10 ಲಕ್ಷಕ್ಕಿಂತ ಕಡಿಮೆ ಬೆಲೆಯ ಪವರ್‌ಫುಲ್ ಡೀಸೆಲ್ ಕಾರುಗಳು: ಭಾರತದಲ್ಲಿ ಫುಲ್ ಡಿಮ್ಯಾಂಡ್
ಮಾರುತಿ ಸುಜುಕಿಯಂತಹ ಪ್ರಮುಖ ವಾಹನ ತಯಾರಕರು ತಮ್ಮ ಶ್ರೇಣಿಯಿಂದ ಡೀಸೆಲ್ ಎಂಜಿನ್‌ಗಳನ್ನು ಹಂತಹಂತವಾಗಿ ತೆಗೆದುಹಾಕುತ್ತಿದ್ದರೂ, ಡೀಸೆಲ್ ಕಾರುಗಳಿಗೆ ಇನ್ನೂ ಕೆಲವರು ಬೇಡಿಕೆಯಿಡುತ್ತಿದ್ದಾರೆ. ದೇಶದ ಪ್ರಯಾಣಿಕ ವಾಹನ ಮಾರುಕಟ್ಟೆಯ ಅನೇಕ ಪ್ರಮುಖ ಕಂಪನಿಗಳು ಸಣ್ಣ ಮತ್ತು ಕೈಗೆಟುಕುವ ಡೀಸೆಲ್ ಕಾರುಗಳನ್ನು ಭಾರತದಲ್ಲಿ ಸ್ಥಗಿತಗೊಳಿಸಿದ್ದಾರೆ. ಆದರೂ, ಮಹೀಂದ್ರಾ, ಟಾಟಾ ಮೋಟಾರ್ಸ್ ಮುಂತಾದ ಕೆಲವು ಕಾರು ತಯಾರಕರು ಇನ್ನೂ ಭಾರತದಲ್ಲಿ ಡೀಸೆಲ್ ಕಾರುಗಳನ್ನು ರೂ.10 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. 2025 ರಲ್ಲಿ ಭಾರತದಲ್ಲಿ ಲಭ್ಯವಿರುವ ಟಾಪ್ 5 ಅತ್ಯಂತ ಕೈಗೆಟುಕುವ ಡೀಸೆಲ್ SUV ಕಾರುಗಳು ಇಲ್ಲಿವೆ.
ಮಹೀಂದ್ರಾ ಬೊಲೆರೊ: ಮಹೀಂದ್ರಾ ಬೊಲೆರೊ ಡೀಸೆಲ್ (ಬಿ8) ವೇರಿಯೆಂಟ್ ರೂ. 7,99,000 (ಎಕ್ಸ್ ಶೋ ರೂಂ) ದಿಂದ ಪ್ರಾರಂಭವಾಗುತ್ತದೆ. ಇದು 1.5-ಲೀಟರ್ mHawk75 ಟರ್ಬೊ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ, ಇದು 75bhp ಪವರ್ ಮತ್ತು 210Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಒಳಭಾಗದಲ್ಲಿ, ಇದು ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು ಮತ್ತು ಹೊಸ ಲೆಥೆರೆಟ್ ಅಪ್ಹೋಲ್ಸ್ಟರಿಯನ್ನು ಒಳಗೊಂಡಿದೆ.

ಮಹೀಂದ್ರಾ ಬೊಲೆರೊ ನಿಯೋ: ಮಹೀಂದ್ರಾ ಬೊಲೆರೊ ನಿಯೋ ಡೀಸೆಲ್ ರೂ. 8,49,000 (ಎಕ್ಸ್-ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಇದು 100bh ಪವರ್ ಹಾಗೂ 260Nm ಟಾರ್ಕ್ ಉತ್ಪಾದಿಸುವ ಅದೇ 1.5 - ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದು ಒಂಬತ್ತು ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮತ್ತು ಇತರ ಅನುಕೂಲಕರ ನವೀಕರಣಗಳನ್ನು ಹೊಂದಿದೆ. ಐದು ಹೊಸ ಬಣ್ಣ ಆಯ್ಕೆಗಳನ್ನು ಒಳಗೊಂಡಂತೆ ಸೂಕ್ಷ್ಮ ವಿನ್ಯಾಸ ನವೀಕರಣಗಳನ್ನು ಪಡೆದಿದೆ.
ಮಹೀಂದ್ರಾ XUV 3XO: ಮಹೀಂದ್ರಾ XUV 3XO ಆಕರ್ಷಕ ಡ್ರೈವ್, ವಿಶಾಲ ಸ್ಥಳಾವಕಾಶ ಮತ್ತು ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಕಾಂಪ್ಯಾಕ್ಟ್ SUV ಆಗಿದೆ. ಇದರ ಡೀಸೆಲ್ ಆವೃತ್ತಿಯು ರೂ. 8,94,900 (ಎಕ್ಸ್-ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 1498 cc ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದೆ, ಮ್ಯಾನುವಲ್ ಟ್ರಾನ್ಸ್ಮಿಷನ್ ಜೊತೆಗೆ ಲಭ್ಯವಿದೆ. 115.05bh ಪವರ್ ಮತ್ತು 300Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಕಿಯಾ ಸೋನೆಟ್: ಕಿಯಾ ಸೋನೆಟ್ HTE (O) 1.5 ಡೀಸೆಲ್ MT ಬೆಲೆ ರೂ. 8,98,409 (ಎಕ್ಸ್ ಶೋರೂಂ) ಇದೆ. ಕಿಯಾ ಸೋನೆಟ್ HTE (O) 1.5 ಡೀಸೆಲ್ MT ಮ್ಯಾನುವಲ್ ಟ್ರಾನ್ಸ್‌ಮಿಷನ್‌ನಲ್ಲಿ ಲಭ್ಯವಿದ್ದು, 1493 cc, 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ, ಇದು 114 bhp ಪವರ್ ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಟಾಟಾ ನೆಕ್ಸಾನ್: ಟಾಟಾ ನೆಕ್ಸಾನ್ ಡೀಸೆಲ್ ಬೆಲೆಯು 9,00,890 (ಎಕ್ಸ್ ಶೋರೂಂ) ಇದೆ. ಇದು 1.5-ಲೀಟರ್ ಟರ್ಬೋಚಾರ್ಜ್ಡ್ ರೆವೊಟಾರ್ಕ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದೆ. 113.31 bhp ಪವರ್ ಹಾಗೂ 260 Nm ಟಾರ್ಕ್ ಉತ್ಪಾದಿಸುತ್ತದೆ. ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ. ವಿಶಾಲ ಸ್ಥಳಾವಕಾಶ ಮತ್ತು ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.

ಮೇಲಿನ ಎಲ್ಲಾ SUV ಗಳು ಬಲವಾದ ಡೀಸೆಲ್ ಎಂಜಿನ್ ಕಾರ್ಯಕ್ಷಮತೆಯನ್ನು ಒದಗಿಸುತ್ತವೆ. ಡೀಸೆಲ್ ಪವರ್ ಮತ್ತು SUV ಪ್ರಾಯೋಗಿಕತೆಗೆ ಆದ್ಯತೆ ನೀಡುವ ಭಾರತೀಯ ಖರೀದಿದಾರರಿಗೆ ಪ್ರಾಯೋಗಿಕ ಮತ್ತು ಕೈಗೆಟುಕುವ ಆಯ್ಕೆಗಳಾಗಿವೆ. ಮಹೀಂದ್ರಾ ಬೊಲೆರೊ ಅತ್ಯಂತ ಕೈಗೆಟುಕುವ ಆಯ್ಕೆಯಾಗಿ ಉಳಿದಿದೆ. ಟಾಟಾ ನೆಕ್ಸಾನ್ ಮತ್ತು ಕಿಯಾ ಸೋನೆಟ್ ಹೆಚ್ಚು ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








