ಟಾಟಾ ಒಡೆತನದ ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಯ ವಿಶೇಷತೆಗಳೇನು?

ಐಷಾರಾಮಿ ವಾಹನ ತಯಾರಕ ಕಂಪನಿಯಾದ ಜಾಗ್ವಾರ್ ಲ್ಯಾಂಡ್ ರೋವರ್ ತನ್ನ ಐಕಾನಿಕ್ ಡಿಫೆಂಡರ್ ಆಫ್-ರೋಡ್ ಎಸ್‍ಯುವಿಯನ್ನು ಹಲವಾರು ಪ್ರಮುಖ ನವೀಕರಣಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಈ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ (Land Rover Defender) ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.39 ಕೋಟಿಯಾಗಿದೆ. ಹಳೆಯ ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು ಡೀಸೆಲ್ ಯುನಿಟ್ ಗಳ ಜೊತೆಗೆ ಹೊಸ V8 ಎಂಜಿನ್‌ ನೊಂದಿಗೆ 2025ರ ಡಿಫೆಂಡರ್ ಎಸ್‍ಯುವಿ ಬಂದಿದೆ. ಈ ಹೊಸ ಡಿಫೆಂಡರ್ ಎಸ್‍ಯುವಿಯು ಡಿಫೆಂಡರ್ 90, ಡಿಫೆಂಡರ್ 110 ಮತ್ತು ಡಿಫೆಂಡರ್ 130 ರೂಪದಲ್ಲಿ ಲಭ್ಯವಿದೆ.

2025ರ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ ಭಾರತದಲ್ಲಿನ ಐಷಾರಾಮಿ ಕಾರು ವಿಭಾಗದಲ್ಲಿ ಬಿಎಂಡಬ್ಲ್ಯು X7, ಮರ್ಸಿಡಿಸ್ GLC, ಜೀಪ್ ರಾಂಗ್ಲರ್, ರೇಂಜ್ ರೋವರ್ ವೆಲಾರ್ ಮತ್ತು ವೋಲ್ವೋ XC90 ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಹೊಸ ಫೀಚರ್ಸ್ ಗಳನ್ನು ಒಳಗೊಂಡಿರುವ ತಾಜಾ ನವೀಕರಣಗಳು ಡಿಫೆಂಡರ್ ಎಸ್‍ಯುವಿಯ ಎಕ್ಸ್-ಡೈನಾಮಿಕ್, HSE ಮತ್ತು ಎಕ್ಸ್ ಟ್ರಿಮ್‌ಗಳಲ್ಲಿ ಲಭ್ಯವಿರುತ್ತವೆ.

Land Rover Defender

ನ್ಯಾಸ: ಈ ಹೊಸ ಡಿಫೆಂಡರ್ ಎಸ್‌ಯುವಿ ಬಾಹ್ಯ ವಿನ್ಯಾಸದಲ್ಲೂ ಸೇರಿಸಲಾದ ಹೊಸ ಅಂಶಗಳೊಂದಿಗೆ ನವೀಕರಿಸಲಾಗಿದೆ. ಇವುಗಳಲ್ಲಿ DRL ಗಳೊಂದಿಗೆ ಮ್ಯಾಟ್ರಿಕ್ಸ್ LED ಹೆಡ್‌ಲೈಟ್‌ಗಳು, ಬ್ಲಾಕ್ ಕಾಂಟ್ರಾಸ್ಟ್ ರೂಫ್ ಮತ್ತು 20-ಇಂಚಿನ ಆಲ್-ಟೆರೈನ್ ಸ್ಯಾಟಿನ್ ಡಾರ್ಕ್ ಗ್ರೇ ಅ;ಆಯ್ ವ್ಹೀಲ್ ಗಳು ಸೇರಿವೆ. ಇನ್ನು ಈ ಎಸ್‍ಯುವಿಯ ಸಾಫ್ಟ್ ಕ್ಲೋಸ್ಡ್ ಟೈಲ್ ಡೋರ್ ಅನ್ನು ಸಹ ಪಡೆಯುತ್ತದೆ.

ಫೀಚರ್ಸ್: ಹೆಚ್ಚು ಪವರ್ ಫುಲ್ ಎಂಜಿನ್ ಜೊತೆಗೆ 2025ರ ಡಿಫೆಂಡರ್ ಎಸ್‍ಯುವಿಯು ಹೊಸ ಮತ್ತು ನವೀಕರಿಸಿದ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. ಕ್ಯಾಬಿನ್ ಅನ್ನು ಹೊಸ ವಿಂಡ್ಸರ್ ಲೆದರ್ ಸೀಟ್‌ಗಳು, 14-ವೇ ಹೀಟೆಡ್ ಮತ್ತು ಕೂಲ್ಡ್ ಫ್ರಂಟ್ ಸೀಟ್‌ಗಳೊಂದಿಗೆ ನವೀಕರಿಸಲಾಗಿದೆ, ಇದು ಮೆಮೊರಿ ಫಂಕ್ಷನ್ ಗಳನ್ನು ಮತ್ತು ಹೆಡ್‌ರೆಸ್ಟ್‌ಗಳನ್ನು ಒಳಗೊಂಡಿದೆ. ಈ ಎಸ್‍ಯುವಿಯ ಎರಡನೇ ಸಾಲಿನಲ್ಲಿ ಕ್ಲೈಮೆಂಟ್ ಕಂಟ್ರೋಲ್, ನುಬಕ್-ಎಡ್ಜ ಕಾರ್ಪೆಟ್ ಮ್ಯಾಟ್ಸ್ ಮತ್ತು ಲೆದರ್-ಸುತ್ತಿದ ಸ್ಟೀರಿಂಗ್ ವೀಲ್ ಅನ್ನು ಹೊಂದಿವೆ.

Land Rover Defender

ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಯಲ್ಲಿ 11.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 3D ಸರೌಂಡ್ ಕ್ಯಾಮೆರಾ, ಸ್ಲೈಡಿಂಗ್ ಪನೋರಮಿಕ್ ಸನ್‌ರೂಫ್, ಮೆರಿಡಿಯನ್ ಸೌಂಡ್ ಸಿಸ್ಟಮ್ ಮತ್ತು ಫ್ರಂಟ್ ಸೆಂಟರ್ ಕನ್ಸೋಲ್‌ನಲ್ಲಿ ರೆಫ್ರಿಜಿರೇಟರ್ ಕಂಪಾರ್ಟ್‌ಮೆಂಟ್ ಅನ್ನು ಸಹ ಒಳಗೊಂಡಿದೆ. ಇನ್ನು ಈ ಡಿಫೆಂಡರ್ 130 ಎಸ್‍ಯುವಿಯಲ್ಲಿ ಮೂರನೇ ಸಾಲನ್ನು ಸುಲಭವಾಗಿ ಪ್ರವೇಶಿಸಲು ಸಹಾಯ ಮಾಡಲು ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟ್ ಗಳನ್ನು ಪಡೆಯುತ್ತದೆ.

ಎಂಜಿನ್: ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ ಹೆಚ್ಚು ಪವರ್ ಫುಲ್ V8 P425 5.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 425 ಬಿಹೆಚ್‍ಪಿ ಪವರ್ ಮತ್ತು 610 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಇನ್ನು 2.0-ಲೀಟರ್ ಮತ್ತು 3.0-ಲೀಟರ್ ಟರ್ಬೋಚಾರ್ಜ್ಡ್ ಗ್ಯಾಸೋಲಿನ್ ಎಂಜಿನ್‌ನೊಂದಿಗೆ ಸಹ ನೀಡಲಾಗುತ್ತದೆ.

Land Rover Defender

ಈ ಎಸ್‍ಯುವಿಯ ಟಾಪ್-ಎಂಡ್ ರೂಪಾಂತರವಾದ Octa ಸಹ ಇದೆ, ಇದು 4.4-ಲೀಟರ್ V8 ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಭಾರತದಲ್ಲಿ ಡಿಫೆಂಡರ್ ಎಸ್‍ಯುವಿ ಸರಣಿಯಲ್ಲಿನ ಅತ್ಯಂತ ಶಕ್ತಿಶಾಲಿ ಎಂಜಿನ್ ಆಗಿದ್ದು, 626 bhp ಪವರ್ ಮತ್ತು 750 Nm ಪೀಕ್ ಟಾರ್ಕ್ ಅನ್ನು ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, January 8, 2025, 11:52 [IST]
English summary
2025 land rover defender top things details
Read more on land rover india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+