Toyota: ಹೊಸ ಟೊಯೋಟಾ ಡೀಸೆಲ್ ಹೈಬ್ರಿಡ್ ಎಸ್‌ಯುವಿ ಬಿಡುಗಡೆಗೆ ಸರ್ವಸಿದ್ಧ: ವಿಶೇಷತೆಗಳೇನು?
ಭಾರತದಲ್ಲಿ ಟೊಯೋಟಾ (Toyota) ದೈತ್ಯ ಎಸ್‌ಯುವಿ ಎಂದೇ ಜನಪ್ರಿಯವಾಗಿರುವ ಫಾರ್ಚುನರ್, ತನಗೆಂದೆ ಪ್ರತ್ಯೇಕ ಅಭಿಮಾನಿಗಳನ್ನು ಗಳಿಸಿದೆ. ಇದರ ರಸ್ತೆ ಉಪಸ್ಥಿತಿ, ದೈತ್ಯ ಆಕಾರ, ಪರ್ಫಾಮೆನ್ಸ್, ಫೀಚರ್ಸ್ ಹೀಗೆ ಎಲ್ಲಾ ವಿಷಯಗಳಲ್ಲಿಯೂ ಟಾಪ್ ಕಾರು ಎನ್ನಿಸಿಕೊಂಡಿದೆ. ಟೊಯೊಟಾ ಫಾರ್ಚೂನರ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಿನಿಂದ, ಈ ಮಾದರಿಯು ತನ್ನ ವಿಭಾಗದಲ್ಲಿ ಕ್ರಾಂತಿಯನ್ನು ಸೃಷ್ಟಿಸಿದೆ. ತನ್ನ ಗ್ರಾಹಕರಿಂದ ಹೆಚ್ಚಿನ ಪ್ರತಿಕ್ರಿಯೆಯನ್ನು ನೋಡಿದ ನಂತರ, ಕಂಪನಿಯು ಈಗ ಮೈಲ್ಡ್ ಹೈಬ್ರಿಡ್ ಡೀಸೆಲ್ ಸಿಸ್ಟಮ್‌ನೊಂದಿಗೆ ದೈತ್ಯ ಎಸ್ ಯುವಿಯನ್ನು ಪರಿಚಯಿಸಲು ಸಜ್ಜಾಗುತ್ತಿರುವ ಮಾಹಿತಿ ಹೊರಬಿದ್ದಿದೆ.
ಈ ಹೊಸ ಮೈಲ್ಡ್ ಹೈಬ್ರಿಡ್ ಡೀಸೆಲ್ ಸಿಸ್ಟಮ್‌ನೊಂದಿಗೆ ಟೊಯೋಟಾ ಫಾರ್ಚುನರ್ ಉತ್ಪಾದನೆಯನ್ನು ಕಂಪನಿಯು ಈಗಾಗಲೇ ಪ್ರಾರಂಭಿಸಿದೆ ಎಂದು ವರದಿಯಾಗಿದೆ. ವಾಹನವು ಮುಂದಿನ ತಿಂಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದರೆ ಕಂಪನಿಯು ಇನ್ನೂ ಯಾವುದೇ ಅಧಿಕೃತ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಶೀಘ್ರದಲ್ಲೆ ಟೊಯೋಟಾ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆ ಇದೆ.

ಹೊಸ ಟೊಯೋಟಾ ಮೈಲ್ಡ್ ಹೈಬ್ರಿಡ್ ಡೀಸೆಲ್ ಆವೃತ್ತಿಯ ಡಿಸೈನ್‌ನಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ ಎನ್ನಲಾಗಿದೆ. ಇದರ ರಸ್ತೆ ಉಪಸ್ಥಿತಿಯ ವಿಷಯಕ್ಕೆ ಬಂದಾಗ, ಎಲ್ಲವೂ ಹಾಗೆಯೇ ಇರಲಿದೆ. ಎಸ್‌ಯುವಿ ಪ್ರಸ್ತುತ ಆವೃತ್ತಿಯಂತೆಯೇ ಅದೇ ಡಿಸೈನ್ ಹೊಂದಿರುತ್ತದೆ. ಇದು ಅದೇ ಹೆಡ್ ಲೈಟ್ ಸೆಟಪ್, ಒಂದೇ ರೀತಿಯ ಫ್ರಂಟ್ ಗ್ರಿಲ್ ಮತ್ತು ಬೋಲ್ಡ್ ಸ್ಟ್ಯಾಂಡ್ ನೊಂದಿಗೆ ಬೃಹತ್ ಬಾನೆಟ್ ಅನ್ನು ಹಾಗೆಯೇ ಉಳಿಸಿಕೊಳ್ಳಲಿದೆ.
ಮುಂಬರುವ ಟೊಯೊಟಾ ಫಾರ್ಚೂನರ್ ಡೀಸೆಲ್ ಹೈಬ್ರಿಡ್ 48 - ವಿ ಮೈಲ್ಡ್ ಹೈಬ್ರಿಡ್ ಎಂಜಿನ್ ಹೊಂದಿರಲಿದೆ. ಇದು 2.8-ಲೀಟರ್ 4 ಸಿಲಿಂಡರ್ ಜಿಡಿ ಸಿರೀಸ್ ಎಂಜಿನ್ ಅನ್ನು ಒಳಗೊಂಡಿರಲಿದೆ. ಬ್ರ್ಯಾಂಡ್ ಆಲ್ಟರ್ನೇಟರ್ ಅನ್ನು ಬೆಲ್ಟ್-ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್‌ನೊಂದಿಗೆ ಬದಲಾಯಿಸಬಹುದು ಎಂದು ವರದಿಗಳು ಸೂಚಿಸಿವೆ.

ಮೈಲ್ಡ್ - ಹೈಬ್ರಿಡ್ ಸೆಟಪ್ ನೊಂದಿಗೆ ಬಾನೆಟ್ ಅಡಿಯಲ್ಲಿ ಪ್ರಭಾವಶಾಲಿ ನವೀಕರಣಗಳನ್ನು ಹೊಂದಿದ್ದರೂ, ಎಸ್‌ಯುವಿ ತನ್ನ ಆಫ್ - ರೋಡ್ ಸಾಮರ್ಥ್ಯಗಳೊಂದಿಗೆ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಮುಂದುವರಿಸಲಿದೆ. ಅದೇ ರಗಡ್ ಪರ್ಫಾಮೆನ್ಸ್ ಹಾಗೂ ರೋಡ್ ಪ್ರೆಸೆನ್ಸ್‌ನೊಂದಿಗೆ 700 ಎಂಎಂ ಉತ್ತಮ ವಾಟರ್ ವಾಡಿಂಗ್ ಸಾಮರ್ಥ್ಯವನ್ನು ಹೊಂದಿದೆ.
ಇನ್ನು ಇದರ ಹೈಬ್ರಿಡ್ ಸಿಸ್ಟಮ್ ಬಗ್ಗೆ ಹೇಳುವುದಾದ್ರೆ ಮೇಲೆ ತಿಳಿಸಿದ ಅಂಶವು 48 ವಿ ಬ್ಯಾಟರಿ ಪ್ಯಾಕ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಈಗ ಮಾರಾಟದಲ್ಲಿರುವ ಟೊಯೋಟಾ ಫಾರ್ಚುನರ್ ಆವೃತ್ತಿಗೆ ಹೋಲಿಸಿದರೆ ಒಟ್ಟಾರೆ ಇಂಧನ ದಕ್ಷತೆಯನ್ನು (ಮೈಲೇಜ್) ಶೇಕಡಾ 10 ರಷ್ಟು ಹೆಚ್ಚಿಸುತ್ತದೆ. ಹಾಗೆಯೇ ಚಾಲಕರಿಗೆ ಉತ್ತಮ ಚಾಲನಾ ಅನುಭವ ನೀಡುತ್ತದೆ ಎನ್ನಲಾಗಿದೆ.

ನಮ್ಮ ಅಭಿಪ್ರಾಯ: ಟೊಯೊಟಾ ಫಾರ್ಚೂನರ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಿನಿಂದ ಭಾರತದಲ್ಲಿ ಒಂದು ವರ್ಗದ ಜನರಿಗೆ ಹೇಳಿಮಾಡಿಸಿದ ರಗಡ್ ಎಸ್‌ಯುವಿಯಾಗಿದೆ. ಇದೀಗ ಮೈಲ್ಡ್ ಹೈಬ್ರಿಡ್ ಡೀಸೆಲ್ ವ್ಯವಸ್ಥೆಯೊಂದಿಗೆ ದೈತ್ಯ ಎಸ್‌ಯುವಿಯನ್ನು ಪರಿಚಯಿಸಿದರೆ ಮಾರಾಟ ಹೆಚ್ಚಾಗುವ ನಿರೀಕ್ಷೆಯಲ್ಲಿ ಕಂಪನಿಯಿದೆ. ಈ ಹೊಸ ಮುಂಬರಲಿರುವ ಮೈಲ್ಡ್ ಹೈಬ್ರಿಡ್ ಡೀಸೆಲ್ ಎಸ್‌ಯುವಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








