ಸಣ್ಣ ಅರಮನೆಯಂತಿರಲಿವೆ! 10 ಲಕ್ಷದೊಳಗೆ ಬಿಡುಗಡೆ ಆಗಲಿರುವ ಹೊಸ ಎಸ್‌ಯುವಿಗಳು!
ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವು ಭಾರತದಲ್ಲಿ ಬಹಳ ವೇಗವಾಗಿ ಬೆಳೆಯುತ್ತಿದೆ. ಟಾಟಾದ ನೆಕ್ಸಾನ್, ಮಾರುತಿ ಬ್ರೆಝಾ ಮತ್ತು ಮಹೀಂದ್ರಾ Xuv 3X0, ಕಿಯಾ ಸೋನೆಟ್ ಈ ವಿಭಾಗದಲ್ಲಿ ಹೆಚ್ಚು ಮಾರಾಟ ಕಾಣುತ್ತಿರುವ ಪ್ರಮುಖ ಕಾರುಗಳಾಗಿವೆ. ಈ ವಿಭಾಗಕ್ಕಾಗಿ ಸ್ಕೋಡಾ, ಕಿಯಾ ಮತ್ತು ಹ್ಯುಂಡೈ ಕಂಪನಿಗಳು ಮುಂಬರುವ ತಿಂಗಳಲ್ಲಿ ಹೊಸ ಮತ್ತು ಫೇಸ್‌ಲಿಫ್ಟ್ ಕಾಂಪ್ಯಾಕ್ಟ್ ಎಸ್‌ಯುವಿಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿವೆ. ಭಾರತದಲ್ಲಿ ಈ ಸೆಗ್‌ಮೆಂಟಿಗಿರುವ ಬೇಡಿಕೆಯನ್ನು ಬಳಸಿಕೊಳ್ಳಲು, ಕಾರು ತಯಾರಕರು ಕಡಿಮೆ ಬೆಲೆಯಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿಗಳನ್ನು ಪರಿಚಯಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈ ಹೊಸ ಕಾರುಗಳ ವಿವರಗಳನ್ನು ಇಲ್ಲಿ ನೋಡೋಣ.
ಹೊಸ ತಲೆಮಾರಿನ ಹ್ಯುಂಡೈ ವೆನ್ಯೂ: ಹ್ಯುಂಡೈ ಕಂಪನಿಯು ತನ್ನ ಜನಪ್ರಿಯ ವೆನ್ಯೂ ಎಸ್‌ಯುವಿಯನ್ನು ಎರಡನೇ ತಲೆಮಾರಿನ ಆವೃತ್ತಿಯಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಲಿದೆ. ಈ ಕಾರು ವಿವಿಧ ವಿನ್ಯಾಸ ಮತ್ತು ವೈಶಿಷ್ಟ್ಯಗಳ ನವೀಕರಣಗಳನ್ನು ಪಡೆದುಕೊಂಡು ಬರಲಿದೆ. ಯಾಂತ್ರಿಕವಾಗಿ, ಯಾವುದೇ ಬದಲಾವಣೆಗಳನ್ನು ಮಾಡದೇ ಕೇವಲ ಫೀಚರ್ಸ್ ಹಾಗೂ ಡಿಸೈನ್ ಅಪ್‌ಡೇಟ್ ಆಗಲಿದೆ.

ವೆನ್ಯೂ ಕಾರು ಮಾರುಕಟ್ಟೆಯಲ್ಲಿ ಉತ್ತಮ ಮಾರಾಟ ಕಾಣುತ್ತಿದೆಯಾದರೂ, ಇತರ ಕಾರುಗಳ ಪೈಪೋಟಿ ಹೆಚ್ಚುತ್ತಿರುವ ಕಾರಣ ಹೊಸ ಅಪ್‌ಡೇಟ್‌ಗಳನ್ನು ನೀಡಲಾಗುತ್ತಿದೆ. ಈ ಕಾರನ್ನು ನವೀಕರಿಸಿ 2025 ರಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಕಾರನ್ನು ನವೀಕರಿಸಿದ ನಂತರ, ಆಧುನಿಕ ವೈಶಿಷ್ಟ್ಯಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುತ್ತದೆ.
ಕಿಯಾ ಸೈರೊಸ್: ಕಿಯಾ 2025 ರಲ್ಲಿ ಹೊಸ ಸೈರೊಸ್ ಎಂಬ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿದೆ. ಇದನ್ನು ಸೊನೆಟ್ ಮತ್ತು ಸೆಲ್ಟೋಸ್ ನಡುವೆ ಇರಿಸಲು ಯೋಜಿಸಲಾಗಿದೆ. ಕಾರಿನ ವಿನ್ಯಾಸವು ಕಂಪನಿಯು ಅಂತರರಾಷ್ಟ್ರೀಯವಾಗಿ ಮಾರಾಟ ಮಾಡುವ ಎಸ್‌ಯುವಿಯಾದ ಸೋಲ್‌ನ ವಿನ್ಯಾಸದಿಂದ ಸ್ಫೂರ್ತಿ ಪಡೆದಿದೆ.

ಈ ಕಾರು ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ, ವೈರ್ ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸನ್ ರೂಫ್, ವೈರ್ ಲೆಸ್ ಚಾರ್ಜರ್ ಸೇರಿದಂತೆ ಹೆಚ್ಚಿನ ವೈಶಿಷ್ಟ್ಯಗಳನ್ನು ಪಡೆಯಲಿದೆ. ಈ ಕಿಯಾ ಸೈರೊಸ್‌ನ ಎಲೆಕ್ಟ್ರಿಕ್ ಆವೃತ್ತಿಯು 2025ರ ಅಂತ್ಯದ ವೇಳೆಗೆ ಮಾರಾಟವಾಗುವ ನಿರೀಕ್ಷೆಯಿದೆ.
ಸ್ಕೋಡಾ ಕಾಂಪ್ಯಾಕ್ಟ್ ಎಸ್‌ಯುವಿ: ಸ್ಕೋಡಾ ಇತ್ತೀಚೆಗೆ ತನ್ನ ಮುಂದಿನ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಮಾರ್ಚ್ 2025 ರಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿವೆ. ಈ ಕಾರನ್ನು 4 ಮೀಟರ್‌ಗಿಂತ ಕಡಿಮೆ ಉದ್ದವಿರುವಂತೆ ವಿನ್ಯಾಸಗೊಳಿಸಲಾಗುವುದು. ಇದು ಮಧ್ಯಮ ಗಾತ್ರದ ಸ್ಕೋಡಾ ಕುಶಾಕ್‌ನ ಮಿನಿ ಆವೃತ್ತಿಯಾಗಲಿದೆ.

ಈ ಕಾರು 1.0-ಲೀಟರ್ ಮೂರು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಈ ಎಂಜಿನ್ 115 ಬಿಹೆಚ್‌ಪಿ ಪವರ್ ಮತ್ತು 178 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದೇ ಎಂಜಿನ್ ಅನ್ನು ಸ್ಕೋಡಾ ಕುಶಾಕ್ ಕಾರಿನಲ್ಲಿ ಅಳವಡಿಸಲಾಗಿದೆ. ಈ ಮುಂಬರಲಿರುವ ಹೊಸ ಕಾರು ಈಗಾಗಲೇ ಭಾರತೀಯ ರಸ್ತೆಗಳಲ್ಲಿ ಪರೀಕ್ಷಿಸುವಾಗ ಹಲವು ಬಾರಿ ಕಾಣಿಸಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications