ಬೆಂಗಳೂರು ಕೈಜಾರಿ ಚೆನ್ನೈ ಸೇರಿದ ವಿನ್‌ಫಾಸ್ಟ್: ಟೆಸ್ಲಾಗೆ ಟಕ್ಕರ್, ಭಾರತಕ್ಕೆ ಎಂಟ್ರಿಕೊಟ್ಟ ಎಲೆಕ್ಟ್ರಿಕ್ ದೈತ್ಯ
ಇತ್ತೀಚೆಗ ಭಾರತದಲ್ಲಿ ಕಾರು ಮಾರುಕಟ್ಟೆಯು ವಿಪರೀತವಾಗಿ ಬೆಳೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅದರಲ್ಲೂ ಎಸ್‌ಯುವಿ ಮಾರುಕಟ್ಟೆಯಂತೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೇ ಕಾರಣದಿಂದಲೇ ಹಲವಾರು ಕಾರು ಕಂಪನಿಗಳು ವಿಧ ವಿಧವಾದ ಕಾರುಗಳನ್ನು ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಮಾಡುತ್ತಿದ್ದು, ಒಂದಕ್ಕಿಂತ ಒಂದು ಮುಂಪಕ್ತಿಯಲ್ಲಿದೆ.
ಇದೀಗ ಬಂದಿರುವ ಮಾಹಿತಿಗಳ ಪ್ರಕಾರ ವಿನ್‌ಫಾಸ್ಟ್ ಎಂಬ ವಿದೇಶಿ ಕಂಪನಿಯು ತನ್ನ ವಾಹನಗಳ ಮತ್ತು ಬ್ಯಾಟರಿ ನಿರ್ಮಾಣದ ಕಾರ್ಖಾನೆಯ ಸ್ಥಾಪನೆಯ ಕೆಲಸವನ್ನು ಫೆಬ್ರವರಿ ೨೫ ರಿಂದ ಭಾರತದಲ್ಲಿ ಆರಂಭಿಸಿಲಿದೆ. ಭಾರತದ ತಮಿಳು ನಾಡಿನ ತೂತುಕುಡಿಯಲ್ಲಿ ವಿನ್‌ಫಾಸ್ಟ್ ತನ್ನ ಪ್ಲಾಂಟ್ ಅನ್ನು ನಿರ್ಮಾಣ ಮಾಡುತ್ತಿದ್ದು, ಇದಕ್ಕೆ ಬೇಕಾದ ಎಲ್ಲಾ ಸಿದ್ದತೆ ಮತ್ತು ಸಹಕಾರಗಳನ್ನು ತಮಿಳುನಾಡು ಸರ್ಕಾರ ಒದಗಿಸಲಿದೆ ಎಂದು ತಿಳಿದು ಬಂದಿದೆ.

ಮೊದಲ ಹಂತದ ನಿರ್ಮಾಣಕ್ಕೆ ವಿನ್‌ಫಾಸ್ಟ್ ಸುಮಾರು 425 ಕೋಟಿ ರೂಗಳನ್ನು ತಮಿಳುನಾಡಿನಲ್ಲಿ ತನ್ನ ಕಾರ್ಖಾನೆ ನಿರ್ಮಣಕ್ಕೆ ವೆಚ್ಚ ಮಾಡಲಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವತ್ತ ವಿನ್‌ಫಾಸ್ಟ್ ಇಡುತ್ತಿರುವ ಬಹುದೊಡ್ಡ ಹೆಜ್ಜೆ ಇದಾಗಿರಲಿದೆ ಎಂದು ಆಟೋಮೋಟಿವ್ ಪಂಡಿತರು ಹೇಳುತ್ತಿದ್ದಾರೆ.
ತಮಿಳುನಾಡಿನಲ್ಲಿ ವಿನ್‌ಫಾಸ್ಟ್ (VinFast India) ತನ್ನ ಬ್ಯಾಟರಿ ಮತ್ತು ಕಾರು ನಿರ್ಮಾಣ ಕಾರ್ಖನೆಯನ್ನು ಸ್ಥಾಪಿಸುವ ಮೂಲಕ ಸಾವಿರಾರು ಸ್ಥಳೀಯ ಉದ್ಯೋಗವನ್ನು ಖಾತರಿಪಡಿಸುತ್ತಿದೆ. ಮಾಹಿತಿಗಳ ಪ್ರಕಾರ ವಿನ್‌ಫಾಸ್ಟ್ ತಮಿಳುನಾಡಿನಲ್ಲಿ ಸುಮಾರು 3000 ರಿಂದ 3500 ಸ್ಥಳೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ವರ್ಷಕ್ಕೆ ಸುಮಾರು ಒಂದೂವರೆ ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ನಿರ್ಮಿಸುವಷ್ಟರ ದೊಡ್ಡ ಮಟ್ಟಿನ ಕಾರ್ಖಾನೆ ಇದಾಗಿರಲಿದೆ ಎನ್ನಲಾಗುತ್ತಿದೆ.

ವಿನ್‌ಫಾಸ್ಟ್ ಕಂಪನಿಯು 2017 ರಿಂದ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು ಆರಂಭಿಸಿದ್ದು ಜಾಗತಿಕವಾಗಿ ಹರಡಿಕೊಂಡಿರುವ ವಿಯೆಟ್ನಾಂ ದೇಶದ ಒಂದೇ ಒಂದು ಕಾರು ನಿರ್ಮಾಣ ಕಂಪನಿಯಾಗಿದೆ. ವಿನ್‌ಫಾಸ್ಟ್ ಕಂಪನಿಯು ಆರಂಭದಲ್ಲಿ ಬಿಎಂಡಬ್ಲ್ಯೂ ಕಂಪನಿಯ ಬೇಸ್ ಮಾಡೆಲ್ ಕಾರುಗಳು ಹಾಗೂ ಕೆಲವು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ವಿಯೆಟ್ನಾಂ ನಲ್ಲಿ ಮಾರಾಟ ಮಾಡುತ್ತಿತ್ತು. ಆದರೆ ಕೆಲವೇ ಸಮಯಗಳಲ್ಲಿ ತಮ್ಮದೇ ಸ್ವಂತ ಎಲೆಕ್ಟ್ರಿಕ್ ಕಾರುಗಳನ್ನು ಸಹ ತಯಾರಿಸಲು ಆರಂಭ ಮಾಡಿತು.
ಕಂಪನಿಯು ಈಗಾಗಲೇ ತನ್ನ ಶೋ ರೂಮ್‌ಗಳನ್ನು ಯುಎಸ್, ಕೆನಡಾ ಮತ್ತು ಯೂರೋಪ್ ದೇಶಗಳಲ್ಲಿ ಸ್ಥಾಪಿಸಿದೆ. ಇನ್ನು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ವಿಪರೀತವಾಗಿ ಬೆಳವಣಿಗೆ ಆಗುತ್ತಿರುವುದರಿಂದ ಭಾರತದಲ್ಲೂ ತಮ್ಮ ಅಧಿಪತ್ಯವನ್ನು ಸ್ಥಾಪಿಸಲು ವಿನ್‌ಫಾಸ್ಟ್ ಕಾರು ತಯಾರಿಕಾ ಕಂಪನಿಯು ಸಿದ್ಧವಾಗಿದೆ ಎಂಬುದು ಇತ್ತೀಚಿನ ಬೆಳವಣಿಗೆಗಳಿಂದ ತಿಳಿದು ಬರುತ್ತದೆ.

ಇನ್ನು ಭಾರತದಲ್ಲಿ ವಿನ್‌ಫಾಸ್ಟ್ ಕಂಪನಿಯು ತನ್ನ ಮೂರು ಮಾದರಿಯ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಎಂದು ತಿಳಿದು ಬಂದಿದೆ. ಈ ಎಲ್ಲಾ ಮಾದರಿಗಳನ್ನು ಸಹ ಸಿಬಿಯು ಯೂನಿಟ್ ಆಗಿ ಆರಂಭದ ಘಟ್ಟದಲ್ಲಿ ತರಲಿದ್ದು ಇದರ ಬೆಳವಣಿಗೆಯನ್ನು ಅವಲೋಕಿಸಿದ ನಂತರ ಇತರ ಯೋಜನೆಗಳನ್ನು ಭಾರತದಲ್ಲಿ ಕಂಪನಿಯು ಕೈಗೊಳ್ಳಲಿದೆ. ಭಾರತದಲ್ಲಿ ವಿನ್‌ಪಾಸ್ಟ್ ಕಂಪನಿ ಕಡೆಯಿಂದ ನಿರೀಕ್ಷಿಸಲಾತ್ತಿರುವ ಪ್ರಮುಖ ಮೂರು ಕಾರುಗಳೆಂದರೆ ಅದು ವಿನ್‌ಫಾಸ್ಟ್ ವಿಎಫ್7, ವಿನ್‌ಫಾಸ್ಟ್ ವಿಎಫ್8 ಮತ್ತು ವಿನ್‌ಫಾಸ್ಟ್ ವಿಎಫ್ಇ34.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








