ಹೊಸ ಕಾರು ಖರೀದಿಸಬೇಕೇ? ಸ್ವಲ್ಪ ಕಾಯಿರಿ.. ಬರುತ್ತಿವೆ ಬಹುನಿರೀಕ್ಷಿತ ಟೊಯೊಟಾ ಕಾರುಗಳು
ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ಭಾರತದಲ್ಲಿ ಮುಂದಿನ 12 ರಿಂದ 18 ತಿಂಗಳುಗಳಲ್ಲಿ ಮೂರು ಹೊಸ ಎಸ್‍ಯುವಿಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ ಎಂದು ವರದಿಯಾಗಿದೆ. ಇವುಗಳಲ್ಲಿ ಹೊಸ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಮುಂಬರುವ ಮಾರುತಿ ಸುಜುಕಿ eVX ನ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ, ಇದನ್ನು 2025ರಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿ 550 ಕಿಮೀ ವರೆಗಿನ ರೇಂಜ್ ಅನ್ನು ಒದಗಿಸುವ ನಿರೀಕ್ಷೆಯಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಟೊಯೊಟಾದ ಮೊದಲ ಎಲೆಕ್ಟ್ರಿಕ್ ಕಾರ್ ಆಗಿದೆ.
ಟೊಯೊಟಾ (Toyota) ಕಂಪನಿಯು ಎಲೆಕ್ಟ್ರಿಕ್ ಎಸ್‍ಯುವಿಯನ್ನು ಬಿಡುಗಡೆಗೊಳಿಸುವ ಮುನ್ನ ಎರಡು ಹೊಸ ಹೈಬ್ರಿಡ್ ಎಸ್‍ಯುವಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಜಪಾನಿನ ವಾಹನ ತಯಾರಕರು ತನ್ನ ಎಸ್‍ಯುವಿ ಸರಣಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ಭಾರತದಲ್ಲಿ ಮುಂದಿನ ತಿಂಗಳುಗಳಲ್ಲಿ ಟೊಯೊಟಾ ಕಂಪನಿಯು ಬಿಡುಗಡೆಗೊಳಿಸುವ ಮೂರು ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಟೊಯೊಟಾ ಎಲೆಕ್ಟ್ರಿಕ್ ಎಸ್‍ಯುವಿ: ಭಾರತಕ್ಕೆ ಟೊಯೊಟಾದ ಮೊದಲ ಎಲೆಕ್ಟ್ರಿಫೈಡ್ ಎಸ್‍ಯುವಿ 2025ರಲ್ಲಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ, ಕಳೆದ ವರ್ಷ ಬಹಿರಂಗಪಡಿಸಿದ ಅರ್ಬನ್ ಎಸ್‍ಯುವಿ ಕಾನ್ಸೆಪ್ಟ್ ನಿಂದ ವಿನ್ಯಾಸ ಸೂಚನೆಗಳನ್ನು ಸೆಳೆಯುತ್ತದೆ. ಇದು 27PL ನ ವ್ಯುತ್ಪನ್ನವಾದ ಪ್ಲಾಟ್‌ಫಾರ್ಮ್ ಸೇರಿದಂತೆ ಮಾರುತಿ ಸುಜುಕಿ eVX ನೊಂದಿಗೆ ಅನೇಕ ಹೋಲಿಕೆಗಳನ್ನು ಹೊಂದಿರುತ್ತದೆ.
ಈ ಎಲೆಕ್ಟ್ರಿಕ್ ಎಸ್‍ಯುವಿ ಡಿಜಿಟಲ್ ಕ್ಲಸ್ಟರ್, ಫ್ರೀ-ಸ್ಟ್ಯಾಂಡಿಂಗ್ ಟಚ್‌ಸ್ಕ್ರೀನ್, 360-ಡಿಗ್ರಿ ಕ್ಯಾಮೆರಾ ಇತ್ಯಾದಿಗಳನ್ನು ಒಳಗೊಂಡಂತೆ ಸುಧಾರಿತ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನಗಳ ಒಂದು ಶ್ರೇಣಿಯನ್ನು ಹೊಂದಿದೆ. ಟೊಯೊಟಾ ಹೊಸ ಎಲೆಕ್ಟ್ರಿಕ್ ಎಸ್‌ಯುವಿ 1,820 ಎಂಎಂ ಅಗಲ, 4,300 ಎಂಎಂ ಉದ್ದ ಮತ್ತು 1,620 ಎಂಎಂ ಎತ್ತರವಿರಲಿದೆ. ಮಾರುತಿ ಸುಜುಕಿಯ ಇವಿ ಮೊದಲ ಇವಿ ಕಾರು ಕೂಡ ಇದೇ ಆಯಾಮಗಳೊಂದಿಗೆ ಬರಲಿದೆ.

ಟೊಯೊಟಾ ಫಾರ್ಚುನರ್ MHEV: ಈ ಬಹುನಿರೀಕ್ಷಿತ ಟೊಯೊಟಾ ಫಾರ್ಚುನರ್ MHEV 48-ವೋಲ್ಟ್ ಮೈಲ್ಡ್ ಹೈಬ್ರಿಡ್ ಸಿಸ್ಟಂ ಅನ್ನು ಸಂಯೋಜಿಸುತ್ತದೆ. ಈ ತಂತ್ರಜ್ಞಾನವು ಪ್ರಸ್ತುತ GD ಸರಣಿಯ ಡೀಸೆಲ್ ಎಂಜಿನ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ, ವಿಶೇಷವಾಗಿ ವೇಗವರ್ಧನೆ ಮತ್ತು ಕಡಿಮೆ-ವೇಗದ ಚಾಲನೆಯ ಸಮಯದಲ್ಲಿ ಪೂರಕ ಶಕ್ತಿ ಮತ್ತು ಟಾರ್ಕ್ ಅನ್ನು ತಲುಪಿಸುತ್ತದೆ.
ಟೊಯೊಟಾ ಫಾರ್ಚುನರ್ ಭಾರತದಲ್ಲಿ ಫುಲ್ ಸೈಜ್ ಎಸ್‍ಯುವಿ ವಿಭಾಗದಲ್ಲಿ ಹಲವಾರು ವರ್ಷಗಳಲ್ಲಿ ಪಾರುಪತ್ಯ ಸಾಧಿಸುತ್ತಿರುವ ಮಾದರಿಯಾಗಿದೆ. ಅಧಿಕೃತವಾಗಿ ವಿವರಗಳು ಬಹಿರಂಗಪಡಿಸದಿದ್ದರೂ, ಇದನ್ನು ಈ ವರ್ಷದ ನಂತರ ಅಥವಾ 2025ರ ಆರಂಭದಲ್ಲಿ ಪರಿಚಯಿಸಬಹುದು ಮತ್ತು ಈಗಾಗಲೇ ದಕ್ಷಿಣ ಆಫ್ರಿಕಾದಂತಹ ಮಾರುಕಟ್ಟೆಗಳಲ್ಲಿ Hilux MHEV ಜೊತೆಗೆ ಮಾರಾಟದಲ್ಲಿದೆ ಎಂಬ ಊಹಾಪೋಹವಿದೆ.

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್: 7-ಸೀಟುಗಳ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಎಸ್‍ಯುವಿಯು 2025ರ ಆರಂಭದಲ್ಲಿ ಅಥವಾ ಮಧ್ಯದಲ್ಲಿ ಆಗಮಿಸುವ ನಿರೀಕ್ಷೆಯಿದೆ. ಈ ಹೊಸ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ 7-ಸೀಟರ್ ಮಾದರಿಯು ಎಂಜಿ ಹೆಕ್ಟರ್ ಪ್ಲಸ್, ಟಾಟಾ ಸಫಾರಿ ಮತ್ತು ಹ್ಯುಂಡೈ ಅಲ್ಕಾಜರ್‌ನಂತಹ ಇತರ ಮೂರು-ಸಾಲಿನ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications