ಮಾರುತಿ ಎಲೆಕ್ಟ್ರಿಕ್ ಕಾರಿನ ಟೆಸ್ಟ್ ಡ್ರೈವ್ ಮಾಡಿ... ಜನವರಿಯಲ್ಲಿ 500 ಕಾರುಗಳು ಶೋರೂಂಗಳಿಗೆ ರವಾನೆ
ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರಾದ ಇ-ವಿಟಾರಾ ಟೆಸ್ಟ್ ಡ್ರೈವ್‌ಗಳು ಜನವರಿ 2026 ರಲ್ಲಿ ಆರಂಭವಾಗಲಿದೆ. 500 ನೆಕ್ಸಾ ಶೋ ರೂಂಗಳಿಗೆ ಕಾರುಗಳು ರವಾನೆಯಾಗುತ್ತಿವೆ ಎಂದು ವರದಿಯಾಗಿದೆ. ಈ ತಿಂಗಳು ಡೀಲರ್ ರವಾನೆಗಳು ಪ್ರಾರಂಭವಾಗುತ್ತವೆ, ಡಿಸೆಂಬರ್‌ನಲ್ಲಿ 350 ಔಟ್‌ಲೆಟ್‌ಗಳಿಗೆ ಮತ್ತು ಜನವರಿಯಲ್ಲಿ 150 ಕ್ಕೂ ಹೆಚ್ಚು ಔಟ್‌ಲೆಟ್‌ಗಳಿಗೆ ಆರಂಭಿಕ ಹಂಚಿಕೆ ನಡೆಯಲಿದೆ ಎಂದು ಕಂಪನಿಯ ಮಾರ್ಕೆಟಿಂಗ್ ಮತ್ತು ಮಾರಾಟದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೋ ಬ್ಯಾನರ್ಜಿ ಪ್ರಮುಖ ಮಾಧ್ಯಮ ಸಭೆಯಲ್ಲಿ ತಿಳಿಸಿದ್ದಾರೆ.
ಕಂಪನಿ ಪ್ರಕಾರ, ಖರೀದಿದಾರರು EV ಗಳಿಗೆ ಸಂಬಂಧಿಸಿದ ಮೂರು ಪ್ರಮುಖ ಕಾಳಜಿಗಳನ್ನು ಹೊಂದಿದ್ದಾರೆ. ಅವುಗಳೆಂದರೆ ರೇಂಜ್, ಚಾರ್ಜಿಂಗ್ ಮೂಲಸೌಕರ್ಯದ ಅಸಮರ್ಪಕತೆ ಮತ್ತು ಮಾರಾಟದ ನಂತರದ ಸೇವೆಗೆ ಸಂಬಂಧಿಸಿವೆ. ನಾವು ಈ ಎಲ್ಲಾ ಕಾಳಜಿಗಳನ್ನು ಪರಿಹರಿಸಲು ಬಯಸಿದ್ದೇವೆ, ಮಾರುತಿ ಸುಜುಕಿ EV ಗಳನ್ನು ಖರೀದಿಸುವ ಮೊದಲು ಖರೀದಿದಾರರಲ್ಲಿ ವಿಶ್ವಾಸವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ.

ಅದಕ್ಕಾಗಿ ಮಾರುತಿ 1,100 ಕ್ಕೂ ಹೆಚ್ಚು ನಗರಗಳಲ್ಲಿ 1,500 EV-ಸಿದ್ಧ ಕಾರ್ಯಾಗಾರಗಳನ್ನು ಸಿದ್ಧಪಡಿಸಿದೆ. 1,50,000 ಸಿಬ್ಬಂದಿಗೆ ತರಬೇತಿ ನೀಡಿರುವುದಾಗಿ ಕಂಪನಿ ತಿಳಿಸಿದೆ. ಈಗ ಈ ಎಲೆಕ್ಟ್ರಿಕ್ ಎಸ್‌ಯುವಿಯ ಟೆಸ್ಟ್ ಡ್ರೈವ್ ಮಾಡಲು ಗ್ರಾಹಕರಿಗಾಗಿ ಆರಂಭದಲ್ಲಿ ಡಿಸೆಂಬರ್‌ನಲ್ಲಿ 350 ಶೋ ರೂಂಗಳು ಮತ್ತು ಜನವರಿಯಲ್ಲಿ 150 ಶೋ ರೂಂಗಳು ಸೇರಿದಂತೆ 500 ಶೋ ರೂಂಗಳಿಗೆ ನೀಡಲಾಗುವುದು" ಎಂದು ಕಂಪನಿ ತಿಳಿಸಿದೆ.
ಮೂಲಸೌಕರ್ಯ ವಿಷಯದಲ್ಲಿ, ಮಾರುತಿ ಸುಜುಕಿ 13 ಚಾರ್ಜ್ ಪಾಯಿಂಟ್ ಆಪರೇಟರ್‌ಗಳು ಮತ್ತು ಅಗ್ರಿಗೇಟರ್‌ಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ. ಇದು ಬಳಕೆದಾರರಿಗೆ ಒಂದೇ ಇಂಟರ್ಫೇಸ್ ಮೂಲಕ ಬಹು ಸಾರ್ವಜನಿಕ ಚಾರ್ಜಿಂಗ್ ನೆಟ್‌ವರ್ಕ್‌ಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ. ಪ್ರಸ್ತುತ, ಕಂಪನಿಯು 1,100 ಕ್ಕೂ ಹೆಚ್ಚು ನಗರಗಳಲ್ಲಿ ತನ್ನ ಡೀಲರ್ ನೆಟ್‌ವರ್ಕ್‌ನಲ್ಲಿ 2,000 ಕ್ಕೂ ಹೆಚ್ಚು ವಿಶೇಷ ಚಾರ್ಜಿಂಗ್ ಪಾಯಿಂಟ್‌ಗಳನ್ನು ಹೊಂದಿದೆ.

ದೀರ್ಘಾವಧಿಯಲ್ಲಿ, ಕಂಪನಿಯು FY30 ರ ವೇಳೆಗೆ 1,00,000 ಕ್ಕೂ ಹೆಚ್ಚು ಸಾರ್ವಜನಿಕ ಚಾರ್ಜಿಂಗ್ ಪಾಯಿಂಟ್‌ಗಳಿಗೆ ಪ್ರವೇಶವನ್ನು ಸಕ್ರಿಯಗೊಳಿಸುವ ಗುರಿಯನ್ನು ಹೊಂದಿದೆ. ಟೆಸ್ಟ್ ಡ್ರೈವ್‌ಗಳ ಜೊತೆಗೆ ಜನವರಿಯಲ್ಲಿ ಬುಕಿಂಗ್‌ಗಳು ತೆರೆಯಲಾಗುವುದು. ನಂತರ ಅಧಿಕೃತವಾಗಿ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿ ಬೆಲೆ ವಿವರಗಳನ್ನು ಹಂಚಿಕೊಳ್ಳುವ ಯೋಜನೆಯಲ್ಲಿ ಮಾರುತಿ ಇದೆ.
ಮಾರುತಿ ಸುಜುಕಿ ಇ-ವಿಟಾರಾ ವಿಶೇಷತೆಗಳು: ಮಾರುತಿ ಇ-ವಿಟಾರಾ HEARTECT-e ಪ್ಲಾಟ್‌ಫಾರ್ಮ್ ನಲ್ಲಿ ನಿರ್ಮಾಣವಾಗಿದೆ. ಈ ದೃಢವಾದ ಪ್ಲಾಟ್‌ಫಾರ್ಮ್ 50% ಕ್ಕಿಂತ ಹೆಚ್ಚು ಹೈ-ಟೆನ್ಸೈಲ್ ಸ್ಟೀಲ್ ಅನ್ನು ಹೊಂದಿದೆ. ಇದು 120 ಲಿಥಿಯಂ-ಐಯಾನ್ ಆಧಾರಿತ ಸೆಲ್‌ಗಳನ್ನು ಹೊಂದಿರುವ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇ-ವಿಟಾರಾ 49 kWh ಮತ್ತು 61 kWh ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ.

ದೊಡ್ಡ 61 kWh ಬ್ಯಾಟರಿಯನ್ನು 2WD ಮತ್ತು 4WD ಎರಡೂ ಮಾಡಲ್‌ಗಳಲ್ಲಿ ಪಡೆಯಬಹುದು. ಇದು 172 bh ಪವರ್ ಮತ್ತು 189 Nm ಟಾರ್ಕ್ ನೀಡುತ್ತದೆ. 49 kWh ರೂಪಾಂತರವು 2WD ಮಾದರಿಯಾಗಿದ್ದು, ಒಂದೇ eAxle ಮೋಟಾರ್ 142 bh ಪವರ್ ಮತ್ತು 189 Nm ಟಾರ್ಕ್ ಉತ್ಪಾದಿಸುತ್ತದೆ. 61 kWh ರೂಪಾಂತರವು ಸಿಂಗಲ್ ಚಾರ್ಜ್‌ನಲ್ಲಿ 500 ಕಿ.ಮೀ ವರೆಗೆ ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ.
ಇ-ವಿಟಾರಾದ ಇಂಟೀರಿಯರ್ ವಿಷಯಕ್ಕೆ ಬಂದರೆ ಇದರ ಡಿಜಿಟಲ್ ಕಾಕ್‌ಪಿಟ್, ಸಾಫ್ಟ್-ಟಚ್ ಪ್ರೀಮಿಯಂ ಡ್ಯುಯಲ್-ಟೋನ್ ಒಳಾಂಗಣದೊಂದಿಗೆ ಸೌಕರ್ಯ, ಅನುಕೂಲತೆ ಮತ್ತು ಅತ್ಯಾಧುನಿಕ ಸಂಪರ್ಕವನ್ನು ಒಳಗೊಂಡಿದೆ. ಕ್ವಾಡ್ರುಪಲ್ ವರ್ಟಿಕಲ್ ಎಸಿ ವೆಂಟ್‌ಗಳು, ಪ್ಲಶ್ ಡೋರ್ ಆರ್ಮ್‌ರೆಸ್ಟ್ ಹಾಗೂ ಹೊಸ ಬೆಸ್ಪೋಕ್ ಸ್ಟೀರಿಂಗ್ ವೀಲ್ ಒಟ್ಟಾರೆ ಐಷಾರಾಮಿ ಅನುಭವ ನೀಡುತ್ತವೆ.
ಸೇಫ್ಟಿ ವಿಚಾರಕ್ಕೆ ಬಂದರೆ 7 ಏರ್‌ಬ್ಯಾಗ್‌ಗಳು, 360 ವ್ಯೂ ಕ್ಯಾಮೆರಾ, SOS ಬಟನ್‌ನೊಂದಿಗೆ ತುರ್ತು ಕರೆ, ಅಕೌಸ್ಟಿಕ್ ವೆಹಿಕಲ್ ಅಲಾರ್ಮ್ ಸಿಸ್ಟಮ್ (AVAS), ಆಲ್ ವೀಲ್ ಡಿಸ್ಕ್ ಬ್ರೇಕ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ (EPB), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಒದಗಿಸಲಾಗಿದೆ. ಇವಿಷ್ಟೇ ಅಲ್ಲದೇ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS ಲೆವೆಲ್ 2) ನೊಂದಿಗೆ ಸಜ್ಜುಗೊಂಡಿದೆ.


Click it and Unblock the Notifications








