ಫೋಕ್ಸ್‌ವ್ಯಾಗನ್ ವರ್ಟಸ್ ಕಾರಿನ ಸೌಂದರ್ಯಕ್ಕೆ ಮನಸೋತ ಜನ: ಭಾರೀ ಬೇಡಿಕೆ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಇಂಡಿಯಾ ತನ್ನ ವರ್ಟಸ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟ ಮಾಡುತ್ತಿದೆ. 2024ರ ಜುಲೈ ತಿಂಗಳಿನ ಫೋಕ್ಸ್‌ವ್ಯಾಗನ್ ವರ್ಟಸ್ (Volkswagen Virtus) ಕಾರು ಮಾರಾಟದ ಅಂಕಿ ಅಂಶಗಳು ಬಹಿರಂಗವಾಗಿವೆ. ಕಳೆದ ತಿಂಗಳಿನಲ್ಲಿ ಫೋಕ್ಸ್‌ವ್ಯಾಗನ್ ವರ್ಟಸ್ ಸೆಡಾನ್‌ನ 1,766 ಯುನಿಟ್‌ಗಳು ಮಾರಾಟ ವಾಗಿವೆ. ಕಳೆದ ವರ್ಷದ ಅದೇ ತಿಂಗಳಿನಲ್ಲಿ ಫೋಕ್ಸ್‌ವ್ಯಾಗನ್ ವರ್ಟಸ್ ಮಾದರಿಯ 1,737 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ವರ್ಟಸ್ ಮಾರಾಟದಲ್ಲಿ ವರ್ಷದಿಂಡ ವರ್ಷಕ್ಕೆ ಶೇ.2 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಕಳೆದ ತಿಂಗಳ ಸೆಡಾನ್ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಫೋಕ್ಸ್‌ವ್ಯಾಗನ್ ವರ್ಟಸ್ ಕಾರನ್ನು ಹೆಚ್ಚು ಸ್ಥಳೀಕರಣಗೊಂಡ MQB A0 IN ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಈ ಫೋಕ್ಸ್‌ವ್ಯಾಗನ್ ವರ್ಟಸ್ ಕಾರಿನ ಉತ್ಪಾದನೆಯು ಪುಣೆಯಲ್ಲಿರುವ ಕಂಪನಿಯ ಚಕನ್ ಸ್ಥಾವರದಲ್ಲಿ ನಡೆಯುತ್ತದೆ. ಈ ಸೆಡಾನ್ ಮಾದರಿಯು ಫೋಕ್ಸ್‌ವ್ಯಾಗನ್ ಟೈಗನ್ ಕಾಂಪ್ಯಾಕ್ಟ್ ಎಸ್‍ಯುವಿ ನಂತರ ಭಾರತ 2.0 ಯೋಜನೆಯ ಅಡಿಯಲ್ಲಿ ಬಿಡುಗಡೆಯಾದ ಫೋಕ್ಸ್‌ವ್ಯಾಗನ್‌ನ ಎರಡನೇ ಮಾದರಿಯಾಗಿದೆ.

Volkswagen Virtus

ಫೋಕ್ಸ್‌ವ್ಯಾಗನ್ ವರ್ಟಸ್ ಪೆಟ್ರೋಲ್-ಮಾತ್ರ ಸೆಡಾನ್ ಆಗಿದ್ದು, ಈ ಕಾರಿನಲ್ಲಿ 1.0-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಎಂಜಿನ್‌ಗಳನ್ನು ಹೊಂದಿವೆ. ಇದರಲ್ಲಿ 1.0 ಲೀಟರ್ TSI ಪೆಟ್ರೋಲ್ ಎಂಜಿನ್ 114 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ ಆಯ್ಕೆಯ 6-ಸ್ಪೀಡ್ ಟಾರ್ಕ್ ಕರ್ನ್ವಾಟರ್ ಅನ್ನು ಪಡೆಯುತ್ತದೆ.

ಇದರೊಂದಿಗೆ 1.5 ಲೀಟರ್ TSI ಪೆಟ್ರೋಲ್ ಎಂಜಿನ್ 148 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ DSG ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ನೊಂದಿಗೆ ಜೋಡಿಸಲಾಗಿದೆ, ಫೋಕ್ಸ್‌ವ್ಯಾಗನ್ ವರ್ಟಸ್ ಕಾರನ್ನು ವೆಂಟೊಗೆ ಬದಲಿಯಾಗಿ ಕಾಂಪ್ಯಾಕ್ಟ್ ಸೆಡಾನ್ ಅನ್ನು ವಿಶೇಷವಾಗಿ ಭಾರತೀಯ ಮಾರುಕಟ್ಟೆಗಾಗಿ ವಿನ್ಯಾಸಗೊಳಿಸಲಾಗಿದೆ.

ಈ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಮುಂಭಾಗ ಮಸ್ಕಲರ್ ಲುಕ್ ಅನ್ನು ಹೂಂದಿದೆ. ಈ ಹೊಸ ಸೆಡಾನ್ ಸ್ಲ್ಯಾಟ್ ಗ್ರಿಲ್, ಸುತ್ತಲೂ ಕ್ರೋಮ್ ಗಾರ್ನಿಶ್ ಮತ್ತು ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದ. ವರ್ಟಸ್ ಕಾರಿನಲ್ಲಿ ಎಲ್-ಆಕಾರದ ಎಲ್ಇಡಿ ಡಿಆರ್ಎಲ್ ಗಳು ಸ್ಪೋರ್ಟಿಯಾಗಿ ಕಾಣುತ್ತವೆ. ಚೂಪಾದ ಲೈನ್ ಗಳು ಮತ್ತು ಹರಿತವಾದ ವಿನ್ಯಾಸವು ಫೋಕ್ಸ್‌ವ್ಯಾಗನ್ ಕಾರುಗಳ ಸಾಮಾನ್ಯ ಲಕ್ಷಣವಾಗಿದೆ.

ಇನ್ನು ಈ ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಜಿಟಿ ಬ್ಯಾಡ್ಜ್ ಹೊಂದಿರುವ ಪರ್ಫಾಮೆನ್ಸ್ ವೆರಿಯೆಂಟ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಅಲಾಯ್ ವ್ಹೀಲ್ ಗಳು ಕಾರಿನ ಒಟ್ಟಾರೆ ನಿಲುವಿಗೆ ಪೂರಕವಾಗಿವೆ. ವರ್ಟಸ್ ಕಾರಿನ ಡೋರ್ ಹ್ಯಾಂಡಲ್‌ಗಳು, ಕಾಂಟ್ರಾಸ್ಟ್ ಕಪ್ಪು ORVM ಗಳು ಮತ್ತು ರೂಪ್ ಗಾಗಿ ಕ್ರೋಮ್ ಅನ್ನು ಹೊಂದಿದೆ.

ಇದರೊಂದಿಗೆ ಈ ವರ್ಟಸ್ ಕಾರಿನ ಪ್ರೊಫೈಲ್ ಅನ್ನು ಪೂರ್ಣಗೊಳಿಸಿದಾಗ ಎಲ್ಇಡಿ ಟೈಲ್‌ಲೈಟ್‌ಗಳು, ಬೂಟ್ ಲಿಡ್‌ನಲ್ಲಿ ವಿರ್ಟಸ್ ಬ್ಯಾಡ್ಜ್ ಮತ್ತು ಬೂಟ್-ಮೌಂಟೆಡ್ ನಂಬರ್ ಪ್ಲೇಟ್ ರಿಸೆಸ್ ಕಾರಿನ ಹಿಂಭಾಗವನ್ನು ಆವರಿಸುತ್ತದೆ. ಇನ್ನು ಫೋಕ್ಸ್‌ವ್ಯಾಗನ್ ವಿರ್ಟಸ್ ಸ್ಟ್ಯಾಂಡರ್ಡ್ ವೆರಿಯೆಂಟ್ ಮತ್ತು ಜಿಟಿ ವೇರಿಯಂಟ್ ನಡುವೆ ವಿಭಿನ್ನ ಸ್ಟೈಲಿಂಗ್ ಬಿಟ್‌ಗಳನ್ನು ಕೂಡ ಸೇರಿಸಿದೆ.

ಅತ್ಯಂತ ಪ್ರಮುಖವಾದ ಬದಲಾವಣೆಯು ಮುಂಭಾಗದಲ್ಲಿದೆ. ವಿರ್ಟಸ್ ಫಾಸಿಕ ಬ್ಲ್ಯಾಕ್ ಇನಸರ್ಟ್ ಅನ್ನು ಹೊಂದಿದೆ. ಈ ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಕಾರಿನ ವೈಶಿಷ್ಟ್ಯಗಳ ವಿಷಯದಲ್ಲಿ, ಕಾರು ವೈರ್‌ಲೆಸ್ ಫೋನ್ ಚಾರ್ಜರ್, ವೆಂಟಿಲೆಟರ್ ಮುಂಭಾಗದ ಸೀಟುಗಳು, ಹಿಂಭಾಗದ ಏರ್-ಕಾನ್ ವೆಂಟ್‌ಗಳು ಮತ್ತು ಎಲೆಕ್ಟ್ರಿಕ್ ಸನ್‌ರೂಫ್‌ನೊಂದಿಗೆ ಬರುತ್ತದೆ. ವರ್ಟಸ್ ಕ್ಲಾಸ್-ಲೀಡಿಂಗ್ 521-ಲೀಟರ್ ಬೂಟ್ ಸ್ಪೇಸ್‌ ಹೊಂದಿದೆ.

ಇದನ್ನು ಎರಡನೇ ಸಾಲಿನ ಸೀಟುಗಳನ್ನು ಮಡುಚುವ ಮೂಲಕ 1,050-ಲೀಟರ್‌ಗೆ ವಿಸ್ತರಿಸಬಹುದು. ಪರ್ಫಾರ್ಮೆನ್ಸ್ ಲೈನ್ ಕೂಡ 60:40 ಸ್ಪ್ಲಿಟ್ ಫಂಕ್ಷನ್‌ ಅನ್ನು ಹೊಂದಿದೆ. ಫೋಕ್ಸ್‌ವ್ಯಾಗನ್ ವರ್ಟಸ್ ಕಾರಿನ ಒಳಭಾಗದಲ್ಲಿ ವಿಶಾಲವಾದ ಮತ್ತು ಉತ್ತಮವಾದ ಕ್ಯಾಬಿನ್‌ನೊಂದಿಗೆ ಬರುತ್ತದೆ, ಡ್ಯುಯಲ್-ಟೋನ್ ಕಪ್ಪು ಮತ್ತು ಬೀಜ್ ಒಳಾಂಗಣದಲ್ಲಿ ಪೂರ್ಣಗೊಂಡಿದೆ. ವೈಲ್ಡ್ ಚೆರ್ರಿ ರೆಡ್ ಪೇಂಟ್ ಸ್ಕೀಮ್‌ಗೆ ನಿರ್ದಿಷ್ಟವಾದ ಡ್ಯಾಶ್‌ಬೋರ್ಡ್‌ನಲ್ಲಿ ಪರ್ಫಾರ್ಮೆನ್ಸ್ ಲೈನ್ ವರ್ಟಸ್ ರೆಡ್ ಬಣ್ಣದ ಮುಖ್ಯಾಂಶಗಳನ್ನು ಒಳಗೊಂಡಿದೆ.

More from DriveSpark

Article Published On: Saturday, August 24, 2024, 14:00 [IST]
English summary
Volkswagen virtus sedan sales in july 2024 details
Read more on volkswagen india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+