ಕಾರು ಖರೀದಿಸುವ ಪ್ಲಾನ್ ಇದೆಯೇ? ಅಕ್ಟೋಬರ್‌ನಲ್ಲಿ ಜನ ಮುಗಿಬಿದ್ದು ಖರೀದಿಸಿದ ಎಸ್‌ಯುವಿಗಳಿವು!

ಭಾರತೀಯ ಕಾರು ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ, ಕಳೆದ ಕೆಲವು ವರ್ಷಗಳಿಂದ ಎಸ್‌ಯುವಿಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. ಕಳೆದ ಅಕ್ಟೋಬರ್‌ ತಿಂಗಳಲ್ಲಿ ಎಸ್‌ಯುವಿಗಳು ಬಲವಾದ ಮಾರಾಟವನ್ನು ಗಳಿಸಿವೆ, ಅಕ್ಟೋಬರ್ 2025 ರಲ್ಲಿ ನಾವು ಟಾಪ್ 5 ಅತ್ಯುತ್ತಮ ಮಾರಾಟವಾದ ಸಬ್-ಕಾಂಪ್ಯಾಕ್ಟ್ ಎಸ್‌ಯುವಿಗಳ ವಿವರಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಈ ಕಾರುಗಳು ಸದ್ಯ ಭಾರತದಲ್ಲಿ ಟ್ರೆಂಡಿಂಗ್‌ನಲ್ಲಿವೆ, ಅಲ್ಲದೆ ಅಕ್ಟೋಬರ್ 2025 ರಲ್ಲಿ ದೇಶದಲ್ಲಿ ಪ್ರಯಾಣಿಕ ವಾಹನಗಳ ಮಾರಾಟಕ್ಕೆ ಇವೆಲ್ಲವು ಆಕರ್ಷಕ ಹಬ್ಬದ ಕೊಡುಗೆಗಳು ಹಾಗೂ ಜಿಎಸ್‌ಟಿ 2.0 ಉತ್ತೇಜನವನ್ನು ಪಡೆದು ಗರಿಷ್ಠ ಸಂಖ್ಯೆಯಲ್ಲಿ ಮಾರಾಟವಾಗಿವೆ.

ಟಾಟಾ ನೆಕ್ಸಾನ್: ಅಕ್ಟೋಬರ್ ತಿಂಗಳಿನಲ್ಲಿ ಟಾಟಾ ನೆಕ್ಸಾನ್ ಅತಿ ಹೆಚ್ಚು ಮಾರಾಟವಾದ ಕಾರು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಜನ ಈ ಕಾರನ್ನು ಮುಗಿಬಿದ್ದು ಖರೀದಿಸಿದ್ದು, ಕೇವಲ ಒಂದೇ ತಿಂಗಳಿನಲ್ಲಿ ಬರೋಬ್ಬರಿ 22,083 ಯುನಿಟ್ ಟಾಟಾ ನೆಕ್ಸಾನ್ ಎಸ್‌ಯುವಿಗಳು ಮಾರಾಟವಾಗಿವೆ. ಟಾಟಾದ ಈ SUV ವಾರ್ಷಿಕವಾಗಿ ಶೇ50 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಸಣ್ಣ ಕುಟುಂಬಗಳಿಗೆ ಈ ಕಾರು ಬೆಸ್ಟ್ ಆಯ್ಕೆಯಾಗಿದ್ದು, ಐದು ಮಂದಿಗೆ ಆರಾಮದಾಯಕ ಪ್ರಯಾಣ ನೀಡುತ್ತದೆ.

2025-october-best-selling-sub-compact-suvs-in-india

ಟಾಟಾ ನೆಕ್ಸಾನ್ ಬೆಲೆಯು 7.3 ಲಕ್ಷ ರೂ. (ಎಕ್ಸ್-ಶೋರೂಂ)ನಿಂದ ಪ್ರಾರಂಭವಾಗುತ್ತದೆ. ವೇರಿಯೆಂಟ್ ಅವಲಂಬಿಸಿ ಪನೋರಮಿಕ್ ಸನ್‌ರೂಫ್ ಮತ್ತು JBL ಸೌಂಡ್ ಸಿಸ್ಟಮ್‌ನಂತಹ ಹಲವಾರು ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಉತ್ತಮ ಸವಾರಿ ಗುಣಮಟ್ಟ, ಪೆಟ್ರೋಲ್ - ಡೀಸೆಲ್ ಮತ್ತು CNG ಪವರ್‌ಟ್ರೇನ್ ಆಯ್ಕೆಗಳಿಂದಾಗಿ ಇದನ್ನು ಅತ್ಯಾಕರ್ಷಕ ಕಾಂಪ್ಯಾಕ್ಟ್ ಎಸ್‌ಯುವಿಯನ್ನಾಗಿ ಮಾಡುತ್ತದೆ. ಅಲ್ಲದೆ ಸುರಕ್ಷತೆಯಲ್ಲಿ 5-ಸ್ಟಾರ್ ರೇಟಿಂಗ್ ಪಡೆದಿದೆ.

ಕಿಯಾ ಸೋನೆಟ್: ಕಿಯಾ ಸೋನೆಟ್ ದಕ್ಷಿಣ ಕೊರಿಯಾ ವಾಹನ ತಯಾರಕರ ಅತ್ಯಂತ ಆಕರ್ಷಕ ಎಸ್‌ಯುವಿಗಳಲ್ಲಿ ಒಂದಾಗಿದೆ. ಭಾರತದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಸಬ್-ಕಾಂಪ್ಯಾಕ್ಟ್ ಎಸ್‌ಯುವಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ದಕ್ಕಿಸಿಕೊಂಡಿದೆ. ಅಕ್ಟೋಬರ್ 2025 ರಲ್ಲಿ ಒಟ್ಟು 12,745 ಕಿಯಾ ಸೋನೆಟ್ ಕಾರುಗಳು ಮಾರಾಟವಾಗಿವೆ. ಇದರ ಬೆಲೆಯು 7.30 ಲಕ್ಷ ರೂ. (ಎಕ್ಸ್-ಶೋರೂಂ)ನಿಂದ ಪ್ರಾರಂಭವಾಗುತ್ತದೆ.

2025-october-best-selling-sub-compact-suvs-in-india

ಕಿಯಾ ಸೋನೆಟ್ ಪ್ರೀಮಿಯಂ ಮತ್ತು ವೈಶಿಷ್ಟ್ಯ-ಭರಿತ ಒಳಾಂಗಣವನ್ನು ಹೊಂದಿದೆ. ಇದು ಲೆವೆಲ್ 1 ADAS, ಕ್ಲಚ್‌ಲೆಸ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆ, ಸನ್‌ರೂಫ್, 385 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ. ಇದನ್ನು 1-ಲೀಟರ್ ಟರ್ಬೊ ಪೆಟ್ರೋಲ್, 1.5-ಲೀಟರ್ ಟರ್ಬೊ ಡೀಸೆಲ್ ಮತ್ತು 1.2-ಲೀಟರ್ ಪೆಟ್ರೋಲ್ ಎಂಜಿನ್‌ಗಳೊಂದಿಗೆ ಸಂಸ್ಕರಿಸಿದ ಪವರ್‌ಟ್ರೇನ್‌ಗಳೊಂದಿಗೆ ಆಯ್ಕೆ ಮಾಡಬಹುದು.

ಮಹೀಂದ್ರ XUV 3XO: ಮಹೀಂದ್ರಾ XUV 3XO ಅನ್ನು 2024 ರಲ್ಲಿ ಭಾರತದಲ್ಲಿ ಪರಿಚಯಿಸಲಾಯಿತು. ಇದು ಅಂದಿನಿಂದಲೂ ಅತ್ಯಂತ ಜನಪ್ರಿಯ ಸಬ್‌ಕಾಂಪ್ಯಾಕ್ಟ್ SUV ಗಳಲ್ಲಿ ಒಂದಾಗಿದೆ. ಮಹೀಂದ್ರಾದ XUV 3XO ಭಾರತ್ NCAP ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ, ಅಕ್ಟೋಬರ್ 2025 ರಲ್ಲಿ ಕಂಪನಿಯು ಒಟ್ಟು 12,237 ಯುನಿಟ್‌ ಕಾರುಗಳನ್ನು ಮಾರಾಟ ಮಾಡಲಾಗಿದೆ.

2025-october-best-selling-sub-compact-suvs-in-india

ಮಹೀಂದ್ರಾ XUV 3XO ಆಕರ್ಷಕ ಡ್ರೈವ್, ವಿಶಾಲ ಸ್ಥಳಾವಕಾಶ ಮತ್ತು ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಕಾಂಪ್ಯಾಕ್ಟ್ SUV ಆಗಿದೆ. C-ಆಕಾರದ DRL ಗಳು, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಟೈಲ್‌ಲ್ಯಾಂಪ್‌ಗಳು ಮತ್ತು ಟೈಲ್‌ಗೇಟ್‌ನಲ್ಲಿ ಲೈಟ್ ಬಾರ್‌ನೊಂದಿಗೆ ಎಲ್ಲಾ LED ಲೈಟಿಂಗ್ ಅನ್ನು ಒಳಗೊಂಡಿದೆ. ಹೆಚ್ಚು ಸ್ಪೋರ್ಟಿಯಾಗಿ ಕಾಣುವ ಅತ್ಯುತ್ತಮ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಆಗಿದೆ.

ಮಾರುತಿ ಸುಜುಕಿ ಬ್ರೆಝಾ: ಮಾರುತಿ ಸುಜುಕಿ ಬ್ರೆಝಾದ ಒಟ್ಟು 12,072 ಯುನಿಟ್‌ ಕಾರುಗಳನ್ನು ಅಕ್ಟೋಬರ್ 2025 ರಲ್ಲಿ ಮಾರಾಟ ಮಾಡಲಾಗಿದೆ. ಮಾರುತಿ ಬ್ರೆಝಾ ಕಾಂಪ್ಯಾಕ್ಟ್ SUV ಐದು ಪ್ರಯಾಣಿಕರಿಗೆ ವಿಶಾಲವಾದ ಮತ್ತು ಆರಾಮದಾಯಕ ಕ್ಯಾಬಿನ್ ಅನ್ನು ನೀಡುತ್ತದೆ. ಇದು 9-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಸಾಕಷ್ಟು ಉತ್ತಮ ಗುಣಮಟ್ಟ ಮತ್ತು ದೊಡ್ಡ ಬೂಟ್‌ನಂತಹ ಹಲವಾರು ಉತ್ತಮ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಬೆಲೆಯು 8.2 ಲಕ್ಷ ರೂ. (ಎಕ್ಸ್-ಶೋರೂಂ)ನಿಂದ ಪ್ರಾರಂಭವಾಗುತ್ತದೆ.

Article Published On: Friday, November 21, 2025, 12:23 [IST]
English summary
2025 october best selling sub compact suvs in india
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+