ಸೆಡಾನ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾಗಿವೆ 2 ಬಹುನಿರೀಕ್ಷಿತ ಕಾರುಗಳು!

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚಾಗಿದೆ, ಆದ್ರೆ ಈ ಹಿಂದೆ ಸೆಡಾನ್‌ಗಳು ನೆಚ್ಚಿನ ಆಯ್ಕೆಯಾಗಿದ್ದವು. ಪ್ರಸ್ತುತ ಜನರು ಹೆಚ್ಚಿನ ಸೀಟಿಂಗ್ ಆಯ್ಕೆ, ಹೆಚ್ಚಿನ ಶೇಖರಣಾ ಸ್ಥಳದ ಅಗತ್ಯದಿಂದಾಗಿ ಎಸ್‌ಯುವಿಗಳ ಮೊರೆ ಹೋಗುತ್ತಿದ್ದಾರೆ. ಆದ್ರೂ ಕೆಲ ಕಾರು ಪ್ರೇಮಿಗಳು ಸೆಡಾನ್‌ಗಳನ್ನೇ ಹೆಚ್ಚಾಗಿ ಇಷ್ಟ ಪಡುತ್ತಾರೆ. ಇಂಥವರಿಗಾಗಿಯೇ ತಯಾರಕರು ಇನ್ನೂ ಹೊಸ ಸೆಡಾನ್‌ಗಳನ್ನು ಪರಿಚಯಿಸುತ್ತಿದ್ದಾರೆ. ಹೊಸ ಎಂಟ್ರಿ ಲೆವೆಲ್ ಸೆಡಾನ್‌ಗಳು ಹೊಸ ವಿನ್ಯಾಸ, ಇತ್ತೀಚಿನ ತಂತ್ರಜ್ಞಾನ ಮತ್ತು ಅತ್ಯಾಕರ್ಷಕ ಪರ್ಫಾಮೆನ್ಸ್‌ನೊಂದಿಗೆ ಬಿಡುಗಡೆಗೆ ಸಜ್ಜಾಗಿವೆ. ಸದ್ಯ ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಎರಡು ಸೆಡಾನ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.

1. ಹೋಂಡಾ ಅಮೇಜ್: ಹೋಂಡಾದ ಅತ್ಯಂತ ಚಿಕ್ಕ ಸೆಡಾನ್ ಅಮೇಜ್ ಈ ವರ್ಷದ ಕೊನೆಯಲ್ಲಿ ಮಹತ್ವದ ನವೀಕರಣಕ್ಕೆ ಸಜ್ಜಾಗಿದೆ. 2018 ರಿಂದ ಮಾರಾಟವಾಗುತ್ತಿರುವ ಎರಡನೇ ತಲೆಮಾರಿನ ಅಮೇಜ್ ಜಾಗಕ್ಕೆ ಮೂರನೇ ತಲೆಮಾರಿನ ಮಾದರಿ ಎಂಟ್ರಿ ಕೊಡುತ್ತಿದೆ. ಇದು 2024ರ ದೀಪಾವಳಿಯ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

upcoming-sedans-in-india-honda-amaze-and-maruti-dzire

ಮೂರನೇ ತಲೆಮಾರಿನ ಅಮೇಜ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟವಾಗುವ ದೊಡ್ಡ ಹೋಂಡಾ ಸೆಡಾನ್‌ಗಳಿಗೆ ಅನುಗುಣವಾಗಿ ನವೀಕರಿಸಿದ ವಿನ್ಯಾಸವನ್ನು ಹೊಂದಿರುತ್ತದೆ. ಅಲ್ಲದೇ ಹೊಸ ಅಮೇಜ್ ಅನ್ನು ಸಿಟಿ ಮತ್ತು ಎಲಿವೇಟ್‌ನ ಅದೇ ಪ್ಲಾಟ್ ಫಾರ್ಮ್‌ನಲ್ಲಿ ನಿರ್ಮಿಸಲಾಗುವುದು. ಆದರೆ ಕಡಿಮೆ ವ್ಹೀಲ್ ಬೇಸ್ ನೊಂದಿಗೆ, ಅದರ ಒಟ್ಟಾರೆ ಉದ್ದವು ನಾಲ್ಕು ಮೀಟರ್‌ಗಿಂತ ಕಡಿಮೆ ಇರಲಿದೆ.

ಅಮೇಜ್ ಪ್ರಸ್ತುತ ಮಾದರಿಯ 1.2-ಲೀಟರ್, ನಾಲ್ಕು ಸಿಲಿಂಡರ್ ಅದೇ ಪೆಟ್ರೋಲ್ ಎಂಜಿನ್‌ ಹೊಂದಿರಲಿದೆ. ಇದು 90 ಬಿಹೆಚ್‌ಪಿ ಪವರ್ ಮತ್ತು 110 ಎನ್ಎಂ ಟಾರ್ಕ್ ಅನ್ನು ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ನೊಂದಿಗೆ ಲಭ್ಯವಿರುತ್ತದೆ. ಇದು ದೊಡ್ಡ ಟಚ್ ಸ್ಕ್ರೀನ್ ಹೊಂದಿರುವ ಆಧುನಿಕ ಕ್ಯಾಬಿನ್ ವಿನ್ಯಾಸವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

upcoming-sedans-in-india-honda-amaze-and-maruti-dzire

2. ಮಾರುತಿ ಡಿಜೈರ್: ಭಾರತದ ಅತಿ ಹೆಚ್ಚು ಮಾರಾಟವಾಗುವ ಸೆಡಾನ್‌ಗಳಲ್ಲಿ ಒಂದಾದ ಮಾರುತಿ ಡಿಜೈರ್, ಗಮನಾರ್ಹ ನವೀಕರಣಕ್ಕೆ ಸಜ್ಜಾಗಿದೆ. ಡಿಜೈರ್ ಅದರ ವಿಶ್ವಾಸಾರ್ಹತೆ, ಇಂಧನ ಮಿತವ್ಯಯ, ದುರಸ್ತಿ ಮತ್ತು ಒಟ್ಟಾರೆ ಸವಾರಿ ಗುಣಮಟ್ಟದಿಂದಾಗಿ ಫ್ಲೀಟ್ ಮಾರುಕಟ್ಟೆಯಲ್ಲಿ ಉನ್ನತ ಆಯ್ಕೆಗಳಲ್ಲಿ ಒಂದಾಗಿ ಜನಪ್ರಿಯತೆ ಪಡೆದುಕೊಂಡಿದೆ.

ಮುಂಬರಲಿರುವ ಹೊಸ ಡಿಜೈರ್ 1.2-ಲೀಟರ್, 3-ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್‌ನೊಂದಿಗೆ ಬರುವ ನಿರೀಕ್ಷೆಯಿದ್ದು, ಸಿಎನ್‌ಜಿ ಆಯ್ಕೆಯೂ ಲಭ್ಯವಿರಬಹುದು. ಇದು 2024 ರ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಈ ಕಾರಿನ ಪರೀಕ್ಷಾ ಹಂತಗಳು ಮುಗಿದಿವೆ. ಇನ್ನೇನು ಅನಾವರಣಗೊಳಿಸಿ, ಬಿಡುಗಡೆ ಮಾಡುವುದೊಂದೆ ಬಾಕಿ ಇದೆ.

upcoming-sedans-in-india-honda-amaze-and-maruti-dzire

2024ರ ಡಿಜೈರ್, ಹೊಸ ಸ್ವಿಫ್ಟ್ ಕಾರಿನಲ್ಲಿ ಸಿಗುವ ಅದೇ ಬ್ಲಾಕ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಹನಿಕೋಂಬ್ ಗ್ರಿಲ್‌ನೊಂದಿಗೆ ಬರಲಿದೆ. ಒಳಭಾಗದಲ್ಲಿ, ಹೊಸ ಡಿಜೈರ್ ಫ್ಲೋಟಿಂಗ್ ಇನ್ಫೋಟೈನ್ ಮೆಂಟ್ ಸಿಸ್ಟಮ್ ಮತ್ತು ನವೀಕರಿಸಿದ ಎಚ್‌ವಿಎಸಿ ನಿಯಂತ್ರಣಗಳೊಂದಿಗೆ ಡ್ಯುಯಲ್-ಟೋನ್ ಡ್ಯಾಶ್ ಬೋರ್ಡ್ ಅನ್ನು ಹೊಂದಿರುತ್ತದೆ.

ಪ್ರಸ್ತುತ ವೃತ್ತಾಕಾರದ ಎಸಿ ವೆಂಟ್‌ಗಳ ಬದಲಿಗೆ ಮುಂಬರುವ ಕಾರಿನಲ್ಲಿ ಫ್ಲಾಟ್ ಎಸಿ ವೆಂಟ್‌ಗಳು ಬರಲಿವೆ. ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಹೊಂದಿರುವ 9.0-ಇಂಚಿನ ಟಚ್ ಸ್ಕ್ರೀನ್, ವೆಂಟಿಲೇಟೆಡ್ ಸೀಟುಗಳು, ಎಡಿಎಎಸ್, 360-ಡಿಗ್ರಿ ಕ್ಯಾಮೆರಾ ಮತ್ತು ಆಟೋ ಹೋಲ್ಡ್ ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಒಳಗೊಂಡಿರುವ ಪ್ರಮುಖ ವೈಶಿಷ್ಟ್ಯಗಳನ್ನು ನಿರೀಕ್ಷಿಸಲಾಗಿದೆ.

Article Published On: Monday, July 22, 2024, 19:07 [IST]
English summary
Upcoming sedans in india honda amaze and maruti dzire
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+