ವೋಲ್ವೋ ಕಾರ್ ಇಂಡಿಯಾ ಹೊಸ ದಾಖಲೆ: 1000 EV ಕಾರುಗಳ ವಿತರಣೆ
ವೋಲ್ವೋ ಕಾರ್ ಇಂಡಿಯಾ ತನ್ನ ಒಂದು ಸಾವಿರಕ್ಕೂ ಹೆಚ್ಚು ಇವಿ ಕಾರುಗಳನ್ನು ವಿತರಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲನ್ನು ದಾಟಿದೆ ಎಂದು ಘೋಷಿಸಿದೆ. ವೋಲ್ವೋ ಕಾರ್ ಇಂಡಿಯಾದ EV ಪ್ರಯಾಣವು ನವೆಂಬರ್ 2022 ರಲ್ಲಿ ಕಂಪನಿಯು ತನ್ನ ಮೊದಲ XC40 ರೀಚಾರ್ಜ್ ಅನ್ನು ವಿತರಿಸುವುದರೊಂದಿಗೆ ಪ್ರಾರಂಭವಾಯಿತು. XC40 ರೀಚಾರ್ಜ್ ಭಾರತದಲ್ಲಿ ಸ್ಥಳೀಯವಾಗಿ ಜೋಡಿಸಲಾದ ಮೊದಲ ಐಷಾರಾಮಿ ಎಲೆಕ್ಟ್ರಿಕ್ SUV ಆಗಿದೆ. ಕಂಪನಿಯು ಭಾರತದಲ್ಲಿ XC40 ರೀಚಾರ್ಜ್, ಬಾರ್ನ್ ಎಲೆಕ್ಟ್ರಿಕ್ C40 ರೀಚಾರ್ಜ್ ಮತ್ತು ಸಿಂಗಲ್ ಮೋಟಾರ್ XC40 ರೀಚಾರ್ಜ್ ಎಂಬ ಮೂರು EV ಮಾದರಿಗಳನ್ನು ನೀಡುತ್ತದೆ.
ಇವೆಲ್ಲವನ್ನೂ ವೋಲ್ವೋ ಕಾರ್ ಇಂಡಿಯಾ ವೆಬ್‌ಸೈಟ್ ಮೂಲಕ ಕಂಪನಿಯ ಮಹತ್ವಾಕಾಂಕ್ಷೆಯ ಆನ್‌ಲೈನ್ ಡೈರೆಕ್ಟ್ ಸೇಲ್ಸ್ ಮಾದರಿಯ ಅಡಿಯಲ್ಲಿ ವಿತರಿಸಲಾಗುತ್ತದೆ. ಎಲ್ಲಾ ವೋಲ್ವೋ EV ಗ್ರಾಹಕರು ಕಂಪನಿಯ ಅಂತಿಮ ಐಷಾರಾಮಿ ಕಾರ್ಯಕ್ರಮಕ್ಕೆ 'ಟ್ರೆ ಕ್ರೋನರ್ ಅನುಭವ' ಎಂಬ ವಿಶೇಷ ಸದಸ್ಯತ್ವವನ್ನು ಸಹ ಪಡೆಯುತ್ತಾರೆ ಎಂದು ಕಂಪನಿ ತಿಳಿಸಿದೆ.

"ವಿಶ್ವ ಪರಿಸರ ದಿನದ ಸಂದರ್ಭದಲ್ಲಿ, ವೋಲ್ವೋ ಕಾರ್ ಇಂಡಿಯಾ 1000 ಕ್ಕೂ ಹೆಚ್ಚು EV ಕಾರುಗಳನ್ನು ವಿತರಿಸಿದೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ. ಈ ಸಾಧನೆಯು 2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಕಂಪನಿಯಾಗುವತ್ತ ನಮ್ಮ ಪ್ರಯಾಣದ ಮತ್ತೊಂದು ಮೈಲಿಗಲ್ಲಾಗಿದೆ. ನಮ್ಮ ದೃಢವಾದ ಪ್ರಗತಿಯು ನಮ್ಮ ಕಾರುಗಳ ಬಲವಾದ ಗ್ರಾಹಕರ ವಿಶ್ವಾಸದ ಪ್ರತಿಬಿಂಬವಾಗಿದೆ.
ಭಾರತದಲ್ಲಿ ಐಷಾರಾಮಿ EV ಮಾರುಕಟ್ಟೆಯನ್ನು ಬೆಳೆಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಸದ್ಯ ವಿಶ್ವ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ನಮ್ಮ ಕೊಡುಗೆ ಅಪಾರವಾದದ್ದು, ಮುಂಬರುವ ದಿನಗಳಲ್ಲಿ ಪರಿಸರ ಸ್ನೇಹಿ ವಾಹನಗಳನ್ನು ನೀಡುವಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತೇವೆ ಎಂದು ವೋಲ್ವೋ ಕಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಜ್ಯೋತಿ ಮಲ್ಹೋತ್ರಾ ಹೇಳಿದ್ದಾರೆ.

ವೋಲ್ವೋ ಕಾರ್ ಇಂಡಿಯಾ 2023 ರಲ್ಲಿ ಬಲವಾದ ಬೆಳವಣಿಗೆಯನ್ನು ಹೊಂದಿತ್ತು, 2022 ಕ್ಕೆ ಹೋಲಿಸಿದರೆ ಒಟ್ಟಾರೆ ವಾಹನ ಮಾರಾಟದಲ್ಲಿ ಗಮನಾರ್ಹವಾದ 31% ಹೆಚ್ಚಳವಾಗಿದೆ. ಶುದ್ಧ ಎಲೆಕ್ಟ್ರಿಕ್ ಮಾದರಿಗಳಾದ XC40 ರೀಚಾರ್ಜ್ ಮತ್ತು C40 ರೀಚಾರ್ಜ್ ಒಟ್ಟಾಗಿ ಒಟ್ಟು ಮಾರಾಟದ 28% ನಷ್ಟಿದೆ ಎಂದು ಕಂಪನಿ ಹೇಳಿಕೊಂಡಿದೆ.
ಈಗಾಗಲೇ XC40 ರೀಚಾರ್ಜ್, ಬಾರ್ನ್ ಎಲೆಕ್ಟ್ರಿಕ್ C40 ರೀಚಾರ್ಜ್ ಮತ್ತು ಸಿಂಗಲ್ ಮೋಟಾರ್ XC40 ರೀಚಾರ್ಜ್ ಕಾರುಗಳು ಉತ್ತಮ ಬೇಡಿಕೆ ಪಡೆದಿವೆ. ಇದರ ಜೊತೆಗೆ ವೋಲ್ವೋ ಕಾರ್ ಇಂಡಿಯಾ ತನ್ನ ಸಂಪೂರ್ಣ ಪೋರ್ಟ್‌ಫೋಲಿಯೊವನ್ನು 2030 ರ ಮೊದಲು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುವ ಗುರಿಯೊಂದಿಗೆ ಪ್ರತಿ ವರ್ಷ ಒಂದು ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಲು ಬದ್ಧವಾಗಿದೆ.

ವೋಲ್ವೋ 2007 ರಲ್ಲಿ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿತು. ಅಂದಿನಿಂದ, ದೇಶದಲ್ಲಿ ಸ್ವೀಡಿಷ್ ಬ್ರ್ಯಾಂಡ್ ಅನ್ನು ಮಾರಾಟ ಮಾಡಲು ತೀವ್ರವಾಗಿ ಕೆಲಸ ಮಾಡಿದೆ. ವೋಲ್ವೋ ಕಾರುಗಳು ಪ್ರಸ್ತುತ ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ಕೊಯಮತ್ತೂರು, ದೆಹಲಿ NCR - ದಕ್ಷಿಣ ದೆಹಲಿ, ಪಶ್ಚಿಮ ದೆಹಲಿ, ಗುರ್ಗಾಂವ್, ಹೈದರಾಬಾದ್‌ನಲ್ಲಿ ಮಾರಾಟವಾಗುತ್ತಿವೆ.
ಇವಿಷ್ಟೇ ಅಲ್ಲದೇ ಇಂದೋರ್, ರಾಯ್‌ಪುರ, ಜೈಪುರ, ಕೊಚ್ಚಿ, ಕೋಝಿಕ್ಕೋಡ್, ಕೋಲ್ಕತ್ತಾ, ಲಕ್ನೋ, ಲುಧಿಯಾನ, ದಕ್ಷಿಣ ಮುಂಬೈ, ಪುಣೆ, ರಾಯಪುರ, ಸೂರತ್, ವಿಶಾಖಪಟ್ಟಣಂ ಮತ್ತು ವಿಜಯವಾಡ ಪಶ್ಚಿಮ ಮುಂಬೈನಲ್ಲಿ 25 ಡೀಲರ್‌ಶಿಪ್‌ಗಳ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಇನ್ನೂ ಹೆಚ್ಚಿನ ಶೋರೂಂಗಳನ್ನು ಸ್ಥಾಪಿಸುವ ಉತ್ಸಾಹದಲ್ಲಿರುವುದಾಗಿ ಕಂಪನಿ ತಿಳಿಸಿದೆ.


Click it and Unblock the Notifications








