ನಿನ್ನೆಯಷ್ಟೆ ಅನಾವರಣಗೊಂಡ 2026 ಕಿಯಾ ಸೆಲ್ಟೋಸ್: ಕಂಪನಿ ಕೂಡ ಹೇಳದ ಮಾಹಿತಿ ಇಲ್ಲಿದೆ!

ಪ್ರಮುಖ ಕೊರಿಯಾ ಕಾರು ತಯಾರಕರಾದ 'ಕಿಯಾ ಮೋಟಾರ್ಸ್', ನಿನ್ನೆಯಷ್ಟೆ ತನ್ನ ಹೊಸ ಪೀಳಿಗೆಯ ಕಿಯಾ ಸೆಲ್ಟೋಸ್ ಅನ್ನು ಅನಾವರಣಗೊಳಸಿದೆ. ದೇಶಾದ್ಯಂತ ಬುಕಿಂಗ್‌ಗಳು ಈಗಾಗಲೇ ಪ್ರಾರಂಭವಾಗಿವೆ, ಗ್ರಾಹಕರು ತಮ್ಮ ನೆಚ್ಚಿನ SUV ಅನ್ನು ರೂ. 25,000 ಆರಂಭಿಕ ಮೊತ್ತದೊಂದಿಗೆ ಬುಕ್ ಮಾಡಬಹುದು. ಕಿಯಾ ಇಂಡಿಯಾ 2026 ರ ಜನವರಿ 2 ರಂದು ಹೊಸ ಸೆಲ್ಟೋಸ್‌ನ ಬೆಲೆಗಳನ್ನು ಅಧಿಕೃತವಾಗಿ ಘೋಷಿಸುವುದಾಗಿ ತಿಳಿಸಿದೆ. ಈ ಕಾರಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಪೂರ್ಣ ಎಲ್ಲಾ ಮಾಹಿತಿ ಇಲ್ಲಿದೆ.

ದೊಡ್ಡ ಕಾರು: ಕಾರಿನಲ್ಲಿ ಹೆಚ್ಚಿನ ಸ್ಥಳ, ಸೌಕರ್ಯ ವರ್ಧಿತ ಆಯಾಮಗಳೊಂದಿಗೆ ಹೊಸ ಸೆಲ್ಟೋಸ್ ಈಗ 4,460 ಮಿ.ಮೀ ಉದ್ದ ಮತ್ತು 1,830 ಮಿ.ಮೀ ಅಗಲವನ್ನು ಹೊಂದಿದೆ. 2,690 ಎಂಎಂ ವೀಲ್ ‌ಬೇಸ್‌ನೊಂದಿಗೆ ದೊಡ್ಡ ಕ್ಯಾಬಿನ್ ಸ್ಥಳವನ್ನು ಪಡೆದುಕೊಂಡಿದೆ. ಮಿಡ್‌ ಸೈಜ್ ಎಸ್‌ಯುವಿ ವಿಭಾಗದಲ್ಲಿನ ಪ್ರತಿಸ್ಪರ್ಧಿಗಳಿಗಿಂತ ಭಿನ್ನವಾಗಿ, ಡಾರ್ಕ್ ಗನ್ ‌ಮೆಟಲ್ ಅಕ್ಸೆಂಟ್‌ಗಳೊಂದಿಗೆ ಬ್ಲಾಕ್ ಹೈ ಗ್ಲೋಸಿ ಗ್ರಿಲ್‌ನೊಂದಿಗೆ ಎದ್ದು ಕಾಣುತ್ತದೆ.

2026-kia-seltos-launch-date-features-design-details

ಇದರ ಹೊಸ ಡಿಜಿಟಲ್ ಟೈಗರ್ ಫೇಸ್, ಡೈನಾಮಿಕ್ ವೆಲ್ಕಮ್ ಫಂಕ್ಷನ್‌ನೊಂದಿಗೆ ಐಸ್ ಕ್ಯೂಬ್ LED ಪ್ರೊಜೆಕ್ಷನ್ ಹೆಡ್‌ಲ್ಯಾಂಪ್‌ಗಳು, ಇಂಟಿಗ್ರೇಟೆಡ್ ಟರ್ನ್ ಸಿಗ್ನಲ್‌ನೊಂದಿಗೆ ಸ್ಟಾರ್ ಮ್ಯಾಪ್ LED DRL ಗಳು, LED ಫಾಗ್ ಲ್ಯಾಂಪ್‌ಗಳು ಮತ್ತು ಸ್ಟಾರ್ ಮ್ಯಾಪ್ LED ಕನೆಕ್ಟೆಡ್ ಟೈಲ್ ಲ್ಯಾಂಪ್‌ಗಳು ಕಾರನ್ನು ಹೆಚ್ಚು ಸ್ಪೋರ್ಟಿ ಹಾಗೂ ಪ್ರೀಮಿಯಂ ಆಗಿ ಕಾಣುವಂತೆ ಮಾಡಿವೆ.

ಪ್ರೀಮಿಯಂ ಇಂಟೀರಿಯರ್: ಸ್ಮೋಕಿ ಬ್ಲ್ಯಾಕ್ & ವೈಟ್ ಡ್ಯುಯಲ್ - ಟೋನ್ ಇಂಟೀರಿಯರ್ ಮತ್ತು ಲೆದರೆಟ್ ಸೀಟ್‌ಗಳೊಂದಿಗೆ ವಿಶಾಲವಾದ ಕ್ಯಾಬಿನ್, ವಿಸ್ತಾರವಾದ 75.18 ಸೆಂ.ಮೀ (30 - ಇಂಚಿನ) ಟ್ರಿನಿಟಿ ಪನೋರಮಿಕ್ ಡಿಸ್ಪ್ಲೇ ಪ್ಯಾನೆಲ್ ಹೊಂದಿದೆ. ಇದು ಡಬಲ್ ಡಿ - ಕಟ್ ಡ್ಯುಯಲ್ ಟೋನ್ ಲೆದರೆಟ್ - ಸ್ಟೀರಿಂಗ್ ವೀಲ್‌ನೊಂದಿಗೆ ಕ್ಯಾಬಿನ್ ಇನ್ನಷ್ಟು ಪ್ರೀಮಿಯಂ ಆಗಿ ಕಾಣುತ್ತದೆ.

2026-kia-seltos-launch-date-features-design-details

10-ವೇ ಪವರ್ಡ್ ಡ್ರೈವರ್ ಸೀಟ್, ORVM ಸೆಟ್ಟಿಂಗ್‌ಗಳೊಂದಿಗೆ ಸಿಂಕ್ ಮಾಡಲಾದ ಇಂಟಿಗ್ರೇಟೆಡ್ ಮೆಮೊರಿ ಡ್ರೈವರ್ ಸೀಟ್ ಮತ್ತು ಫ್ರಂಟ್ ವೆಂಟಿಲೇಟೆಡ್ ಸೀಟ್‌ಗಳನ್ನು ನೀಡಲಾಗಿದೆ. ಇವಿಷ್ಟೆ ಅಲ್ಲದೆ 8 ಸ್ಪೀಕರ್‌ಗಳೊಂದಿಗೆ ಬೋಸ್ ಪ್ರೀಮಿಯಂ ಸೌಂಡ್ ಸಿಸ್ಟಮ್, 64 - ಬಣ್ಣದ ಆಂಬಿಯೆಂಟ್ ಮೂಡ್ ಲೈಟಿಂಗ್ ಮತ್ತು ಸ್ಮಾರ್ಟ್‌ಫೋನ್ ವೈರ್‌ಲೆಸ್ ಚಾರ್ಜರ್ ಒದಗಿಸಲಾಗಿದೆ.

ಹಿಂಭಾಗದ ಪ್ರಯಾಣಿಕರಿಗಾಗಿ 60:40 ಸ್ಪ್ಲಿಟ್ ಸೀಟ್ ರಿಕ್ಲೈನ್ ಮತ್ತು ಟೈಪ್-ಸಿ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌, ಡ್ಯುಯಲ್ ಪೇನ್ ಪನೋರಮಿಕ್ ಸನ್‌ರೂಫ್ ವಿಶಾಲವಾದ ಕ್ಯಾಬಿನ್‌ಗೆ ನೈಸರ್ಗಿಕ ಬೆಳಕನ್ನು ತರುತ್ತದೆ. ವಿಭಾಗದಲ್ಲಿಯೇ ಮೊದಲನೆಯದಾಗಿ ಸ್ಮಾರ್ಟ್ ಕೀ ಪ್ರಾಕ್ಸಿಮಿಟಿ ಅನ್‌ಲಾಕ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಕಿಯಾ ಕನೆಕ್ಟ್ 2.0 ಸೂಟ್ ನೀಡಾಗಿದೆ.

2026-kia-seltos-launch-date-features-design-details

ಓವರ್- ದಿ -ಏರ್ (OTA) ಸಾಫ್ಟ್‌ವೇರ್, ಕಿಯಾ ಕನೆಕ್ಟ್ ಡಯಾಗ್ನೋಸಿಸ್ ಮತ್ತು ಸಂಪರ್ಕಿತ ಕಾರ್ಯಗಳ ಸೂಟ್ ಅನುಕೂಲತೆ, ಸುರಕ್ಷತೆ ಮತ್ತು ಕಸ್ಟಮೈಸೇಷನ್ ಅನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸಾಲು ಸಾಲು ಫೀಚರ್ಸ್‌ನೊಂದಿಗೆ ಇದುವರೆಗಿನ ಅತ್ಯಂತ ಮುಂದುವರಿದ ಮತ್ತು ಭವಿಷ್ಯಕ್ಕೆ ಸಿದ್ಧವಾದ ಸೆಲ್ಟೋಸ್ ಆಗಿ ಹೊರಹೊಮ್ಮಿದೆ.

ಗರಿಷ್ಟ ಸುರಕ್ಷತೆ: ಕಿಯಾ ಕಂಪನಿಯ ಜಾಗತಿಕ K3 ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಹೊಸ ಕಿಯಾ ಸೆಲ್ಟೋಸ್, 6 - ಏರ್‌ಬ್ಯಾಗ್‌ಗಳು, ಆಂಟಿ - ಲಾಕ್ ಬ್ರೇಕ್ ಸಿಸ್ಟಮ್ (ABS), ಹಿಲ್ - ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ರೋಲ್‌ಓವರ್ ಸೆನ್ಸರ್ ಮತ್ತು ರಿಯರ್ ಆಕ್ಯುಪೆಂಟ್ ಅಲರ್ಟ್ ಸೇರಿದಂತೆ ದೃಢವಾದ 24 ಸ್ಟ್ಯಾಂಡರ್ಡ್ ಸುರಕ್ಷತಾ ಪ್ಯಾಕ್ ಅನ್ನು ಒಳಗೊಂಡಿದೆ.

ಫಾರ್ವರ್ಡ್ ಕೊಲಿಷನ್ ವಾರ್ನಿಂಗ್, ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ಸ್ಟಾಪ್ & ಗೋ ಜೊತೆಗೆ ಸ್ಮಾರ್ಟ್ ಕ್ರೂಸ್ ಕಂಟ್ರೋಲ್ ಸೇರಿದಂತೆ 21 ಸ್ವಾಯತ್ತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ADAS ಲೆವೆಲ್ - 2 ಸೂಟ್ ನೀಡಲಾಗಿದೆ. ಇದು ಬ್ಲೈಂಡ್ ವ್ಯೂ ಮಾನಿಟರ್, 360° ಸರೌಂಡ್ ಕ್ಯಾಮೆರಾ ಮತ್ತು ಸೈಡ್ ಪಾರ್ಕಿಂಗ್ ಸೆನ್ಸರ್‌ಗಳಿಂದ ಪೂರಕವಾಗಿದೆ.

ಹೊಸ ಕಿಯಾ ಸೆಲ್ಟೋಸ್‌ನಲ್ಲಿ ಸ್ಮಾರ್ಟ್‌ಸ್ಟ್ರೀಮ್ G1.5 ಪೆಟ್ರೋಲ್ (115PS, 144Nm) ಎಂಜಿನ್, ಸ್ಮಾರ್ಟ್‌ಸ್ಟ್ರೀಮ್ G1.5 T-GDI ಪೆಟ್ರೋಲ್ (160PS, 253Nm) ಎಂಜಿನ್ ಅಥವಾ 1.5l CRDi VGT ಡೀಸೆಲ್ (116PS, 250Nm) ಎಂಜಿನ್‌ಗಳು ಆಯ್ಕೆಯಲ್ಲಿ ಸಿಗಲಿವೆ. ಚಾಲನಾ ನಮ್ಯತೆಗಾಗಿ 6 - ಸ್ಪೀಡ್ MT, 6 - ಸ್ಪೀಡ್ iMT, IVT, 7DCT ಮತ್ತು 6AT ಗೇರ್‌ಬಾಕ್ಸ್ ಆಯ್ಕೆಗಳು ಸೇರಿವೆ.

ಹೊಸ ಕಿಯಾ ಸೆಲ್ಟೋಸ್ ಲೈನ್‌ಅಪ್ ನಾಲ್ಕು ಸ್ಟ್ಯಾಂಡರ್ಡ್ ಟ್ರಿಮ್‌ಗಳಾದ - HTE, HTK, HTX, ಮತ್ತು GTX - ಜೊತೆಗೆ HTE(O), HTK(O), HTX(A), GTX(A) ಎಂಬ ನಾಲ್ಕು ಆಯ್ಕೆಯ ವೇರಿಯೆಂಟ್‌ಗಳನ್ನು ಹೊಂದಿದೆ. ಹೆಚ್ಚುವರಿ ವ್ಯತ್ಯಾಸಕ್ಕಾಗಿ, X - ಲೈನ್ ಸ್ಟೈಲಿಂಗ್ ಪ್ಯಾಕ್ ಅನ್ನು GTX & GTX(A) ನಲ್ಲಿ ಪ್ರತ್ಯೇಕವಾಗಿ ನೀಡಲಾಗುತ್ತದೆ.

More from DriveSpark

Article Published On: Thursday, December 11, 2025, 12:19 [IST]
English summary
2026 kia seltos launch date features design details
Read more on kia motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+