ಈ ಎರಡು ಬ್ರಹ್ಮಾಸ್ತ್ರಗಳನ್ನು ಕಟ್ಟಿ ಹಾಕುವವರಾರು?: ಬಿಡುಗಡೆಗೂ ಮುನ್ನವೇ ಎದುರಾಳಿಗಳಲ್ಲಿ ನಡುಕ!
ಈಗಾಗಲೇ ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಟಾಟಾ ಮೋಟಾರ್ಸ್ ತನ್ನ ಸ್ಥಾನವನ್ನು ಭಧ್ರಪಡಿಸಿಕೊಂಡಿದೆ. ಟಾಟಾ ಕಂಪನಿಯು ಕಾಲಕ್ಕೆ ತಕ್ಕಂತೆ ಜನರಿಗೆ ಬೇಕಾದ, ಅಥವಾ ಅವರ ಅಗತ್ಯಗಳನ್ನು ಅನುಸರಿಸಿಕೊಂಡು ವಾಹನಗಳನ್ನು ರಸ್ತೆಗೆ ಇಳಿಸುತ್ತಿದೆ. ನಿಮಗೆಲ್ಲಾ ಗೊತ್ತಿರುವಂತೆ ಟಾಟಾ ಈಗಾಗಲೇ ಹಲವಾರು ವಾಹನಗಳನ್ನು ಮುಂಬರುವ ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ. ಇದರಲ್ಲಿ ಎಲೆಕ್ಟ್ರಿಕ್ ಮತ್ತು ಇತರ ಇಂಧನ ಮಾದರಿಗಳು ಇರಲಿದ್ದು ಟಾಟಾದ ಮುಂಬರುವ ಎರಡು ಪ್ರಮುಖ ಕಾರು ಲಾಂಚ್‌ಗಳ ಕುರಿತಾಗಿ ನಾವಿಂದು ನೋಡಲಿದ್ದೇವೆ. ಆ ಕುರಿತಾಗಿ ನಾವಿಂದು ಈ ಲೇಖನದಲ್ಲಿ ಚರ್ಚಿಸೋಣ.
ಟಾಟಾ ನೆಕ್ಸಾನ್ ಸಿಎನ್‌ಜಿ: ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್. ಟಾಟಾ ಈಗ ಇದನ್ನು ಮತ್ತಷ್ಟು ವಿಸ್ತರಿಸಲು ಯೋಜಿಸುತ್ತಿದೆ ಮತ್ತು ನೆಕ್ಸಾನ್‌ನ iCNG ರೂಪಾಂತರವನ್ನು ಶೀಘ್ರದಲ್ಲೇ ಪರಿಚಯಿಸಲಿದೆ. ವರ್ಷದ ಆರಂಭದಲ್ಲಿ ನಡೆದ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಈ ಪರಿಕಲ್ಪನೆಯನ್ನು ಈಗಾಗಲೇ ಪ್ರದರ್ಶಿಸಲಾಯಿತು. ಸಿಎನ್‌ಜಿ ತಂತ್ರಜ್ಞಾನದೊಂದಿಗೆ ಸಂಯೋಜಿತವಾದ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಬಳಸುವ ಭಾರತದ ಮೊದಲ ಕಾರು ಇದಾಗಿರಲಿದೆ.

ಟಾಟಾ ಟ್ವಿನ್-ಸಿಲಿಂಡರ್ ಸೆಟಪ್ ಅನ್ನು ಈ ವಾಹನದಲ್ಲಿ ಅಳವಡಿಸಲಿದೆ. ಈಗಾಗಲೇ ಇದನ್ನು ಸ್ವಲ್ಪ ಸಮಯದ ಹಿಂದೆ ಆಲ್ಟ್ರೊಜ್ ಮತ್ತು ಪಂಚ್‌ನಲ್ಲಿ ಮೊದಲು ಪರಿಚಯಿಸಲಾಯಿತು. ಟಾಟಾ ನೆಕ್ಸಾನ್ ಸಿಎನ್‌ಜಿ ಕಾರಿನಲ್ಲಿಯೂ ಇದೇ ರೀತಿಯ ವಿನ್ಯಾಸವನ್ನು ಬಳಸಲಿದೆ. ಈ ತಂತ್ರಜ್ಞಾನದ ಅನುಕೂಲಗಳನ್ನು 230 ಲೀಟರ್‌ಗಳ ಪ್ರಾಯೋಗಿಕ ಬೂಟ್ ಸ್ಪೇಸ್‌ನೊಂದಿಗೆ ಬಳಸಿಕೊಳ್ಳುತ್ತದೆ.
ಪರಸ್ಪರ ಪಕ್ಕದಲ್ಲಿ ಇರಿಸಲಾಗಿರುವ ಡ್ಯುಯಲ್ ಸಿಲಿಂಡರ್‌ಗಳನ್ನು ಇಟ್ಟು ಆ ಮೂಲಕ ಬೂಟ್ ಸ್ಪೇಸ್ ಅನ್ನು ಸಹ ಕಲ್ಪಿಸುವ ಅವಕಾಶವನ್ನು ಟಾಟಾ ಮಾಡಿಕೊಡಲಿದೆ. ಪ್ರತಿಯೊಂದೂ ಸಿಲಿಡಂರ್ ಸಹ 60 ಲೀಟರ್ ಸಾಮರ್ಥ್ಯದೊಂದಿಗೆ. ಅಲ್ಲಿರುವ ಸ್ಪೇಟ್ ಟೈರ್ ಅನ್ನು ವಾಹನದ ಕೆಳಭಾಗದಲ್ಲಿ ಅಳವಡಿಸಲಿದ್ದಾರೆ ಎಂಬ ಊಹೆಗಳಿದ್ದು, ಹೀಗೆ ಮಾಡಿದರೆ ಸಾಕಷ್ಟು ಸ್ಥಳಾವಕಾಶ ಇರಲಿದೆ.

ನೆಕ್ಸಾನ್ CNG (Tata Nexon CNG) ಪ್ರಸಿದ್ಧವಾದ 1.2L ಮೂರು-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಬಳಸಿಕೊಳ್ಳುತ್ತದೆ, ಇದು ಸಾಮಾನ್ಯವಾಗಿ 120 PS ಮತ್ತು 170 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಐದು-ವೇಗದ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಜೊತೆಗೆ AMT ಆಯ್ಕೆಯ ಜೊತೆಗೂ ಬರಲಿದೆ ಎಂಬುದನ್ನು ನಾವಿಲ್ಲಿ ಗಮನಿಸ ಬೇಕು.
ಟಾಟಾ ಕರ್ವ್ ಇವಿ: Curvv EV ಯ ಉತ್ಪಾದನಾ ಆವೃತ್ತಿಯನ್ನು ಮೊದಲು 2024 ರಲ್ಲಿ ಭಾರತ್ ಮೊಬಿಲಿಟಿ ಶೋನಲ್ಲಿ ಪ್ರದರ್ಶಿಸಲಾಯಿತು ಮತ್ತು ಅಂದಿನಿಂದ Tata Curvv ಮತ್ತು Curvv EV ಗಳು ನಮ್ಮ ದೇಶದಲ್ಲಿ ಹಲವಾರು ಬಾರಿ ಪರೀಕ್ಷಿಸಲ್ಪಟ್ಟಿವೆ. ಎಸ್‌ಯುವಿ ಕೂಪ್‌ನ EV ಆವೃತ್ತಿಯು ಏಪ್ರಿಲ್ 2025 ರ ವೇಳೆಗೆ ಬಿಡುಗಡೆಯಾಗಲಿದೆ ಎಂದು ಇತ್ತೀಚೆಗೆ ದೃಢಪಡಿಸಲಾಗಿದೆ.

ಮಾಹಿತಿಗಳ ಪ್ರಕಾರ ಈಗಿರುವ ಟಾಟಾ ನೆಕ್ಸಾನ್‌ನ ಡೀಸೆಲ್ ಎಂಜಿನ್ ಅನ್ನೇ ಈ ಕಾರಿಗು ಅಳವಡಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಹೌದು ನೆಕ್ಸಾನ್‌ನಲ್ಲಿರುವ, ೧.೫ ಲೀಟರ್‌ನ ಡೀಸೆಲ್ ಎಂಜಿನ್ ಸಹಾಯದಿಂದ ಈಗ ನೆಕ್ಸಾನ್ ಕಾರ್‌ನಲ್ಲಿ ಉತ್ಪತ್ತಿಯಾಗುವ ಅದೇ ಪವರ್ ಮತ್ತು ಪರ್ಫಾಮೆನ್ಸ್ ಅನ್ನು ನಾವು ಮುಂಬರಲಿರುವ ಈ ಹೊಸ ಟಾಟಾ ಕರ್ವ್ ಡೀಸೆಲ್ ಆವೃತ್ತಿಯಲ್ಲಿ ಎದುರು ನೊಡಬಹುದಾಗಿದೆ.
ಈ ಹೊಸ ಟಾಟಾ Curvv ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ ಎಸ್‍ಯುವಿಗೆ ನೇರವಾಗಿ ಪೈಪೋಟಿ ನೀಡುತ್ತದೆ. 2023ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಟಾಟಾ Curvv ಕಳೆದ ವರ್ಷ ಎಲೆಕ್ಟ್ರಿಕ್ ವಾಹನ ಕಾನ್ಸೆಪ್ಟ್ ರೂಪದಲ್ಲಿ ತೋರಿಸಿದ್ದಕ್ಕಿಂತ ಸ್ವಲ್ಪ ಭಿನ್ನವಾಗಿದೆ. ಈ ಬಾರೀ ಅನಾವರಣಗೊಳಿಸಿದ ಟಾಟಾ Curvv ಕಾನ್ಸೆಪ್ಟ್ ಸ್ಪ್ಲಿಟ್ ಹೆಡ್‌ಲೈಟ್ ವಿನ್ಯಾಸದ ನವೀಕರಿಸಿದ ಆವೃತ್ತಿಯನ್ನು ಹೊಂದಿದೆ.
ಇದರ ಡಿಸೈನ್ ಮತ್ತು ಇತರ ವಿಷಯಗಳನ್ನು ನೋಡುವುದಾದರೆ, ಈ ಕಾರಿನ ಹೆಡ್‌ಲ್ಯಾಂಪ್‌ಗಳೊಂದಿಗೆ ಹಿಂದೆಂದಿಗಿಂತಲೂ ಹೆಚ್ಚು ಉತ್ಪಾದನೆಗೆ ಸಿದ್ಧವಾಗಿದೆ. ಟಾಟಾ ಮೋಟಾರ್ಸ್‌ನ Curvv ಕಾನ್ಸೆಪ್ಟ್ ಪೂರ್ಣ-ಅಗಲ LED DRL ಗಳನ್ನು ಉಳಿಸಿಕೊಂಡಿದೆ. ಈ ಟಾಟಾ Curvv ಕಾನ್ಸೆಪ್ಟ್ ವಿಶಿಷ್ಟ ಲುಕ್ ಅನ್ನು ಹೊಂದಿದೆ. ಈ ಕಾರು ವಿನ್ಯಾಸದ ಹೈಲೈಟ್ ಅದನ್ನು ಉತ್ಪಾದನೆಗೆ ಮಾಡಿದರೆ, ಎಸ್‍ಯುವಿಗಳು ಬಿ-ವಿಭಾಗದಲ್ಲಿ Curvv ಒಂದು ವಿಶಿಷ್ಟ ಕೊಡುಗೆಯಾಗಿದೆ.


Click it and Unblock the Notifications