Maruti: ಮಾರುತಿ ಫ್ರಾಂಕ್ಸ್ ಇಷ್ಟೊಂದು ಮಾರಾಟವಾಗಲು ಕಾರಣವೇನು? ಹೇಳಿದರೆ ನೀವು ನಂಬುವುದಿಲ್ಲ!

ಡಿಸೈನ್, ಬೆಲೆಗೆ ತಕ್ಕ ಮೌಲ್ಯ, ಪರ್ಫಾಮೆನ್ಸ್, ವಿವಿಧ ಎಂಜಿನ್ ಆಯ್ಕೆ, ಅತ್ಯುತ್ತಮ ಮೈಲೇಜ್‌ನೊಂದಿಗೆ ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಭಾರತದಲ್ಲಿ ಬಲವಾದ ಬೇಡಿಕೆ ಪಡೆದುಕೊಂಡಿದೆ. ಮಾರುತಿ ಸುಜುಕಿ ಫ್ರಾಂಕ್ಸ್ ಕೇವಲ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ತ್ವರಿತ ಜನಪ್ರಿಯತೆಯನ್ನು ಗಳಿಸಿದೆ. ಫ್ರಾಂಕ್ಸ್ ಅನ್ನು ಮಾರಾಟ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ದ ಹಾಗೂ ಇದರ ಜನಪ್ರಿಯತೆಗೆ ಕಾರಣವಾದ ಐದು ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.

ವಿಶಿಷ್ಟ ಎಸ್‌ಯುವಿ ಪ್ರೇರಿತ ಡಿಸೈನ್: ಮಾರುತಿ ಸುಜುಕಿ ಫ್ರಾಂಕ್ಸ್ ತನ್ನ ಆಕ್ರಮಣಕಾರಿ ಡಿಸೈನ್, ಮಸ್ಕುಲರ್ ನೋಟ ಮತ್ತು ಗ್ರ್ಯಾಂಡ್ ವಿಟಾರಾದಂತಹ ದೊಡ್ಡ ಎಸ್‌ಯುವಿಗಳನ್ನು ಹೋಲುವ ಮೂಲಕ ಎದ್ದು ಕಾಣುತ್ತದೆ. ಎತ್ತರದ ಬಾನೆಟ್, ಪ್ರಮುಖ ಗ್ರಿಲ್, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳು ಮತ್ತು ಆಕರ್ಷಕ ಬಂಪರ್ ವಿನ್ಯಾಸವನ್ನು ಹೊಂದಿದೆ. ಇವೆಲ್ಲವೂ ಕಾರಿಗೆ ಬಲವಾದ ರಸ್ತೆ ಉಪಸ್ಥಿತಿಯನ್ನು ನೀಡುತ್ತದೆ.

5-surprising-why-the-maruti-suzuki-fronx-is-outselling-its-rivals

ಹಿಂಭಾಗದ ತುದಿಯು ಇದಕ್ಕೆ ಕೂಪೆ-ಎಸ್ ಯುವಿ ನೋಟವನ್ನು ನೀಡುತ್ತದೆ, "ಬೇಬಿ ಗ್ರ್ಯಾಂಡ್ ವಿಟಾರಾ" ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುವ ಫ್ರಾಂಕ್ಸ್ ಎಸ್‌ಯುವಿ ಡಿಸೈನ್‌ನಲ್ಲಿ ವಿಷಯದಲ್ಲಿ ಯಶಸ್ವಿಯಾಗಿದೆ. ಇದು ಯುವ ಖರೀದಿದಾರರು ಮತ್ತು ಕುಟುಂಬಗಳನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿದೆ. ಮುಖ್ಯವಾಗಿ ಡಿಸೈನ್ ಬಗ್ಗೆ ಕಾಳಜಿ ವಹಿಸುವ ಖರೀದಿದಾರರನ್ನು ಆಕರ್ಷಿಸುತ್ತಿದೆ.

ಸ್ಪರ್ಧಾತ್ಮಕ ಬೆಲೆ: ಸುಮಾರು ರೂ. 7.5 ಲಕ್ಷ (ಎಕ್ಸ್‌ ಶೋರೂಂ) ದಿಂದ ಪ್ರಾರಂಭವಾಗುವ ಬೆಲೆಯೊಂದಿಗೆ, ಫ್ರಾಂಕ್ಸ್ ಮಾರುತಿಯ ಬಲೆನೊ ಮತ್ತು ಬ್ರೆಝಾ ನಡುವೆ ಇದೆ. ಇದು ಕೈಗೆಟುಕುವ ಬೆಲೆಯಲ್ಲಿ ಹೆಚ್ಚಿನ ಪ್ರೀಮಿಯಂ ವೈಶಿಷ್ಟ್ಯಗಳನ್ನು ನೀಡುತ್ತದೆ. ಇದು ಹಣಕ್ಕೆ ಮೌಲ್ಯದ ಬಲವಾದ ಆಯ್ಕೆಯಾಗಿದೆ. ಇನ್ನು ಟಾಪ್ ವೇರಿಯೆಂಟ್ 13.04 ಲಕ್ಷದವರೆಗೆ (ಎಕ್ಸ್ ಶೋರೂಂ) ಇದೆ.

5-surprising-why-the-maruti-suzuki-fronx-is-outselling-its-rivals

ಎಸ್‌ಯುವಿ ತರಹದ ವಿನ್ಯಾಸ, ಎಲಿವೇಟೆಡ್ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿರುವ ಕಾರನ್ನು ಹುಡುಕುತ್ತಿರುವ ಗ್ರಾಹಕರು ಹ್ಯುಂಡೈ ವೆನ್ಯೂ, ಕಿಯಾ ಸೊನೆಟ್ ಅಥವಾ ಟಾಟಾ ನೆಕ್ಸಾನ್ ನಂತಹ ಮಾದರಿಗಳಿಗೆ ಮಾರುತಿ ಸುಜುಕಿ ಫ್ರಾಂಕ್ಸ್ ಅನ್ನು ವೆಚ್ಚ - ಪರಿಣಾಮಕಾರಿ ಪರ್ಯಾಯ ಆಯ್ಕೆಯಾಗಿರುವ ಕಾರಣ ಹೆಚ್ಚಾಗಿ ಇದನ್ನು ಖರೀದಿಸುತ್ತಿದ್ದಾರೆ.

ಮೈಲೇಜ್ ಮತ್ತು ಪರ್ಫಾಮೆನ್ಸ್: ನ್ಯಾಚುರಲ್ಲಿ ಆಸ್ಪಿರೇಟೆಡ್ 1.2L ಪೆಟ್ರೋಲ್ ಎಂಜಿನ್ ಅತ್ಯುತ್ತಮ ಮೈಲೇಜ್ ನೀಡುವುದು ಇದೆ ಪ್ರಮುಖ ಹೈಲೆಟ್ ಆಗಿದೆ. ಬರೋಬ್ಬರಿ ಲೀಟರ್‌ಗೆ 22.89 kmpl ವರೆಗೆ ಮೈಲೇಜ್ ನೀಡುತ್ತದೆ. ಹಾಗೆಯೇ ಬೂಸ್ಟರ್‌ಜೆಟ್ ಟರ್ಬೊ - ಪೆಟ್ರೋಲ್ ವೇರಿಯೆಂಟ್ ಮೈಲೇಜ್ ಬಯಸದೆ ಹೆಚ್ಚಿನ ಪರ್ಫಾಮೆನ್ಸ್ ಹುಡುಕುವ ಉತ್ಸಾಹಿಗಳಿಗೆ ಬೆಸ್ಟ್ ಆಯ್ಕೆಯಾಗಿದೆ.

5-surprising-why-the-maruti-suzuki-fronx-is-outselling-its-rivals

ಸಮಗ್ರ ವೈಶಿಷ್ಟ್ಯಗಳು ಮತ್ತು ಆಧುನಿಕ ತಂತ್ರಜ್ಞಾನ: ಡ್ಯುಯಲ್-ಟೋನ್ ಇಂಟೀರಿಯರ್, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಹೆಡ್-ಅಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ಆರು ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಮತ್ತು ಆಧುನಿಕ ಕ್ಯಾಬಿನ್ ಮುಂತಾದ ವೈಶಿಷ್ಟ್ಯಗಳು ಫ್ರಾಂಕ್ಸ್ ಅನ್ನು ಅನುಕೂಲತೆ ಮತ್ತು ಸೌಕರ್ಯವನ್ನು ಬಯಸುವ ಖರೀದಿದಾರರಿಗೆ ಆಕರ್ಷಕವಾಗಿಸುತ್ತದೆ.

ಬ್ರ್ಯಾಂಡ್ ನಂಬಿಕೆ ಮತ್ತು ವ್ಯಾಪಕ ಸೇವಾ ಜಾಲ: ವಿಶ್ವಾಸಾರ್ಹತೆ, ಕಡಿಮೆ ನಿರ್ವಹಣೆ, ಹೆಚ್ಚಿನ ಮರುಮಾರಾಟ ಮೌಲ್ಯ ಮತ್ತು ದೇಶಾದ್ಯಂತ 40,000 ಕ್ಕೂ ಹೆಚ್ಚು ಸೇವಾ ಟಚ್‌ಪಾಯಿಂಟ್‌ಗಳಿಂದಾಗಿ ಮಾರುತಿ ಸುಜುಕಿ ಭಾರತದಲ್ಲಿ ಉತ್ತಮ ಸೇವಾ ಪೂರೈಕೆದಾರ ಎಂದು ಜನಪ್ರಿಯತೆ ಪಡೆದಿದೆ. ಹಾಗಾಗಿ ಫ್ರಾಂಕ್ಸ್ ಅನ್ನು ಖರೀದಿಸಿದ ಬಳಿಕ ಅದನ್ನು ಮೇಂಟೇನ್ ಮಾಡುವುದು ಗ್ರಾಹಕರಿಗೆ ಸುಲಭ ಮತ್ತು ಚಿಂತೆಯಿಲ್ಲ.

Article Published On: Saturday, July 26, 2025, 12:33 [IST]
English summary
5 reasons why maruti suzuki fronx is outselling its rivals
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+