Tata: ಟಾಟಾ ಟಿಗೋರ್ ಈಗ 6 ಲಕ್ಷ ಬೆಲೆಯಲ್ಲಿ ಮತ್ತಷ್ಟು ಪ್ರೀಮಿಯಂ: ಹೊಸ ಅಪ್‌ಡೇಟ್... ಏನದು?

ದೇಶದಲ್ಲಿ ಸಬ್‌ ಕಾಂಪ್ಯಾಕ್ಟ್ ಎಸ್‌ಯುವಿಗಳ ನಂತರ ಸಬ್ ಕಾಂಪ್ಯಾಕ್ಟ್ ಸೆಡಾನ್ ಕಾರುಗಳಿಗೆ ಉತ್ತಮ ಬೇಡಿಕೆ ಇದೆ. ಈ ವಿಭಾಗದಲ್ಲಿ ಮಾರುತಿ ಡಿಜೈರ್ ಹಾಗೂ ಹೋಂಡಾ ಅಮೇಜ್‌ನಂತಹ ಕಾರುಗಳು ಭಾರೀ ಮಾರಾಟ ಕಾಣುತ್ತವೆ. ಇವೆರಡು ಕಾರುಗಳಿಗೆ ಸರಿಯಾದ ಪೈಪೋಟಿ ನೀಡುವ ಮತ್ತೊಂದು ಕಾರಿದೆ, ಅದೇ ಟಾಟಾ ಟಿಗೋರ್. ಪ್ರಸ್ತುತ ಸಬ್‌ ಕಾಂಪ್ಯಾಕ್ಟ್ ಸೆಡಾನ್ ಕಾರು ವಿಭಾಗದಲ್ಲಿ ಈ ಮೂರು ಕಾರುಗಳದ್ದೇ ತುಂಬಾ ಅಬ್ಬರವಿದೆ. ಮಾರುತಿ ಡಿಜೈರ್ ಹಾಗೂ ಹೋಂಡಾ ಅಮೇಜ್ ಹೊಸ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆಯಾಗುವುದೇ ತಡ ಪೈಪೋಟಿ ಹೆಚ್ಚಾಗುತ್ತಿದ್ದಂತೆ ಟಿಗೋರ್ ಕೂಡ ಜನವರಿ 2025 ರಲ್ಲಿ ನವೀಕರಣಗೊಂಡು ಎಂಟ್ರಿ ಕೊಟ್ಟಿದೆ.

ಹೊಸ 2025 ಟಿಗೋರ್ ರೂ. 6 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯೊಂದಿಗೆ ಹಿಂದಿನ ಬೇಸ್‌ ವೇರಿಯೆಂಟ್ XE ಅನ್ನು ಈಗ ಸ್ಥಗಿತಗೊಳಿಸಲಾಗಿದೆ. 2025 ರ ಟಾಟಾ ಟಿಗೋರ್ ಶ್ರೇಣಿಯು ಈಗ XM ವೇರಿಯೆಂಟ್‌ನೊಂದಿಗೆ ಪ್ರಾರಂಭವಾಗುತ್ತದೆ. ಟಿಗೋರ್ ಹೊಸ XZ ಪ್ಲಸ್ ಲಕ್ಸ್ ಎಂಬ ಟಾಪ್ ಎಂಡ್ ವೇರಿಯೆಂಟ್ ಅನ್ನು ಸಹ ಹೊಂದಿದ್ದು, ಇದು ರೂ. 8.50 ಲಕ್ಷ (ಎಕ್ಸ್-ಶೋರೂಂ) ಬೆಲೆಯಿದೆ.

2025-tata-tigor-new-top-end-variant-introduced

ಈ ಸಬ್ ಕಾಂಪ್ಯಾಕ್ಟ್ ಸೆಡಾನ್‌ನ XZ ಪ್ಲಸ್ ಲಕ್ಸ್ (XZ Plus Lux) ವೇರಿಯೆಂಟ್ ಪೆಟ್ರೋಲ್ ಮತ್ತು CNG ಪವರ್‌ಟ್ರೇನ್ ಎರಡಕ್ಕೂ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಮಾತ್ರ ಲಭ್ಯವಿದೆ. XZ ಪ್ಲಸ್ ಲಕ್ಸ್‌ನ ಪೆಟ್ರೋಲ್ ಆಯ್ಕೆಯ ಬೆಲೆ ರೂ. 8.50 ಲಕ್ಷವಿದೆ (ಎಕ್ಸ್-ಶೋರೂಂ), ಹಾಗೆಯೇ CNG ಆಯ್ಕೆಯ ಬೆಲೆ ರೂ. 9.50 (ಎಕ್ಸ್-ಶೋರೂಂ) ಲಕ್ಷವಿದೆ.

2025 ರ ಟಾಟಾ ಟಿಗೋರ್‌ನ ಟಾಪ್ ವೇರಿಯೆಂಟ್ XZ ಪ್ಲಸ್ ಲಕ್ಸ್ ಸಿಎನ್‌ಜಿ ಆವೃತ್ತಿಯು 14 ಇಂಚಿನ ರಿಮ್‌ಗಳು ಹಾಗೂ ಪೆಟ್ರೋಲ್ ವೇರಿಯೆಂಟ್ 15-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಹೊಂದಿದೆ. ಮುಂಭಾಗದ ಫಾಗ್ ಲ್ಯಾಂಪ್‌ಗಳು, ಆಟೋ ಹೆಡ್‌ಲ್ಯಾಂಪ್‌ಗಳು, ರೈನ್-ಸೆನ್ಸಾರ್ ವೈಪರ್‌ಗಳು, ಆಟೋಫೋಲ್ಡ್ ಒಆರ್‌ವಿಎಂಗಳು ಮತ್ತು ಶಾರ್ಕ್ ಫಿನ್ ಆಂಟೆನಾವನ್ನು ಸಹ ಹೊಂದಿದೆ.

2025-tata-tigor-new-top-end-variant-introduced

ಟಾಟಾ ಟಿಗೋರ್ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾದ 1.2 ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಹೊಂದಿದೆ. ಪೆಟ್ರೋಲ್ ವೇರಿಯೆಂಟ್ 85bh ಪವರ್ ಮತ್ತು 113Nm ಟಾರ್ಕ್ ಉತ್ಪಾದಿಸುತ್ತದೆ, ಟಿಗೋರ್‌ನ CNG ರೂಪಾಂತರಗಳು 72bh ಪವರ್ ಮತ್ತು 95Nm ಟಾರ್ಕ್ ಉತ್ಪಾದಿಸುತ್ತವೆ.

ಇಂಟೀರಿಯರ್‌ನಲ್ಲಿ 10.25-ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಫುಲ್ಲಿ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಲೆದರ್ಡ್ ಸ್ಟೀರಿಂಗ್ ವೀಲ್, ಮುಂಭಾಗದ ಟೈಪ್-ಸಿ ಚಾರ್ಜಿಂಗ್ ಪೋರ್ಟ್, ವ್ಯಾನಿಟಿ ಮಿರರ್ ಮತ್ತು ಮ್ಯಾಗಜೀನ್ ಪಾಕೆಟ್‌ಗಳು ಇವೆ.

2025-tata-tigor-new-top-end-variant-introduced

ಟಾಟಾ ಕಾರುಗಳ ಅತಿ ಮುಖ್ಯ ಅಂಶವಾದ ಸುರಕ್ಷತೆಯನ್ನು ಪರಿಗಣಿಸಿದರೆ, ಈ ಕಾರುನಲ್ಲಿ 360-ಡಿಗ್ರಿ ಕ್ಯಾಮೆರಾ ವ್ಯವಸ್ಥೆ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಜೊತೆಗೆ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ (HHC) ನಂತಹ ಆಧುನಿಕ ಸುರಕ್ಷತಾ ಫೀಚರ್ಸ್ ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, February 10, 2025, 18:11 [IST]
English summary
2025 tata tigor new top end variant introduced
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+