್ನೋವಾ ಹೈಕ್ರಾಸ್ ಕಾರಿನ ಪೆಟ್ರೋಲ್ ಹಾಗೂ ಹೈಬ್ರಿಡ್ ರೂಪಾಂತರಗಳಿಗೆ ಅನುಗುಣವಾಗಿ ಕಾಯುವಿಕೆ ಅವಧಿಯು ಬುಕ್ಕಿಂಗ್ ಮಾಡಿದ 6 ರಿಂದ 8 ತಿಂಗಳ ನಂತರ ವಿತರಣೆಯಾಗಲಿವೆ. ಹಿಂದಿನ ತಿಂಗಳುಗಳಿಗೆ ಹೋಲಿಸಿದರೆ ಕಾಯುವಿಕೆ ಅವಧಿಯು ಕಡಿಮೆಯಾಗಿದೆ. ಈ ಕಾರು 7/8 ಸೀಟುಗಳ ಆಯ್ಕೆಯಲ್ಲಿ ಲಭ್ಯವಿದೆ.

Toyota Innova Hycross

ಈ ಟೊಯೊಟಾ ಇನ್ನೋವಾ ಹೈಕ್ರಾಸ್ ಕಾರಿನ ಬೆಲೆಯು ಎಕ್ಸ್ ಶೋರೂಂ ಬೆಲೆಯು ರೂ.19.77 ಲಕ್ಷದಿಂದ ರೂ.30.98 ಲಕ್ಷವಾಗಿದೆ. ಇನ್ನೋವಾ ಹೈಕ್ರಾಸ್ ಕಾರು ಬ್ಲ್ಯಾಕ್ಲಿಶ್ ಅಗೆಹಾ ಗ್ಲಾಸ್ ಫ್ಲೇಕ್, ಸೂಪರ್ ವೈಟ್, ಪ್ಲಾಟಿನಂ ವೈಟ್ ಪರ್ಲ್, ಸಿಲ್ವರ್ ಮೆಟಾಲಿಕ್, ಆಟಿಟ್ಯೂಡ್ ಬ್ಲ್ಯಾಕ್ ಮೈಕಾ, ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಪರ್ಲ್ ಕ್ರಿಸ್ಟಲ್ ಶೈನ್ ಸೇರಿದಂತೆ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ ಕಾರು 2 ಪವರ್‌ಟ್ರೇನ್ ಆಯ್ಕೆಯಲ್ಲಿ ಲಭ್ಯವಿದೆ. ಮೊದಲಿಗೆ 2.0 ಲೀಟರ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 172 bhp ಮತ್ತು 205 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು CVT ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಎಂಪಿವಿಯ ಹೈಬ್ರಿಡ್ ಅಲ್ಲದ ಆವೃತ್ತಿಯು 16.13 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

Toyota Innova Hycross

ಹೆಚ್ಚುವರಿಯಾಗಿ, ಇನ್ನೋವಾ ಹೈಕ್ರಾಸ್ 2.0 ಲೀಟರ್ 4-ಸಿಲಿಂಡರ್ ಅಟ್ಕಿನ್ಸನ್ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಲಭ್ಯವಿದೆ. ಈ ಎಂಜಿನ್ 172 ಬಿಹೆಚ್‍ಪಿ ಪವರ್ ಮತ್ತು 205 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಸ್ಟ್ರಾಂಗ್ ಹೈಬ್ರಿಡ್ ಟಾಪ್ VX, ZX ಮತ್ತು ZX (O) ಟ್ರಿಮ್‌ಗಳೊಂದಿಗೆ ಮಾತ್ರ ಲಭ್ಯವಿದೆ. ಈ ಎಂಪಿವಿಯು ಮಾಡೆಲ್ ಲೈನ್ ಫ್ರಂಟ್-ವೀಲ್-ಡ್ರೈವ್ ಸೆಟಪ್‌ನೊಂದಿಗೆ ಬರುತ್ತದೆ.

ಇನ್ನೋವಾ ಹೈಕ್ರಾಸ್ ಕಾರಿನಲ್ಲಿ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. 10 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, 7 - ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ಡುಯಲ್ - ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ಒಳಗೊಂಡಿದೆ.

Toyota Innova Hycross

ಸುರಕ್ಷತೆ ವಿಚಾರದಲ್ಲಿಯೂ ಇನ್ನೋವಾ ಹೈಕ್ರಾಸ್ ಅತ್ಯುತ್ತಮವಾಗಿದ್ದು, ಗ್ಲೋಬಲ್ ಎನ್‍ಸಿಎಪಿಯಿಂದ 5 ಸ್ಟಾರ್ ರೇಟಿಂಗ್ ಪಡೆದಿದೆ. 6 ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), 360 - ಡಿಗ್ರಿ ಕ್ಯಾಮೆರಾ, ಫ್ರಂಟ್ ಮತ್ತು ರೇರ್ ಪಾರ್ಕಿಂಗ್ ಸೆನ್ಸರ್ಸ್ ನಂತಹ ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, October 21, 2024, 10:51 [IST]
English summary
Toyota innova hycross waiting period in october 2024 details
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+