Tata: ದೊಡ್ಡ ಬ್ಯಾಟರಿಯೊಂದಿಗೆ ಬಂದೆ ಬಿಡ್ತು ಟಾಟಾ ನೆಕ್ಸಾನ್‌ ಇವಿ.. 5-ಸೀಟರ್.. ಬೆಲೆ ಎಷ್ಟಿದೆ.. ವಿಶೇಷತೆಗಳೇನು?

ಟಾಟಾ ಮೋಟಾರ್ಸ್ (Tata Motors), ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಟಿಯಾಗೊ ಇವಿ, ಪಂಚ್ ಇವಿ ಹಾಗೂ ಕರ್ವ್ ಇವಿ ಮಾರಾಟದೊಂದಿಗೆ ಅಗ್ರ ಸ್ಥಾನದಲ್ಲಿ ಮುಂದಿವರಿದಿದೆ. ಇಂದು (ಸೆಪ್ಟೆಂಬರ್ 24) ದೊಡ್ಡ ಗ್ರಾತ್ರದ ಬ್ಯಾಟರಿ ಪ್ಯಾಕ್‌ನೊಂದಿಗೆ ಒಂದಷ್ಟು ನವೀಕರಣಗಳನ್ನು ಪಡೆದುಕೊಂಡಿರುವ ಹೊಚ್ಚ ಹೊಸ ನೆಕ್ಸಾನ್‌ ಇವಿಯನ್ನು ಅದ್ದೂರಿಯಾಗಿ ಮಾರಾಟಕ್ಕೆ ತಂದಿದೆ. ಇಲ್ಲಿ ನೂತನ ಎಲೆಕ್ಟ್ರಿಕ್ ಕಾರಿನ ಬೆಲೆ ಹಾಗೂ ವಿಶೇಷತೆಗಳೇನು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

ಹೊಸ ಟಾಟಾ ನೆಕ್ಸಾನ್‌ ಇವಿ (Tata Nexon EV) ಶಕ್ತಿಯುತವಾಗಿರುವ 45 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಇದೇ ಬ್ಯಾಟರಿಯೊಂದಿಗೆ ನೆಕ್ಸಾನ್‌ ಇವಿ ರೆಡ್ ಡಾರ್ಕ್ ಎಡಿಷನ್ (Nexon EV Red Dark Edition) ಮಾದರಿಯೂ ಬಿಡುಗಡೆಗೊಂಡಿದೆ.

Updated Big Battery Pack Tata Nexon EV Launched In India Rs 13 99 Lakh Starting Price

ಈ 45 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಒಳಗೊಂಡಿರುವ 'ನೆಕ್ಸಾನ್‌ ಇವಿ' ರೂ.13.99 ಲಕ್ಷದಿಂದ ರೂ.16.99 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದು ಕ್ರಿಯೇಟಿವ್, ಫಿಯರ್‌ಲೆಸ್, ಎಂಪವರ್ಡ್ ಹಾಗೂ ಎಂಪವರ್ಡ್ ಪ್ಲಸ್ ಎಂಬ ರೂಪಾಂತರಗಳನ್ನು (Variant) ಪಡೆದಿದೆ. 'ನೆಕ್ಸಾನ್‌ ಇವಿ ರೆಡ್ ಡಾರ್ಕ್ ಎಡಿಷನ್' ಎಂಪವರ್ಡ್ ಪ್ಲಸ್ ರೂಪಾಂತರದೊಂದಿಗೆ ಮಾತ್ರ ಸಿಗಲಿದ್ದು, ರೂ.17.19 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ.

ನೂತನ ಟಾಟಾ ನೆಕ್ಸಾನ್‌ ಇವಿ ಹಾಗೂ ನೆಕ್ಸಾನ್‌ ಇವಿ ರೆಡ್ ಡಾರ್ಕ್ ಎಡಿಷನ್ ಮಾದರಿಗಳಲ್ಲಿ, 45 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಅಳವಡಿಸಿರುವುದರಿಂದ ಭರ್ತಿ ಚಾರ್ಜ್‌ನಲ್ಲಿ 489 ಕಿಲೋಮೀಟರ್​ವರೆಗೆ ರೇಂಜ್ (ಮೈಲೇಜ್) ನೀಡಬಲ್ಲವು. ಇವೆರೆಡು ಎಲೆಕ್ಟ್ರಿಕ್ ಕಾರುಗಳು 5 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಕೂಡ ಗ್ರಾಹಕರಿಗೆ ಸಿಗುತ್ತವೆ.

Updated Big Battery Pack Tata Nexon EV Launched In India Rs 13 99 Lakh Starting Price

ನವೀಕರಣಗೊಂಡಿರುವ ಟಾಟಾ ನೆಕ್ಸಾನ್‌ ಇವಿ ವಿಶೇಷವಾಗಿ ಪನೋರಮಿಕ್ ಸನ್‌ರೂಫ್, ವಿ2ಎಲ್ (V2L) ಮತ್ತು ವಿ2ವಿ (V2V) ಚಾರ್ಜಿಂಗ್ ತಂತ್ರಜ್ಞಾನವನ್ನು ಪಡೆದಿದೆ. 60 ಕೆಡಬ್ಲ್ಯೂ ಫಾಸ್ಟ್ ಚಾರ್ಜರ್ ಬಳಕೆಯಲ್ಲಿ ಈ ಕಾರಿನ ಬ್ಯಾಟರಿ ಪ್ಯಾಕ್, ಕೇವಲ 40 ನಿಮಿಷಗಳಲ್ಲಿ 10 ರಿಂದ 80% ಚಾರ್ಜ್ ಆಗಿಬಿಡುತ್ತದೆ.

ಟಾಟಾ ನೆಕ್ಸಾನ್‌ ಇವಿ ರೆಡ್ ಡಾರ್ಕ್ ಎಡಿಷನ್ (Nexon EV Red Dark Edition) ಮಾದರಿಯು ಸಂಪೂರ್ಣವಾಗಿ ಕಪ್ಪು (ಬ್ಲ್ಯಾಕ್) ಬಣ್ಣವನ್ನು ಪಡೆದಿದ್ದು, ಅಲ್ಲಲ್ಲಿ ಕೆಂಪು (ರೆಡ್) ಬಣ್ಣದಿಂದ ಅಲಂಕೃತಗೊಂಡಿದೆ. ಮುಂಭಾಗದ (ಫ್ರಂಟ್) ಫೆಂಡರ್‌ಗಳಲ್ಲಿ ರೆಡ್ ಡಾರ್ಕ್ ಬ್ಯಾಡ್ಜಿಂಗ್ ಹೊಂದಿದೆ. ವಾಯ್ಸ್ ಕಂಟ್ರೋಲ್ ಪನೋರಮಿಕ್ ಸನ್‌ರೂಫ್, ಡುಯಲ್ ಡಿಜಿಟಲ್ ಸ್ಕ್ರೀನ್‌ಗಳು, 360-ಡಿಗ್ರಿ ಕ್ಯಾಮೆರಾ, ರೇರ್ ಎಸಿ ವೆಂಟ್‌ಗಳು, ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

Updated Big Battery Pack Tata Nexon EV Launched In India Rs 13 99 Lakh Starting Price

ಟಾಟಾ ನೆಕ್ಸಾನ್ ಸಿಎನ್‌ಜಿ (Tata Nexon CNG) ಮಾದರಿ ಸಹ ಬಿಡುಗಡೆಯಾಗಿದ್ದು, ರೂ.8.99 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. 1.2-ಲೀಟರ್ ಟರ್ಬೊ ಪೆಟ್ರೋಲ್/ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದೆ. ಜೊತೆಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಈ ಕಾರು 24 ಕೆಎಂ/ಕೆಜಿ ಮೈಲೇಜ್ ನೀಡುತ್ತದೆ ಎಂದು ತಿಳಿದುಬಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, September 24, 2024, 14:44 [IST]
English summary
Updated big battery pack tata nexon ev launched india rs 13 99 lakh starting price
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+