2026 ಕಿಯಾ ಸೆಲ್ಟೋಸ್ VS ಹುಂಡೈ ಕ್ರೆಟಾ: ವಿನ್ಯಾಸ, ವೈಶಿಷ್ಟ್ಯಗಳಲ್ಲಿ ಯಾವುದು ಬೆಸ್ಟ್?

2026 ಕಿಯಾ ಸೆಲ್ಟೋಸ್ (Kia Seltos 2026) ದೊಡ್ಡ ಘಾತ್ರ ಮತ್ತು ಸಂಸ್ಕರಿಸಿದ ವೈಶಿಷ್ಟ್ಯಗಳನ್ನು ಪಡೆದುಕೊಂಡು ಬಿಡುಗಡೆಯಾಗಲು ಸಜ್ಜಾಗಿದೆ. ಮೊನ್ನೆಯಷ್ಟೆ ಹೊಸ ಪೀಳಿಗೆಯ 2026 ಕಿಯಾ ಸೆಲ್ಟೋಸ್ ಅನ್ನು ಅನಾವರಣಗೊಳಿಸಲಾಗಿದೆ. ಇದು ಭಾರತದ ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಪ್ರಸ್ತುತ ಹುಂಡೈ ಕ್ರೆಟಾ (hyundai Creta) ವಿರುದ್ಧ ಬಲವಾಗಿ ಪೈಪೋಟಿ ನೀಡಲಿದೆ. ಎರಡೂ ಒಂದೇ ರೀತಿಯ ಪವರ್‌ಟ್ರೇನ್‌ಗಳನ್ನು ಹೊಂದಿವೆ, ಆದರೆ ಸುರಕ್ಷತಾ ತಂತ್ರಜ್ಞಾನ ಮತ್ತು ಪ್ರೀಮಿಯಂ ಫೀಚರ್ಸ್ ವಿಷಯದಲ್ಲಿ ಭಿನ್ನವಾಗಿವೆ.

2026 ಕಿಯಾ ಸೆಲ್ಟೋಸ್ ವಿನ್ಯಾಸ ಮತ್ತು ವೈಶಿಷ್ಟ್ಯಗಳ ವಿಷಯದಲ್ಲಿ ಬಿಡುಗಡೆಯ ನಂತರ, ಹುಂಡೈ ಕ್ರೆಟಾ ಮತ್ತು ಟಾಟಾ ಸಿಯೆರಾ ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಹುಂಡೈ ಕ್ರೆಟಾ ದೇಶದಲ್ಲಿ ಸೆಗ್ಮೆಂಟ್ ಲೀಡರ್ ಆಗಿ ಉಳಿದಿದೆ. ವೈಶಿಷ್ಟ್ಯಗಳು, ಎಂಜಿನ್ ಸ್ಪೆಕ್ಸ್ ಮತ್ತು ಸುರಕ್ಷತಾ ಸಾಧನಗಳ ವಿಷಯದಲ್ಲಿ ಸೆಲ್ಟೋಸ್ ಮತ್ತು ಹುಂಡೈ ಕ್ರೆಟಾವನ್ನು ಹೋಲಿಕೆ ಮಾಡೋಣ.

2026-kia-seltos-vs-hyundai-creta-which-is-better-in-design-features

ಸುರಕ್ಷತೆ: ಈ ಎರಡೂ SUV ಗಳು 6 ಏರ್‌ಬ್ಯಾಗ್‌ಗಳು, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್(ESC), ಇದನ್ನು ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್(VSC) ಎಂದೂ ಕರೆಯುತ್ತಾರೆ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ ಸೇರಿದಂತೆ ಕೆಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಕಿಯಾ ಸೆಲ್ಟೋಸ್ ಒಟ್ಟು 21 ADAS ಕಾರ್ಯಗಳು ಹಾಗೂ ಹುಂಡೈ ಕ್ರೆಟಾ 19 ಕಾರ್ಯಗಳನ್ನು ನೀಡುತ್ತದೆ.

ಫೀಚರ್ಸ್: 2026 ಕಿಯಾ ಸೆಲ್ಟೋಸ್ ಟ್ರಿನಿಟಿ ಪನೋರಮಿಕ್ ಡಿಸ್ಪ್ಲೇ ಸೆಟಪ್‌ನೊಂದಿಗೆ ಬರುತ್ತದೆ, ಇದರಲ್ಲಿ ಪ್ರತಿಯೊಂದೂ 12.3-ಇಂಚಿನ ಗಾತ್ರವನ್ನು ಹೊಂದಿವೆ. ಇದರಲ್ಲಿ 5.0-ಇಂಚಿನ ಹೆಡ್ಸ್-ಅಪ್ ಡಿಸ್ಪ್ಲೇಹುಂಡೈ ಕ್ರೆಟಾ ಸಹ ಒಳಗೊಂಡಿದೆ. ಫ್ಲಶ್-ಸ್ಟೈಲ್ಡ್ ಡೋರ್ ಹ್ಯಾಂಡಲ್‌ಗಳು, ಹೊಸ ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಅನ್ನು ಪಡೆದುಕೊಂಡಿದೆ. ಇತ್ತ ಹುಂಡೈ ಕ್ರೆಟಾ 10.25 ಇಂಚಿನ ಡ್ಯುಯಲ್-ಡಿಸ್ಪ್ಲೇ ಸೆಟಪ್, ಸ್ಟ್ಯಾಂಡರ್ಡ್ ಡೋರ್ ಹ್ಯಾಂಡಲ್‌ಗಳು, ನಾಲ್ಕು-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಪಡೆದಿದೆ.

2026-kia-seltos-vs-hyundai-creta-which-is-better-in-design-features

ಎಂಜಿನ್: 2026 ಕಿಯಾ ಸೆಲ್ಟೋಸ್ 1.5-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಜೊತೆಗೆ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಿವೆ. ಇದು ಮ್ಯಾನುವಲ್, iMT, CVT ಮತ್ತು ಟಾರ್ಕ್-ಕನ್ವರ್ಟರ್ ಆಟೋಮ್ಯಾಟಿಕ್ ಆಯ್ಕೆಯನ್ನು ಸಹ ನೀಡುತ್ತದೆ. ಕುತೂಹಲಕಾರಿಯಾಗಿ, ಹುಂಡೈ ಕ್ರೆಟಾ ಕೂಡ ಅದೇ ರೀತಿಯ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. DCT, iVT ಅಥವಾ ಮ್ಯಾನುವಲ್ ಟ್ರಾನ್ಸ್‌ಮಿಷನ್‌ ಆಯ್ಕೆಯನ್ನು ನೀಡುತ್ತದೆ.

ಆಯಾಮಗಳು: 2026 ಕಿಯಾ ಸೆಲ್ಟೋಸ್ ಅನ್ನು ಅದರ ಆಯಾಮಗಳ ವಿಷಯದಲ್ಲಿಯೂ ನವೀಕರಿಸಲಾಗಿದೆ. ಈ ಬಾರಿ ಹೊಸ ಕಿಯಾ ಸೆಲ್ಟೋಸ್ 4460 ಮಿ.ಮೀ ಉದ್ದ, 1830 ಮಿ.ಮೀ ಅಗಲ, 1635 ಮಿ.ಮೀ ಎತ್ತರ ಮತ್ತು ಇದು 2690 ಮಿ.ಮೀ ವೀಲ್‌ಬೇಸ್ ಅನ್ನು ಹೊಂದಿದೆ.

2026-kia-seltos-vs-hyundai-creta-which-is-better-in-design-features

ಹುಂಡೈ ಕ್ರೆಟಾ ವಿಷಯಕ್ಕೆ ಬಂದರೆ 4330 ಮಿ.ಮೀ ಉದ್ದ, 1790 ಮಿ.ಮೀ ಅಗಲ ಮತ್ತು 1635 ಮಿ.ಮೀ ಎತ್ತರವಾಗಿದೆ. ಹಾಗೆಯೇ 2610 ಮಿ.ಮೀ ವೀಲ್‌ಬೇಸ್ ಅನ್ನು ಹೊಂದಿದ್ದು ಗ್ರೌಂಡ್ ಕ್ಲಿಯರೆನ್ಸ್ 190 ಮಿ.ಮೀ ನಲ್ಲಿದೆ. ಅಂದರೆ 2026 ಕಿಯಾ ಸೆಲ್ಟೋಸ್ ಹುಂಡೈ ಕ್ರೆಟಾಗಿಂತ 130 ಮಿ.ಮೀ ಉದ್ದ, 40 ಮಿ.ಮೀ ಅಗಲ ಮತ್ತು 80 ಮಿ.ಮೀ ಹೆಚ್ಚಿನ ವೀಲ್‌ಬೇಸ್ ಹೊಂದಿದೆ.

ಹೊಸ ಪೀಳಿಗೆಯ ಕಿಯಾ ಸೆಲ್ಟೋಸ್ ಡಿಸೆಂಬರ್ 11 ರಿಂದ ದೇಶಾದ್ಯಂತ ಬುಕಿಂಗ್‌ಗಳು ಪ್ರಾರಂಭವಾಗಿದ್ದು, ಗ್ರಾಹಕರು ರೂ. 25,000 ಆರಂಭಿಕ ಮೊತ್ತದೊಂದಿಗೆ ಬುಕ್ ಮಾಡಬಹುದು. ಕಿಯಾ ಇಂಡಿಯಾ 2026 ರ ಜನವರಿ 02 ರಂದು ಹೊಸ ಸೆಲ್ಟೋಸ್‌ನ ಬೆಲೆಗಳನ್ನು ಘೋಷಿಸುವುದಾಗಿ ಕಿಯಾ ತಿಳಿಸಿದೆ. ಈ ಎರಡೂ ಕಾರುಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

More from DriveSpark

Article Published On: Friday, December 12, 2025, 13:01 [IST]
English summary
2026 kia seltos vs hyundai creta which is better in design features
Read more on kia motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+