ಮಾರುಕಟ್ಟೆ ಶೇಕ್: ಮಾರುತಿ, ಟಾಟಾಗೆ ಸೆಡ್ಡು ಹೊಡೆಯಲು ಸ್ಕೋಡಾದ ಹೊಸ ಬ್ರಹ್ಮಾಸ್ತ್ರ... ಬೆಲೆ ಇಷ್ಟೇನಾ?
ಭಾರತೀಯ ಮಾರುಕಟ್ಟೆಯಲ್ಲಿ ಸ್ಪೋರ್ಟ್ ಯುಟಿಲಿಟಿ ವಾಹನಗಳಿಗೆ (ಎಸ್‍ಯುವಿ) ಹೆಚ್ಚಿನ ಬೇಡಿಕೆ ಪಡೆಯುತ್ತಿರುವಾಗ, ಸ್ಕೋಡಾ ಸೆಡಾನ್‌ಗಳನ್ನು ಬದಿಗಿಟ್ಟು ಎಸ್‍ಯುವಿಗಳಿಗೆ ಪ್ರಾಮುಖ್ಯತೆಯನ್ನು ನೀಡಲು ಪ್ರಾರಂಭಿಸಿತು. ರ‍್ಯಾಪಿಡ್, ಆಕ್ಟೋವಿಯಾ ಮತ್ತು ಸೂಪರ್ಬ್‌ನಂತಹ ದೈತ್ಯರನ್ನು ಕ್ರಮೇಣವಾಗಿ ಬದಲಿಸುವ ಮೂಲಕ ಕುಶಾಕ್ ಜೆಕ್ ರಿಪಬ್ಲಿಕ್ ಬ್ರ್ಯಾಂಡ್ ಅನ್ನು ಮತ್ತಷ್ಟು ಬೆಳವಣಿಗೆಗೆ ಶ್ರಮಿಸುತ್ತಿದೆ. ಸ್ಕೋಡಾ ಭಾರತದಲ್ಲಿ ವಿಶೇಷ ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ ಕಾರು ತಯಾರಕ ಕಂಪನಿ. ಸದ್ಯಕ್ಕೆ ಸ್ಕೋಡಾ ಕಂಪನಿಯು ಕುಶಾಕ್ ಮತ್ತು ಸ್ಲಾವಿಯಾ ಕಾರುಗಳನ್ನು ಉತ್ತಮವಾಗಿ ಮಾರಾಟ ಮಾಡುತ್ತಿದ್ದಾರೆ. ಈ ನಡುವೆ ಸ್ಕೋಡಾ ಆಟೋ ಭಾರತದಲ್ಲಿ ತನ್ನ ಹೊಸ ಎಸ್‍ಯುವಿ ಹೆಸರನ್ನು ಆಗಸ್ಟ್ ತಿಂಗಳಿನಲ್ಲಿ ಘೋಷಿಸಿತು.
ಸ್ಕೋಡಾ ಈ ವರ್ಷದ ಫೆಬ್ರವರಿಯಲ್ಲಿ 'ನೇಮ್ ಯುವರ್ ಸ್ಕೋಡಾ' ಅಭಿಯಾನವನ್ನು ಪ್ರಾರಂಭಿಸಿದ್ದರು. ಇಂಗ್ಲಿಷ್ ವರ್ಣಮಾಲೆಯಲ್ಲಿ K ಯಿಂದ ಪ್ರಾರಂಭವಾಗುವ ಮತ್ತು Q ನೊಂದಿಗೆ ಕೊನೆಗೊಳ್ಳುವ ಹೆಸರನ್ನು ಸೂಚಿಸಲು ಕಂಪನಿಯನ್ನು ಕೇಳಲಾಯಿತು. ಈ ಸ್ಕೋಡಾ ಎಲ್ಲಾ ಐದು ಆಯ್ಕೆಗಳನ್ನು ನೀಡಿತು. ಕಾಸರಗೋಡು ಮೂಲದ ಮೊಹಮ್ಮದ್ ಜಿಯಾದ್ ಎಸ್‌ಯುವಿಯ ಮೊದಲ ಮಾಲೀಕರಾಗಲಿದ್ದು, ಇವರು ನೀಡಿದ 'ಕೈಲಾಕ್' ಹೆಸರೇ ಆಯ್ಕೆ ಆಗಿರುವುದು.

MQB-A0-IN ಪ್ಲಾಟ್‌ಫಾರ್ಮ್‌ನಿಂದ ಆಧಾರವಾಗಿರುವ ಕುಶಾಕ್ ಮತ್ತು ಸ್ಲಾವಿಯಾದಂತಹ ಜನಪ್ರಿಯ ಉತ್ಪನ್ನಗಳನ್ನು ಸ್ಕೋಡಾ ಈಗಾಗಲೇ ಹೊಂದಿದೆ . ಈ ಪ್ಲಾಟ್‌ಫಾರ್ಮ್ ಅನ್ನು ಬಳಸುವ ಮೂರನೇ ಸ್ಕೋಡಾ ಕಾರು ಕೈಲಾಕ್ (Skoda Kylaq) ಅಗಿದೆ. ಇದೀಗ ಜಾಗತಿಕವಾಗಿ ಆನಾವಾರಣವಾಗುವ ಮುನ್ನವೇ ಕೈಲಾಕ್ ಎಸ್‍ಯುವಿಯ ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ ಕೈಲಾಕ್ ಟಿವಿಸಿ ಟೀಸರ್ ಅನ್ನು ಹಂಚಿಕೊಂಡ ಸ್ಕೋಡಾ, ಹೀರೋ ಬಹುಕಾತರದ ಎಂಟ್ರಿ ಮಾಡಲು ಸಿದ್ಧನಾಗಿದ್ದಾನೆ! ಆದರೆ ಸ್ಕೋಡಾ ಕೈಲಾಕ್ ಮಾತ್ರ ಅಲ್ಲ. ಕೈಲಾಕ್ ಮತ್ತು ರೋಹಿತ್ ಶೆಟ್ಟಿಯ ಡೈನಾಮಿಕ್ ಜೋಡಿಯು ನವೆಂಬರ್ 6 ರಂದು ಮಧ್ಯಾಹ್ನ 12:30 ಕ್ಕೆ ಜಿಯೋ ಸಿನಿಮಾದಲ್ಲಿ ನಿಮ್ಮನ್ನು ಥ್ರಿಲ್ ಮಾಡಲು ಬಂದಾಗ ಆಕ್ಷನ್ ದ್ವಿಗುಣಗೊಳ್ಳುತ್ತದೆ ಎಂದು ಬರೆದುಕೊಂಡಿದೆ.

ಸ್ಕೋಡಾ ಕೈಲಾಕ್ ಎಸ್‍ಯುವಿಯು ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಟಾಪ್-ಮೌಂಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಸಿಗ್ನೇಚರ್ ಸ್ಲ್ಯಾಟೆಡ್ ಗ್ರಿಲ್ ಅನ್ನು ಹೊಂದಿದೆ. ಇತರ ಮುಖ್ಯಾಂಶಗಳು ವಾಯ್ಸ್ ರಿಮೈಂಡರ್ ಸಂಪೂರ್ಟ್ ಮಾಡುವ ಸಿಂಗಲ್-ಪೇನ್ ಸನ್‌ರೂಫ್ ಅನ್ನು ಒಳಗೊಂಡಿವೆ. ಸೈಡ್ ಪ್ರೊಫೈಲ್ ಅದರ ಸ್ಪೋರ್ಟಿ ಅಲಾಯ್ ವ್ಹೀಲ್ ಗಳು ಮತ್ತು ವ್ಹೀಲ್ ಅರ್ಚಾರ್ ಗಳನ್ನು ಹೊಂದಿವೆ.
ಈ ಸ್ಕೋಡಾ ಎಸ್‍ಯುವಿಯ ಬ್ಲ್ಯಾಕ್ ಫಿನಿಶ್ ಮತ್ತು ಶಾರ್ಕ್ ಫಿನ್ ಆಂಟೆನಾದಲ್ಲಿ ರೂಫ್ ರೈಲ್ ಗಳನ್ನು ಹೊಂದಿದೆ. ಹಿಂಭಾಗದಲ್ಲಿ, ಕೈಲಾಕ್ ಶಾರ್ಪ್ ಟೈಲ್ ಲ್ಯಾಂಪ್‌ಗಳು ಮತ್ತು ಸ್ಕೋಡಾ ಬ್ಯಾಡ್ಜಿಂಗ್ ಅನ್ನು ಹೊಂದಿದೆ.10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಚಾರ್ಜಿಂಗ್, ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ಎಸಿ ವೆಂಟ್‌ಗಳು ಮತ್ತು ಮುಂಭಾಗ ಮತ್ತು ಹಿಂಭಾಗದಲ್ಲಿ ಟೈಪ್-ಸಿ ಯುಎಸ್‌ಬಿ ಪೋರ್ಟ್‌ಗಳನ್ನು ಒಳಗೊಂಡಿವೆ.
ಸ್ಕೋಡಾದ ಹೊಸ ಸಬ್-4 ಮೀಟರ್ ಎಸ್‌ಯುವಿಯು ಕುಶಾಕ್ ಮತ್ತು ಸ್ಲಾವಿಯಾದೊಂದಿಗೆ ಬಳಸಿದ ಅದೇ 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 115 bhp ಪವರ್ ಮತ್ತು 178 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಜೋಡಿಸಲಾಗುತ್ತದೆ.
ಈ ಹೊಸ ಕಾಂಪ್ಯಾಕ್ಟ್ ಎಸ್‍ಯುವಿಗಾಗಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಶೇಕಡಾ 30 ರಷ್ಟು ಹೆಚ್ಚಿಸುವುದಾಗಿ ಕಾರು ತಯಾರಕರು ಹೇಳಿದ್ದಾರೆ. ಸ್ಕೋಡಾ ಕೈಲಾಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಮಾದರಿಗಳಾದ ಟಾಟಾ ನೆಕ್ಸಾನ್, ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ರೆನಾಲ್ಟ್ ಕೈಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್‌ಗಳಿಗೆ ಪೈಪೋಟಿ ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








