Xiaomi: ಸಿಂಗಲ್‌ ಚಾರ್ಜ್‌ಗೆ 1,200 ಕಿ.ಮೀ ರೇಂಜ್: ಟೆಕ್‌ ದೈತ್ಯ ಶಿಯೋಮಿ SU7 ಅನಾವರಣ!

ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿಯಾದ Xiaomi ವಾಹನ ರಂಗಕ್ಕೆ ಎಂಟ್ರಿ ಕೊಡಲು ತುದಿಗಾಲಲ್ಲಿ ನಿಂತಿದೆ. ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಕಾರದ SU7 ಅನ್ನು ಸೋಮವಾರ (ಫೆಬ್ರವರಿ 26) ಸ್ಪೇನ್‌ನ ಬಾರ್ಸಿಲೋನಿಯಾದಲ್ಲಿ ನಡೆದ ಮೊಬೈಲ್ ವರ್ಲ್ಡ್‌ ಕಾಂಗ್ರೆಸ್ (MWC) 2024 ರಲ್ಲಿ ಬಹಿರಂಗಪಡಿಸಿದೆ.

ಪ್ರದರ್ಶನಗೊಂಡು ಬಾರೀ ಪ್ರಶಂಸೆ ಪಡೆದ ಈ ಹೊಸ ಎಸ್‌ಯುವಿ ಕುರಿತ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೆ ನೀಡಲಾಗುವುದು. ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಯಾಗಲಿದ್ದು, ವಿತರಣೆ ಕೂಡ ಇದೇ ವರ್ಷದಲ್ಲಿ ಇರಲಿದೆ ಎಂದು ಕಂಪನಿ ಹೇಳಿದೆ. Xiaomi SU7 ಪರ್ಫಾಮೆನ್ಸ್ ವಿಷಯದಲ್ಲಿ ಪೋರ್ಷೆ ಮತ್ತು ಇತರ ಪ್ರಮುಖ ಬ್ರಾಂಡ್‌ಗಳಿಗೆ ಪೈಪೋಟಿ ನೀಡುವ ಸಾಧ್ಯತೆ ಇದೆ.

xiaomi-su7-max-ev-makes-debut-at-mobile-world-congress

Xiaomi SU7 ಎಲೆಕ್ಟ್ರಿಕ್ ಕಾರಿನ ವಿತರಣೆಗಳು ಈ ವರ್ಷದ ಏಪ್ರಿಲ್‌ನಲ್ಲಿ ಮೊದಲಿಗೆ ಚೀನಾ ಮತ್ತು ಇತರ ಮಾರುಕಟ್ಟೆಗಳಲ್ಲಿ ಪ್ರಾರಂಭವಾಗಬಹುದು ಎಂದು ಕಂಪನಿ ಸುಳಿವು ನಿಡಿದೆ. ಹಾಗೆಯೇ ಕಾರನ್ನು ಮಾರ್ಚ್‌ ವೇಳೆಗೆ ಬರೋಬ್ಬರಿ 2000 ಯುನಿಟ್‌ಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಜುಲೈ ವೇಳೆಗೆ ಈ ನಿರ್ಮಾಣ ಹಂತವನ್ನು 10,000 ಯುನಿಟ್‌ಗಳಿಗೆ ಏರಿಸುವ ಯೋಜನೆಯನ್ನು ಹೊಂದಿದೆ.

ಮೊಬೈಲ್ ವರ್ಲ್ಡ್‌ ಕಾಂಗ್ರೆಸ್ (MWC) 2024ರ ಈವೆಂಟ್‌ನಲ್ಲಿ Xiaomi SU7 ಎಲೆಕ್ಟ್ರಿಕ್ ಕಾರಿನ ಟಾಪ್ ವೇರಿಯೆಂಟ್ ಅನ್ನು ಕೂಡ ಪ್ರದರ್ಶಿಸಿದ್ದು, ಇದು 'Xiaomi SU7 ಮ್ಯಾಕ್ಸ್' ಆಗಿದೆ. ಇದು ಹೆಚ್ಚಿನ ಪರ್ಫಾಮೆನ್ಸ್ ಸೇರಿದಂತೆ ಅತ್ಯಾಧುನಿಕ ಫೀಚರ್‌ಗಳೊಂದಿಗೆ ಬರಲಿದೆ. ಇದು ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಲಿದೆ ಎಂದು ಕಂಪನಿ ಭರವಸೆ ನೀಡಿದೆ.

xiaomi-su7-max-ev-makes-debut-at-mobile-world-congress

Xiaomi SU7 ಮ್ಯಾಕ್ಸ್ ವಿಶೇಷತೆಗಳು: ಕಳೆದ ವರ್ಷ ಅನಾವರಣಗೊಂಡಿದ್ದ ಈ ಕಾರಿನ ಸ್ಟ್ಯಾಂಡರ್ಡ್ ಆವೃತ್ತಿಗಿಂತ 'Xiaomi SU7 ಮ್ಯಾಕ್ಸ್' ಆವೃತ್ತಿಯು 673 hp ಪವರ್ ಮತ್ತು 838 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಸಾಮಾನ್ಯ ಆವೃತ್ತಿಯು 299 hp ಮತ್ತು 374 hp ನಡುವೆ ಪವರ್ ಉತ್ಪಾದನೆ ಹಾಗೂ 635 Nm ವರೆಗೆ ಗರಿಷ್ಠ ಟಾರ್ಕ್ ಉತ್ಪಾದನೆ ಇರಲಿದೆ.

ಬ್ಯಾಟರಿ ಮತ್ತು ರೇಂಜ್: SU7 ಮ್ಯಾಕ್ಸ್ ಒಮ್ಮೆ ಚಾರ್ಜ್‌ ಮಾಡಿದ್ರೆ 1,200 ಕಿ.ಮೀಗಳಿಗಿಂತ ಹೆಚ್ಚು ಓಡಿಸಬಹುದು ಎಂದು ಕಂಪನಿ ಭರವಸೆ ನೀಡಿದೆ. ಇದು ಆಂತರಿಕವಾಗಿ ಅಭಿವೃದ್ಧಿಪಡಿಸಿದ CTB (ಸೆಲ್-ಟು-ಬಾಡಿ) ತಂತ್ರಜ್ಞಾನದೊಂದಿಗೆ ಬರುತ್ತದೆ, ಈ ಬ್ಯಾಟರಿ ರಚನೆಯು ಗಮನಾರ್ಹವಾಗಿ ಹೆಚ್ಚು ವಿಶಾಲವಾದ ಕ್ಯಾಬಿನ್‌ಗಾಗಿ ಎತ್ತರವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.

xiaomi-su7-max-ev-makes-debut-at-mobile-world-congress

ಅತ್ಯಾಧುನಿಕ ತಂತ್ರಜ್ಞಾನ: SU7 ಇವಿ, Xiaomi ಪೈಲಟ್ ಎಂಬ ಆಂತರಿಕವಾಗಿ ಅಭಿವೃದ್ಧಿಪಡಿಸಿದ ಸ್ವಾಯತ್ತ ಚಾಲನಾ ತಂತ್ರಜ್ಞಾನ(Autonomous driving technology)ವನ್ನು ಹೊಂದಿದೆ. ಈ ತಂತ್ರಜ್ಞಾನವು 5 ಮೀಟರ್ ಮತ್ತು 250 ಮೀಟರ್‌ವರೆಗೆ ಕಾರ್ಯನಿರ್ವಹಿಸುವ ಅಡಾಪ್ಟಿವ್ ಮ್ಯಾಪಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ. ಇದು ಸುಧಾರಿತ ಸ್ವಾಯತ್ತ ಚಾಲನಾ ಅನುಭವಕ್ಕಾಗಿ 11 LiDar ಕ್ಯಾಮೆರಾಗಳು, 12 ಅಲ್ಟ್ರಾಸಾನಿಕ್ ರಾಡಾರ್‌ಗಳು ಮತ್ತು 3mm ತರಂಗ ರಾಡಾರ್‌ಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, February 27, 2024, 13:13 [IST]
English summary
Xiaomi su7 max ev makes debut at mobile world congress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+