Hybrid Cars: 15 ಹೊಸ ಹೈಬ್ರಿಡ್ ಎಸ್‌ಯುವಿಗಳು ಬಿಡುಗಡೆಗೆ ಸಜ್ಜು: ಶೀಘ್ರದಲ್ಲೆ ಮಾರುತಿ, ಹ್ಯುಂಡೈ...
ಭಾರತದ ಆಟೋಮೋಟಿವ್ ಮಾರುಕಟ್ಟೆಯು ಪ್ರಮುಖ ಪರಿವರ್ತನೆಯ ಅಂಚಿನಲ್ಲಿದೆ, ಏಕೆಂದರೆ 2027 ರ ವೇಳೆಗೆ ಕನಿಷ್ಠ 15 ಹೊಸ ಹೈಬ್ರಿಡ್ ಕಾರುಗಳು (Hybrid Cars) ದೇಶದಲ್ಲಿ ಬಿಡುಗಡೆಯಾಗಲಿವೆ. ಹೈಬ್ರಿಡ್ ಕೊಡುಗೆಗಳಲ್ಲಿ ಈ ಮುಂಬರುವ ಏರಿಕೆಯು ಇಂಧನ ದಕ್ಷತೆ, ಪರಿಸರ ಕಾಳಜಿ ಮತ್ತು ಸ್ವಚ್ಛ ಚಲನಶೀಲತೆಯತ್ತ ಸರ್ಕಾರದ ಒತ್ತು ನೀಡುವ ಮೂಲಕ ಗ್ರಾಹಕರ ಬೇಡಿಕೆಯನ್ನು ಹೆಚ್ಚಿಸುತ್ತಿದೆ. ಮಾರುತಿ ಸುಜುಕಿ, ಮಹೀಂದ್ರಾ, ಹುಂಡೈ, ಕಿಯಾ, ಹೋಂಡಾ, ರೆನಾಲ್ಟ್, ನಿಸ್ಸಾನ್ ಸೇರಿದಂತೆ ಕಾರು ತಯಾರಕರು ವಿವಿಧ ವಿಭಾಗಗಳಲ್ಲಿ ಸ್ಟ್ರಾಂಗ್ ಮತ್ತು ಮೈಲ್ಡ್-ಹೈಬ್ರಿಡ್ SUV ಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದಾರೆ.
ಈ ಹೊಸ ಮಾಡಲ್‌ಗಳಲ್ಲಿ ಹಲವು ಅತ್ಯಾಧುನಿಕ ಹೈಬ್ರಿಡ್ ತಂತ್ರಜ್ಞಾನದ ಜೊತೆಗೆ ವಿಶಾಲವಾದ ಕ್ಯಾಬಿನ್, ವೈಶಿಷ್ಟ್ಯ-ಭರಿತ ಇಂಟೀರಿಯರ್ ಮತ್ತು ದೃಢವಾದ ರಸ್ತೆ ಉಪಸ್ಥಿತಿಯೊಂದಿಗೆ ಎಂಟ್ರಿ ಕೊಡಲಿವೆ. ಮಾರುತಿ ಸುಜುಕಿಯಂತಹ ವಾಹನ ತಯಾರಕರು ತಮ್ಮ ಹೈಬ್ರಿಡ್ ಶ್ರೇಣಿಯನ್ನು ಗಮನಾರ್ಹವಾಗಿ ವಿಸ್ತರಿಸಲು ಸಜ್ಜಾಗಿದ್ದಾರೆ, ಗ್ರ್ಯಾಂಡ್ ವಿಟಾರಾ, ಫ್ರಾಂಕ್ಸ್, ಬಲೆನೊ ಮತ್ತು ಸ್ವಿಫ್ಟ್‌ನಂತಹ ಜನಪ್ರಿಯ ಮಾಡಲ್‌ಗಳ ಹೈಬ್ರಿಡ್ ಆವೃತ್ತಿಗಳನ್ನು ಪರಿಚಯಿಸುವುದು ಬಹುತೇಕ ಖಚಿತವಾಗಿದೆ.

ಅದೇ ರೀತಿ, ಮಹೀಂದ್ರಾ ತನ್ನ XUV3XO ಶ್ರೇಣಿಯ ಹೈಬ್ರಿಡ್ ವೇರಿಯೆಂಟ್‌ಗಳನ್ನು ಪರಿಯಿಸಲು ಕೆಲಸ ಮಾಡುತ್ತಿದ್ದರೆ, ಹುಂಡೈ ಮತ್ತು ಕಿಯಾ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಕ್ರೆಟಾ ಹೈಬ್ರಿಡ್ ಮತ್ತು ಸೆಲ್ಟೋಸ್ ಹೈಬ್ರಿಡ್ ಅನ್ನು ಪರಿಚಯಿಸಲು ಯೋಜನೆ ಸಿದ್ಧವಾಗಿದೆ. ಇನ್ನೇನು ರಸ್ತೆ ಪರೀಕ್ಷೆಗಳು ನಡಿಯುವುದು ಬಾಕಿಯಿದೆ ಎಂದು ಮೂಲಗಳು ಹೇಳುತ್ತಿವೆ.
ಇನ್ನು ರೆನಾಲ್ಟ್, ನಿಸ್ಸಾನ್ ಮತ್ತು ಕಿಯಾದಿಂದ ಕುಟುಂಬ ಸ್ನೇಹಿ ಏಳು ಆಸನಗಳ ಹೈಬ್ರಿಡ್ ಮಾಡಲ್‌ಗಳು ಬರಲಿವೆ. ಸ್ಥಳಾವಕಾಶದಲ್ಲಿ ರಾಜಿ ಮಾಡಿಕೊಳ್ಳದೆ ಹೆಚ್ಚಿನ ಮೈಲೇಜ್ ಬಯಸುವ ದೊಡ್ಡ ಕುಟುಂಬಗಳಿಗಾಗಿ ಈ ಕಾರುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ 7-ಸೀಟರ್ ಫ್ಯಾಮಿಲಿ ಕಾರುಗಳು ಬಜೆಟ್ ಬೆಲೆಯಲ್ಲಿ ಬಿಡುಗಡೆಯಾದಲ್ಲಿ ದೇಶದಲ್ಲಿ ಭಾರೀ ಜನಪ್ರಿಯತೆ ಪಡೆಯುವ ನಿರೀಕ್ಷೆಗಳಿವೆ.

ನಂತರ ಹೋಂಡಾ ZR-V ಮತ್ತು ಎಲಿವೇಟ್ ಹೈಬ್ರಿಡ್ ಕಾರುಗಳು ಪ್ರೀಮಿಯಂ SUV ವಿಭಾಗದಲ್ಲಿ ಬಲವಾದ ಅಡಿಪಾಯ ಹಾಕಲಿವೆ. 2025 ರ ಅಂತ್ಯದಿಂದ 2027 ರ ನಡುವೆ ಬಿಡುಗಡೆಯಾಗಲಿರುವ ಈ ಹೈಬ್ರಿಡ್ SUV ಹಾಗೂ ಸೆಡಾನ್‌ಗಳು ವ್ಯಾಪಕ ಶ್ರೇಣಿಯ ಖರೀದಿದಾರರನ್ನು ಆಕರ್ಷಿಸುವ ಮತ್ತು ಹೊಸ ತಂತ್ರಜ್ಞಾನಗಳತ್ತ ಭಾರತದ ಬದಲಾವಣೆಯನ್ನು ವೇಗಗೊಳಿಸುವ ನಿರೀಕ್ಷೆಯಿದೆ.
ನಿರೀಕ್ಷಿತ ಬಿಡುಗಡೆ ಸಮಯ
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ಎಸ್‌ಯುವಿ (ಅರೆನಾ, ಸೆಪ್ಟೆಂಬರ್ 2025), ಮಾರುತಿ ಸುಜುಕಿ ಫ್ರಾಂಕ್ಸ್ ಹೈಬ್ರಿಡ್ (2026), ಮಾರುತಿ ಸುಜುಕಿ ಬಲೆನೊ ಹೈಬ್ರಿಡ್ (2026), ಮಾರುತಿ ಸುಜುಕಿ ಸ್ವಿಫ್ಟ್ ಹೈಬ್ರಿಡ್ (2027), ಮಾರುತಿ ಸುಜುಕಿ ಮಿನಿ ಹೈಬ್ರಿಡ್ MPV (2026), ಮಹೀಂದ್ರಾ XUV3XO ಹೈಬ್ರಿಡ್ (2026), ಮಹೀಂದ್ರ ಶ್ರೇಣಿ-ವಿಸ್ತರಣಾ ಹೈಬ್ರಿಡ್ SUV ಲೈನ್ಅಪ್ (2026-27), ಹ್ಯುಂಡೈ ಕ್ರೆಟಾ ಹೈಬ್ರಿಡ್ (2027).

ಹ್ಯುಂಡೈ Ni1i (ಹೊಸ 7-ಆಸನಗಳ ಹೈಬ್ರಿಡ್ SUV, 2027), ಕಿಯಾ ಸೆಲ್ಟೋಸ್ ಹೈಬ್ರಿಡ್ (2027), ಕಿಯಾ Q4i - 3-ಸಾಲು ಹೈಬ್ರಿಡ್ SUV (2027), ಹೋಂಡಾ ZR-V ಹೈಬ್ರಿಡ್ (2025 ರ ಕೊನೆಯಲ್ಲಿ), ಹೋಂಡಾ ಎಲಿವೇಟ್ ಹೈಬ್ರಿಡ್ (2026 ದೀಪಾವಳಿ), ರೆನಾಲ್ಟ್ ಡಸ್ಟರ್ ಹೈಬ್ರಿಡ್ (2026), ರೆನಾಲ್ಟ್ ಬೋರಿಯಲ್ ಹೈಬ್ರಿಡ್ - 7-ಆಸನಗಳು (2026), ನಿಸ್ಸಾನ್ KAIT ಹೈಬ್ರಿಡ್ (2026), ನಿಸ್ಸಾನ್ 7-ಆಸನಗಳು ಹೈಬ್ರಿಡ್ SUV (2026-27).
ಇವುಗಳಲ್ಲಿ ಹೆಚ್ಚಿನವು ಸುಧಾರಿತ ಮೈಲೇಜ್ ಮತ್ತು ಕಡಿಮೆ ಕಾರ್ಬನ್ ಹೊರಸೂಸುವಿಕೆಯೊಂದಿಗೆ ಸ್ಟ್ರಾಂಗ್ ಹೈಬ್ರಿಡ್ ಸಿಸ್ಟಮ್ ಜೊತೆಗೆ ಬರಲಿವೆ. ವಿಶಾಲವಾದ ಫ್ಯಾಮಿಲಿ SUV ಗಳಿಗೆ ಭಾರತದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಇವು ಪೂರೈಸುತ್ತವೆ. ಬಿಡುಗಡೆ ಸಮಯಗಳು 2025 ರ ಅಂತ್ಯದಿಂದ 2027 ರವರೆಗೆ ಇರುತ್ತವೆ. ಬಹುತೇಕ ಪ್ರತಿಯೊಂದು ಪ್ರಮುಖ ತಯಾರಕರು ಈ ಅವಧಿಯಲ್ಲಿ ಕನಿಷ್ಠ ಒಂದು ಹೈಬ್ರಿಡ್ SUV ಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧರಾಗಿದ್ದಾರೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಒಟ್ಟಾರೆ ಹೈಬ್ರಿಡ್ ಕ್ರಾಂತಿಯು ಸುಧಾರಿತ ಕಾರ್ಬನ್ ಹೊರಸೂಸುವಿಕೆ ಮಾನದಂಡಗಳು, ಸುಧಾರಿತ ತಂತ್ರಜ್ಞಾನ ಮತ್ತು ಬ್ರ್ಯಾಂಡ್‌ಗಳ ನಡುವಿನ ತೀವ್ರ ಸ್ಪರ್ಧೆಯೊಂದಿಗೆ ಭಾರತದ ಆಟೋ ಉದ್ಯಮದಲ್ಲಿ ಹೊಸ ಕ್ರಾಂತಿಯನ್ನು ಸೂಚಿಸುತ್ತದೆ. 2027 ರ ವೇಳೆಗೆ ಈ 15 ಹೊಸ ಹೈಬ್ರಿಡ್ SUV ಗಳ ಆಗಮನವು ಭಾರತೀಯ ಕಾರು ಖರೀದಿದಾರರಿಗೆ ದಕ್ಷತೆ, ಕಾರ್ಯಕ್ಷಮತೆ ಮತ್ತು ಸುಸ್ಥಿರತೆಯ ಹೊಸ ಯುಗವನ್ನು ಪರಿಚಯಿಸಲಿವೆ.


Click it and Unblock the Notifications