ಚೀನಾದ ಸಣ್ಣ ಎಲೆಕ್ಟ್ರಿಕ್ ಕಾರು ಬಿಡುಗಡೆ: ಬೆಲೆ ಕೇವಲ 3.6 ಲಕ್ಷ ರೂ.
ಚೀನಾದ ಸಣ್ಣ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ ಝಿಡೌ ಇತ್ತೀಚೆಗೆ ಚೀನಾದಲ್ಲಿ ತನ್ನ ರೇನ್ಬೋ ಮಿನಿ ಎಂಬ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದೆ. ಈ ಹೊಸ ಸಣ್ಣ ಹ್ಯಾಚ್ ಬ್ಯಾಕ್ 4,400 ಡಾಲರ್ ನಿಂದ 6,000 ಡಾಲರ್ (ಅಂದಾಜು 3.6 ಲಕ್ಷದಿಂದ 5 ಲಕ್ಷ ರೂ.)ಗೆ ಬಿಡುಗಡೆಯಾಗಿದೆ.
ಡಿಸೈನ್: ರೇನ್ಬೋ ಮಿನಿ ಇವಿ ಡಿಸೈನ್ ಬಗ್ಗೆ ಹೇಳುವುದಾದರೆ, ಈ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಸುಂದರವಾಗಿ ಕಾಣುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಮಿನಿ ಇವಿಯು ಬಿಗ್ ಡಿಪ್ಪರ್ ಹೆಡ್ ಲೈಟ್‌ಗಳು, ಕಾರ್ಬನ್ ಫೈಬರ್ ಬಾಹ್ಯ ಕನ್ನಡಿಗಳು ಮತ್ತು Y ಆಕಾರದ ಎಲ್‌ಇಡಿ ಲ್ಯಾಂಪ್‌ಗಳು ಆಕರ್ಷಣೆಯನ್ನು ಹೆಚ್ಚಿಸಿವೆ. ಇದು 13-ಇಂಚಿನ ಅಥವಾ 15-ಇಂಚಿನ ರೋಮನ್ ಶೀಲ್ಡ್ ವ್ಹೀಲ್ ಹಬ್ ಕ್ಯಾಪ್‌ಗಳನ್ನು ಹೊಂದಿದೆ. ಹಿಂಭಾಗದಲ್ಲಿ ಮುಂಭಾಗದಂತೆಯೇ ವೈ ಆಕಾರದ ಎಲ್ಇಡಿ ಟೈಲ್ ಲೈಟ್‌ಗಳನ್ನು ನೀಡಲಾಗಿದೆ. ರೋಸ್, ವೈಲೆಟ್, ಬ್ರಾಂಜ್, ಯೆಲ್ಲೋ, ಸಿಯಾನ್, ಗ್ರೀನ್ ಮತ್ತು ಬ್ರೌನ್ ಸೇರಿದಂತೆ ಏಳು ಬಾಹ್ಯ ಬಣ್ಣಗಳಲ್ಲಿ ಲಭ್ಯವಿದೆ.

ಉದ್ದಳತೆ: ಈ ಮಿನಿ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ 3224 ಎಂಎಂ ಉದ್ದ, 1515 ಎಂಎಂ ಅಗಲ ಮತ್ತು 1630 ಎಂಎಂ ಎತ್ತರವನ್ನು ಹೊಂದಿದೆ. ಇದರ ವ್ಹೀಲ್ ಬೇಸ್ 2100 ಎಂಎಂ ಇದೆ. ಹೊರಭಾಗದಲ್ಲಿ ಚಿಕ್ಕದಾಗಿ ಕಂಡರೂ ಮೂರು ಬಾಗಿಲುಗಳು ಮತ್ತು ನಾಲ್ಕು ಆಸನಗಳ ವಿನ್ಯಾಸವನ್ನು ನೀಡುತ್ತದೆ.
ಬ್ಯಾಟರಿ ಮತ್ತು ರೇಂಜ್: ಗುವೊಕ್ಸುವಾನ್ ಹೈಟೆಕ್ ಪೂರೈಸಿದ ಲಿಥಿಯಂ ಐರನ್ ಫಾಸ್ಫೇಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ಈ ಕಾರು ನಡೆಸಲ್ಪಡುತ್ತದೆ. 9.98 ಕಿಲೋವ್ಯಾಟ್, 17.18 ಕಿಲೋವ್ಯಾಟ್ ಮತ್ತು 17.3 ಕಿಲೋವ್ಯಾಟ್ ಬ್ಯಾಟರಿ ಸಾಮರ್ಥ್ಯಗಳಲ್ಲಿ ಕಾರು ಲಭ್ಯವಿದೆ. ಒಮ್ಮೆ ಚಾರ್ಜ್ ಮಾಡಿದ್ರೆ ಈ ಬ್ಯಾಟರಿ ಪ್ಯಾಕ್‌ಗಳು ಕ್ರಮವಾಗಿ 125 ಕಿ.ಮೀ, 205 ಕಿ.ಮೀ ಮತ್ತು 201 ಕಿ.ಮೀ ಒದಗಿಸುತ್ತವೆ.

ಇಂಟಿರಿಯರ್: ವಿಶಿಷ್ಟವಾಗಿ ಕಾಣುವ ಈ ಸಣ್ಣ ಹ್ಯಾಚ್ ಬ್ಯಾಕ್ ಇಂಟೀರಿಯರ್ ಗುಲಾಬಿ ಬಣ್ಣದ ಹಿನ್ನೆಲೆಯೊಂದಿಗೆ ಮುದ್ದಾದ ಓಳಾಂಗಣ ವಿನ್ಯಾಸವನ್ನು ಹೊಂದಿದೆ. ಡಬಲ್-ಸ್ಪೋಕ್ ಸ್ಟೀರಿಂಗ್ ವೀಲ್, 5 ಇಂಚಿನ ಪೂರ್ಣ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಪ್ಯಾನಲ್ ಮತ್ತು 9 ಇಂಚಿನ ಇನ್ಫೋಟೈನ್ಮೆಂಟ್ ಸ್ಕ್ರೀನ್ ಹೊಂದಿದ್ದು, ಟಚ್ ಸ್ಕ್ರೀನ್ ಕೆಳಗೆ ಹಲವಾರು ಹಾರ್ಡ್ ಬಟನ್‌ಗಳನ್ನು ನೀಡಲಾಗಿದೆ. ಹೆಚ್ಚುವರಿ ವೈಶಿಷ್ಟ್ಯಗಳನ್ನು ನೋಡುವುದಾದ್ರೆ, ಮೊಬೈಲ್ ಫೋನ್ ರಿಮೋಟ್ ವೆಹಿಕಲ್ ಕಂಟ್ರೋಲ್, ರಿಮೋಟ್ ವೆಹಿಕಲ್ ಅನ್ಲಾಕಿಂಗ್, ರಿಮೋಟ್ ಕಾರ್ ಸರ್ಚ್, ಶೆಡ್ಯೂಲ್ಡ್ ಚಾರ್ಜಿಂಗ್, ಒಟಿಎ ಅಪ್‌ಡೇಟ್ಸ್ ಮತ್ತು 20ಕ್ಕೂ ಹೆಚ್ಚು ಸ್ಟೋರೇಜ್ ಸ್ಥಳಗಳನ್ನು ಒಳಗೊಂಡಿದೆ.
ಝಿಡೌ ಕಂಪನಿಯ ಬಗ್ಗೆ: ಇದು ಚೀನೀ ಬ್ರಾಂಡ್ ಆಗಿದ್ದು, ಮಿನಿ ಕಾರು ತಯಾರಕ ಕಂಪನಿಯಾಗಿದೆ. ಇದರ ಮೊದಲ ಮಾದರಿಯನ್ನು ಮೇ 2014ರಲ್ಲಿ ಬಿಡುಗಡೆ ಮಾಡಲಾಯಿತು. ನಂತರ ಇದನ್ನು ಝಿಡೌ ಡಿ 1 ಎಂದು ಮರುನಾಮಕರಣ ಮಾಡಲಾಯಿತು. ನಂತರ, ಕಂಪನಿಯು ಝಿಡೌ ಡಿ 2 ಮತ್ತು ಝಿಡೌ ಡಿ 3 ಅನ್ನು ಪರಿಚಯಿಸಿತು. ಇವು ವಿಶಿಷ್ಟವಾದ ಮೂರು-ಬಾಗಿಲು, ಎರಡು ಆಸನಗಳ ಕಾನ್ಫಿಗರೇಶನ್ ಅನ್ನು ಹೊಂದಿವೆ.

ಭರವಸೆಯ ಆರಂಭದ ಹೊರತಾಗಿಯೂ, ಝಿಡೌ ಸವಾಲುಗಳನ್ನು ಎದುರಿಸಿ ಮಾರುಕಟ್ಟೆಯಲ್ಲಿ ಕ್ರಮೇಣ ಕುಸಿತಕ್ಕೆ ಕಾರಣವಾಯಿತು. ಈಗ ಕಂಪನಿಯು ಸಮಗ್ರ ಬಂಡವಾಳದೊಂದಿಗೆ ಪುನರಾಗಮನ ಮಾಡುತ್ತಿದೆ. ಪ್ರಸ್ತುತ, ಕಂಪನಿಯು ಗೀಲಿಯ ಸಿಇಒ ಗಾನ್ ಜಿಯಾಯು ಅವರ ನಾಯಕತ್ವದಲ್ಲಿದೆ. ಈ ಹೊಸ ಮಿನಿ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








