ಟೊಯೊಟಾ ಹೈಕ್ರಾಸ್‌ಗೆ ಬಜೆಟ್‌ ಇಲ್ಲವೇ: 24 ಲಕ್ಷಕ್ಕೆ ಅದೇ ಫೀಚರ್‌ಗಳಿರುವ ಮಾರುತಿಯ ಈ ಕಾರು ಖರೀದಿಸಿ

ಮಾರುತಿ ಸುಜುಕಿ ಕಂಪನಿಯ 7 ಸೀಟರ್‌ ಕಾರುಗಳಲ್ಲಿ ಪ್ರಮುಖವಾದುದು ಯಾವುದೆಂದು ನೋಡಿದರೆ ಕೂಡಲೇ ನೆನಪಾಗುವುದು ಮಾರುತಿ ಸುಜುಕಿಯ ಹೊಸ ಇನ್ವಿಕ್ಟೋ. ಟೊಯೋಟಾ ಕಂಪನಿಯ ಹೈಕ್ರಾಸ್‌ ಕಾರಿನ ಮಾರುತಿ ರೂಪಾಂತರವೇ ಈ ಇನ್ವಿಕ್ಟೋ. ಭಾರತದಲ್ಲಿ ಮಾರುತಿ ಸುಜುಕಿ ಮತ್ತು ಟೊಯೋಟಾ ಕಂಪನಿ ಜೊತೆಗೂಡಿ ಹಲವು ಕಾರುಗಳನ್ನು ನಿರ್ಮಿಸಿ ಮಾರಾಟ ಮಾಡುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ಮಾರುತಿಯ ಕೆಲವು ಕಾರು ಮಾದರಿಯನ್ನು ಟೊಯೋಟಾ ಮತ್ತು ಟೊಯೋಟಾದ ಕೆಲವು ಕಾರು ಮಾದರಿಯನ್ನು ಮಾರುತಿ ಸುಜುಕಿ ಎರವಲು ಪಡೆದುಕೊಂಡಿದ್ದು, ಆ ಪಟ್ಟಿಯಲ್ಲಿ ಇನ್ವಿಕ್ಟೋ ಸಹ ಇದೆ.

ರೂ.20 ಲಕ್ಷ ಬೆಲೆಯನ್ನು ದಾಟಿರುವ ಕಂಪನಿಯ ಮೊದಲ ಮಾರುತಿ ಯ ಕಾರಾಗಿರುವ ಈ ಮಾರುತಿ ಸುಜುಕಿ ಇನ್ವಿಕ್ಟೋ (Maruti Suzuki Invicto), 7 ಸೀಟರ್‌ ಕಾರನ್ನು ಕೊಳ್ಳಬೇಕು ಎಂದುಕೊಂಡಿರುವವರಿಗೆ ಯಾಕೆ ಉತ್ತಮ ಆಯ್ಕೆ ಎಂದು ಇಂದು ನಾವು ನೋಡಲಿದ್ದೇವೆ. ಇದರಲ್ಲಿ ನಾವು ಡಿಸೈನ್, ಎಂಜಿನ್‌ ಮತ್ತು ಪರ್ಫಾಮೆನ್ಸ್‌ಗಳ ಕುರಿತಾಗಿ ನೋಡೋಣ.

Why Maruti Suzuki Invicto Is Best 7 Seater MPV Key Reasons

ಡಿಸೈನ್‌: ಈ ಎಂಪಿವಿ ಝೀಟಾ ಪ್ಲಸ್ (Zeta Plus) ಮತ್ತು ಆಲ್ಫಾ ಪ್ಲಸ್ (Alpha Plus) ರೂಪಾಂತರ ಹಾಗೂ ಐದು ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇನ್ನೋವಾ ಹೈಕ್ರಾಸ್‌ ಕಾರಿನ ಬಹುತೇಕ ಅದೇ ಡಿಸೈನ್‌ ಲ್ಯಾಂಗ್ವೇಜ್ ಅನ್ನು ಈ ಕಾರು ಹೊಂದಿದೆ.

ಎಂಜಿನ್‌: ಏಳು ಅಥವಾ ಎಂಟು ಆಸನ ಆಯ್ಕೆ ವ್ಯವಸ್ಥೆಯಲ್ಲಿ ದೊರೆಯುವ ಮಾರುತಿ ಸುಜುಕಿ ಇನ್ವಿಕ್ಟೋ, 2 - ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 186 PS ಪವರ್ ಹಾಗೂ 206 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. e - CVT ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದ್ದು, 23.24 kmpl ಮೈಲೇಜ್ ನೀಡುತ್ತದೆ

Why Maruti Suzuki Invicto Is Best 7 Seater MPV Key Reasons

ಫೀಚರ್‌ಗಳು: ಈಗಿನ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ರೂಫ್ ಆಂಬಿಯೆಂಟ್ ಲೈಟಿಂಗ್, ಸನ್‌ರೂಫ್, ಫೋನ್ ಚಾರ್ಜಿಂಗ್ ವಿವಿಧ ಫೀಚರ್ಸ್ ಹೊಂದಿದೆ.

ಸುರಕ್ಷತೆ: ಸುರಕ್ಷತೆಯ ದೃಷ್ಟಿಯಿಂದ ಮಾರುತಿ ಸುಜುಕಿ ಇನ್ವಿಕ್ಟೋ ಎಂಪಿವಿ ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್ಸ್, VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) 360 ಡಿಗ್ರಿ ಕ್ಯಾಮೆರಾ ಮತ್ತು ಫ್ರಂಟ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್ಸ್ ಹೊಂದಿದೆ. ಈ ಕಾರಿಗೆ ಟೊಯೊಟಾ ಇನ್ನೋವಾ ಹೈಕ್ರಾಸ್, ಇನ್ನೋವಾ ಕ್ರಿಸ್ಟಾ ಹಾಗೂ ಕಿಯಾ ಕ್ಯಾರೆನ್ಸ್‌ ಪ್ರಬಲ ಪ್ರತಿಸ್ಪರ್ಧಿಯಾಗಿವೆ.

ಮಾರುತಿ ಸುಜುಕಿ ಇನ್ವಿಕ್ಟೋ ಎಂಪಿವಿ ರೂ.24.84 ಲಕ್ಷದಿಂದ ರೂ.28.42 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗಲಿದ್ದು, ಆನ್ - ರೋಡ್ ದರಗಳು ರೂ.34 ಲಕ್ಷವರೆಗೆ ಇರುತ್ತವೆ. ಈ ಕಾರು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ದೊಡ್ಡಮಟ್ಟದ ಬೇಡಿಕೆಯನ್ನು ಪಡೆದುಕೊಂಡಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Monday, June 24, 2024, 18:21 [IST]
English summary
Why maruti suzuki invicto is the best 7 seater mpv key reasons
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+