VinFast: ಹೊಸ ಕಂಪನಿ ಕಾರುಬಾರು.. 2 ಹೊಸ ಕಾರು ಬಿಡುಗಡೆಗೆ ತಯಾರಿ.. ಯಾವುವು?
ವಿನ್‌ಫಾಸ್ಟ್ (VinFast) ಪ್ರಖ್ಯಾತ ಕಾರು ತಯಾರಕ ಕಂಪನಿಯಾಗಿ ಎಂದೇ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ವಿಎಫ್6 ಹಾಗೂ ವಿಎಫ್7 ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಯಶಸ್ವಿಗಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿಸುತ್ತಿದ್ದಾರೆ. 2026ರ ಕಂಪನಿಗೆ ಮಹತ್ವದ ವರ್ಷವಾಗಿದ್ದು, ಎರಡು ಹೊಚ್ಚ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ವಿನ್‌ಫಾಸ್ಟ್ ಲಿಮೋ ಗ್ರೀನ್ (VinFast Limo Green):
ಎಲ್ಲವು ಅಂದುಕೊಂಡಂತೆ ನಡೆದರೆ, ಶೀಘ್ರದಲ್ಲೇ ನೂತನ 'ವಿನ್‌ಫಾಸ್ಟ್ ಲಿಮೋ ಗ್ರೀನ್' ಕಾರು ಮಾರಾಟಕ್ಕೂ ಬರಲಿದೆ. ಇದೊಂದು ಎಲೆಕ್ಟ್ರಿಕ್ ಎಂಪಿವಿಯಾಗಿದೆ. 2026ರ ಫೆಬ್ರವರಿಯಲ್ಲಿ ಪರಿಚಯಿಸಲು ಕಂಪನಿಯು ಉದ್ದೇಶಿಸಿದೆ. ಇದು ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಾಗುವ ನಿರೀಕ್ಷೆಯಿದೆ. ಕನಿಷ್ಠ ರೂ.22 ಲಕ್ಷ ಹಾಗೂ ಗರಿಷ್ಠ ರೂ.26 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿರುವ ನಿರೀಕ್ಷೆಯಿದೆ.

ಹೊಸ 'ಲಿಮೋ ಗ್ರೀನ್' ಅಂತರರಾಷ್ಟ್ರೀಯ ಮಟ್ಟದಲ್ಲೂ ಲಭ್ಯವಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಸಿಗ್ನೇಚರ್ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಅಲಾಯ್ ವೀಲ್‌ಗಳನ್ನು ಪಡೆದಿದೆ. ಡೀಪ್ ಓಷನ್, ಡೆಸಾಟ್ ಸಿಲ್ವರ್, ನೆಪ್ಚೂನ್ ಗ್ರೇ, ಸನ್‌ಸೆಟ್ ಆರೆಂಜ್ ಮತ್ತು ಜೆಟ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,840 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.
ಇದು ಹೆಚ್ಚು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿದೆ. 60.13 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 450 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. ಈ ಕಾರು 7 ಆಸನ ಆಯ್ಕೆ ವ್ಯವಸ್ಥೆಯನ್ನು ತನ್ನದಾಗಿಸಿಕೊಂಡಿದೆ. ಹೆಚ್ಚಿನ ಲಗೇಜ್ ಕೊಂಡೊಯ್ಯಲು 285 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ.

ನೂತನ 'ವಿನ್‌ಫಾಸ್ಟ್ ಲಿಮೋ ಗ್ರೀನ್' 10.1-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳು ಮತ್ತು ಏರ್ ಫಿಲ್ಟರ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆಯನ್ನು ಒದಗಿಸಬಲ್ಲದು. ಸುರಕ್ಷತೆಗಾಗಿ 4-ಏರ್‌ಬ್ಯಾಗ್‌ಗಳು ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಹಾಗೂ ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.
ವಿನ್‌ಫಾಸ್ಟ್ ವಿಎಫ್3 (VinFast VF3):
ಇದೊಂದು ಪುಟ್ಟ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಆಗಿದೆ. 2026ರ ಮೊದಲರ್ಧದಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ. ರೂ.8 ಲಕ್ಷದಿಂದ ರೂ.10 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುವ ಸಾಧ್ಯತೆಯಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್‌ಲ್ಯಾಂಪ್‌ಗಳನ್ನು ಪಡೆದಿದೆ. ಎಲೆಕ್ಟ್ರಿಕ್ ಬ್ಲೂ, ಅರ್ಬನ್ ಮಿಂಟ್ ಮತ್ತು ರೋಸ್ ಪಿಂಕ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ. 191 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,075 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ.
ಈ ಕಾರು ಹೆಚ್ಚು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 18.64 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಪೂರ್ತಿ ಚಾರ್ಜ್‌ನಲ್ಲಿ 215 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. 4 ಆಸನಗಳನ್ನು ಹೊಂದಿದೆ. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 285 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.
ಹೊಸ 'ವಿನ್‌ಫಾಸ್ಟ್ ವಿಎಫ್3' ಕಾರು 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಮ್ಯಾನುವಲ್ ಎಸಿ, ಮತ್ತು ಫ್ರಂಟ್ ಪವರ್ ವಿಂಡೋದಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ರೇರ್-ವ್ಯೂ ಕ್ಯಾಮೆರಾವನ್ನು ಪಡೆದಿದೆ.


Click it and Unblock the Notifications








