2025ರ ಸ್ಕೋಡಾ ಕೊಡಿಯಾಕ್ ರಿವ್ಯೂ ವಿಡಿಯೋ ಕನ್ನಡದಲ್ಲಿ... ಹೇಗಿದೆ ಗೊತ್ತಾ ಕಾರು?

ಮುಂಬೈನಲ್ಲಿ ಎರಡನೇ ತಲೆಮಾರಿನ ಸ್ಕೋಡಾ ಕೊಡಿಯಾಕ್ ಅನ್ನು ಓಡಿಸಲು ಕಂಪನಿ ನಮಗೆ ಆಹ್ವಾನ ನೀಡಿತ್ತು. ಈ ಹೊಸ ಕುಟುಂಬ ಕಾರು ಬೃಹತ್ ಘಾತ್ರದೊಂದಿಗೆ ನಮ್ಮನ್ನು ಅಚ್ಚರಿಗೊಳಿಸಿತ್ತು. ಹೊಸ ಸ್ಕೋಡಾ ಕೊಡಿಯಾಕ್ ಅನ್ನು ಭಾರತೀಯ ಮಾರುಕಟ್ಟೆಗೆ ಸ್ಪೋರ್ಟ್‌ಲೈನ್ ಮತ್ತು ಲಾರೆಂಟ್ & ಕ್ಲೆಮೆಂಟ್ (ಎಲ್ & ಕೆ) ಎಂಬ ಎರಡು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದೆ. ಹೊಸ ಕೊಡಿಯಾಕ್ ಅದರ ಹಳೆಯ ಮಾದರಿಯಂತೆಯೇ ಕಾಣುತ್ತದೆ, ಆದರೆ ಹೆಚ್ಚು ಪರಿಷ್ಕೃತವಾಗಿದೆ. ಹೀಗೆ ಹಲವಾರು ಹೊಸ ವಿಶೇಷತೆಗಳನ್ನು ಒಳಗೊಂಡಿರುವ ಈ ಕಾರಿನ ಫೀಚರ್ಸ್ ನಿಂದ ಹಿಡಿದು ಅದರ ಪರ್ಫಾಮೆನ್ಸ್ ವರೆಗೆ ಎಲ್ಲವನ್ನು ಈ ಕೆಳಗಿನ ವಿಡಿಯೋದಲ್ಲಿ ವಿವರವಾಗಿ ತಿಳಿಸಲು ನಾವು ಪ್ರಯತ್ನಿಸಿದ್ದೇವೆ.

ಈ ಕಾರಿನಲ್ಲಿ 9 ಏರ್‌ಬ್ಯಾಗ್‌ಗಳು, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳೊಂದಿಗೆ ಸಮಗ್ರ 360-ಡಿಗ್ರಿ ಕ್ಯಾಮೆರಾ ವ್ಯವಸ್ಥೆ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಸ್ಟಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಪಾರ್ಕ್ ಅಸಿಸ್ಟ್ ಸಿಸ್ಟಮ್ ಅನ್ನು ಒಳಗೊಂಡಿದೆ.

ಸ್ಕೋಡಾ ಕೊಡಿಯಾಕ್ 1,864 ಮಿ.ಮೀ ಅಗಲ (18 ಮಿಮೀ ತೆಳ್ಳಗೆ) 4,758 ಮಿ.ಮೀ ಉದ್ದ (59 ಮಿಮೀ ಉದ್ದ) ಮತ್ತು 1,659 ಮಿ.ಮೀ ಎತ್ತರ (17 ಮಿಮೀ ಕಡಿಮೆ) ವಿದೆ. ವೀಲ್‌ಬೇಸ್ ಮೊದಲಿನಂತೆ 2,791 ಮಿ.ಮೀ ನಲ್ಲಿ ಬದಲಾಗದೆ ಉಳಿದಿದೆ. ಕೊಡಿಯಾಕ್ 235/55 ಟೈರ್‌ಗಳನ್ನು ಹೊಂದಿದೆ. 18-ಇಂಚಿನ ವೀಲ್‌ಗಳನ್ನು ಕಾಣಬಹುದು.

ಭಾರತಕ್ಕಾಗಿ ಎರಡನೇ ತಲೆಮಾರಿನ ಸ್ಕೋಡಾ ಕೊಡಿಯಾಕ್ ತನ್ನ ಹಿಂದಿನ 2.0-ಲೀಟರ್ ಟರ್ಬೋಚಾರ್ಜ್ಡ್ ನಾಲ್ಕು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಉಳಿಸಿಕೊಂಡಿದೆ. ಇದು ಈಗ 201bhp (14bhp ಹೆಚ್ಚಾಗಿದೆ) ಮತ್ತು 320Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 7-ಸ್ಪೀಡ್ DSG ಡ್ಯುಯಲ್-ಕ್ಲಚ್ ಸ್ವಯಂಚಾಲಿತ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಹೊಸ ಕೊಡಿಯಾಕ್ 14.86 ಕಿಮೀ/ಲೀ (ARAI) ಮೈಲೇಜ್ ನೀಡುತ್ತದೆ.

2025-skoda-kodiaq-review-video-in-kannada

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, April 17, 2025, 15:00 [IST]
English summary
2025 skoda kodiaq review video in kannada
Read more on skoda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+