ಈ ಕಾರುಗಳನ್ನು ಏಕೆ ಖರೀದಿಸುತ್ತಿಲ್ಲ? 6 ಲಕ್ಷಕ್ಕಿಂತ ಕಡಿಮೆ ಬೆಲೆ, ಸುರಕ್ಷತೆಗಾಗಿ 6-ಏರ್‌ಬ್ಯಾಗ್‌!

ಭಾರತದಲ್ಲಿ ಬಜೆಟ್ ಬೆಲೆಯ ಕಾರುಗಳಿಗೆ (affordable cars) ಭಾರೀ ಡಿಮ್ಯಾಂಡ್ ಇದೆ, ಕಡಿಮೆ ಬೆಲೆ ಇದೆಯೆಂದು ಏನನ್ನು ನಿರೀಕ್ಷಿಸದೆ ಕಾರು ಖರೀದಿಸುತ್ತಾರೆ ಎಂದುಕೊಳ್ಳುವುದು ತಪ್ಪು. ಗ್ರಾಹಕರು ನೀಡುವ ಹಣ್ಣಕ್ಕೆ ಮೌಲ್ಯವಿದೆಯೇ ಎಂಬುದನ್ನು ಕೂಡ ನೋಡುತ್ತಾರೆ. ತಮ್ಮ ಬಜೆಟ್‌ಗೆ ತಕ್ಕಂತೆ ಕಾರಿನಲ್ಲಿ ಎಲ್ಲಾ ವೈಶಿಷ್ಟ್ಯಗಳನ್ನು ನಿರೀಕ್ಷಿಸುತ್ತಾರೆ. ಜೊತೆಗೆ ವಾಹನ ಸುರಕ್ಷತೆಯನ್ನು ಪರಿಗಣಿಸುವುದು ಸರ್ವೇ ಸಾಮಾನ್ಯವಾಗಿಬಿಟ್ಟದೆ. ಒಂದು ಕಾಲದಲ್ಲಿ 10 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ಕಾರುಗಳಲ್ಲಿ ಮಾತ್ರ ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳನ್ನು ನೀಡುತ್ತಿದ್ದರು. ಆದರೆ ಈಗ 6 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಕೆಲವು ಕಾರುಗಳು 6-ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತಿವೆ.

ಮಾರುತಿ ಸುಜುಕಿ ಆಲ್ಟೋ ಕೆ10: ಮಾರುತಿ ಸುಜುಕಿ ಆಲ್ಟೋ ಕೆ10 ಬೆಲೆಯು ಭಾರತದಲ್ಲಿ ರೂ.4.23 ಲಕ್ಷದಿಂದ ಪ್ರಾರಂಭವಾಗುತ್ತದೆ. ಪೆಟ್ರೋಲ್ ಮತ್ತು ಪೆಟ್ರೋಲ್-ಸಿಎನ್‌ಜಿ ಬೈ-ಫ್ಯೂಯಲ್ ಪವರ್ ಟ್ರೇನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಖಾಸಗಿ ಮತ್ತು ಫ್ಲೀಟ್ ವಿಭಾಗಗಳಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿರುವ ಆಲ್ಟೋ ಕೆ10, ಆರು ಏರ್‌ಬ್ಯಾಗ್ ಗಳನ್ನು ಸ್ಟ್ಯಾಂಡರ್ಡ್ ಫಿಟ್‌ಮೆಂಟ್ ಆಗಿ ಹೊಂದಿದೆ.

affordable-cars-with-6-airbags-maruti-alto-k10-hyundai-grand-i10

ಮಾರುತಿ ಸುಜುಕಿ ಸೆಲೆರಿಯೊ: ಮಾರುತಿ ಸೆಲೆರಿಯೊ 1.0-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದರ ಬೆಲೆ ರೂ. 5.64 ಲಕ್ಷದಿಂದ ಪ್ರಾರಂಭವಾಗುತ್ತದೆ. ಟ್ರಾನ್ಸ್ ಮಿಷನ್ ಆಯ್ಕೆಗಳಲ್ಲಿ ಮ್ಯಾನುವಲ್ ಮತ್ತು ಎಎಂಟಿ ಆಯ್ಕೆಗಳು ಇವೆ. ಮಾರುತಿ ಸುಜುಕಿ ಸೆಲೆರಿಯೊ ಕೂಡ ಸ್ಟ್ಯಾಂಡರ್ಡ್ ಫಿಟ್‌ಮೆಂಟ್ ಆಗಿ ಆರು ಏರ್‌ಬ್ಯಾಗ್ ಗಳೊಂದಿಗೆ ಖರೀದಿಗೆ ಲಭ್ಯವಿದೆ.

ಮಾರುತಿ ಸುಜುಕಿ ಇಕೋ: ಮಾರುತಿ ಸುಜುಕಿ ಇಕೋ ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ಮಾದರಿಯಾಗಿದೆ. ಈ ಮಿನಿವ್ಯಾನ್ ಸ್ಟ್ಯಾಂಡರ್ಡ್ ವೈಶಿಷ್ಟ್ಯವಾಗಿ ಆರು ಏರ್‌ಬ್ಯಾಗ್ ಗಳೊಂದಿಗೆ ಬರುತ್ತದೆ. ಇದರ ಬೆಲೆ ರೂ 6 ಲಕ್ಷಕ್ಕಿಂತ ಕಡಿಮೆ ಮತ್ತು ಫ್ಲೀಟ್ ವಿಭಾಗದಲ್ಲಿ ವ್ಯಾಪಕವಾಗಿ ಜನಪ್ರಿಯ ಮಾದರಿಯಾಗಿದೆ. ಇಕೋ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.5.70 ಲಕ್ಷಗಳಾಗಿದೆ.

affordable-cars-with-6-airbags-maruti-alto-k10-hyundai-grand-i10

ಮಾರುತಿ ಸುಜುಕಿ ವ್ಯಾಗನ್ಆರ್: ಮಾರುತಿ ಸುಜುಕಿ ವ್ಯಾಗನ್ ಆರ್, ಈ ಟಾಲ್ ಬಾಯ್ ಹ್ಯಾಚ್‌ಬ್ಯಾಕ್ ಖಾಸಗಿ ಖರೀದಿದಾರರು ಮತ್ತು ಫ್ಲೀಟ್ ಆಪರೇಟರ್ ಗಳಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿದೆ. ಸ್ಟ್ಯಾಂಡರ್ಡ್ ಫಿಟ್‌ಮೆಂಟ್ ಆಗಿ ಆರು ಏರ್‌ಬ್ಯಾಗ್ ಗಳೊಂದಿಗೆ ಬರುತ್ತದೆ. ಇದು ಪೆಟ್ರೋಲ್, ಪೆಟ್ರೋಲ್-ಸಿಎನ್‌ಜಿ ಬೈ-ಫ್ಯೂಯಲ್ ಆಯ್ಕೆಯೊಂದಿಗೂ ಲಭ್ಯವಿದೆ. ಸೆಲೆರಿಯೊದಂತೆ, ಇದು ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿದೆ.

ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್: ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.5.98 ಲಕ್ಷಗಳಾಗಿದೆ. ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಭಾರತದಲ್ಲಿ ದಕ್ಷಿಣ ಕೊರಿಯಾದ ವಾಹನ ತಯಾರಕರ ಎಂಟ್ರಿ ಲೆವೆಲ್ ಕಾರಾಗಿದೆ. ಇದರಲ್ಲಿ ಸ್ಟ್ಯಾಂಡರ್ಡ್ ವೈಶಿಷ್ಟ್ಯವಾಗಿ ಆರು ಏರ್‌ಬ್ಯಾಗ್ ಗಳನ್ನು ಅಳವಡಿಸಲಾಗಿದೆ.

affordable-cars-with-6-airbags-maruti-alto-k10-hyundai-grand-i10

ಭಾರತದಲ್ಲಿ ಸದ್ಯ ಅತ್ಯಂತ ಕಡಿಮೆ ಬೆಲೆಯಲ್ಲಿ 6 ಏರ್ ಬ್ಯಾಗ್ ಗಳನ್ನು ಹೊಂದಿರುವ ಅತ್ಯಂತ ಕೈಗೆಟುಕುವ ಕಾರುಗಳು ಇವಾಗಿವೆ. ಗ್ರಾಹಕರು ತಮ್ಮ ಬಜೆಟ್ ಬೆಲೆಯಲ್ಲಿ ಧೀರ್ಘ ಪ್ರಯಾಣಗಳನ್ನು ಮತ್ತಷ್ಟು ಸುರಕ್ಷಿತವಾಗಿಸಬಹುದು. ಈ ಕಡಿಮೆ ಬೆಲೆಯ ಹ್ಯಾಚ್‌ಬ್ಯಾಕ್‌ಗಳನ್ನು ಖರೀದಿಸುವ ಮೂಲಕ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬಹುದು. ಈ ಕಾರುಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, May 16, 2025, 12:06 [IST]
English summary
Affordable cars with 6 airbags maruti alto k10 hyundai grand i10
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+