ಎಲೆಕ್ಟ್ರಿಕ್ ಕಾರುಗಳು ಅಷ್ಟೇನು ದುಬಾರಿಯಲ್ಲ: 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ 3 ಕಾರುಗಳು
Affordable Electric cars: ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳು ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಿವೆ, ಇಂಧನ ಬೆಲೆಗಳು ಗಗನಕ್ಕೇರುತ್ತಿರುವುದು ಇದಕ್ಕೆ ಮೂಲ ಕಾರಣವಾಗಿದೆ. ಅನೇಕ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಇನ್ನೂ ಸಂದೇಹದಲ್ಲಿದ್ದರೆ, ಬಹುತೇಕರು ಈಗಾಗಲೇ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿ ಯಾವುದೇ ಗೊಂದಲವಿಲ್ಲದೆ ನಿರ್ವಹಣೆ ಮಾಡುತ್ತಿದ್ದಾರೆ. ಸದ್ಯ ಭಾರತದಲ್ಲಿ ಯಾವುದೇ ಸಮಸ್ಯಗಳಿಲ್ಲದೆ ಉತ್ತಮವಾಗಿ ಮಾರಾಟವಗುತ್ತಿರುವ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಕಾರುಗಳಿವೆ. ಇವು ನಗರ ಮತ್ತು ಸುತ್ತಮುತ್ತಲಿನ ದೈನಂದಿನ ಪ್ರಯಾಣಕ್ಕೆ ಸೂಕ್ತವಾಗಿರುತ್ತವೆ. ಟಾಟಾ ಮೋಟಾರ್ಸ್ ಮತ್ತು ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಈ ಕಾರುಗಳನ್ನು ನೀಡುತ್ತಿವೆ.
ಟಾಟಾ ಪಂಚ್ ಇವಿ: ಟಾಟಾ ಪಂಚ್ ಇವಿ 25 ಕಿಲೋವ್ಯಾಟ್ ಮತ್ತು 35 ಕಿಲೋವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳಲ್ಲಿ ಲಭ್ಯವಿದೆ. 35 ಕಿಲೋವ್ಯಾಟ್ ವೇರಿಯೆಂಟ್ ಒಂದು ಬಾರಿ ಚಾರ್ಜ್ ಮಾಡಿದರೆ 365 ಕಿ.ಮೀ ಓಡುತ್ತದೆ. ಹಾಗೆಯೇ 25 ಕಿಲೋವ್ಯಾಟ್ ವೇರಿಯೆಂಟ್ ಒಮ್ಮೆ ಚಾರ್ಜ್ ಮಾಡಿದರೆ 265 ಕಿ.ಮೀ ರೇಂಜ್ ನೀಡುತ್ತದೆ.

ಟಾಟಾ ಪಂಚ್ ಇವಿ ಮೂಲ ಮಾದರಿಯ ಬೆಲೆ ರೂ. 9.99 ಲಕ್ಷದಿಂದ ಪ್ರಾರಂಭವಾಗಿ ಟಾಪ್ ಮಾದರಿಯ ಬೆಲೆ ರೂ. 14.44 ಲಕ್ಷದವರೆಗೆ (ಎಕ್ಸ್-ಶೋರೂಂ) ಹೋಗುತ್ತದೆ. ಇದು ತಾಂತ್ರಿಕವಾಗಿ ಟಿಯಾಗೊ ಇವಿ ಮತ್ತು ಕಾಮೆಟ್ ಇವಿಯಂತೆಯೇ ಇರುತ್ತದೆ. ಪಂಚ್ ಇವಿ ಕಳೆದ ಕೆಲವು ತಿಂಗಳುಗಳಲ್ಲಿ ದೇಶದಲ್ಲಿ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
MG ಕಾಮೆಟ್ EV: ಎಂಜಿ ಕಾಮೆಟ್ ಇವಿ ಹೆದ್ದಾರಿ ಚಾಲನೆಗೆ ಸೂಕ್ತವಲ್ಲದಿದ್ದರೂ, ನಗರ ಮತ್ತು ಸುತ್ತಮುತ್ತಲಿನ ದೈನಂದಿನ ಪ್ರಯಾಣಕ್ಕಾಗಿ ಹಣಕ್ಕೆ ತಕ್ಕ ಮೌಲ್ಯ ನೀಡುವ ಕಾರಾಗಿದೆ. ಎಂಜಿ ಕಾಮೆಟ್ ಇವಿ ಭಾರತದ ಅಗ್ಗದ ಎಲೆಕ್ಟ್ರಿಕ್ ಕಾರಾಗಿದ್ದು, ಬೆಲೆಗಳು ರೂ.7.98 ಲಕ್ಷದಿಂದ ರೂ.9.98 ಲಕ್ಷಗಳವರೆಗೆ (ಪರಿಚಯಾತ್ಮಕ, ಎಕ್ಸ್ ಶೋರೂಂ) ಇವೆ. ಇದು 17.3 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ನೊಂದಿಗೆ ಹಿಂಭಾಗದಲ್ಲಿ ಮೌಂಟೆಡ್ ಎಲೆಕ್ಟ್ರಿಕ್ ಮೋಟರ್ ನೊಂದಿಗೆ ಬರುತ್ತದೆ.

ಕಾಮೆಟ್ ಇವಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 230 ಕಿ.ಮೀ ಓಡಿಸಬಹುದು. ಎಂಜಿ ಕಾಮೆಟ್ ಇವಿ ಬ್ಯಾಟರಿ-ಆಸ್-ಎ-ಸರ್ವೀಸ್ (ಬಿಎಎಸ್) ಆಯ್ಕೆಯೊಂದಿಗೆ ಬರುತ್ತದೆ. ಇದು ಕಾರನ್ನು ಮತ್ತಷ್ಟು ಕೈಗೆಟುಕುವಂತೆ ಮಾಡುತ್ತದೆ. ಎಂಜಿ ಕಾಮೆಟ್ ಇವಿ ಕಾಂಪ್ಯಾಕ್ಟ್ ವಿನ್ಯಾಸವನ್ನು ಹೊಂದಿದ್ದು, ಇದು ನಗರದ ದಟ್ಟಣೆಯಲ್ಲೂ ಸುಲಭವಾಗಿ ಮುನ್ನುಗ್ಗಲು ಸಹಕರಿಸುತ್ತದೆ. ಹೆಚ್ಚು ತೊಂದರೆಯಿಲ್ಲದೆ ಕಿಕ್ಕಿರಿದ ಸ್ಥಳಗಳಲ್ಲಿ ನಿಲ್ಲಿಸಲು ಸೂಕ್ತವಾದ ವಾಹನವಾಗಿದೆ.
ಟಾಟಾ ಟಿಯಾಗೊ ಇವಿ: ಟಾಟಾ ಟಿಯಾಗೊ ಇವಿ ಒಂದು ಬಾರಿ ಚಾರ್ಜ್ ಮಾಡಿದರೆ 315 ಕಿ.ಮೀ ಓಡಿಸಬಹುದು. ಇದು ನಗರ ಮತ್ತು ಸುತ್ತಮುತ್ತಲಿನ ದೈನಂದಿನ ಪ್ರಯಾಣಕ್ಕಾಗಿ ಕೈಗೆಟುಕುವ ಮತ್ತು ಹಣಕ್ಕೆ ಮೌಲ್ಯಯುತವಾದ ಇವಿಯನ್ನು ಹುಡುಕುತ್ತಿರುವ ಗ್ರಾಹಕರಿಗೆ ಪ್ರಾಯೋಗಿಕ ಎಲೆಕ್ಟ್ರಿಕ್ ಕಾರು ಆಗಲು ಅನುವು ಮಾಡಿಕೊಡುತ್ತದೆ.

ಅಂದಹಾಗೆ ಟಾಟಾ ಟಿಯಾಗೊ ಇವಿ ಭಾರತದ ಎರಡನೇ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರು. ಕೇವಲ 7.99 ಲಕ್ಷ ರೂ.ಗಳ (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಟಾಟಾ ಟಿಯಾಗೊ ಇವಿ ಕಾಂಪ್ಯಾಕ್ಟ್ ವಿನ್ಯಾಸದೊಂದಿಗೆ ಬರುತ್ತದೆ. ಇದು ಎಂಜಿ ಕಾಮೆಟ್‌ಗೆ ನೇರ ಪೈಪೋಟಿ ನೀಡುತ್ತದೆ. ಇವೆಲ್ಲವು ಧೀರ್ಘ ಪ್ರಯಾಣದ ವಾಹನಗಳಲ್ಲ ಎಂಬುದನ್ನು ಗಮನಿಸಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications