ಅತಿ ಶೀಘ್ರದಲ್ಲೇ 3 ಎಸ್‌ಯುವಿಗಳು ಭಾರತದಲ್ಲಿ ಬಿಡುಗಡೆ: ಪ್ರಮುಖ ಬ್ರಾಂಡ್‌ಗಳ ನಡುವೆ ಪೈಪೋಟಿ!

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಡಿಮ್ಯಾಂಡ್ ಹೆಚ್ಚಾಗುತ್ತಿದೆ, ಅದರಲ್ಲೂ ಮಿಡ್‌ಸೈಜ್ ಎಲೆಕ್ಟ್ರಿಕ್ ಎಸ್‌ಯುವಿಗಳು ಮಾರುಕಟ್ಟೆಯಲ್ಲಿ ಭಾರೀ ಮಾರಾಟ ಕಾಣುತ್ತಿವೆ. ಪ್ರಮುಖ ಬ್ರಾಂಡ್‌ಗಳಾದ ಟಾಟಾ ಮೋಟಾರ್ಸ್, ಮಹೀಂದ್ರಾ, ಹ್ಯುಂಡೈನಂತಹ ಕಂಪನಿಗಳು ತಮ್ಮ ಮಿಡ್‌ಸೈಜ್ ಎಲೆಕ್ಟ್ರಿಕ್ ಎಸ್‌ಯುವಿಗಳೊಂದಿಗೆ ಗ್ರಾಹಕರ ಮನಗೆದ್ದಿವೆ. ಇದನ್ನೇ ಲಾಭವಾಗಿಸಿಕೊಳ್ಳಲು ನೋಡುತ್ತಿರುವ ಬ್ರಾಂಡ್‌ಗಳು ಹೊಸ ಎಲೆಕ್ಟ್ರಿಕ್ ಎಸ್‌ಯುವಿಗಳ ಬಿಡುಗಡೆಗೆ ಸಜ್ಜಾಗುತ್ತಿವೆ. ಅತಿ ಶೀಘ್ರದಲ್ಲೆ ಮೂರು ಪ್ರಮುಖ ಬ್ರಾಂಡ್‌ಗಳು ಮುಂದಿನ ಕೆಲವೇ ವಾರಗಳಲ್ಲಿ ಹೊಸ ಇವಿಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿವೆ, ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಹೊಸ ಟಾಟಾ ಸಿಯೆರಾ: ಟಾಟಾ ಸಿಯೆರಾ (Tata Sierra) ನವೆಂಬರ್ 15 ರಂದು (ನಾಳೆ) ಅನಾವರಣಕ್ಕೆ ಸಜ್ಜಾಗಿದ್ದು, ಇದೇ ನವೆಂಬರ್ 25 ರಂದು ಬಿಡುಗಡೆಯಾಗಲಿದೆ. ಕಾರಿನ ಉತ್ಪಾದನೆ ಮತ್ತು ಮಾಧ್ಯಮ ಪೂರ್ವವೀಕ್ಷಣೆಗಳು ಈಗಾಗಲೇ ನಡೆಯುತ್ತಿವೆ. ರಸ್ತೆಗಳಲ್ಲಿ ಟೆಸ್ಟಿಂಗ್ ಮಾಡುವಾಗ ಈ ಹಿಂದೆಯೂ ಹಲವು ಬಾರಿ ಟಾಟಾ ಸಿಯೆರಾ ಕಾಣಿಸಿಕೊಂಡಿತ್ತು. ಈ ಕುರಿತ ವಿಡಿಯೋಗಳು ಹಾಗೂ ಸ್ಪೈ ಚಿತ್ರಗಳು ತುಂಬಾ ವೈರಲ್ ಆಗಿದ್ದವು. ಈಗ ಬಿಡುಗಡೆ ಮೇಲಿನ ನಿರೀಕ್ಷೆಗಳು ಹೆಚ್ಚಾಗಿವೆ.

3-suvs-to-be-launched-in-india-very-soon-competition-among-major-brands

ಟಾಟಾದ Acti.EV ಆರ್ಕಿಟೆಕ್ಚರ್ ಅನ್ನು ಆಧರಿಸಿದ ಸಿಯೆರಾ EV ಆವೃತ್ತಿಯು (ಹ್ಯಾರಿಯರ್ EV ಪ್ಲಾಟ್‌ಫಾರ್ಮ್‌ನಂತೆಯೇ), ಡ್ಯುಯಲ್-ಮೋಟಾರ್ ಆಲ್-ವೀಲ್-ಡ್ರೈವ್ ಸಾಮರ್ಥ್ಯವನ್ನು ಹೊಂದಿರಲಿದೆ. ಆಯ್ಕೆಯನ್ನು ಅವಲಂಬಿಸಿ 65 kWh ಅಥವಾ 75 kWh ವರೆಗೆ ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿರಲಿದೆ. ಸಣ್ಣ ಬ್ಯಾಟರಿ ಪ್ಯಾಕ್ ಸಿಂಗಲ್‌ ಚಾರ್ಜ್‌ನಲ್ಲಿ 450 ಕಿ.ಮೀ ರೇಂಜ್ ಹಾಗೂ ದೊಡ್ಡ ಬ್ಯಾಟರಿ ಪ್ಯಾಕ್ ಸಿಂಗಲ್ ಚಾರ್ಜ್‌ನಲ್ಲಿ 600 ಕಿ.ಮೀ ರೇಂಜ್ ನೀಡುವ ನಿರೀಕ್ಷೆಯಿದೆ.

ಮಾರುತಿ ಸುಜುಕಿ ಇ ವಿಟಾರಾ: ಮಾರುತಿ ಸುಜುಕಿಯ ಬಹುನಿರೀಕ್ಷಿತ ಮಧ್ಯಮ ಗಾತ್ರದ ಎಲೆಕ್ಟ್ರಿಕ್ ಎಸ್‌ಯುವಿ ಆಗಿರುವ ಇ-ವಿಟಾರಾ ಇದೇ ಮುಂಬರುವ ಡಿಸೆಂಬರ್ ನಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಇದು ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಮಾರಾಟವಾಗಲಿದೆ, ಜೊತೆಗೆ ಟೊಯೋಟಾ ಮಾರುತಿದೊಂದಿಗೆ ಜೊತೆಗೂಡಿ ಇ-ವಿಟಾರಾವನ್ನು ಮುಂದಿನ ವರ್ಷ ಅರ್ಬನ್ ಕ್ರೂಸರ್ ಎಲೆಕ್ಟ್ರಿಕ್ ಕಾರಾಗಿ ಪರಿಚಯಿಸಲು ಯೋಜಿಸಲಾಗಿದೆ.

3-suvs-to-be-launched-in-india-very-soon-competition-among-major-brands

ಮೂಲಗಳ ಪ್ರಕಾರ ಮಾರುತಿ ಸುಜುಕಿ ಇ-ವಿಟಾರಾ ಸೀಲ್ಡ್ - ಆಫ್ ಫ್ರಂಟ್ ಎಂಡ್, ಹೊಸ ಲೈಟಿಂಗ್ ಅಂಶಗಳು ಮತ್ತು ಇವಿ-ಕೇಂದ್ರಿತ ಅಲಾಯ್ ವ್ಹೀಲ್ ವಿನ್ಯಾಸದೊಂದಿಗೆ ಏರೋಡೈನಾಮಿಕ್ ಡಿಸೈನ್ ಹೊಂದಿರಲಿದೆ. ಒಳಾಂಗಣವನ್ನು ಸಹ ಉನ್ನತ ದರ್ಜೆಯ ವಸ್ತುಗಳು ಮತ್ತು ಹೆಚ್ಚು ಪ್ರೀಮಿಯಂ ಇಂಟರ್ಫೇಸ್ ನೊಂದಿಗೆ ಒಟ್ಟುಗೂಡಿಸಲಾಗಿದೆ ಎಂದು ತಿಳಿದುಬಂದಿದೆ. ಮುಂಬರುವ ಹೊಸ ಇ-ವಿಟಾರಾ ಸಿಂಗಲ್ ಚಾರ್ಜ್‌ನಲ್ಲಿ 500 ಕಿ.ಮೀ ರೇಂಜ್ ನೀಡುವ ಸಾಧ್ಯತೆಯಿದೆ.

ಮಹೀಂದ್ರಾ XEV 9S: ಮಹೀಂದ್ರಾ ಎಲೆಕ್ಟ್ರಿಕ್ ಎಸ್‌ಯುವಿ ಮಾರುಕಟ್ಟೆಯಲ್ಲಿ ತನ್ನ ದಾಳಿಯನ್ನು ಮುಂದುವರಿಸಿದೆ. ಕಂಪನಿಯ XEV 9e ಮತ್ತು BE 6 ಎಲೆಕ್ಟ್ರಿಕ್ ಕಾರುಗಳು ಈಗಾಗಲೇ ಭಾರತದಲ್ಲಿ ಉತ್ತಮ ಮಾರಾಟ ಕಾಣುತ್ತಿವೆ. ಈಗ ಮೂರು-ಸಾಲಿನ 7-ಸೀಟರ್ ಕಾರಾಗಿ ಹೊಸ XEV 9S ಬಿಡುಗಡೆಗೆ ಸಜ್ಜಾಗುತಿದ್ದು, ಮೂಲಗಳ ಪ್ರಕಾರ ನವೆಂಬರ್ 27 ರಂದು ಬಿಡುಗಡೆಯಾಗಲಿದೆ.

3-suvs-to-be-launched-in-india-very-soon-competition-among-major-brands

ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲವಾದರೂ, ಆರಂಭಿಕ ಪರೀಕ್ಷಾ ಹಂತಗಳಲ್ಲಿ ಈ ಕಾರು ಹಲವು ಬಾರಿ ರಸ್ತೆಯಲ್ಲಿ ಕಾಣಿಸಿಕೊಂಡಿದೆ. ಈ ಕಾರಿನ ಕುರಿತ ಹೊರಬಂದ ಟೀಸರ್‌ಗಳು XUV.e8 ಕಾನ್ಸೆಪ್ಟ್ ಮತ್ತು ನಿಯಮಿತ ICE XUV700 ನಿಂದ ಹೆಚ್ಚು ಪ್ರೇರಿತವಾದ ವಿನ್ಯಾಸವನ್ನು ಬಹಿರಂಗಪಡಿಸಿದೆ.

XEV 9e ಮತ್ತು BE 6 ನಲ್ಲಿ ಕಂಡುಬರುವ ಅದೇ ಎಲೆಕ್ಟ್ರಿಕ್ INGLO ಸ್ಕೇಟ್ ಬೋರ್ಡ್ ಇದಕ್ಕೂ ಆಧಾರವಾಗಿರುತ್ತದೆ ಎಂದು ಬ್ರ್ಯಾಂಡ್ ದೃಢಪಡಿಸಿದೆ. ಮಹೀಂದ್ರಾ ಕಂಪನಿಯ ಇತ್ತೀಚಿನ ಬ್ಯಾಟರಿ ಮಾಡ್ಯೂಲ್‌ಗಳು ಮತ್ತು ಮೋಟಾರ್ ಸೆಟಪ್‌ಗಳು 500 ಕಿ.ಮೀ ಡ್ರೈವಿಂಗ್ ರೇಂಜ್ ಅನ್ನು ನೀಡುತ್ತವೆ ಎಂದು ನಿರೀಕ್ಷಿಸಲಾಗಿದೆ.

Article Published On: Friday, November 14, 2025, 14:22 [IST]
English summary
3 suvs to be launched in india very soon competition among major brands
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+