Toyota: ಹೊಸ ಟೊಯೋಟಾ ಎಸ್‌ಯುವಿ ಅನಾವರಣ: ಯಾವುದೀ ಕಾರು, ವಿಶೇಷತೆಗಳೇನು?
ಟೊಯೋಟಾ (Toyota) ಭಾರತ ಮಾತ್ರವಲ್ಲ ವಿಶ್ವಾದ್ಯಂತ ತನ್ನ ಬ್ರಾಂಡ್ ಅನ್ನು ವಿಸ್ತರಿಸಿದೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿಗುವ ಅದೆಷ್ಟೋ ಟೊಯೋಟಾ ಎಸ್‌ಯುವಿಗಳು ಭಾರತದಲ್ಲಿ ನಮಗೆ ಸಿಗುವುದಿಲ್ಲ. ಅಂತಹ ಕಾರುಗಳಲ್ಲಿ ಟೊಯೋಟಾ ಕರೊಲಾ ಕ್ರಾಸ್ ಕೂಡ ಒಂದು. ಈ ಕಾರನ್ನು ಇದೀಗ 2025ರ ಫೇಸ್‌ಲಿಫ್ಟ್ ಆಗಿ ಟೊಯೊಟಾ ಯುರೋಪಿಯನ್ ಮಾರುಕಟ್ಟೆಗಳಿಗಾಗಿ ಅನಾವರಣಗೊಳಿಸಿದೆ. ತನ್ನ ಇತ್ತೀಚಿನ ನವೀಕರಣಗಳೊಂದಿಗೆ, 2025ರ ಕರೊಲಾ ಕ್ರಾಸ್ ಫೇಸ್ ಲಿಫ್ಟ್ ಕಾಂಪ್ಯಾಕ್ಟ್ ಕಾರು ಟೊಯೊಟಾದ ಉಪಸ್ಥಿತಿಯನ್ನು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಬಲಪಡಿಸಲಿದೆ. ಈ ಹೊಸ ಅಪ್‌ಡೇಟ್‌ಗಳನ್ನು ಪಡೆದಿರುವ ಕಾರಿನ ವಿಶೇಷತೆಗಳು ಇಲ್ಲಿವೆ.
ಫೇಸ್ ಲಿಫ್ಟೆಡ್ ಕರೊಲಾ ಕ್ರಾಸ್ ಮರುವಿನ್ಯಾಸಗೊಳಿಸಿದ ಮುಂಭಾಗದ ಡಿಸೈನ್ ಹೊಂದಿದೆ. ಹಿಂಭಾಗದಲ್ಲಿ, ಟೈಲ್ ಲೈಟ್ ಗಳನ್ನು ಹೊಸ ಸಿ-ಆಕಾರದ ಎಲ್ಇಡಿ ಸಿಗ್ನೇಚರ್ ಮತ್ತು ಇಂಟಿಗ್ರೇಟೆಡ್ ಏರೋ ಫಿನ್‌ಗಳೊಂದಿಗೆ ನವೀಕರಿಸಲಾಗಿದೆ. ಹೆಡ್ ಲ್ಯಾಂಪ್ ಘಟಕಗಳನ್ನು ಅಡಾಪ್ಟಿವ್ ಎಲ್ಇಡಿ ತಂತ್ರಜ್ಞಾನ ಮತ್ತು ಸಿಗ್ನೇಚರ್ ಎಲ್-ಆಕಾರದ ಡೇಟೈಮ್ ರನ್ನಿಂಗ್ ಲೈಟ್ ಗಳೊಂದಿಗೆ ಮರುವಿನ್ಯಾಸಗೊಳಿಸಲಾಗಿದೆ. ಜೊತೆಗೆ ಹೊಸ 18-ಇಂಚಿನ ಅಲಾಯ್ ವೀಲ್‌ಗಳನ್ನು ನೀಡಲಾಗಿದೆ.

ಇಂಟೀರಿಯರ್‌ನಲ್ಲಿ, ಆಂಡ್ರಾಯ್ಡ್ ಆಟೋ ಈಗ 1.5 ಪಟ್ಟು ವೇಗವಾಗಿ ಮತ್ತು ಆಪಲ್ ಕಾರ್‌ಪ್ಲೇಗೆ ಸಮಾನವಾಗಿದೆ. ಗೇರ್ ಸೆಲೆಕ್ಟರ್ ಅನ್ನು ನಯವಾದ ನೋಟದೊಂದಿಗೆ ಮರುವಿನ್ಯಾಸಗೊಳಿಸಲಾಗಿದೆ. ಯುಎಸ್‌ಬಿ-ಸಿ ಪೋರ್ಟ್, ವೈರ್ ಲೆಸ್ ಚಾರ್ಜರ್, ಸ್ಲೈಡಿಂಗ್ ಸ್ಟೋರೇಜ್ ಬಾಕ್ಸ್ ಮತ್ತು ನವೀಕರಿಸಿದ ಕಪ್ ಹೋಲ್ಡರ್‌ಗಳಂತಹ ಆಧುನಿಕ ಸ್ಪರ್ಶಗಳೊಂದಿಗೆ ವಿಶಾಲವಾದ ಸೆಂಟರ್ ಕನ್ಸೋಲ್ ನೀಡಲಾಗಿದೆ.
ಟೊಯೊಟಾ ಸ್ಮಾರ್ಟ್ ಕನೆಕ್ಟ್ ಸಿಸ್ಟಮ್ ಅಡಿಯಲ್ಲಿ 10.5-ಇಂಚಿನ ಇನ್ಫೋಟೈನ್ ಮೆಂಟ್ ಟಚ್ ಸ್ಕ್ರೀನ್ ನೊಂದಿಗೆ 12.3-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಟೊಯೊಟಾ ಹಿಂಭಾಗದ ವೆಂಟಿಲೇಟರ್ ಪ್ರದೇಶದ ಬಳಿ ಹೆಚ್ಚಿನ ವಾಯಿಸ್ ಇನ್ಸುಲೇಷನ್ ಮತ್ತು ಟಾಪ್ ವೇರಿಯೆಂಟ್‌ಗಳಲ್ಲಿ 3-ಲೇಯರ್ ಇನ್‌ಡ್ಯಾಶ್ ಸೈಲೆನ್ಸರ್ ಅನ್ನು ಒಳಗೊಂಡಿದೆ.

ಯುರೋಪಿಯನ್ ಕರೊಲಾ ಕ್ರಾಸ್ ಅನ್ನು ಹೈಬ್ರಿಡ್ ಪವರ್‌ಟ್ರೇನ್ ಗಳೊಂದಿಗೆ ಪ್ರತ್ಯೇಕವಾಗಿ ನೀಡಲಾಗುತ್ತದೆ. ಇದು ಎರಡು ಎಂಜಿನ್ ಆಯ್ಕೆಗಳನ್ನು ನೀಡಲಿದ್ದು, 1.8-ಲೀಟರ್ ಎಂಜಿನ್ (ಈಗ ಹೈಬ್ರಿಡ್ 140 ಎಂದು ಕರೆಯಲಾಗುತ್ತದೆ) ಹಾಗೂ 2.0-ಲೀಟರ್ ಹೈಬ್ರಿಡ್ 200 ನಡುವೆ ಆಯ್ಕೆ ಮಾಡಬಹುದು. ಇದರಲ್ಲಿ ಎರಡನೆಯದು ಟೊಯೊಟಾದ ಇಂಟಲಿಜೆಂಟ್ ಎಡಬ್ಲ್ಯುಡಿ-ಐ ಸಿಸ್ಟಮ್‌ನೊಂದಿಗೆ ಲಭ್ಯವಿದೆ.
ಯುರೋಪಿಯನ್ ಖರೀದಿದಾರರು ಕರೊಲಾ ಕ್ರಾಸ್‌ನ ಜಿಆರ್ ಸ್ಪೋರ್ಟ್ ಎಡಿಷನ್ ಕೂಡ ಪಡೆಯಬಹುದು. ಇದು ಹೆಚ್ಚು ಆಕ್ರಮಣಕಾರಿ ಫ್ರಂಟ್ ಎಂಡ್ ಅನ್ನು ಹೊಂದಿದ್ದು, ದೊಡ್ಡ ಅಷ್ಟಭುಜಾಕೃತಿಯ (ಆಕ್ಟಾಗೊನಲ್) ಲೋವರ್ ಗ್ರಿಲ್ ಮತ್ತು ಸ್ಕ್ವೇರ್ಡ್-ಆಫ್ ಹೊರ ಇಂಟೇಕ್‌ಗಳನ್ನು ಹೊಂದಿದೆ. 10 ಎಂಎಂ ಕಡಿಮೆ ಎತ್ತರದಲ್ಲಿ, ವಿಶಿಷ್ಟವಾದ 19-ಇಂಚಿನ ವೈ-ಸ್ಪೋಕ್ ಅಲಾಯ್ ವೀಲ್‌ಗಳನ್ನು ಹೊಂದಿದೆ.

ಒಳಭಾಗದಲ್ಲಿ, ಜಿಆರ್ ಸ್ಪೋರ್ಟ್ ರೆಡ್ ಸ್ಟಿಚ್, ಜಿಆರ್-ಲೋಗೊದ ಹೆಡ್‌ರೆಸ್ಟ್‌ಗಳು, ಪ್ಯಾಡಲ್ ಶಿಫ್ಟರ್‌ಗಳು ಮತ್ತು ವಿಶೇಷ ಸ್ಪೋರ್ಟ್ ಮೋಡ್‌ನೊಂದಿಗೆ ಸ್ಪೋರ್ಟಿ ಬ್ರಿನ್ ನೋಬ್ ಸ್ಯೂಡ್-ಎಫೆಕ್ಟ್ ಅಪ್ಹೋಲ್‌ಸ್ಟರಿಯನ್ನು ಪಡೆದಿದೆ. ಒಟ್ಟಾರೆ ಸಾಮಾನ್ಯ ಮಾಡಲ್‌ಗಳಿಗಿಂತ ಹೆಚ್ಚು ಸ್ಪೋರ್ಟಿಯಾಗಿರಲಿದ್ದು, ಪರ್ಫಾಮೆನ್ಸ್‌ನಲ್ಲೂ ಹೆಚ್ಚು ಸ್ಪೋರ್ಟಿಯಾಗಿರಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








