Acer Faster Awards: ಏಸರ್ ಫಾಸ್ಟರ್ ಪ್ರಶಸ್ತಿ.. ಜ್ಯೂರಿ ಸಭೆ ಮುಕ್ತಾಯ!
ದೇಶದ ಆಟೋಮೋಟಿವ್ ಮಾಧ್ಯಮಗಳ ಸಂಘಟನೆಯಾಗಿ 'ಫಾಸ್ಟರ್' ಹೊರಹೊಮ್ಮಿದೆ. ಪ್ರಖ್ಯಾತ ಕಾರು & ದ್ವಿಚಕ್ರ ವಾಹನಗಳಿಗೆ ಕೊಡಲಾಗುವ ಏಸರ್ ಫಾಸ್ಟರ್ ಪ್ರಶಸ್ತಿ (Acer Faster Awards-2025) ಸಮಾರಂಭವನ್ನು ಈ ಮಾರ್ಚ್‌ನಲ್ಲಿ ಆದ್ದೂರಿಯಾಗಿ ಆಯೋಜಿಸಲಾಗಿದೆ. ಸದ್ಯ, ಈ ಕಾರ್ಯಕ್ರಮಕ್ಕಾಗಿ ಅಂತಿಮ ಹಂತದ ಸಿದ್ಧತೆಗಳು ನಡೆಸುತ್ತಿದ್ದು, ಫೆಬ್ರವರಿ 26 ಹಾಗೂ 27 ರಂದು ಚೆನ್ನೈನ ಮದ್ರಾಸ್ ಮೋಟಾರ್ ರೇಸ್ ಟ್ರ್ಯಾಕ್‌ನಲ್ಲಿ ಜರುಗಿದ ಜ್ಯೂರಿಗಳ ಸಭೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಮೂರನೇ ಆವೃತ್ತಿಯ ಏಸರ್ ಫಾಸ್ಟರ್ ಪ್ರಶಸ್ತಿಗೆ ಆಯ್ಕೆ ಮಾಡಿದಂತೆ, ಈ ಬಾರಿಯ ನಾಲ್ಕನೇ ಆವೃತ್ತಿಯಲ್ಲೂ 2024ರ ಜನವರಿಯಿಂದ ಬಿಡುಗಡೆಗೊಂಡ ಬಹುತೇಕ ಎಲ್ಲ ನೂತನ ಕಾರುಗಳು ಹಾಗೂ ದ್ವಿಚಕ್ರ ವಾಹನಗಳು ಅರ್ಹತೆ ಸುತ್ತಿನಲ್ಲಿ ಸ್ಥಾನ ಪಡೆದಿದ್ದವು. ವಿನ್ಯಾಸ, ಕಾರ್ಯಕ್ಷಮತೆ, ತಂತ್ರಜ್ಞಾನ ಮತ್ತು ಸುರಕ್ಷತೆ ಸೇರಿದಂತೆ ವಿವಿಧ ಮಾನದಂಡಗಳ ಅನ್ವಯ ಪರೀಕ್ಷಿಸಿ, ಕೆಲವು ವಾಹನಗಳನ್ನು ಅಂತಿಮ ಸುತ್ತಿಗೂ ನಾಮನಿರ್ದೇಶನ ಮಾಡಲಾಯಿತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಫಾಸ್ಟರ್ ಅಧ್ಯಕ್ಷ ಹಾಗೂ ಮೋಟಾರಾಯ್ಡ್ಸ್ ಸಂಪಾದಕ ಅಮಿತ್ ಛಂಗನಿ ಅವರು, 'ಚೆನ್ನೈನ ಮದ್ರಾಸ್ ಮೋಟಾರ್ ರೇಸ್ ಟ್ರ್ಯಾಕ್‌ನಲ್ಲಿ ಏಸರ್ ಫಾಸ್ಟರ್ ಪ್ರಶಸ್ತಿಯ ಜ್ಯೂರಿಗಳ ಸುತ್ತಿನ ಸಭೆ ಪೂರ್ಣಗೊಂಡಿದೆ. ಇಲ್ಲಿ ಪಾರದರ್ಶಕ ಮೌಲ್ಯಮಾಪನದೊಂದಿಗೆ ವಾಹನಗಳನ್ನು ಆಯ್ಕೆ ಮಾಡಿದ್ದೇವೆ. ಈ ಪ್ರಶಸ್ತಿ ಪ್ರದಾನ ಸಮಾರಂಭದ ಯಶಸ್ವಿಗಾಗಿ ಏಸರ್, ಗಾರ್ವೇರ್ ಹೈ-ಟೆಕ್ ಫಿಲ್ಮ್ಸ್ ಹಾಗೂ ರೆಡ್ ಬುಲ್ ಕಂಪನಿಗಳು ಪ್ರಾಯೋಜಕತ್ವ ವಹಿಸಿವೆ' ಎಂದು ಹೇಳಿದ್ದಾರೆ.
2025ರ ಏಸರ್ ಫಾಸ್ಟರ್ ಪ್ರಶಸ್ತಿಯ ಜ್ಯೂರಿ ಸದಸ್ಯರು
ಅಮಿತ್ ಛಂಗನಿ - ಸಂಪಾದಕರು (ಮೋಟಾರಾಯ್ಡ್ಸ್)
ಗೌರವ್ ಯಾದವ್ - ಸಂಪಾದಕರು (ಗಾಡಿವಾಡಿ)
ನರೇಂದ್ರ ಶರ್ಮಾ - ಸಂಪಾದಕರು (ಗೇರ್‌ಫ್ಲಿಕ್)
ಪ್ರಮೀತ್ ಘೋಷ್ - ವಿಶೇಷ ಪ್ರತಿನಿಧಿ (ಡ್ರೈವ್‌ಸ್ಪಾರ್ಕ್)
ರೋಹಿತ್ ಖುರಾನಾ - ಸಂಪಾದಕರು (ಕಾರ್‌ಬ್ಲಾಗ್)
ರೋಶನ್ ಜೋಸೆಫ್ - ಸಂಪಾದಕರು (ಪೈಲಟ್ ಆನ್ ವೀಲ್ಸ್)

ಫಾಸ್ಟರ್ ಕುರಿತ ಸಂಕ್ಷಿಪ್ತ ವಿವರ: ಪ್ರಪಂಚದಾದ್ಯಂತ ಹಲವು ಭಾಷೆಗಳ 250 ಮಿಲಿಯನ್‌ಗಿಂತಲೂ ಅಧಿಕ ಮಾಸಿಕ ಓದುಗರನ್ನು ತಲುಪುವ ವಿವಿಧ ಮಾಧ್ಯಮ ಸಂಸ್ಥೆಗಳ ಒಕ್ಕೂಟ ಈ ಫಾಸ್ಟರ್ ಆಗಿದೆ. ಈ ಸಂಘಟನೆ ಪ್ರತಿವರ್ಷವು ವರ್ಷದ ಕಾರು, ವರ್ಷದ ಬೈಕ್, ವರ್ಷದ ಪ್ರೀಮಿಯಂ ಕಾರು, ವರ್ಷದ ಪ್ರೀಮಿಯಂ ಬೈಕ್ ಸೇರಿದಂತೆ ವಿವಿಧ ವಿಭಾಗದಲ್ಲಿ ಪ್ರಶಸ್ತಿಯನ್ನು ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications