Toyota: ಈ ಕಾರಿಗೆ ಮನಸೋತ ಗ್ರಾಹಕರು.. ಭಾರಿ ಬೇಡಿಕೆ, 5-ಸೀಟರ್.. 27 Km ಮೈಲೇಜ್, ಸನ್‌ರೂಫ್!

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಗ್ಲಾನ್ಜಾ, ಇನ್ನೋವಾ ಕ್ರಿಸ್ಟಾ, ಇನ್ನೋವಾ ಹೈಕ್ರಾಸ್, ರೂಮಿಯಾನ್ ಮತ್ತು ಫಾರ್ಚುನರ್ ಸೇರಿದಂತೆ ವಿವಿಧ ಕಾರುಗಳನ್ನು ಮಾರಾಟ ಮಾಡುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಕಂಪನಿಯ 'ಅರ್ಬನ್ ಕ್ರೂಸರ್ ಹೈರಿಡರ್' ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದ್ದು, ಭಾರಿ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ನೀವು ದೀಪಾವಳಿ ಹಬ್ಬಕ್ಕೆ ಈ ಕಾರನ್ನು ಖರೀದಿಸಬೇಕು ಅಂದುಕೊಂಡಿದ್ದೀರಾ.. ಹಾಗಾದರೆ ಸ್ವಲ್ಪ ದಿನಗಳು ಕಾಯಬೇಕು.

ಟೊಯೊಟಾ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಕ್ಟೋಬರ್ 1ರ ಪ್ರಕಾರ, ಅರ್ಬನ್ ಕ್ರೂಸರ್ ಹೈರಿಡರ್ (Urban Cruiser Hyryder) ಎಸ್‌ಯುವಿ ಹೊಂದಿರುವ ಕಾಯುವಿಕೆ ಅವಧಿ (Waiting Period) ಕುರಿತ ವಿವರಗಳನ್ನು ಹಂಚಿಕೊಂಡಿದೆ. ಈ ಕಾರಿನ ಹೈಬ್ರಿಡ್, ಪೆಟ್ರೋಲ್ (ನಿಯೋ ಡ್ರೈವ್) ಹಾಗೂ ಸಿಎನ್‌ಜಿ ರೂಪಾಂತರಗಳು (ವೇರಿಯೆಂಟ್), ಬುಕ್ಕಿಂಗ್ ಮಾಡಿದ 1 ರಿಂದ 2 ತಿಂಗಳ ಬಳಿಕ ವಿತರಣೆಯಾಗಲಿವೆ.

Toyota Urban Cruiser Hyryder Suv October 2024 Waiting Period Revealed

ಸದ್ಯ ಹೊಚ್ಚ ಹೊಸ ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್ ಕಾರು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ರೂ.11.14 ರಿಂದ ರೂ.19.99 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ಇ, ಎಸ್, ಜಿ ಸೇರಿದಂತೆ ಹಲವು ರೂಪಾಂತರಗಳನ್ನು ಹೊಂದಿದೆ. ಕೆಫೆ ವೈಟ್, ಗೇಮಿಂಗ್ ಗ್ರೇ ಮತ್ತು ಸ್ಪೋರ್ಟಿನ್ ರೆಡ್ ಒಳಗೊಂಡಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತದೆ.

ಈ ಕಾರು, 1.5-ಲೀಟರ್ ಪೆಟ್ರೋಲ್ (ನಿಯೋ ಡ್ರೈವ್), ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ಮತ್ತು ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ವೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ ಆಯ್ಕೆಯಲ್ಲಿಯೂ ದೊರೆಯಲಿದ್ದು, 19.39 ರಿಂದ 27.97 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

Toyota Urban Cruiser Hyryder Suv October 2024 Waiting Period Revealed

ನೂತನ ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್ ಎಸ್‌ಯುವಿ ಆಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದೆ. ಈ ಕಾರಿನಲ್ಲಿ 5 - ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಪ್ರಯಾಣಿಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಬರೋಬ್ಬರಿ 373 ಲೀಟರ್‌ನ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ಈ ಕಾರು ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (9-ಇಂಚು), ಕನೆಕ್ಟೆಡ್ ಕಾರ್ ಟೆಕ್, ಆಂಬಿಯೆಂಟ್ ಲೈಟಿಂಗ್, ಪ್ಯಾಡಲ್ ಶಿಫ್ಟರ್‌ಗಳು, ಹೆಡ್ಸ್ ಅಪ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಪನೋರಮಿಕ್ ಸನ್‌ರೂಫ್‌ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಪಡೆದಿದೆ.

Toyota Urban Cruiser Hyryder Suv October 2024 Waiting Period Revealed

ಹೊಸ ಅರ್ಬನ್ ಕ್ರೂಸರ್ ಹೈರಿಡರ್ ಎಸ್‌ಯುವಿ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಯರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿವಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ವಿಎಸ್‌ಸಿ (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ಆಲ್ ವೀಲ್ ಡಿಸ್ಕ್ ಬೈಕ್‌ಗಳನ್ನು ಒಳಗೊಂಡಿದೆ.

ಒಟ್ಟಾರೆಯಾಗಿ, ನೂತನ ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್ ಎಸ್‌ಯುವಿ ಸಾಕಷ್ಟು ಅತ್ಯಾಕರ್ಷಕವಾಗಿರುವುದರಿಂದ ಬಹುತೇಕರ ಆಯ್ಕೆಯ ವಾಹನವಾಗಿದೆ ಎಂದು ಹೇಳಬಹುದು. ಇದರಿಂದ ಕೊಂಚ ಹೆಚ್ಚಿನ ಕಾಯುವಿಕೆ ಅವಧಿಯನ್ನು ಹೊಂದಿದೆ. ನೀವು ದೀಪಾವಳಿ ಹಬ್ಬಕ್ಕೆ ಈ ಕಾರನ್ನು ಬುಕ್ಕಿಂಗ್ ಮಾಡಿದರೆ ಹೊಸ ವರ್ಷದೊಳಗೆ ವಿತರಣೆಯಾಗಿ ಬಿಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, October 29, 2024, 12:54 [IST]
English summary
Toyota urban cruiser hyryder suv october 2024 waiting period revealed
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+