ಇವು ಬಿಸಿ ಜಿಲೇಬಿಯಂತೆ ಮಾರಾಟವಾಗುವ ಕಾರುಗಳು.. ಆದರೂ 6 ಏರ್‌ಬ್ಯಾಗ್‌ಗಳನ್ನು ಹೊಂದಿಲ್ಲ!
ನೂತನ ಕಾರನ್ನು ತೆಗೆದುಕೊಳ್ಳುವ ಗ್ರಾಹಕರಿಗೆ ಸುರಕ್ಷತೆ ಎಂಬುದು ಮೊಟ್ಟ ಮೊದಲ ಆದ್ಯತೆಯಾಗಿರುತ್ತದೆ. ಅದಕ್ಕಾಗಿ ಹೊಸ ಕಾರಿನಲ್ಲಿ ಗರಿಷ್ಠ ಸಂಖ್ಯೆಯ ಏರ್‌ಬ್ಯಾಗ್‌ಗಳು ಇರಬೇಕೆಂದು ಬಯಸುತ್ತಾರೆ. ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುತ್ತಿರುವ ಬಹುತೇಕ ಎಲ್ಲ ಕಾರುಗಳು 6 ಏರ್‌ಬ್ಯಾಗ್ ಆಯ್ಕೆಯನ್ನು ಹೊಂದಿವೆ. ಆದರೆ, ಈಗಲೂ ಕೆಲವೊಂದು ಜನಪ್ರಿಯ ಕಾರುಗಳನ್ನು 2 ಅಥವಾ 4 ಏರ್‌ಬ್ಯಾಗ್‌ನೊಂದಿಗೆ ಮಾತ್ರ ಮಾರಾಟಗೊಳಿಸಲಾಗುತ್ತಿದೆ. ನಾವಿಲ್ಲಿ ಅಂತಹ ಒಂದಷ್ಟು ಕಾರುಗಳನ್ನು ಪಟ್ಟಿ ಮಾಡಿದ್ದೇವೆ.
ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso): ಈಗಾಗಲೇ ಮಾರುತಿ ಸುಜುಕಿ ಕಂಪನಿಯ ಎಂಟ್ರಿ ಲೆವೆಲ್ ಮಾಡೆಲ್ 'ಆಲ್ಟೊ ಕೆ10' ಹ್ಯಾಚ್‌ಬ್ಯಾಕ್ 6 ಏರ್‌ಬ್ಯಾಗ್‌ನೊಂದಿಗೆ ಸಿಗುತ್ತದೆ. ಅದರ ಹೊರತಾಗಿ 'ಎಸ್-ಪ್ರೆಸ್ಸೊ' ಕಾರು ಡುಯಲ್ ಫ್ರಂಟ್ ಏರ್‌ಬ್ಯಾಗ್ ಆಯ್ಕೆಯನ್ನಷ್ಟೇ ಹೊಂದಿದೆ.

ಈ ಮಾರುತಿ ಎಸ್-ಪ್ರೆಸ್ಸೊ ಪ್ರಯಾಣಿಕರ ರಕ್ಷಣೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ನ್ನು ಪಡೆದುಕೊಂಡಿದೆ ಎಂದು ಮೂಗು ಮುರಿಯುವ ಅಗತ್ಯವಿಲ್ಲ. ನೂತನ ಎಸ್-ಪ್ರೆಸ್ಸೊ ಹ್ಯಾಚ್‌ಬ್ಯಾಕ್ ಸುರಕ್ಷತೆಯ ದೃಷ್ಟಿಯಿಂದ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ರೂ.4.26 ಲಕ್ಷದಿಂದ ರೂ.6.11 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ.
ರೆನಾಲ್ಟ್ ಕ್ವಿಡ್ (Renault Kwid): ಮಾರುತಿ ಸುಜುಕಿ ಆಲ್ಟೊ ಕೆ10 & ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಹ್ಯಾಚ್‌ಬ್ಯಾಕ್‌ಗಳಿಗೆ ಪ್ರತಿಸ್ಪರ್ಧಿಯಾಗಿರುವ ಕ್ವಿಡ್ ಕಾರು ಸಹ ಕೇವಲ ಡುಯಲ್ ಏರ್‌ಬ್ಯಾಗ್‌ನೊಂದಿಗೆ ದೊರೆಯುತ್ತದೆ. ಇದರೊಟ್ಟಿಗೆ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿದೆ. ಈ ಕ್ವಿಡ್ ಹ್ಯಾಚ್‌ಬ್ಯಾಕ್, ರೂ.4.70 ಲಕ್ಷದಿಂದ ರೂ.6.45 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

ಟಾಟಾ ಟಿಯಾಗೊ (Tata Tiago): ಸದ್ಯ ದೇಶೀಯವಾಗಿ ಲಭ್ಯವಿರುವ ಟಾಟಾದ ಪಂಚ್, ಕರ್ವ್, ಹ್ಯಾರಿಯರ್ ಮತ್ತು ಸಫಾರಿ ಒಳಗೊಂಡಂತೆ ಹಲವು ಕಾರುಗಳು 6 ಏರ್‌ಬ್ಯಾಗ್‌ನ್ನು ಹೊಂದಿವೆ. ಆದರೆ, ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿರುವ 'ಟಾಟಾ ಟಿಯಾಗೊ' ಡುಯಲ್ ಫ್ರಂಟ್ ಏರ್‌ಬ್ಯಾಗ್‌ನೊಂದಿಗೆ ಮಾತ್ರವೇ ಖರೀದಿಗೆ ದೊರೆಯುತ್ತದೆ.
ಈ ಟಿಯಾಗೊ ಡುಯಲ್ ಏರ್‌ಬ್ಯಾಗ್‌ನೊಂದಿಗೆ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ರೂ.5 ರಿಂದ ರೂ.8.45 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ.

ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis): ಇದು ಕೂಡ ಪ್ರಖ್ಯಾತ ಹ್ಯಾಚ್‌ಬ್ಯಾಕ್ ಆಗಿದೆ. ಆದರೂ ಕೇವಲ ಡುಯಲ್ ಫ್ರಂಟ್ ಏರ್‌ಬ್ಯಾಗ್‌ನೊಂದಿಗೆ ಮಾತ್ರ ಲಭ್ಯವಿದೆ. ಸುರಕ್ಷತೆಯ ದೃಷ್ಟಿಯಿಂದ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ರೇರ್ ಪಾರ್ಕಿಂಗ್ ಸೇನಾರ್ಸ್ ಆಯ್ಕೆಯನ್ನು ಹೊಂದಿದೆ. ಈ ಕಾರು ರೂ.5.85 ಲಕ್ಷದಿಂದ ರೂ.8.12 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ದೊರೆಯುತ್ತದೆ.
ಟಾಟಾ ಟಿಗೂರ್ (Tata Tigor): ಈ ಸೆಡಾನ್ ಎಲ್ಲೆಲ್ಲೂ ಮನೆ ಮಾತಾಗಿದೆ. ಕೇವಲ ಡುಯಲ್ ಫ್ರಂಟ್ ಏರ್‌ಬ್ಯಾಗ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ. ಇದರೊಂದಿಗೆ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 360-ಡಿಗ್ರಿ ಕ್ಯಾಮೆರಾದಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ. ಈ ಕಾರು ರೂ.6 ಲಕ್ಷದಿಂದ ರೂ.9.50 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.

ರೆನಾಲ್ಟ್ ಟ್ರೈಬರ್ (Renault Triber): ಇದೊಂದು ಜನಪ್ರಿಯ ಎಂಪಿವಿಯಾಗಿದೆ. ರೂ.6.15 ಲಕ್ಷದಿಂದ ರೂ.8.97 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಇದರಲ್ಲಿ 7 ಆಸನಗಳಿದ್ದು, ಪ್ರಯಾಣಿಕರು ಸುಲಭಗಾಗಿ ಓಡಾಟ ನಡೆಸಬಹುದು. ಅದರ ಹೊರತಾಗಿಯೂ ಈ ಟ್ರೈಬರ್ ಕಾರು 6 ಏರ್‌ಬ್ಯಾಗ್ ಆಯ್ಕೆಯಲ್ಲಿ ಸಿಗುವುದಿಲ್ಲ.
ನೂತನ ಟ್ರೈಬರ್ ಎಂಪಿವಿಯ ಎಂಟ್ರಿ ಲೆವೆಲ್ ಮಾಡೆಲ್‌ಗಳು ಡುಯಲ್ ಏರ್‌ಬ್ಯಾಗ್‌ಗಳು ಮತ್ತು ಟಾಪ್ ಎಂಡ್ ಮಾಡೆಲ್‌ಗಳು 4 ಏರ್‌ಬ್ಯಾಗ್ ಆಯ್ಕೆವನ್ನು ಹೊಂದಿವೆ. ಜೊತೆಗೆ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಟಿಸಿಎಸ್ (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್), ಹಿಲ್ ಸ್ಟಾರ್ಟ್ ಅಸಿಸ್ಟ್, ರೇರ್ ಪಾರ್ಕಿಂಗ್ ಸೆನ್ಸರ್ಸ್ ಹಾಗೂ ರೇರ್ ವ್ಯೂ ಕ್ಯಾಮೆರಾವನ್ನು ಒಳಗೊಂಡಿವೆ.

ಟಾಟಾ ಪಂಚ್ (Tata Punch): ಈ ಪ್ರಖ್ಯಾತ ಎಸ್‌ಯುವಿಯು ಡುಯಲ್ ಏರ್‌ಬ್ಯಾಗ್‌ನೊಂದಿಗೆ ದೊರೆಯುತ್ತದೆ. ಇದು ಮಾತ್ರವಲ್ಲದೆ, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ ರಿವರ್ಸಿಂಗ್ ಕ್ಯಾಮೆರಾದಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಹೊಸ ಟಾಟಾ ಪಂಚ್ ಕಾರು ರೂ.6.20 ಲಕ್ಷದಿಂದ ರೂ.10.32 ಲಕ್ಷ (ಎಕ್ಸ್-ಶೋರೂಂ) ದರದಲ್ಲಿ ಸಿಗುತ್ತದೆ.
ಮಾರುತಿ ಸುಜುಕಿ ಬಲೆನೊ (Maruti Suzuki Baleno): ಇದು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಈ ಕಾರಿನ ಬೇಸ್ ಮಾಡೆಲ್‌ಗಳು ಡುಯಲ್ ಏರ್‌ಬ್ಯಾಗ್‌ನ್ನು ಮಾತ್ರ ಹೊಂದಿವೆ. ಟಾಪ್ ಎಂಡ್ ಮಾಡೆಲ್‌ಗಳು 6 ಏರ್‌ಬ್ಯಾಗ್‌ನೊಂದಿಗೆ ಖರೀದಿಗೆ ಲಭ್ಯವಿವೆ. ಇದರೊಂದಿಗೆ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿವೆ. ಬಲೆನೊ ಕಾರು ರೂ.6.70 ಲಕ್ಷದಿಂದ ರೂ.9.92 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.

ಟೊಯೊಟಾ ಗ್ಲಾನ್ಜಾ (Toyota Glanza): ಈ ಹ್ಯಾಚ್‌ಬ್ಯಾಕ್‌ನ ಬೇಸ್ ಮಾಡೆಲ್‌ಗಳು ಸಹ ಡುಯಲ್ ಏರ್‌ಬ್ಯಾಗ್ ಆಯ್ಕೆಯಲ್ಲಿ ದೊರೆಯುತ್ತವೆ. ಟಾಪ್ ಎಂಡ್ ಮಾಡೆಲ್‌ಗಳು 6-ಏರ್‌ಬ್ಯಾಗ್‌ಗಳನ್ನು ಹೊಂದಿವೆ. ಜೊತೆಗೆ ಎಲ್ಲ ಮಾಡೆಲ್‌ಗಳು ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿದಂತೆ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿವೆ. ನೂತನ ಗ್ಲಾನ್ಜಾ ಕಾರು ರೂ.6.90 ಲಕ್ಷದಿಂದ ರೂ.10 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ.
ರೆನಾಲ್ಟ್ ಕಿಗರ್ (Renault Kiger): ಇದು ಎಸ್‌ಯುವಿಯಾಗಿದೆ. ಈ ಕಾರಿನ ಹಲವು ಮಾಡೆಲ್‌ಗಳು 4-ಏರ್‌ಬ್ಯಾಗ್ ಆಯ್ಕೆಯನ್ನು ಒಳಗೊಂಡಿವೆ. ಹಾಗೆಯೇ ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಹಿಲ್ ಸ್ಟಾರ್ಟ್ ಅಸಿಸ್ಟ್ ಹಾಗೂ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿವೆ. ಈ ಕಾರು ರೂ.6.15 ಲಕ್ಷದಿಂದ ರೂ.11.23 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications