ಭಾರತದ ಎಲೆಕ್ಟ್ರಿಕ್ ಅಖಾಡಕ್ಕೆ ಹೊಸ ಬ್ರ್ಯಾಂಡ್: ಟಾಟಾ ಸೇರಿದಂತೆ ಹಲವು ಕಂಪನಿಗಳಿಗೆ ಎದೆಬಡಿತ ಶುರು

ವಾಹನ ಉದ್ಯಮದ ಹೊಸ ಸಂಚಲನ ಸೃಷ್ಟಿಸಿ ವಿನ್‌ಫಾಸ್ಟ್ ಭಾರೀ ಜನಪ್ರಿಯತೆಯನ್ನು ಗಳಿಸಿದೆ. ವಿಯೆಟ್ನಾಂ ಎಲೆಕ್ಟ್ರಿಕ್ ವಾಹನ ತಯಾರಕ ವಿನ್‌ಫಾಸ್ಟ್ ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕದ ಎಲೆಕ್ಟೃಕ್ ದೈತ್ಯರಾದ ಟೆಸ್ಲಾ (Tesla) ಮತ್ತು ಚೈನೀಸ್ ಕಂಪನಿ ಬಿಲ್ಡ್ ಯುವರ್ ಡ್ರೀಮ್ಸ್ (ಬಿವೈಡಿ) ಭಾರೀ ಪೈಪೋಟಿಯನ್ನು ನೀಡುತ್ತಿದೆ. ಬಿವೈಡಿ (BYD) ಕಂಪನಿಯು ಈಗಾಗಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿ ತಮ್ಮ ಕಾರುಗಳನ್ನು ಮಾರಾಟ ಮಾಡುತ್ತಿದೆ. ಈ ನಡುವೆ ವಿನ್‌ಫಾಸ್ಟ್ (VinFast) ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಸಂಚಲನವನ್ನು ಸೃಷ್ಟಿಸಲು ಸಜ್ಜಾಗುತ್ತಿದೆ. ತಮಿಳುನಾಡು ತೂತುಕುಡಿಯಲ್ಲಿ ವಿನ್‌ಫಾಸ್ಟ್‌ನ EV ಸ್ಥಾವರವನ್ನು ಸ್ಥಾಪಿಸಲಾಗುತ್ತಿದೆ.

ವಿನ್‌ಫಾಸ್ಟ್‌ ಕಂಪನಿಯು VF e34 ಮತ್ತು VF 5 ಎಂಬ ಎರಡೂ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿವೆ. ಇದರಲ್ಲಿ ವಿನ್‌ಫಾಸ್ಟ್‌ VF e34 ಎಲೆಕ್ಟ್ರಿಕ್ ಮಾದರಿಯು ಭಾರತದಲ್ಲಿ ರೋಡ್ ಟೆಸ್ಟ್ ನಡೆಸುವಾಗ ಕಾಣಿಸಿಕೊಂಡಿದೆ. ವಿನ್‌ಫಾಸ್ಟ್‌ನ ವಿಭಿನ್ನ ವಿನ್ಯಾಸ ಭಾಷೆ ತಕ್ಷಣವೇ ಸ್ಪಷ್ಟವಾಗುತ್ತದೆ. ಪುಣೆಯ ರಾವೆಟ್ ಪ್ರದೇಶದಲ್ಲಿ ರೋಡ್ ಟೆಸ್ಟ್ ನಡೆಸುವಾಗ ಈ ಹೊಸ ಎಲೆಕ್ಟ್ರಿಕ್ ಎಸ್‍ಯುವಿಯು ಕಾಣಿಸಿಕೊಂಡಿದೆ.

VinFast VF e34

ವಿನ್‌ಫಾಸ್ಟ್‌ VF e34 (VinFast VF e34) ಎಲೆಕ್ರಿಕ್ ಕಾರಿನ ಬಾಹ್ಯ ಪ್ರೊಫೈಲ್ ವಿಯೆಟ್ನಾಂ-ಸ್ಪೆಕ್ ಮಾದರಿಯಂತೆಯೇ ಇರುತ್ತದೆ. ವಿನ್‌ಫಾಸ್ಟ್ ವಿಎಫ್ ಇ34 ನಯವಾದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಟಾಪ್-ಮೌಂಟೆಡ್ ಡಿಆರ್‌ಎಲ್‌ಗಳು, ಬೂಮರಾಂಗ್ ಶೈಲಿಯ ಫಾಗ್ ಲ್ಯಾಂಪ್ ಹೌಸಿಂಗ್‌ಗಳು ಮತ್ತು ಪ್ರಮುಖ ಬಂಪರ್ ಅನ್ನು ಹೊಂದಿದೆ. ಇದರ ಬಾಡಿ ಪ್ಯಾನೆಲಿಂಗ್ ನಯವಾದ ಮತ್ತು ವಕ್ರವಾಗಿರುತ್ತದೆ.

ವಿನ್‌ಫಾಸ್ಟ್‌ ಕಂಪನಿಯು VF e34 ಮಾದರಿಯು ದಪ್ಪವಾದ ಬಾಡಿ ಕ್ಲಾಡಿಂಗ್, 5-ಸ್ಪೋಕ್ ವಿನ್ಯಾಸದ ಅಲಾಯ್ ವ್ಹೀಲ್ ಗಳು, ಡೋರ್ ಕ್ಲಾಡಿಂಗ್‌ಗಳು, ಬಾಡಿ ಬಣ್ಣದ ಡೋರ್ ಹ್ಯಾಂಡಲ್‌ಗಳು, ಕ್ರೋಮ್ ವಿಂಡೋ ಗಾರ್ನಿಶ್ ಮತ್ತು ಬಾಡಿ ಕಲರ್ ಪಿಲ್ಲರ್‌ಗಳೊಂದಿಗೆ ಸೈಡ್ ಪ್ರೊಫೈಲ್ ಅನ್ನು ಪ್ರತ್ಯೇಕಿಸಬಹುದು. ಇನ್ನು ORVM ಗಳು ಕ್ಯಾಮರಾಗಳನ್ನು ಹೊಂದಿದ್ದು, 360° ಸರೌಂಡ್ ವ್ಯೂ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಇರುವಿಕೆಯನ್ನು ಸೂಚಿಸುತ್ತದೆ.

VinFast VF e34

ಇನ್ನು ಈ ವಿನ್‌ಫಾಸ್ಟ್‌ VF e34 ಎಲೆಕ್ರಿಕ್ ಮಾದರಿಯು ಕನೆಕ್ಟಿಟಿ ಸ್ವರೂಪದಲ್ಲಿ ಹರಿತವಾದ ಟೈಲ್‌ಲ್ಯಾಂಪ್‌ಗಳನ್ನು ಹೊಂದಿದೆ. ಒಟ್ಟಾರೆಯಾಗಿ, ವಿನ್‌ಫಾಸ್ಟ್‌ VF e34 ಸರಳವಾದ, ಆದರೆ ಸೊಗಸಾದ ವಿನ್ಯಾಸವನ್ನು ಹೊಂದಿದೆ. ಇದು 4,300 mm ಉದ್ದ, 1,768 mm ಅಗಲ ಮತ್ತು 1,615 mm ಎತ್ತರವನ್ನು ಹೊಂದಿದ್ದು, ಇನ್ನು ವೀಲ್ ಬೇಸ್ 2,611 mm ಹೊಂದಿದೆ.

ವಿನ್‌ಫಾಸ್ಟ್‌ VF e34 ಮಾದರಿಯು ಮುಂಬರುವ ಹ್ಯುಂಡೈ ಕ್ರೆಟಾ ಇವಿ, ಕರ್ವ್ EV ಮತ್ತು ಮಾರುತಿ eVX ಎಲೆಕ್ಟ್ರಿಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ಸ್ಪೈ ಶಾಟ್‌ಗಳಲ್ಲಿ ಒಳಾಂಗಣವನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಇದು ವಿಯೆಟ್ನಾಂ ಮಾದರಿಯಂತೆಯೇ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಎಸ್‍ಯುವಿ 10-ಇಂಚಿನ ಲಂಬವಾಗಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 7-ಇಂಚಿನ ಪೂರ್ಣ ಬಣ್ಣದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

VinFast VF e34

ವಿನ್‌ಫಾಸ್ಟ್‌ VF e34 ವೆಂಟಿಲೇಟೆಡ್ ಫ್ಯಾಬ್ರಿಕ್ ಸೀಟ್‌ಗಳು, ಏರ್ ಫಿಲ್ಟರ್, ಯುಎಸ್‌ಬಿ ಪೋರ್ಟ್‌ಗಳು, ವೈ-ಫೈ ಸಂಪರ್ಕ, ಕೀಲೆಸ್ ಎಂಟ್ರಿ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಹೊಂದಿದೆ. ಇಅದ್ರೊಂದಿಗೆ ಸುರಕ್ಷತಾ ವೈಶಿಷ್ಟ್ಯಗಳ ಸಮಗ್ರ ಶ್ರೇಣಿಯು ಲಭ್ಯವಿದೆ. ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, 6 ಏರ್‌ಬ್ಯಾಗ್‌ಗಳು, ಆಕ್ಯುಪೆಂಟ್ ಸ್ಟೇಟಸ್ ಡಿಟೆಕ್ಷನ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾ ಇದೆ.

ಇದರೊಂದಿಗೆ ADAS ಕಿಟ್ ಹಿಂಭಾಗದ ಕ್ರಾಸ್-ಟ್ರಾಫಿಕ್ ಅಲರ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ರಿಯರ್ ಪಾರ್ಕಿಂಗ್ ಅಸಿಸ್ಟ್, ಟೈಮ್ ಫೆನ್ಸಿಂಗ್, ರಿಮೋಟ್ ವೆಹಿಕಲ್ ಲೊಕೇಶನ್ ಮತ್ತು ಇಂಟ್ರೂಶನ್ ಅಲರ್ಟ್ ಒಳಗೊಂಡಿದೆ. ವಿಯೆಟ್ನಾಂ-ಸ್ಪೆಕ್ ಮಾದರಿಯಲ್ಲಿ, 41.9 kWh LFP ಬ್ಯಾಟರಿ ಪ್ಯಾಕ್‌ ಅನ್ನು ಪಡೆಯಲಾಗುತ್ತದೆ. ಇದು 150 hp ಮತ್ತು 242 Nm ಉತ್ಪಾದಿಸುವ ಮುಂಭಾಗದ-ಮೌಂಟೆಡ್ ಸಿಂಗಲ್ ಎಲೆಕ್ಟ್ರಿಕ್ ಮೋಟರ್‌ಗೆ ಸಂಪರ್ಕಿಸುತ್ತದೆ. ಇ

ವಿನ್‌ಫಾಸ್ಟ್‌ VF e34 ಮಾದರಿಯು ಕೋ, ಕಂಫರ್ಟ್ ಮತ್ತು ಸ್ಪೋರ್ಟ್ ಎಂಬ ಡ್ರೈವ್ ಮೋಡ್‌ಗಳು ಲಭ್ಯವಿದೆ. ವಿನ್‌ಫಾಸ್ಟ್‌ VF e34 0 ರಿಂದ 100 km/h ವೇಗವನ್ನು 9 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ 130 km ಟಾಪ್ ಸ್ಫೀಡ್ ಅನ್ನು ಹೊಂದಿದೆ. ಇನ್ನು ವಿನ್‌ಫಾಸ್ಟ್‌ VF e34 ಎಲೆಕ್ಟ್ರಿಕ್ ಕಾರು 318.6 ಕಿಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

Image Courtesy: Avinash Anushe/Rushlane Spylane

Article Published On: Sunday, June 23, 2024, 13:00 [IST]
English summary
Vinfast vf e34 electric suv spied in india details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+