10 ಲಕ್ಷದೊಳಗೆ ಸಿಗುವ ಅತ್ಯಂತ ಪವರ್‌ಫುಲ್ ಟರ್ಬೋ ಪೆಟ್ರೋಲ್ ಕಾರುಗಳಿವು!
ಕೈಗೆಟುಕುವ ಬೆಲೆಯ ಜೊತೆಗೆ ಪರ್ಫಾಮೆನ್ಸ್ ಕೂಡ ನೀಡುವ ಕಾರುಗಳನ್ನು ಹುಡುಕುವುದು ತುಸು ಕಷ್ಟದ ಸಂಗತಿ. ಆದರೆ ನಿಮಗಾಗಿ ಬೆಸ್ಟ್ ಕಾರುಗಳನ್ನು ಹುಡುಕಿ ಇಲ್ಲಿ ಪಟ್ಟಿ ಮಾಡಿದ್ದೇವೆ. ಇನ್ನೊಂದು ಮೂರು ಲಕ್ಷ ಹೆಚ್ಚು ಖರ್ಚು ಮಾಡಿದ್ರೆ ಇನ್ನೂ ಹೆಚ್ಚಿನ ಪರ್ಫಾಮೆನ್ಸ್ ನೀಡುವ ಕಾರುಗಳು ಕೂಡ ಸಿಗುತ್ತವೆ. ಒಟ್ಟಾರೆ ಭಾರತದಲ್ಲಿ 10 ಲಕ್ಷ ರೂ. (ಎಕ್ಸ್ ಶೋರೂಂ) ಒಳಗೆ ಸಿಗುವ ಟರ್ಬೋ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಕಾರುಗಳನ್ನು ಈ ಲೇಖನದಲ್ಲಿ ನೋಡೋಣ. ಇವೆಲ್ಲವು ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದಿರುವ ಕಾರುಗಳಾಗಿವೆ.
ಟಾಟಾ ಆಲ್ಟ್ರೋಜ್ ರೇಸರ್: ಟಾಟಾ ಇತ್ತೀಚೆಗೆ ಆಲ್ಟ್ರೊಜ್‌ನ ಅತ್ಯಂತ ಪ್ರಬಲ ಆವೃತ್ತಿಯಾದ ಆಲ್ಟ್ರೋಜ್ ರೇಸರ್ ಅನ್ನು ಬಿಡುಗಡೆ ಮಾಡಿದೆ. ಇದು ಬಿಡುಗಡೆಯಾದಾಗಿನಿಂದ ಕಾರು ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಇದನ್ನು ಹೆಚ್ಚು ಪವರ್‌ಫುಲ್ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದೆ.

ಇದರ ಪವರ್‌ಫುಲ್ ಎಂಜಿನ್ 118 bhp ಪವರ್ ಮತ್ತು 172 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. Altroz ನ ಈ ಸ್ಪೋರ್ಟಿ ಕಾರು ಪ್ರಸ್ತುತ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಪ್ರತ್ಯೇಕವಾಗಿ ನೀಡಲಾಗುತ್ತದೆ. ಆಲ್ಟ್ರೋಜ್ ರೇಸರ್‌ನ ಬೆಲೆಗಳು ರೂ. 9.49 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ).
ಟಾಟಾ ನೆಕ್ಸಾನ್: ಟಾಟಾ ಮೋಟಾರ್ಸ್ ನೆಕ್ಸಾನ್‌ಗೆ ಮೂಲ ಟ್ರಿಮ್‌ನಿಂದ ಟರ್ಬೋಚಾರ್ಜ್ಡ್ 1.2 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ನೀಡುತ್ತಿದೆ. ಈ ಎಂಜಿನ್ 118 ಬಿಹೆಚ್‌ಪಿ ಪವರ್ ಹಾಗೂ 172 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಎಎಂಟಿ ಮತ್ತು 7-ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ. ಇದರ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.8.00 ಲಕ್ಷಗಳಾಗಿದೆ.

ಹ್ಯುಂಡೈ ಐ20 ಎನ್ ಲೈನ್: ಹ್ಯುಂಡೈ ಐ20 ಎನ್ ಲೈನ್ ಕಾರು 1.0 ಲೀಟರಿನ 3 ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 118 ಬಿಹೆಚ್‌ಪಿ ಪವರ್ ಹಾಗೂ 172 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಬೆಲೆಗಳು 9.99 ಲಕ್ಷ ರೂ.ಗಳಿಂದ ಪ್ರಾರಂಭವಾಗಿ 12.52 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ)ಇದೆ. ಇದರಲ್ಲಿ 6-ಸ್ಪೀಡ್ ಮ್ಯಾನುವಲ್, ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಿದೆ.
ಹ್ಯುಂಡೈ ವೆನ್ಯೂ: ಹ್ಯುಂಡೈ ವೆನ್ಯೂ ಎರಡನೇ ಸ್ಥಾನದಲ್ಲಿದ್ದು, 1.0-ಲೀಟರ್ 3 ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. 118 ಬಿಹೆಚ್‌ಪಿ ಪವರ್ ಮತ್ತು 172 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಭಾರತದಲ್ಲಿ ಇದರ ಎಕ್ಸ್ ಶೋರೂಂ ದರ ರೂ.10.40 ಲಕ್ಷಗಳಾಗಿದೆ. ಇದು 6-ಸ್ಪೀಡ್ ಮ್ಯಾನುವಲ್ ಅಥವಾ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೊತೆಗೆ ಬರುತ್ತದೆ.

ಮಹೀಂದ್ರಾ ಎಕ್ಸ್ ಯುವಿ 3ಎಕ್ಸ್ಒ: ಈ ವಿಭಾಗದಲ್ಲಿ ಅತ್ಯಂತ ಪವರ್‌ಫುಲ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಕಾರ್ ಪಟ್ಟಿಯಲ್ಲಿ ಮಹೀಂದ್ರಾ ಎಕ್ಸ್ ಯುವಿ 3ಎಕ್ಸ್ಒ ಮೊದಲ ಸ್ಥಾನದಲ್ಲಿದೆ. ಎರಡು ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡಿದ್ದು, ಇದರಲ್ಲಿ ಒಂದು ಹೆಚ್ಚು ಶಕ್ತಿಶಾಲಿ 1.2-ಲೀಟರ್ ಎಂಜಿನ್ ಪಡೆದಿದೆ. ಇದು 129 ಬಿಹೆಚ್‌ಪಿ ಪವರ್ ಮತ್ತು 230 ಎನ್ಎಂ ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ.
ಇದರ ಬೆಲೆಗಳು 10.69 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತವೆ. ಇದರ ಪವರ್‌ಫುಲ್ ಎಂಜಿನ್ ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಅಥವಾ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಈ ಕಾರು ಭಾರೀ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ.


Click it and Unblock the Notifications