1 ರೂ. ಖರ್ಚಿಲ್ಲದೆ 100 ಕಿ.ಮೀ ಓಡುವ ಹೊಸ ಆಟೋ: ಬೆಲೆ ಕೇವಲ ರೂ.1.4 ಲಕ್ಷ!
ಟಾಂಗಾ ಬಟರ್‌ಫ್ಲೈ (Tanga Butterfly) ಮತ್ತು ಟಾಂಗಾ ಎಸ್‌ಎಸ್ (Tanga SS) ಎಂಬ ತ್ರಿ-ಚಕ್ರ ವಾಹನಗಳನ್ನು ಬಿಡುಗಡೆ ಮಾಡಿರುವ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ಝೀಲಿಯೋ ಇಬೈಕ್ಸ್ (ZELIO Ebikes), ಉತ್ತಮ ಬೇಡಿಕೆಯನ್ನು ಗಳಿಸುತ್ತಿದೆ. ನಗರ ಮತ್ತು ಅರೆ-ನಗರ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಎರಡು ಎಲೆಕ್ಟ್ರಿಕ್ ಆಟೋಗಳನ್ನು ಬಿಡುಗಡೆ ಮಾಡಿದೆ. ಈ ಎರಡೂ ಆಟೋಗಳು 30 ಕಿ.ಮೀ ಗರಿಷ್ಟ ವೇಗವನ್ನು ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 100 ಕಿಮೀ ಓಡಬಲ್ಲವು ಎಂದು ಕಂಪನಿ ಭರವಸೆ ನೀಡಿದೆ.
ಈ ಆಟೋಗಳನ್ನು ಕಳೆದ ತಿಂಗಳು ದೆಹಲಿಯಲ್ಲಿ ನಡೆದ EV ಇಂಡಿಯಾ ಎಕ್ಸ್‌ಪೋ 2024 ರಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲಾಯಿತು. ಉತ್ತಮ ಪ್ರತಿಕ್ರಿಯೆ ಲಭ್ಯವಾದ ಬೆನ್ನಲ್ಲೇ ಕಂಪನಿ ಇದೀಗ ಬಿಡುಗಡೆ ಮಾಡಿದೆ. ಸುರಕ್ಷಿತ ಮತ್ತು ಪರಿಣಾಮಕಾರಿ ಚಾರ್ಜಿಂಗ್‌ಗಾಗಿ ವೋಲ್ಟೇಜ್ ಏರಿಳಿತದ ರಕ್ಷಣೆಯನ್ನು ಒಳಗೊಂಡಿರುವ SMPS ಚಾರ್ಜರ್‌ನೊಂದಿಗೆ ಬರುತ್ತವೆ.

ವಾಹನಗಳ ಬೆಲೆಗಳನ್ನು ನೋಡುವುದಾದ್ರೆ, ಮೈಲ್ಡ್ ಸ್ಟೀಲ್‌ನೊಂದಿಗೆ ನಿರ್ಮಿಸಲಾಗಿರುವ ಟಾಂಗಾ ಬಟರ್‌ಫ್ಲೈ ರೂ.1,45,000 (ಎಕ್ಸ್ ಶೋರೂಂ) ಮತ್ತು ಸ್ಟೇನ್‌ಲೆಸ್ ಸ್ಟೀಲ್‌ನೊಂದಿಗೆ ನಿರ್ಮಿಸಲಾಗಿರುವ ಟಾಂಗಾ SS ರೂ. 1,40,000 (ಎಕ್ಸ್-ಶೋರೂಮ್) ಬೆಲೆಗಳನ್ನು ಹೊಂದಿವೆ. ಎರಡೂ ಮಾದರಿಗಳಿಗೆ ಸಾಮಾನ್ಯ ಪರಿಕರಗಳಲ್ಲಿ ಅಗ್ನಿಶಾಮಕ, ಪ್ರಥಮ ಚಿಕಿತ್ಸಾ ಕಿಟ್, ಟೂಲ್ ಕಿಟ್ ಮತ್ತು ಜ್ಯಾಕ್ ನೀಡಲಾಗುತ್ತದೆ.
ಪ್ರಮುಖ ವೈಶಿಷ್ಟ್ಯಗಳ ಶ್ರೇಣಿಯನ್ನು ಹೊಂದಿರುವ ಎರಡೂ ವಾಹನಗಳು, ವೈಪರ್‌ನೊಂದಿಗೆ ಅಗಲವಾದ ಮುಂಭಾಗದ ಗ್ಲಾಸ್, ಸೆಂಟ್ರಲ್ ಲಾಕಿಂಗ್, ಹೆವಿ ಕರ್ಟನ್‌ಗಳು, ಟ್ಯಾಕ್ಸಿ ಲೈಟ್, ಎಲ್‌ಇಡಿ ಕ್ಯಾಬಿನ್ ಲೈಟ್, ಕವರ್ ಹೊಂದಿರುವ ಸ್ಟೆಪ್ನಿ, ಹ್ಯಾಂಡಲ್ ಲಾಕ್, ಡಬಲ್ ಸ್ಪೀಕರ್‌ಗಳೊಂದಿಗೆ ಎಫ್‌ಎಂ ರೇಡಿಯೋ, ಡಿಜಿಟಲ್ ಮೀಟರ್, ಡಿಆರ್‌ಎಲ್‌ನೊಂದಿಗೆ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಸೂಚಕಗಳು, ಬಾಟಲ್ ಸೇರಿವೆ.

ಗ್ರಾಹಕರು ಆಯ್ಕೆ ಮಾಡಲು ಟಾಂಗಾ ಎಸ್ಎಸ್ ಬಣ್ಣಗಳ ವಿಷಯಕ್ಕೆ ಬಂದರೆ ಪ್ಯಾರೆಟ್ ಗ್ರೀನ್, ಬ್ಲೂ, ರೆಡ್, ಸೀ ಬ್ಲೂ ಮತ್ತು ಗ್ರೇ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಟಾಂಗಾ ಬಟರ್‌ಫ್ಲೈ ರೆಡ್, ಗ್ರೇ, ವೈಟ್, ಸ್ಕೈ ಬ್ಲೂ ಮತ್ತು ಮಿಲಿಟರಿ ಗ್ರೀನ್ ಎಂಬ ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಆಟೋಗಳ 48/60V 135Ah ಈಸ್ಟ್‌ಮನ್ ಬ್ಯಾಟರಿಗಳು 8 ಗಂಟೆಗಳ ಚಾರ್ಜಿಂಗ್ ಸಮಯದೊಂದಿಗೆ ಕಾರ್ಯನಿರ್ವಹಿಸುತ್ತವೆ. 1200W ಮೋಟಾರ್‌ನಿಂದ ಚಾಲಿತವಾಗಿವೆ.
ಸುಗಮ ಸವಾರಿಗಾಗಿ, ಆಟೋಗಳು ಮುಂಭಾಗದಲ್ಲಿ 43 ಎಂಎಂ ಟೆಲಿಸ್ಕೋಪಿಕ್ ಹೈಡ್ರಾಲಿಕ್ ಶಾಕರ್‌ಗಳನ್ನು ಮತ್ತು ಹಿಂಭಾಗದಲ್ಲಿ ಲೀಫ್ ಸ್ಪ್ರಿಂಗ್ ಶಾಕರ್‌ಗಳನ್ನು ಹೊಂದಿವೆ. ಟಾಂಗಾ ಬಟರ್‌ಫ್ಲೈ ಮತ್ತು ಟಾಂಗಾ SS ಸುಧಾರಿತ ಬ್ರೇಕಿಂಗ್ ವ್ಯವಸ್ಥೆಗಳೊಂದಿಗೆ ಬರುತ್ತವೆ, ಮುಂಭಾಗದ ಲಿವರ್-ಚಾಲಿತ ಡ್ರಮ್ ಬ್ರೇಕ್ ಮತ್ತು ಹಿಂಭಾಗದ ಪ್ಯಾಡಲ್-ಚಾಲಿತ ಡ್ರಮ್ ಬ್ರೇಕ್ ಜೊತೆಗೆ ಯಾಂತ್ರಿಕ ಹ್ಯಾಂಡ್ ಲಿವರ್-ಚಾಲಿತ ಪಾರ್ಕಿಂಗ್ ಬ್ರೇಕ್ ಅನ್ನು ಒಳಗೊಂಡಿದೆ.
2030 ಎಂಎಂ ವ್ಹೀಲ್‌ಬೇಸ್, 2690 ಎಂಎಂ ಉದ್ದ, 1000 ಎಂಎಂ ಅಗಲ, 1710 ಎಂಎಂ ಎತ್ತರ, ಮತ್ತು 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿವೆ. ಎರಡೂ ಮಾದರಿಗಳು ಟಿವಿಎಸ್-ನಿರ್ಮಿತ 3.75-12 ಎಂಎಂ ಟೈರ್‌ಗಳೊಂದಿಗೆ ಬರುತ್ತವೆ. ಚಾಸಿಸ್ ಅನ್ನು ಹೆಚ್ಚಿನ ಬಿಗಿತದ ಮೊನೊಕಾಕ್ ಫ್ರೇಮ್‌ನೊಂದಿಗೆ ನಿರ್ಮಿಸಲಾಗಿದೆ, ಇದು ಬಾಳಿಕೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.
ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ZELIO Ebikes ನ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಕುನಾಲ್ ಆರ್ಯ, ಸುರಕ್ಷತೆ, ಕಾರ್ಯಕ್ಷಮತೆ ಮತ್ತು ಸೌಕರ್ಯದ ಉನ್ನತ ಗುಣಮಟ್ಟವನ್ನು ಪೂರೈಸಲು ಈ ವಾಹನಗಳನ್ನು ವಿನ್ಯಾಸಗೊಳಿಸಲಾಗಿದೆ ದ್ವಿಚಕ್ರ ವಾಹನ ಮಾರುಕಟ್ಟೆಯಿಂದ ಇ-ರಿಕ್ಷಾ ಜಾಗಕ್ಕೆ ನಮ್ಮ ಪರಿಣತಿಯನ್ನು ತರಲು ನಾವು ಉತ್ಸುಕರಾಗಿದ್ದೇವೆ. ಭಾರತದ ಬೆಳೆಯುತ್ತಿರುವ ಇವಿ ಪರಿಸರ ವ್ಯವಸ್ಥೆಯಲ್ಲಿ, ಟಾಂಗಾ ಬಟರ್‌ಫ್ಲೈ ಮತ್ತು ಟಾಂಗಾ ಎಸ್‌ಎಸ್‌ನೊಂದಿಗೆ ಹೊಸ ವಿಭಾಗಕ್ಕೆ ಕಾಲಿಟ್ಟಿದ್ದೇವೆ ಎಂದರು.


Click it and Unblock the Notifications








