ಮಾರುಕಟ್ಟೆ ಶೇಕ್: ಒಂದು ಲಕ್ಷ ಮಂದಿ ಈ ಕಾರನ್ನು ಖರೀದಿಸಿದ್ದಾರೆ...ಏನಿದರ ವಿಶೇಷತೆ?
ಜನಪ್ರಿಯ ಕಾರು ತಯಾರಕ ಕಂಪನಿ ಫೋಕ್ಸ್‌ವ್ಯಾಗನ್‌ನ (Volkswagen) ಜನಪ್ರಿಯ ಎಸ್‍ಯುವಿ ಟೈಗನ್ ಆಕರ್ಷಕ ಮಾದರಿಯಾಗಿದೆ. ಈ ಫೋಕ್ಸ್‌ವ್ಯಾಗನ್ ಟೈಗನ್ (Volkswagen Taigun) ಎಸ್‍ಯುವಿಯು ಭರ್ಜರಿಯಾಗಿ ಮಾರಾಟವಾಗುತ್ತಿದೆ. ಬಿಡುಗಡೆಯಾದ ಮೂರು ವರ್ಷಗಳಲ್ಲಿ ಭಾರತೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 100,000 ಯೂನಿಟ್ ಟೈಗನ್‌ಗಳನ್ನು ಮಾರಾಟ ಮಾಡುವ ಮೂಲಕ ಫೋಕ್ಸ್‌ವ್ಯಾಗನ್ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಫೋಕ್ಸ್‌ವ್ಯಾಗನ್ ಟೈಗನ್ ಮಿಡ್ ಸೈಜ್ ಗಾತ್ರದ ಎಸ್‍ಯುವಿ ಮಾದರಿಯಾಗಿದೆ. ಫೋಕ್ಸ್‌ವ್ಯಾಗನ್ ಈ ಕಾರು ಮಾದರಿಯನ್ನು ಭಾರತದಲ್ಲಿ 2021ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಿತು. ಈ ಕಾರಿನ ಉತ್ಪಾದನೆಯನ್ನು ಭಾರತದಲ್ಲಿ ಮಾಡಲಾಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.
ಭಾರತದಲ್ಲಿ ತಯಾರಾದ ಈ ಕಾರನ್ನು ಪ್ರಪಂಚದ ಕೆಲವು ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಈ ಹಂತದಲ್ಲಿ ಭಾರತದಲ್ಲಿ ತಯಾರಾಗುತ್ತಿರುವ ಈ ಟೈಗನ್ ಎಸ್ ಯುವಿ ಕಾರು ಮಾದರಿಗೆ ಭಾರತದಲ್ಲಿ ಹಾಗೂ ರಫ್ತಾಗುತ್ತಿರುವ ವಿಶ್ವದ ರಾಷ್ಟ್ರಗಳಲ್ಲಿ ಉತ್ತಮ ಸ್ವಾಗತ ದೊರೆಯುತ್ತಿದೆ. 2024ರ ಆಗಸ್ಟ್ ತಿಂಗಳ ಅಂತ್ಯದ ವೇಳೆಗೆ ಟೈಗನ್ ಕಾರು ಮಾದರಿಯ 67,140 ಯುನಿಟ್‌ಗಳು ಭಾರತದಲ್ಲಿ ಮಾರಾಟವಾಗಿವೆ ಎಂದು ತಿಳಿದುಬಂದಿದೆ.

ಅದೇ ರೀತಿ, ಟೈಗನ್ ಕಾರು ಮಾದರಿಯ 32,742 ಯುನಿಟ್‌ಗಳನ್ನು ಪ್ರಪಂಚದಾದ್ಯಂತದ ದೇಶಗಳಿಗೆ ರಫ್ತು ಮಾಡಲಾಗಿದೆ. ಅಂದರೆ, ಮೂರು ವರ್ಷಗಳಲ್ಲಿ ಈ ಪ್ರೀಮಿಯಂ ಕಾರು 99 ಸಾವಿರದ 882 ಯುನಿಟ್‌ಗಳವರೆಗೆ ಮಾರಾಟವಾಗಿದವೆ. ಈ ಫೋಕ್ಸ್‌ವ್ಯಾಗನ್ ಟೈಗನ್‌ನ MQB A0ರಲಿ-IN ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದು ಬ್ರಾಂಡ್‌ನ ಇಂಡಿಯಾ 2.0 ಸ್ಟ್ರಾಟಜಿ ಅಡಿಯಲ್ಲಿ ಹೊರಬಂದ ಮೊದಲ ಮಾದರಿಯಾಗಿದೆ.
ಈ ಫೋಕ್ಸ್‌ವ್ಯಾಗನ್ ಟೈಗನ್ ಕಂಫರ್ಟ್‌ಲೈನ್, ಹೈಲೈನ್, ಟಾಪ್‌ಲೈನ್, ಸೌಂಡ್ ಎಡಿಷನ್ ಟಾಪ್‌ಲೈನ್, ಜಿಟಿ, ಜಿಟಿ ಎಡ್ಜ್ ಟ್ರಯಲ್ ಎಡಿಷನ್, ಜಿಟಿ ಪ್ಲಸ್, ಜಿಟಿ ಎಡ್ಜ್ ಲಿಮಿಟೆಡ್ ಎಡಿಷನ್ ಮತ್ತು ಜಿಟಿ ಪ್ಲಸ್ ಎಡ್ಜ್ ಸೇರಿದಂತೆ ಅನೇಕ ರೂಪಾಂತರಗಳಲ್ಲಿ ಲಭ್ಯವಿದೆ. ಫೋಕ್ಸ್‌ವ್ಯಾಗನ್ ಟೈಗನ್ ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

ಈ ಫೋಕ್ಸ್‌ವ್ಯಾಗನ್ ಟೈಗನ್ ಎಸ್‌ಯುವಿಯ ಬಗ್ಗೆ ಹೇಳುವುದಾದರೆ, ಈ ಎಸ್‍ಯುವಿಯು ಕಂಫರ್ಟ್‌ಲೈನ್, ಹೈಲೈನ್, ಟಾಪ್‌ಲೈನ್, ಸೌಂಡ್ ಎಡಿಷನ್ ಟಾಪ್‌ಲೈನ್, ಜಿಟಿ, ಜಿಟಿ ಎಡ್ಜ್ ಟ್ರಯಲ್ ಎಡಿಷನ್, ಜಿಟಿ ಪ್ಲಸ್, ಜಿಟಿ ಎಡ್ಜ್ ಲಿಮಿಟೆಡ್ ಎಡಿಷನ್ ಮತ್ತು ಜಿಟಿ ಪ್ಲಸ್ ಎಡ್ಜ್ ಸೇರಿದಂತೆ ಅನೇಕ ರೂಪಾಂತರಗಳಲ್ಲಿ ಲಭ್ಯವಿದೆ. ಎಸ್‌ಯುವಿಯು ಫೋಕ್ಸ್‌ವ್ಯಾಗನ್ ಎಸ್‌ಯುವಿ ಗ್ರಿಲ್ ಸಿಗ್ನೇಚರ್ ಪಡೆಯುತ್ತದೆ ಅದು ಹೆಡ್‌ಲ್ಯಾಂಪ್‌ಗಳನ್ನು ಪೂರೈಸಲು ವಿಸ್ತರಿಸುತ್ತದೆ.
ಡೈನಾಮಿಕ್ ಟ್ರಿಮ್ ಅಡಿಯಲ್ಲಿರುವ ರೂಪಾಂತರಗಳು 1.0 ಲೀಟರ್, ಮೂರು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದರೆ, ಪರ್ಫಾರ್ಮೆನ್ಸ್ ಮಾದರಿಯು 1.5 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಇದರಲ್ಲಿ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 115 ಬಿಹೆಚ್‍ಪಿ ಪವರ್ ಮತ್ತು 178 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಎಸ್‍ಯುವಿಯಲ್ಲಿ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.0 ಲೀಟರ್ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿದೆ. ಇದರೊಂದಿಗೆ 1.5 ಲೀಟರ್ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಮತ್ತು DSG ಗೇರ್ ಬಾಕ್ಸ್ ಆಯ್ಕೆಯೊಂದಿಗೂ ಲಭ್ಯವಿರುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








