ಕಡಿಮೆ ಬೆಲೆ.. ಹೊಸ ಅವತಾರದಲ್ಲಿ ಟೊಯೊಟಾ ರೂಮಿಯನ್ ಬಿಡುಗಡೆ: ತುಂಬು ಕುಟುಂಬ ಹೋಗಬಹುದು!

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor), ಪ್ರಖ್ಯಾತ ವಾಹನ ತಯಾರಕ ಕಂಪನಿಯಾಗಿದೆ. ಈ ಹಬ್ಬದ ಋತುವಿನಲ್ಲಿ ಭಾರಿ ಸಂಖ್ಯೆಯಲ್ಲಿ ಗ್ರಾಹಕರನ್ನು ಆಕರ್ಷಿಸಲು ಗ್ಲಾನ್ಜಾ, ಟೈಸರ್ ಹಾಗೂ ಅರ್ಬನ್ ಕ್ರೂಸರ್ ಹೈರೈಡರ್ ಕಾರುಗಳ ವಿಶೇಷ ಮಾದರಿಯಾದ ಫೆಸ್ಟಿವಲ್ ಎಡಿಷನ್‌'ನ್ನು ಮಾರಾಟಕ್ಕೆ ತಂದಿದೆ. ಈಗ ಹೊಚ್ಚ ಹೊಸ ರೂಮಿಯನ್ ಫೆಸ್ಟಿವಲ್ ಎಡಿಷನ್‌ನ್ನು ಬಿಡುಗಡೆಗೊಳಿಸಿದ್ದು, ಈ ಕಾರಿನ ಅಂದವನ್ನು ಹೆಚ್ಚಿಸಲು ಒಂದಷ್ಟು ಹೆಚ್ಚುವರಿ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಟೊಯೊಟಾ ರೂಮಿಯನ್ ಫೆಸ್ಟಿವಲ್ ಎಡಿಷನ್‌ (Toyota Rumion Festive Edition) ಎಂಪಿವಿ ರೂ.20,608 ಮೌಲ್ಯದ ಹೆಚ್ಚುವರಿ ಆಕ್ಸಸರೀಸ್ ಪ್ಯಾಕೇಜ್‌ನ್ನು ಹೊಂದಿದ್ದು, ಅಕ್ಟೋಬರ್ 31 ರವರೆಗೆ ಮಾತ್ರ ಖರೀದಿಗೆ ಲಭ್ಯವಿದೆ. ಇನ್ನುಳಿದಂತೆ, ಈ ಎಂಪಿವಿಯ ವಿನ್ಯಾಸ (Design), ವೈಶಿಷ್ಟ್ಯ (Features) ಹಾಗೂ ಕಾರ್ಯಕ್ಷಮತೆಯಲ್ಲಿ (Performance) ಅಷ್ಟಾಗಿ ಯಾವುದೇ ದೊಡ್ಡ ಬದಲಾವಣಿಗಳನ್ನು ಮಾಡಲಾಗಿಲ್ಲ.

Toyota Rumion Festive Edition Mpv Launched In India What new

ನೂತನ ಟೊಯೊಟಾ ರೂಮಿಯನ್ ಫೆಸ್ಟಿವಲ್ ಎಡಿಷನ್‌ ಕಾರು, ಆಕ್ಸಸರೀಸ್ ಪ್ಯಾಕೇಜ್‌ನ ಭಾಗವಾಗಿ, ಮಡ್ ಫ್ಲಾಪ್‌ಗಳು, ಕಾರ್ಪೆಟ್ ಮ್ಯಾಟ್ಸ್, ಕ್ರೋಮ್ ಡೋರ್ ವೈಸರ್, ರೂಫ್ ಎಡ್ಜ್ ಸ್ಪಾಯ್ಲರ್ ಅನ್ನು ಹೊಂದಿದೆ. ಜೊತೆಗೆ ಆಕರ್ಷಕವಾದ ಹೆಡ್‌ಲ್ಯಾಂಪ್, ಟೈಲ್‌ಗೇಟ್, ಹಿಂಭಾಗದ (ರೇರ್) ಬಂಪರ್ ಮತ್ತು ಬಾಡಿ ಸೈಡ್ ಮೋಲ್ಡಿಂಗ್‌ನ್ನು ಪಡೆದಿದೆ.

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಸ್ಟ್ಯಾಂಡರ್ಡ್ ಟೊಯೊಟಾ ರೂಮಿಯನ್ ಎಂಪಿವಿ, ರೂ.10.44 ರಿಂದ ರೂ.13.73 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎಸ್, ಜಿ ಹಾಗೂ ವಿ ಎಂಬ ಮೂರು ಆಕರ್ಷಕ ರೂಪಾಂತರಗಳನ್ನು (ವೇರಿಯೆಂಟ್) ಒಳಗೊಂಡಿದೆ. ಇದರಲ್ಲಿ 7 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು.

ಈ ಕಾರು ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿದೆ. ಇದರ 1.5-ಲೀಟರ್ ಪೆಟ್ರೋಲ್ ಎಂಜಿನ್ 103 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 137 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ.

ಸಿಎನ್‌ಜಿ ಚಾಲಿತ ರೂಪಾಂತರವು ಇದೇ ಎಂಜಿನ್ ಆಯ್ಕೆಯನ್ನು ಹೊಂದಿದೆ. ಆದರೆ, 88 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 121.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಕಲಷ್ಟೇ ಶಕ್ತವಾಗಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಲಭ್ಯವಿದೆ. ರೂಪಾಂತರಗಳಿಗೆ ಅನುಗುಣವಾಗಿ 20.11 ರಿಂದ 26.11 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ನೂತನ ಟೊಯೊಟಾ ರೂಮಿಯನ್ ಎಂಪಿವಿ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ (7-ಇಂಚು), ಆಂಡ್ರಾಯ್ಡ್ ಆಟೋ ಆಪಲ್ ಕಾರ್‌ಪ್ಲೇ, 6-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮೆಟಿಕ್ ಎಸಿ, ಕ್ರೂಸ್ ಕಂಟ್ರೋಲ್, ಪುಶ್-ಬಟನ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಮತ್ತು ಪ್ಯಾಡಲ್ ಶಿಫ್ಟರ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಕಾರು ಸುರಕ್ಷತೆಗೂ ಹೆಸರುವಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ 4 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ ಹೋಲ್ಡ್ ಅಸಿಸ್ಟ್, ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿದೆ. ಈ ಕಾರಿಗೆ ಕಿಯಾ ಕ್ಯಾರೆನ್ಸ್ ಮತ್ತು ಮಹೀಂದ್ರಾ ಮರಾಜ್ಜೊ ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, October 22, 2024, 9:30 [IST]
English summary
Toyota rumion festive edition mpv launched in india what new details
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+