ಮಾರಾಟದಲ್ಲಿ ಸುನಾಮಿ: ಚೀನಾದ ಶಿಯೋಮಿಯ ಮೊದಲ ಎಲೆಕ್ಟ್ರಿಕ್ ಕಾರಿಗೆ ಮುಗಿಬಿದ್ದ ಜನ

ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಕಂಪನಿ ಶಿಯೋಮಿ (Xiaomi) ತನ್ನ ಮೊದಲ ಎಲೆಕ್ಟ್ರಿಕ್ ಕಾರು ಶಿಯೋಮಿ SU7 (Xiaomi SU7) ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಶಿಯೋಮಿ ಕಂಪನಿಯು ಕಡಿಮೆ ಬೆಲೆಯಲ್ಲಿ ಹೆಚ್ಚು ತಾಂತ್ರಿಕವಾಗಿ ಮುಂದುವರಿದ ಮಾಡೆಲ್‌ಗಳನ್ನು ತರುವ ಮೂಲಕ ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಜನಪ್ರಿಯತೆ ಗಳಿಸಿದೆ.

ಈ ಹೊಸ ಶಿಯೋಮಿ SU7 ಎಲೆಕ್ಟ್ರಿಕ್ ಸೆಡಾನ್ ಆರಂಭಿಕ ಬೆಲೆಯು 2,15,900 ಯುವಾನ್ (ಅಂದಾಜು 25.34 ಲಕ್ಷ ರೂ.) ಆಗಿದೆ. ಇದು ಅಂತರರಾಷ್ತ್ರೀಯ ಮಾರುಕಟ್ಟೆಗಳಲ್ಲಿ ಅಗ್ಗದ ಬೆಲೆಯಾಗಿದೆ. ಈ ಹೊಸ ಶಿಯೋಮಿ ಎಲೆಕ್ಟ್ರಿಕ್ ಕಾರು 3 ರೂಪಾಂತರಗಳು ಮತ್ತು 9 ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಶಿಯೋಮಿ SU7 ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫಿಚರ್ಸ್ ಗಳನ್ನು ಹೊಂದಿವೆ.

Xiaomi SU7 Electric Sedan

ಹೊಸ ಶಿಯೋಮಿ SU7 ಎಲೆಕ್ಟ್ರಿಕ್ ಸೆಡಾನ್ ಚೀನಾದ 29 ನಗರಗಳಲ್ಲಿ ಮಾರಾಟವಾಗಲಿದೆ. ಮುಂದಿನ ತಿಂಗಳೊಳಗೆ ವಿತರಣೆ ಆರಂಭಿಸುವ ಯೋಜನೆ ಇದೆ. ವಿಶ್ವದ ಅತಿದೊಡ್ಡ ಕಾರು ಮಾರುಕಟ್ಟೆಗಳಲ್ಲಿ ಒಂದಾದ ಚೀನಾದಲ್ಲಿ, BYD ಮತ್ತು ಟೆಸ್ಲಾ ಸೇರಿದಂತೆ ದೇಶೀಯ ವಾಹನ ತಯಾರಕರ ನಡುವೆ ಸ್ಪರ್ಧಿಸಲಿದೆ. ಈ ಶಿಯೋಮಿ ಎಲೆಕ್ಟ್ರಿಕ್ ಕಾರು ಕೇವಲ 27 ನಿಮಿಷಗಳಲ್ಲಿ 50000 ಯುನಿಟ್ ಬುಕಿಂಗ್‌ಗಳನ್ನು ಪಡೆದುಕೊಂಡಿದೆ.

ಹೊಸ ಶಿಯೋಮಿ SU7 ಎಲೆಕ್ಟ್ರಿಕ್ ಸೆಡಾನ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರ ಸ್ಪೋರ್ಟಿ ಮತ್ತು ಯಂಗ್ ವಿನ್ಯಾಸದ ಗುಣಲಕ್ಷಣಗಳೊಂದಿಗೆ ಬಹಳ ಆಕರ್ಷಕವಾಗಿ ಕಾಣುತ್ತದೆ. ಈ ಹೊಸ ಎಲೆಕ್ಟ್ರಿಕ್ ಸೆಡಾನ್ ಯಂಗ್ ಮತ್ತು ಸ್ಪೋರ್ಟಿನೆಸ್‌ನ ಈ ಮಿಶ್ರಣವು ಕಡಿಮೆ-ಸ್ಲಂಗ್ ವಿನ್ಯಾಸ ಮತ್ತು ಕೂಪ್ ತರಹದ ರೂಫ್‌ಲೈನ್‌ನಿಂದ ಮತ್ತಷ್ಟು ಆಕರ್ಷಕವಾಗಿಸಿದೆ.

Xiaomi SU7 Electric Sedan

ಶಿಯೋಮಿ ಪ್ರಕಾರ, SU7 ಅಡಾಪ್ಟಿವ್ LED ಹೆಡ್‌ಲೈಟ್‌ಗಳೊಂದಿಗೆ 400-ಮೀಟರ್ ಥ್ರೋ ನೊಂದಿಗೆ ಬರುತ್ತದೆ, ರಾತ್ರಿಯಲ್ಲಿ ಉತ್ತಮ ಗೋಚರತೆಯನ್ನು ನೀಡುತ್ತದೆ. ಗೋಚರತೆಯ ಬಗ್ಗೆ ಹೇಳುವುದಾದರೆ, ಮಾದರಿಯು ದೊಡ್ಡ 56-ಇಂಚಿನ ಹೆಡ್ಸ್-ಅಪ್ ಡಿಸ್ ಪ್ಲೇಯನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿ 16 ಇಂಚುಗಳಷ್ಟು ಗಾತ್ರದ ದೊಡ್ಡ ಇನ್ಫೋಟೈನ್‌ಮೆಂಟ್ ಯುನಿಟ್ ಅನ್ನು ಹೊಂದಿದೆ. ಜೊತೆಗ, ಫುಲ್ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು 2 ಶಿಯೋಮಿ ಪಾಡ್ 6S Pro ಟ್ಯಾಬ್ಲೆಟ್‌ಗಳನ್ನು ಒಳಗೊಂಡಿವೆ.

ಶಿಯೋಮಿ ತನ್ನ ಮೊಬೈಲ್ ಫೋನ್‌ಗಳಿಗೆ ಹೆಸರುವಾಸಿಯಾಗಿದೆ, ಅದರಂತೆ, ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ ಮೀಸಲಾದ ಫೋನ್ ಹೋಲ್ಡರ್ ಅನ್ನು ನೀಡುವ ಮೂಲಕ ಇದಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಿದೆ. ಇದು ಸ್ಟ್ಯಾಂಡರ್ಡ್ 50W ಚಾರ್ಜಿಂಗ್ ಪ್ಯಾಡ್‌ಗೆ ಹೆಚ್ಚುವರಿಯಾಗಿದೆ. ಇದಕ್ಕಾಗಿ ಡೋರ್ ಪ್ಯಾಡ್‌ನಲ್ಲಿ ವಿಶೇಷ ಪಾಕೆಟ್‌ಗಳನ್ನು ಸಹ ಒಳಗೊಂಡಿದೆ. ಇನ್ನು 4.6-ಲೀಟರ್ ರೆಫ್ರಿಜರೇಟರ್ ಜೊತೆಗೆ ಆಂಟಿ-ವೋಬಲ್ ಮ್ಯಾಟ್, ಅಂಡರ್ ಸೀಟ್ ಅಂಬ್ರೆಲಾ ಹೋಲ್ಡರ್, 25-ಸ್ಪೀಕರ್ ಆಡಿಯೊ ಸಿಸ್ಟಮ್ ಮತ್ತು ಪನರೊಮಿಕ್ ಗ್ಲಾಸ್ ರೂಫ್ ಹೊಂದಿದೆ.

Xiaomi SU7 Electric Sedan

ಈ ಶಿಯೋಮಿ SU7 ಬೇಸ್-ಸ್ಪೆಕ್ SU7 73.6kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ, ಇದು 700km ರೇಂಜ್ ಅನ್ನು ನೀಡುತ್ತದೆ. ಈ ಮಾದರಿಯು 295bhp ಎಲೆಕ್ಟ್ರಿಕ್ ಮೋಟಾರ್‌ನಿಂದ ಚಾಲಿತವಾಗಿದೆ, ಇದು ಮಾದರಿಯು 5.28 ಸೆಕೆಂಡುಗಳಲ್ಲಿ ಶೂನ್ಯದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಈ ಮಾದರಿಯು 210 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಇನ್ನು ಈ ಎಲೆಕ್ಟ್ರಿಕ್ ಕಾರಿನ ಮಿಡ್ ಸ್ಪೆಕ್ SU7 ಪ್ರೊ ರೂಪಾಂತರವಾಗಿದೆ, ಈ ಮಾದರಿಯು ದೊಡ್ಡ 94.3kWh ಅನ್ನು ಹೊಂದಿದ್ದು, ಇದು 830km ರೇಂಜ್ ಅನ್ನು ನೀಡೂತ್ತದೆ. ಈ ಮಾದರಿಯು 5.7 ಸೆಕೆಂಡುಗಳಲ್ಲಿ ಶೂನ್ಯದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ರೂಪಾಂತರದ ಬೆಲೆಯು 2,45,900 ಯುವಾನ್ (ರೂ. 28.87 ಲಕ್ಷ) ಆಗಿದೆ.

ಈ ಎಲೆಕ್ಟ್ರಿಕ್ ಕಾರಿನ ಟಾಪ್ ಸ್ಪೆಕ್ SU7 ಮ್ಯಾಕ್ಸ್ 101kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ ಮತ್ತು ಈ ಮಾದರಿಯು AWD ಸಾಮರ್ಥ್ಯವನ್ನು ಹೊಂದಿದೆ. ಇದು 663bhp ಪವರ್ ಉತ್ಪಾದಿಸುತ್ತದೆ. ಇನ್ನು 265 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದರೆ, ಕೇವಲ 2.78 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. SU7 ಮ್ಯಾಕ್ಸ್‌ 800 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಮಾದರಿಯು ಬೆಲೆ 2,99,900 ಯುವಾನ್ (ರೂ. 35.20 ಲಕ್ಷ) ಆಗಿದೆ.

ಈ ಹೊಸ ಶಿಯೋಮಿ SU7 ಎಲೆಕ್ಟ್ರಿಕ್ ಸೆಡಾನ್ 997mm ಉದ್ದ, 1963mm ಅಗಲ, 1440mm ಎತ್ತರ ಮತ್ತು 3000mm ವ್ಹೀಲ್‌ಬೇಸ್ ಅನ್ನು ಹೊಂದಿದೆ. ಆದರೆ ಸುಮಾರು 5-ಮೀಟರ್ ಉದ್ದದ ಹೊರತಾಗಿಯೂ, ಶಿಯೋಮಿ ಎಲೆಕ್ಟ್ರಿಕ್ ಕಾರು 5.7 ಮೀಟರ್ ಗಳಷ್ಟು ಶಾರ್ಟ್ ಟರ್ನಿಂಗ್ ರೆಡಿಯಸ್ ಹೊಂದಿದೆ. ಇನ್ನು ಈ ಎಲೆಕ್ಟ್ರಿಕ್ ಕಾರು 517 ಲೀಟರ್ ಗಳಷ್ಟು ಬೂಟ್ ಸ್ಪೇಸ್ ಜೊತೆಗೆ, ಮುಂಭಾಗದಲ್ಲಿ 105-ಲೀಟರ್ ಬೂಟ್ ಸ್ಪೆಸ್ ಹೊಂದಿದೆ.

More from DriveSpark

Article Published On: Saturday, March 30, 2024, 20:49 [IST]
English summary
Xiaomi su7 electric car bookings crossed 50000 units within 27 minutes details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+