ಮಾರುಕಟ್ಟೆ ಧೂಳಿಪಟ ಮಾಡಲು ಟೋಯೋಟಾ ಬ್ರಹ್ಮಾಸ್ತ್ರ: ಆ ಮೂರು ಹೊಸ ಎಸ್‌ಯುವಿಗಳು ಯಾವುವು?
ವಿಶ್ವದ ಪ್ರಸಿದ್ದ ಕಾರು ತಯಾರಿಕಾ ಕಂಪನಿಯಲ್ಲಿ ಟೊಯೋಟಾ ಸಹ ಒಂದು. ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಟೊಯೋಟಾ ತನ್ನದೇ ಆದ ಸ್ಥಾನವನ್ನು ಕಂಡುಕೊಂಡಿದೆ. ಇದರಲ್ಲಿ ಹಲವಾರು ಮಾದರಿಯ ವಾಹನಗಳು ಸಹ ಸೇರಿದೆ. ಇದೀಗ ಟೊಯೋಟಾ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮೂರು ಎಸ್‌ಯುವಿಗಳನ್ನು ಪರಿಚಯಿಸಲಿದೆ.
ಹೌದು, ಮುಂಬರುವ ೧೮ ತಿಂಗಳಲ್ಲಿ ಅಂದರೆ ಒಂದೂವರೆ ವರ್ಷ ಅವಧಿಯ ಕಾಲದಲ್ಲಿ ಭಾರತದಲ್ಲಿ ಟೊಯೋಟಾ ಮೂರು ಹೊಸ ಎಸ್‌ಯುವಿಗಳನ್ನು ಹೊರತರಲಿದ್ದು, ಇದರಿಂದ ಭಾರತದಲ್ಲಿ ಟೊಯೋಟಾ ಪೋರ್ಟ್‌ಫೋಲೀಯೋ ಇನ್ನೂ ಬೆಳೆಯಲಿದೆ. ಈ ಮೂಲಕ ಗ್ರಾಹಕರಿಗೆ ಕಾರು ಕೊಳ್ಳಲು ಹಲವಾರು ಆಯ್ಕೆಗಳನ್ನು ನೀಡಲಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.

ಮಾಹಿತಿಗಳ ಪ್ರಕಾರ ಮುಂದಿನ ಒಂದೂವರೆ ವರ್ಷದಲ್ಲಿ ಭಾರತದಲ್ಲಿ ಟೊಯೋಟಾ ಪರಿಚಯಿಸಲಿರುವ ಮೂರು ಎಸ್‌ಯುವಿಗಳು ಯಾವುದೆಂದರೆ ಮೊದಲನೇಯದು ಟೈಸರ್ ಎಂಬ ಒಂದು ಕ್ರಾಸ್ ಓವರ್ ಎಸ್‌ಯುವಿ. ಈ ಕಾರು ಇತ್ತೀಚೆಗೆ ಭಾರದತಲ್ಲಿ ಪ್ರಸಿದ್ದವಾಗಿರುವ ಮಾರುತಿ ಸುಜುಕಿ ಫ್ರಾಂಕ್ಸ್‌ನ ಟೋಯೋಟಾ ವರ್ಷನ್ ಆಗಿರಲಿದೆ. ಈ ಮಾದರಿಯನ್ನು ಟೊಯೋಟಾ ಇದೇ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ.
ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಮತ್ತು ಟೊಯೋಟಾ ಒಟ್ಟಾಗಿ ಕೆಲವು ಕಾರುಗಳನ್ನು ಭಾರತೀ ಮಾರುಕಟ್ಟೆಯಲ್ಲಿ ಬಿಟ್ಟಿದ್ದು, ಬಲೇನೋ ಗ್ಲಾಂನ್ಸಾ, ಇನ್ನೋವಾ ಹೈಕ್ರಾಸ್ ಇನ್ವಿಕ್ಟೋ ಮುಂತಾದವು ಪ್ರಮುಖವಾದವು. ಅಂದರೆ ಟೈಸರ್ ಎಸ್‌ಯುವಿ ಸಹ ಫ್ರಾಂಕ್ಸ್ ಕಾರಾಗಿರಲಿದ್ದು, ಹೆಸರು, ಬ್ಯಾಡ್ಜ್‌ಗಳನ್ನು ಬದಲಿಸಿ ರೀಬ್ರಾಂಡ್ ಮಾಡಿ ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಟೋಯೋಟಾ ಪರಿಚಯಿಸಲಿದೆ.

ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿಯಲ್ಲಿ 1.0-ಲೀಟರ್, ಮೂರುಸಿಲಿಂಡರ್ ಟರ್ಬೋಚಾರ್ಜ್ಡ್ ಬೂಸ್ಟರ್‌ಜೆಟ್ ಎಂಜಿನ್ ಅಳವಡಿಸಲಾಗಿದೆ. ಬೂಸ್ಟರ್ ಜೆಟ್ ಎಂಜಿನ್ ಬಲೆನೊದ 1.2-ಲೀಟರ್ K12C ಡ್ಯುಯಲ್ ಜೆಟ್, ಡ್ಯುಯಲ್ VVT ಎಂಜಿನ್‌ನೊಂದಿಗೆ ಇರುತ್ತದೆ. ಬೂಸ್ಟರ್‌ಜೆಟ್ ಎಂಜಿನ್ ಎರಡು ಕೊಡುಗೆಗಳಲ್ಲಿ ಹೆಚ್ಚು ಶಕ್ತಿಶಾಲಿಯಾಗಿದೆ ಮತ್ತು ಹೊಸ ಫ್ರಾಂಕ್ಸ್‌ನ ಡೆಲ್ಟಾ+, ಝೀಟಾ ಮತ್ತು ಆಲ್ಫಾ ಟ್ರಿಮ್ ಹಂತಗಳೊಂದಿಗೆ ನೀಡಲಾಗುತ್ತದೆ. ಮೂರು-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಫ್ರಾಂಕ್ಸ್‌ನ ಬಾನೆಟ್ ಅಡಿಯಲ್ಲಿ 5,500ಆರ್‌ಪಿಎಂನಲ್ಲಿ 98.7ಬಿಹೆಚ್‌ಪಿ ಮತ್ತು 147.6ಎನ್‌ಎಂ ಪೀಕ್ ಟಾರ್ಕ್ ಅನ್ನು 2,000ಆರ್‌ಪಿಎಂನಿಂದ 4,500ಆರ್‌ಪಿಎಂವರೆಗೆ ಉತ್ಪಾದಿಸುತ್ತದೆ.
ಇನ್ನು ಟೋಯೋಟಾ ಹೊರತರುತ್ತಿರುವ ಮತ್ತೊಂದು ಎಸ್‌ಯುವಿ ಎಂದರೆ ಅರ್ಬನ್ ಕ್ರೂಸರ್ ಹೈರೈಡರ್ ಮಾದರಿಯ ಮೂರು ಸಾಲುಗಳ ಸೀಟ್‌ಗಳಿರುವ ಎಸ್‌ಯುವಿ. ಈ ಕಾರು ಈಗಾಗಲೆ ೫ ಸೀಟ್ ಮಾದರಿಯಲ್ಲಿ ಭಾರದತಲ್ಲಿ ಇದ್ದು ಇದರ ೭ ಸೀಟರ್ ಮಾದರಿಯ ಎಸ್‌ಯುವಿಯನ್ನು ಟೋಯೋಟಾ ಭಾರತದಲ್ಲಿ ಹೊರತರಲಿದೆ ಎಂದು ತಿಳಿದು ಬಂದಿದೆ.
ಈಗಿರುವ ಟೊಯೊಟಾ ಹೈರೈಡರ್‌ನ ಹುಡ್ ಅಡಿಯಲ್ಲಿ 1.5-ಲೀಟರ್ ಪೆಟ್ರೋಲ್ ಪವರ್‌ಟ್ರೇನ್ ಇದ್ದು ಇದನ್ನು ಮೈಲ್ಡ್ ಮತ್ತು ಆಟೋ ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನಗಳೊಂದಿಗೆ ನೀಡಲಾಗುತ್ತದೆ. ಮೈಲ್ಡ್ ಹೈಬ್ರಿಡ್ ಪವರ್‌ಟ್ರೇನ್ ಮಾರುತಿ ಸುಜುಕಿ ಬ್ರೆಝಾದಲ್ಲಿ ಕಂಡುಬರುವಂತೆಯೇ ಇದೆ. ಸ್ಟ್ರಾಂಗ್-ಹೈಬ್ರಿಡ್ 116PS ಪವರ್ ಉತ್ಪಾದನೆಯೊಂದಿಗೆ 27.97kmpl ನಷ್ಟು ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಕೊರೋಲ್ಲಾ ಕ್ರಾಸ್ ಓವರ್ ಬೇಸ್ಡ್ ಎಸ್‌ಯುವಿಯೂ ಮುಂದಿನ ಹದಿನೆಂಟು ತಿಂಗಳ ಒಳಗೆ ಟೋಯೋಟಾ ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದ್ದು, ಇದು ಭಾರೀ ಜನಪ್ರೀಯತೆಯನ್ನು ಗಳಿಸುವ ಎಲ್ಲಾ ಲಕ್ಷಣಗಳು ಸಹ ಕಾಣಿಸುತ್ತಿದೆ ಎಂದು ಈಗಾಗಲೇ ಪಂಡಿತರು ಭವಿಷ್ಯವನ್ನು ನುಡಿದಿದ್ದಾರೆ. ಈ ಕಾರಿನ ಲಾಂಚ್ ಡೇಟ್ ನಿರ್ದಿಷ್ಟವಾಗಿ ಟೋಯೋಟಾ ಹೊರ ಹಾಕಿಲ್ಲವಾದರೂ ಆದಷ್ಟು ಬೇಗ ಮಾಹಿತಿಗಳು ಹೊರ ಬೀಳುವ ಸಾಧ್ಯತೆಗಳಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications