ಸ್ವದೇಶಿ ಕಂಪನಿ ಕಾಳಜಿಗೆ ಸಲಾಂ: ವಿಶೇಷ ಚೇತನರು ಸ್ವಲಾಂಬಿಯಾಗಲು ಹೊಸ ಸೂಪರ್ ಇವಿ... ವಿಶೇಷತೆಗಳು
ಚಿತ್ರದಲ್ಲಿ ಕಂಡುಬರುವ ವಾಹನವನ್ನು ನೋಡಿದರೆ ಇದು ಯಾವುದೋ ವಾಟರ್ ಥೀಮ್ ಪಾರ್ಕ್‌ನಲ್ಲಿ ಸವಾರಿ ಎಂದು ನೀವು ಅಂದುಕೊಂಡ್ರಾ? ಹಾಗಾದರೆ ತಿಳಿದುಕೊಂಡರೆ ತಪ್ಪು. ಇದು ಎಲೆಕ್ಟ್ರಿಕ್ ವಾಹನವಾಗಿದೆ. ಇದು ಆಟೋ ಅಲ್ಲ, ಕಾರ್ ಅಲ್ಲ. ಇದು ವಿಕಲಚೇತನರಿಗಾಗಿ ವಿಶಿಷ್ಟ ಸೌಲಭ್ಯಗಳು ಮತ್ತು ವೈಶಿಷ್ಟ್ಯಗಳನ್ನು ಹೊಂದಿರುವ ಎಲೆಕ್ಟ್ರಿಕ್ ವಾಹನವಾಗಿದೆ. ತಮಿಳುನಾಡಿನ ಐಐಟಿ ಮದ್ರಾಸ್‌ನ ಯಾಲಿ ಮೊಬಿಲಿಟಿ (Yali Mobility) ಎಂಬ ಕಂಪನಿಯು ಈ ವಾಹನವನ್ನು ತಯಾರಿಸಿದೆ. ಭಾರತೀಯ ಕಂಪನಿಯು ಹಲವು ವೈಶಿಷ್ಟ್ಯಗಳೊಂದಿಗೆ ತಯಾರಿಸಿದ ತಿಚಕ್ರ ಎಲೆಕ್ಟ್ರಿಕ್ ವಾಹನದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿಕಲಚೇತನರು ವ್ಹೀಲ್‌ಚೇರ್‌ನಿಂದ ಹೊರಬರದೆ ಈ ತ್ರಿಚಕ್ರ ವಾಹನವನ್ನು ಓಡಿಸಬಹುದು ಎಂಬುದು ಇದರ ಉತ್ತಮ ವಿಶೇಷತೆಗಳಲ್ಲಿ ಒಂದಾಗಿದೆ. ವಿಕಲಚೇತನರು ತಮ್ಮ ಪ್ರಯಾಣಕ್ಕಾಗಿ ಇತರರನ್ನು ಅವಲಂಬಿಸುವುದನ್ನು ತಪ್ಪಿಸಿ ಸ್ವಲಾಂಬಿಯಾಗಲು ಯಾಲಿ ಮೊಬಿಲಿಟಿ ಕಂಪನಿಯು ಈ ವಾಹನವನ್ನು ಅಭಿವೃದ್ಧಿಪಡಿಸಿದೆ. ಕಾರುಗಳಂತೆಯೇ ಈ ತ್ರಿಚಕ್ರ ವಾಹನಕ್ಕೂ ಯಾಲಿ ಮೊಬಿಲಿಟಿ ಕಂಪನಿಯು ವಿಶೇಷ ರಿಮೋಟ್ ನೀಡಿದೆ.

ಇದು ವಾಹನದ ಹಿಂಭಾಗದ ಡೋರ್ ಅನ್ನು ತೆರೆಯುವ ಸೌಲಭ್ಯವನ್ನು ಹೊಂದಿರುತ್ತದೆ. ಒಬ್ಬ ವ್ಯಕ್ತಿಯು ಈ ವಾಹನವನ್ನು ಹಿಂಬದಿಯ ಮೂಲಕ ಮಾತ್ರ ಪ್ರವೇಶಿಸಬಹುದು ಮತ್ತು ಇಳಿಯಬಹುದು. ಅಂಗವಿಕಲ ವ್ಯಕ್ತಿಯ ವ್ಹೀಲ್‌ಚೇರ್ ಅನ್ನು ಹೊಂದಿಕೊಳ್ಳಲು ಡೋರ್ ಅನ್ನು ಸಾಕಷ್ಟು ಅಗಲವಿದೆ. ಒಬ್ಬ ವ್ಯಕ್ತಿ ಮಾತ್ರ ಅದನ್ನು ಏರಬಹುದು. ಇಲ್ಲಿ ರಿಮೋಟ್ ಒತ್ತಿದರೆ ಹಿಂಭಾಗದ ರಸ್ತೆಗೆ ಬಂದು ್ಯಾಂಪ್ ನಂತೆ ಕೆಲಸ ಮಾಡುತ್ತದೆ.
ಇದರೊಂದಿಗೆ ವಾಹನದ ಹಿಂಬದಿಯೂ ಸ್ವಲ್ಪ ತಗ್ಗಿರುವುದರಿಂದ ವಿಕಲಚೇತನರು ವ್ಹೀಲ್‌ಚೇರ್ ಅನ್ನು ತಳ್ಳಿಕೊಂಡು ವಾಹನದೊಳಗೆ ಹೋಗಬಹುದಾಗಿದೆ. ವ್ಹೀಲ್‌ಚೇರ್ ಅನ್ನು ವಾಹನಕ್ಕೆ ಲೋಡ್ ಮಾಡಲು ಯಾವುದೇ ನೆರವು ಅಗತ್ಯವಿಲ್ಲ. ಒಮ್ಮೆ ಒಳಗೆ ಹೋದಾಗ ಹಿಂಭಾಗವನ್ನು ಮರುಹೊಂದಿಸಬಹುದು. ಈ ವಾಹನವು ವಿಶೇಷ ಹ್ಯಾಂಡಲ್ ಬಾರ್, ಲೈಟ್ ಸಿಸ್ಟಂ ಇತ್ಯಾದಿಗಳನ್ನು ಹೊಂದಿದೆ. ಇದನ್ನು ಸ್ಕೂಟರ್ ರೀತಿಯಲ್ಲಿಯೂ ಓಡಿಸಬಹುದು.

ಇದರೊಂದಿಗೆ, ಈ ವಾಹನವನ್ನು ಸುರಕ್ಷಿತವಾಗಿ ನಿಲ್ಲಿಸಲು ಡಿಸ್ಕ್ ಬ್ರೇಕ್ ಅನ್ನು ಸಹ ನೀಡಲಾಗಿದೆ. ಅಷ್ಟೇ ಅಲ್ಲ, ವಿಶೇಷ ಹ್ಯಾಂಡ್ ಬ್ರೇಕ್ ಸಿಸ್ಟಂ ಕೂಡ ನೀಡಲಾಗಿದೆ. ಹಾಗಾಗಿ ಈ ವಾಹನದಲ್ಲಿ ವಿಕಲಚೇತನರು ಸುರಕ್ಷಿತವಾಗಿ ಪ್ರಯಾಣಿಸಬಹುದು ಎಂದು ತಯಾರಕರು ಹೇಳಿಕೊಂಡಿದ್ದಾರೆ. ದ್ವಿಚಕ್ರ ವಾಹನ ಅಥವಾ ಆಟೋ ಓಡಿಸುವಷ್ಟು ಸುಲಭ.
ನಮ್ಮ ಸುತ್ತ ಮುತ್ತ ಕಣ್ಣು ಹಾಯಿಸಿದರೆ, ತ್ರಿಚಕ್ರ ವಾಹನಗಳನ್ನು ಓಡಿಸುವ ಅನೇಕ ಅಂಗವಿಕಲರನ್ನು ಕಾಣಬಹುದು. ಆದರೆ ಅವುಗಳಲ್ಲಿ ಹಲವು ಮಾರ್ಪಡಿಸಿದ ದ್ವಿಚಕ್ರ ವಾಹನಗಳಾಗಿವೆ. ಏಳಲು ಮತ್ತು ಕೆಳಗೆ ಇಳಿಯಲು ಇನ್ನೊಬ್ಬರ ಸಹಾಯ ಬೇಕು. ಆದರೆ ಯಾಲಿ ಮೊಬಿಲಿಟಿ ತಯಾರಿಸಿದ ಈ ಒಂದು ವಾಹನವನ್ನು ಗಾಲಿಕುರ್ಚಿಯಲ್ಲಿ ಕುಳಿತು ಓಡಿಸಬಹುದಾಗಿದ್ದು, ಇದರಿಂದ ವಿಕಲಚೇತನರಿಗೆ ಅನುಕೂಲವಾಗಲಿದೆ.

ಈ ಎಲೆಕ್ಟ್ರಿಕ್ ವಾಹನದ ಬ್ಯಾಟರಿ, ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಈ ವಾಹನವು ಫುಲ್ ಚಾರ್ಜ್‌ನಲ್ಲಿ 130 ಕಿ.ಮೀ ಗಿಂತಲೂ ಹೆಚ್ಚು ದೂರ ಪ್ರಯಾಣಿಸುವ ನಿರೀಕ್ಷೆಯಿದೆ. ಇದರ ಗರಿಷ್ಠ ವೇಗ ಗಂಟೆಗೆ 60 ಕಿಮೀಗಿಂತ ಕಡಿಮೆಯಿರುತ್ತದೆ ಎಂದು ಹೇಳಲಾಗುತ್ತಿದೆ. ಇನ್ನು ಭಾರತದ ಎಲೆಕ್ಟ್ರಿಕ್ ವಾಹನ ಕ್ಷೇತ್ರವು ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿರುವಾಗ, ವಿಕಲಚೇತನರನ್ನು ಸೇರ್ಪಡೆಗೊಳಿಸುವುದು ಶ್ಲಾಘನೀಯ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications