ಪರೀಕ್ಷೆ ವೇಳೆ ಕಾಣಿಸಿಕೊಂಡ ಮಾರುತಿ ಬ್ರೆಝಾ ಫೇಸ್‌ಲಿಫ್ಟ್: ಬಿಡುಗಡೆಗೆ ಜೋರು ತಯಾರಿ
ಮಾರುತಿ ಸುಜುಕಿ ತನ್ನ ಜನಪ್ರಿಯ ಎಸ್‌ಯುವಿ ಬ್ರೆಝಾದ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದು, ಶೀಘ್ರದಲ್ಲೆ ಬಿಡುಗಡೆ ಮಾಡಲು ಜೋರು ಪರೀಕ್ಷೆ ನಡೆಸುತ್ತಿದೆ. 2026 ರಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ ಅನ್ನು ಈಗಾಗಲೇ ಹಲವು ಬಾರಿ ರಸ್ತೆಯಲ್ಲಿ ಪರೀಕ್ಷಿಸುತ್ತಿರುವುದನ್ನು (ರೋಡ್ ಟೆಸ್ಟಿಂಗ್) ಗುರುತಿಸಲಾಗಿದೆ, ಸಿಎನ್‌ಜಿ ರೂಪಾಂತರಕ್ಕಾಗಿ ಪ್ರಯೋಗಗಳು ಸಹ ನಡೆಯುತ್ತಿವೆ. ಇತ್ತೀಚೆಗೆ ತೆಗೆದ ಹೊಸ ಸ್ಪೈ ಶಾಟ್‌ಗಳು ಎಸ್‌ಯುವಿಯ ನವೀಕರಿಸಿದ ಮುಂಭಾಗ ಮತ್ತು ಸೈಡ್ ಪ್ರೊಫೈಲ್ ವಿನ್ಯಾಸ ಬದಲಾವಣೆಗಳ ಬಗ್ಗೆ ಸುಳಿವು ನೀಡಿದೆ. ಹೊಸ ಚಿತ್ರಗಳು ಕಾರಿನ ಬಗ್ಗೆ ಏನೆಲ್ಲಾ ಮಾಹಿತಿ ನೀಡಿದೆ ನೋಡೋಣ ಬನ್ನಿ.
ಮಾರುತಿ ಸುಜುಕಿ ಬ್ರೆಝಾ ತನ್ನ 2022 ರ ಬಿಡುಗಡೆಯ ನಂತರ ಈಗ ಎರಡನೇ ತಲೆಮಾರಿನ ಕಾರು, ಮಿಡ್ - ಸೈಕಲ್ ಫೇಸ್ ಲಿಫ್ಟ್ ಪಡೆಯಲು ಸಜ್ಜಾಗುತ್ತಿದೆ. ವೈರಲ್ ಆಗಿರುವ 2026 ರ ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ ಕಾರಿನ ವಿನ್ಯಾಸದ ವಿಷಯಕ್ಕೆ ಬಂದರೆ ಹೊಸ ಗ್ರಿಲ್ ಮತ್ತು ಸ್ಲೀಕರ್ LED ಹೆಡ್‌ಲ್ಯಾಂಪ್‌ಗಳೊಂದಿಗೆ ಅದರ ಮುಂಭಾಗದ ಪ್ರೊಫೈಲ್‌ಗೆ ನವೀಕರಣಗಳನ್ನು ಮಾಡಲಾಗಿದೆ.

ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ ಗಳೊಂದಿಗೆ ಬ್ಲಾಕ್ - ಔಟ್ ORVM ಗಳನ್ನು ಒಳಗೊಂಡಿದೆ, ಇದು ಸ್ವಲ್ಪ ಟೇಪರಿಂಗ್ ರೂಫ್ ಲೈನ್ ನಿಂದ ಪೂರಕವಾಗಿದೆ. ಹೊಸ 4-ಸ್ಪೋಕ್ ಅಲಾಯ್ ವೀಲ್‌ಗಳು, ರೂಫ್-ಮೌಂಟೆಡ್ ಶಾರ್ಕ್-ಫಿನ್ ಆಂಟೆನಾ ಮತ್ತು ಸ್ವಲ್ಪ ಪರಿಷ್ಕೃತ ಬಂಪರ್ ವಿನ್ಯಾಸ ಸೇರಿದಂತೆ ಸಣ್ಣ ವಿನ್ಯಾಸ ಬದಲಾವಣೆಗಳನ್ನು ಮಾಡಲಾಗಿದೆ. ಪ್ರಮುಖ ಮುಖ್ಯಾಂಶಗಳಲ್ಲಿ ಸಿಂಗಲ್-ಪೇನ್ ಸನ್ ರೂಫ್, ಹಿಂಭಾಗದಲ್ಲಿ ನವೀಕರಿಸಿದ ಟೈಲ್ ಲ್ಯಾಂಪ್ ಸೆಟಪ್‌ನೊಂದಿಗೆ ಕಾಣಿಸಿಕೊಂಡಿದೆ.
2026 ರ ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ, ಬೂಟ್ ಜಾಗವನ್ನು ಹಾಗೆಯೇ ಇರಿಸಿಕೊಂಡು ಉತ್ತಮ ಪ್ರಾಯೋಗಿಕತೆಗಾಗಿ ಹೆಚ್ಚುವರಿ ಅಂಡರ್‌ಬಾಡಿ CNG ಕಿಟ್‌ನೊಂದಿಗೆ ನವೀಕರಿಸುವ ಸಾಧ್ಯತೆ ಇದೆ. ಈ ಬಾರಿ ಹೊಸ ನೋಟಕ್ಕಾಗಿ ಸಣ್ಣ ಕಾಸ್ಮೆಟಿಕ್ ಟ್ವೀಕ್‌ಗಳನ್ನು ಪರಿಚಯಿಸಬಹುದು ಎನ್ನಲಾಗಿದೆ.

ಮೂಲಗಳ ಪ್ರಕಾರ ಇಂಟೀರಿಯರ್‌ನಲ್ಲಿ ಹೆಚ್ಚು ಸುಧಾರಿತ ದೊಡ್ಡ 10.1-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಪ್ರೀಮಿಯಂ ಆಡಿಯೊ ಸೆಟಪ್, ವೆಂಟಿಲೇಟೆಡ್ ಮತ್ತು ಪವರ್ಡ್ ಫ್ರಂಟ್ ಸೀಟುಗಳು, ಆರು ಏರ್‌ಬ್ಯಾಗ್‌ಗಳೊಂದಿಗೆ ಲೆವೆಲ್ 2 ADAS, EBD ಜೊತೆಗೆ ABS ಮತ್ತು ESC ಸೇರಿದಂತೆ ವರ್ಧಿತ ಸುರಕ್ಷತಾ ವೈಶಿಷ್ಟ್ಯಗಳನ್ನು ನಿರೀಕ್ಷಿಸಲಾಗಿದೆ. ಇವೆಲ್ಲವೂ ಆರಾಮ ಮತ್ತು ತಂತ್ರಜ್ಞಾನವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ.
ಪ್ರಸ್ತುತ ಮಾರಾಟದಲ್ಲಿರುವ ಬ್ರೆಝಾ ವಿಶೇಷತೆಗಳು: ಭಾರತದಲ್ಲಿ ಹೊಸ ಮಾರುತಿ ಸುಜುಕಿ ಬ್ರೆಝಾ ಕಾರಿನ ಬೆಲೆಯು ರೂ.8.25 ಲಕ್ಷದಿಂದ ಪ್ರಾರಂಭವಾಗುತ್ತದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್-ಹೋಲ್ಡ್ ಅಸಿಸ್ಟ್, ಸೀಟ್ ಬೆಲ್ಟ್ ರಿಮೈಂಡರ್ಸ್, ರೇರ್ ಪಾರ್ಕಿಂಗ್ ಸೇನಾರ್ಸ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

ಮಾರುತಿ ಬ್ರೆಝಾ 1.5-ಲೀ. ಪೆಟ್ರೋಲ್ ಎಂಜಿನ್ 103 ಪಿಎಸ್ ಪವರ್ ಹಾಗೂ 137 ಎನ್ಎಂ ಟಾರ್ಕ್ ಹೊರಹಾಕುತ್ತದೆ. ಸಿಎನ್‌ಜಿ ರೂಪಾಂತರವು ಇದೇ ಎಂಜಿನ್‌ನ್ನು ಒಳಗೊಂಡಿದ್ದು, 88 ಪಿಎಸ್ ಪವರ್ ಹಾಗೂ 121.5 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 - ಸ್ಪೀಡ್ ಮ್ಯಾನುವಲ್ ಅಥವಾ 6 - ಸ್ಪೀಡ್ ಆಟೋಮ್ಯಾಟಿಕ್ ನೊಂದಿಗೆ ನೀಡಲಾಗುತ್ತದೆ.
ಪ್ರಸ್ತುತ ಮಾರುತಿ ಸುಜುಕಿ ಬ್ರೆಝಾ ಕಾರು ಭಾರತದಲ್ಲಿ ಕಿಯಾ ಸೊನೆಟ್, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ, ಕಿಯಾ ಸೈರಸ್ ಮತ್ತು ಹ್ಯುಂಡೈ ವೆನ್ಯೂ ಕಾರುಗಳಿಗೆ ಪೈಪೋಟಿ ನೀಡುತ್ತದೆ. ತನ್ನ ವಿಭಾಗದಲ್ಲಿ ಇಷ್ಟೆಲ್ಲಾ ಪ್ರತಿಸ್ಪರ್ಧಿಗಳನ್ನು ಹೊಂದಿರುವ ಹೊಸ ಬ್ರೆಝಾ ಸದ್ಯ ಕೈಗೆಟುಕುವ ಬೆಲೆಯ ಬೆಸ್ಟ್ ಎಸ್‌ಯುವಿಯಾಗಿದೆ. ಈ ಕಾರಿನ ಬಗ್ಗೆ ನಿಮ್ಮ ಅನಿಸಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications








