28 ಕಿ.ಮೀ ಮೈಲೇಜ್.. ಹೈಬ್ರಿಡ್ ಎಂಜಿನ್‌ನೊಂದಿಗೆ ಜಪಾನ್‌ನಲ್ಲಿ ಹೊಸ Alto ಕಾರು ಪರಿಚಯ.. ಭಾರತಕ್ಕೂ ಬರುತ್ತಾ?

ಮಾರುತಿ ಸುಜುಕಿ (Maruti Suzuki) ಮಾತೃ ಸಂಸ್ಥೆ ಸುಜುಕಿ ಮೋಟಾರ್ ಕಾರ್ಪೊರೇಷನ್ (Suzuki Motor Corporation), ಜಪಾನ್‌ನಲ್ಲಿ ಆಲ್ಟೊ (Alto) ಹ್ಯಾಚ್‌ಬ್ಯಾಕ್‌ನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಅಲ್ಲಿನ ಗ್ರಾಹಕರು ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. 2021ರ ವರ್ಷಾಂತ್ಯದಲ್ಲಿ 9ನೇ ತಲೆಮಾರಿನ ಆಲ್ಟೊವನ್ನು ಬಿಡುಗಡೆಗೊಳಿಸಲಾಗಿತ್ತು. ಸದ್ಯ, ಈ ಕಾರಿನ ನವೀಕರಿಸಿದ ಅಂದರೆ, ಫೇಸ್‌ಲಿಫ್ಟ್‌ ಮಾಡೆಲ್‌ನ್ನು ಕೂಡ ಪರಿಚಯಿಸಲಾಗಿದೆ. ನೂತನ 2025ರ 'ಸುಜುಕಿ ಆಲ್ಟೊ' ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಹೊಚ್ಚ ಹೊಸ ಸುಜುಕಿ ಆಲ್ಟೊ (Suzuki Alto) ಹ್ಯಾಚ್‌ಬ್ಯಾಕ್‌ನ ವಿನ್ಯಾಸದಲ್ಲೂ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಇದು ಉತ್ತಮವಾಗಿರುವ ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳನ್ನು ಪಡೆದಿದೆ. ಮರುವಿನ್ಯಾಸಕ್ಕೆ ಒಳಪಟ್ಟ ಗ್ರಿಲ್ ಹಾಗೂ ಬಂಪರ್‌ಗಳನ್ನು ಒಳಗೊಂಡಿದೆ. ಜೊತೆಗೆ ನವೀನವಾದ ಟೆರಾಕೋಟಾ ಪಿಂಕ್ ಎಂಬ ಮೊನೊಟೊನ್ ಬಣ್ಣವನ್ನು ಹೊಂದಿದೆ.

28 Km mileage ADAS 2025 New Suzuki Alto Debuts Details

ನೂತನ ಸುಜುಕಿ ಆಲ್ಟೊ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬಹುಮುಖ್ಯವಾಗಿ 7-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಸುಜುಕಿ ಕನೆಕ್ಟ್ ಟೆಲಿಮ್ಯಾಟಿಕ್ಸ್, ಡ್ಯಾಶ್‌ಬೋರ್ಡ್‌ನಲ್ಲಿ ಗೇರ್ ಸೆಲೆಕ್ಟರ್, ಕ್ಲೇಮೇಟ್ ಕಂಟ್ರೋಲ್, ಕಪ್ ಹೋಲ್ಡರ್‌ಗಳು ಹಾಗೂ ಪವರ್ ವಿಂಡೋಗಳನ್ನು ಪಡೆದಿದೆ. ಇದರಲ್ಲಿ 4-ಆಸನಗಳಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು.

ಈ ಕಾರು ಎರಡು ಬಲಿಷ್ಠವಾದ ಪವರ್‌ಟ್ರೇನ್ ಆಯ್ಕೆಯನ್ನು ಒಳಗೊಂಡಿದೆ. ಇದರ 0.65 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 45 ಬಿ‌ಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 55 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.

ಮತ್ತೊಂದು 0.65 ಲೀಟರ್ ಮೈಲ್ಡ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಎಂಜಿನ್, 48 ಬಿ‌ಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 58 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಸಿವಿಟಿ ಗೇರ್‌ಬಾಕ್ಸ್‌ನ್ನು ಹೊಂದಿದೆ. ಎಡಬ್ಲ್ಯೂಡಿ (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದ್ದು, 28.2 ಕೆಎಂಪಿಎಲ್‌ವರೆಗೂ ಮೈಲೇಜ್ ನೀಡುತ್ತದೆ.

ಹೊಸ ಸುಜುಕಿ ಆಲ್ಟೊ ಸುರಕ್ಷತೆಗೂ ಹೆಸರುವಾಸಿಯಾಗಿದ್ದು, ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ ರಾಡಾರ್‌ನಿಂದ ಕೂಡಿರುವ ಎಡಿಎಎಸ್ (ಅಡ್ವಾನ್ಸ್ಡ್ - ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ರಕ್ಷಣಾತ್ಮಕ ವೈಶಿಷ್ಟ್ಯವನ್ನು ಹೊಂದಿದೆ. ಇದು ಆಟೊನೊಮಸ್ ಎಮರ್ಜೆನ್ಸಿ ಬ್ರೇಕಿಂಗ್ ಹಾಗೂ ಲೈನ್ ಡಿಪಾರ್ಚರ್ ಅಸಿಸ್ಟ್ ಸೇರಿದಂತೆ ವಿವಿಧ ತಾಂತ್ರಿಕ ಅಂಶಗಳನ್ನು ಒಳಗೊಂಡಿದೆ.

ನೂತನ ಸುಜುಕಿ ಆಲ್ಟೊ ಕಾರಿನ ಬೆಲೆಯ ಕುರಿತಂತೆ ಸ್ಪಷ್ಟವಾದ ವಿವರಗಳು ಲಭ್ಯವಾಗಿಲ್ಲ. ಇದು ಭಾರತೀಯ ರೂಪಾಯಿಗಳಲ್ಲಿ 6.75 ಲಕ್ಷ ಆರಂಭಿಕ ದರವನ್ನು ಪಡೆದಿರಬಹುದು ಎಂದು ಅಂದಾಜಿಸಲಾಗಿದೆ. ಇದೇ ಕಾರಿನ ರೀತಿಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಆಲ್ಟೊ ಕೆ10ಗೂ ಹೈಬ್ರಿಡ್ ಎಂಜಿನ್‌ ಅಳವಡಿಸಿ, ಬಿಡುಗಡೆಗೊಳಿಸುವ ಬಗ್ಗೆ ಕಂಪನಿಯು ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.

ಭಾರತದಲ್ಲಿ ಸಿಗುವ ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ವಿಶೇಷತೆಗಳೇನು:

ಈ ಕಾರು ಅಗ್ಗದ ದರದಲ್ಲೂ ಖರೀದಿಗೆ ದೊರೆಯುತ್ತದೆ. ಕನಿಷ್ಠ ರೂ.4 ಲಕ್ಷ ಹಾಗೂ ಗರಿಷ್ಠ ರೂ.6 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ ಪಡೆದಿದ್ದು, 24 ರಿಂದ 33 ಕೆಎಂಪಿಎಲ್‌ವರೆಗೆ ಕೊಡುತ್ತದೆ. ಇದರಲ್ಲಿ 5 ಆಸನಗಳಿವೆ. 7-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳನ್ನು ಹೊಂದಿದೆ.

Article Published On: Wednesday, June 25, 2025, 13:13 [IST]
English summary
28 km mileage adas 2025 new suzuki alto debuts details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+