ಟೊಯೋಟಾದಲ್ಲಿ ಈ ಕಾರು ಸೂಪರ್ ಹಿಟ್: ಮಾರುತಿಯಲ್ಲಿ ಇದು ಸಾಧ್ಯವಾಗದೇ ಇರುವುದು ಯಾಕೆ ಗೊತ್ತೇ?
ಜಪಾನಿನ ವಾಹನ ತಯಾರಕರಾದ ಸುಜುಕಿ ಮತ್ತು ಟೊಯೋಟಾ ನಡುವಿನ ಮೈತ್ರಿಯ ಭಾಗವಾಗಿ, ಕಾರುಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಮತ್ತು ರೀಬ್ಯಾಡ್ಜ್ ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. 2020 ರಲ್ಲಿ, ಟೊಯೊಟಾ ಮೊದಲ ಬಾರಿಗೆ ರೀಬ್ಯಾಡ್ಜ್ ಮಾಡಲಾದ ಮಾರುತಿ ಸುಜುಕಿ ಕಾರನ್ನು ಬಿಡುಗಡೆ ಮಾಡಿತು. ಇದು ಟೊಯೊಟಾ ಅರ್ಬನ್ ಕ್ರೂಸ್ ಆಗಿದ್ದು, ಮಾರುತಿ ವಿಟಾರಾ ಬ್ರೆಝಾದ ರೀ ಬ್ರಾಂಡೆಡ್ ಆವೃತ್ತಿಯಾಗಿದೆ. ನಂತರ ಬಲೆನೊ, ಗ್ರ್ಯಾಂಡ್ ವಿಟಾರಾ ಮತ್ತು ಎರ್ಟಿಗಾದಂತಹ ಮಾದರಿಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಆದರೆ ಪ್ರಸ್ತುತ, ಮಾರುತಿ ಸುಜುಕಿ ಕೇವಲ ಒಂದು ರೀಬ್ಯಾಡ್ಜ್ ಮಾಡಿದ ಟೊಯೊಟಾ ಕಾರನ್ನು ಮಾತ್ರ ಮಾರಾಟ ಮಾಡುತ್ತಿದೆ.
ಇಂದು ನಮ್ಮಲ್ಲಿ ಪ್ರೀಮಿಯಂ ಎಂಪಿವಿ ವಿಭಾಗದ ರಾಜ ಟೊಯೊಟಾ ಇನ್ನೋವಾ ಹೈಕ್ರಾಸ್ ಆಗಿದೆ. ಸಾಮಾನ್ಯವಾಗಿ ಮಾರುತಿಯ ಕಾರುಗಳು ಟೊಯೊಟಾದಿಂದ ರೀಬ್ಯಾಡ್ಜ್ ಮಾಡಿದಾಗ ಅಷ್ಟೇನೂ ಹೆಸರು ಮಾಡುವುದಿಲ್ಲ. ಇನ್ವಿಕ್ಟೋ ಕಾರನ್ನು ಮಾರುತಿ ರೀ ಬ್ಯಾಡ್ಜಿಂಗ್‌ನೊಂದಿಗೆ ಬಂದಾಗ ಇದೇ ರೀತಿಯ ಘಟನೆ ಸಂಭವಿಸಿದೆ.

ಮಾರುತಿ ಕಂಪನಿಯು ಭಾರತದಲ್ಲಿ ತಿಂಗಳಿಗೆ 1 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಏಕೈಕ ಕಂಪನಿಯಾಗಿದೆ. ಇತ್ತೀಚಿನ ಮಾರಾಟದ ಮಾಹಿತಿಯನ್ನು ನೋಡಿದರೆ, ಟೊಯೊಟಾದ ಇನ್ನೋವಾ ಹೈಕ್ರಾಸ್ ಮಾರುಕಟ್ಟೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಇನ್ವಿಕ್ಟೋ ವಿಷಯದಲ್ಲಿ ಹೀಗೆ ಆಗುತ್ತಿಲ್ಲ. ಇನ್ನೋವಾ, ಪ್ರೀಮಿಯಂ MPV, ಕ್ರಿಸ್ಟಾ ಮತ್ತು ಹೈಕ್ರಾಸ್ ಮಾದರಿಗಳು ಸೇರಿದಂತೆ ಪ್ರತಿ ತಿಂಗಳು 8,000 ಮತ್ತು 9,000 ಯುನಿಟ್‌ಗಳ ನಡುವೆ ಮಾರಾಟವಾಗುತ್ತದೆ.
ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಕೊಡುಗೆಯನ್ನು ಟೊಯೊಟಾ ಇನ್ನೋವಾ ಹೈಕ್ರಾಸ್ ನೀಡಿದೆ. ಮತ್ತೊಂದೆಡೆ, ಮಾರುತಿ ಪ್ರತಿ ತಿಂಗಳು 500 ಯೂನಿಟ್ ಇನ್ವಿಕ್ಟೊವನ್ನು ಶೋ ರೂಮ್‌ನಿಂದ ಹೊರ ತರಲು ಹೆಣಗಾಡುತ್ತಿದೆ. ಮಾರುತಿಯ ಫ್ಲಾಗ್‌ಶಿಪ್ ಮಾದರಿಯಾದ ಈ ಕಾರು ಇಷ್ಟು ಕಡಿಮೆ ಮಾರಾಟವಾಗುತ್ತಿರುವುದು ಸೋಜಿಗವೇ ಸರಿ.

ಇನ್ವಿಕ್ಟೋ (Maruti Suzuki Invicto) ಮಾರುತಿಯ ಇತರ ಕಾರುಗಳಂತೆ ಅಲ್ಲ. 10 ಲಕ್ಷಕ್ಕಿಂತ ಕಡಿಮೆ ಬೆಲೆಯ ಸೆಲೆರಿಯೊ, ಸ್ವಿಫ್ಟ್ ಮತ್ತು ವ್ಯಾಗನ್‌ಆರ್‌ನಂತಹ ಕೈಗೆಟುಕುವ ಕಾರುಗಳನ್ನು ಮಾರಾಟ ಮಾಡುವ ಮೂಲಕ ಮಾರುತಿ ಹೆಸರು ಮಾಡಿದೆ. ಭಾರತೀಯ ಗ್ರಾಹಕರು ಸಾಮಾನ್ಯವಾಗಿ ಮಾರುತಿಯನ್ನು ಬಜೆಟ್ ಕಾರ್ ಕಂಪನಿ ಎಂದು ಪರಿಗಣಿಸುತ್ತಾರೆ.
ಮಾರುತಿ ಕಾರಿಗೆ ಇದು ಅತ್ಯಂತ ಹೆಚ್ಚಿನ ಬೆಲೆಯಾಗಿದೆ. ಮಾರುತಿ ಕಾರುಗಳು ಅಗ್ಗ ಎಂಬುದು ಭಾರತೀಯರ ಅಭಿಪ್ರಾಯ. ಟೊಯೊಟಾದ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಗೆ ಇನ್ವಿಕ್ಟೋಗೆ ಒಂದು ಪ್ಲಸ್ ಆಗಿದ್ದರೂ, ಮಾರುತಿ ಬ್ಯಾಡ್ಜ್‌ನ ಅಡಿಯಲ್ಲಿ ಅದರ ಹೆಚ್ಚಿನ ಬೆಲೆಯು ಅನೇಕರನ್ನು ದೂರವಿಡುತ್ತದೆ. ಅದೇ ರೀತಿ ಟೊಯೊಟಾ ಮಾದರಿಯ ಯಶಸ್ಸಿನಲ್ಲಿ ಇನ್ನೋವಾ ಹೆಸರು ಕೂಡ ಪ್ರಮುಖ ಪಾತ್ರ ವಹಿಸುತ್ತದೆ.

ಬೆಂಗಳೂರಿನಲ್ಲಿ ಮಾರುತಿ ಸುಜುಕಿ ಇನ್ವಿಕ್ಟೋ ಆರಂಭಿಕ ವೇರಿಯಂಟ್ ಆನ್ ರೋಡ್ ಬೆಲೆ ಆರಂಭವಾಗುವುದು 31,43,255 ರೂಪಾಯಿಗಳು. ಇದರಲ್ಲಿ ಎಕ್ಸ್ ಶೋರೂಮ್ ಬೆಲೆ ಸುಮಾರು 25,30,500 ಲಕ್ಷಗಳು. ಇದರ ಜೊತೆಗೆ ಇನ್ಸುರೆನ್ಸ್ ಮತ್ತು ಆರ್‌ಟಿಒ ಟ್ಯಾಕ್ಸ್‌ಗಳು ಸೇರಿ ಸುಮಾರು 31,43,255 ಲಕ್ಷ ರೂಗಳಿಗೆ ನಿಮಗೆ ಸಿಗುತ್ತದೆ.
ಏಳು ಅಥವಾ ಎಂಟು ಆಸನ ಆಯ್ಕೆ ವ್ಯವಸ್ಥೆಯಲ್ಲಿ ದೊರೆಯುವ ಮಾರುತಿ ಸುಜುಕಿ ಇನ್ವಿಕ್ಟೋ, 2 - ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 186 PS ಪವರ್ ಹಾಗೂ 206 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. e - CVT ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದ್ದು, 23.24 kmpl ಮೈಲೇಜ್ ನೀಡುತ್ತದೆ
ಫೀಚರ್‌ಗಳು: ಈಗಿನ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ರೂಫ್ ಆಂಬಿಯೆಂಟ್ ಲೈಟಿಂಗ್, ಸನ್‌ರೂಫ್, ಫೋನ್ ಚಾರ್ಜಿಂಗ್ ವಿವಿಧ ಫೀಚರ್ಸ್ ಹೊಂದಿದೆ.


Click it and Unblock the Notifications