Hyundai: ಕೇವಲ 7.8 ಲಕ್ಷಕ್ಕೆ ಬಹುನಿರೀಕ್ಷಿತ ಹ್ಯುಂಡೈ SUV ಬಿಡುಗಡೆ: ಪ್ರತಿಸ್ಪರ್ಧಿಗಳಿಗೆ ನಡುಕ ಶುರು!
ಹುಂಡೈ ಕಂಪನಿಯು ಇಂದು ತಮ್ಮ ಹೊಚ್ಚ ಹೊಸ ಹುಂಡೈ ವೆನ್ಯೂ (Hyundai Venue) ಮತ್ತು ಹುಂಡೈ ವೆನ್ಯೂ ಎನ್ ಲೈನ್ (Hyundai Venue N line) ಅನ್ನು ಬಿಡುಗಡೆ ಮಾಡಿದೆ. ಇದು ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ದಿಟ್ಟ ಹೊಸ ವಿನ್ಯಾಸ, ಸುಧಾರಿತ ತಂತ್ರಜ್ಞಾನ ಮತ್ತು ರೋಮಾಂಚಕಾರಿ ಪರ್ಫಾಮೆನ್ಸ್ ನೀಡುವುದಾಗಿ ಕಂಪನಿ ಹ್ಯುಂಡೈ ಹೇಳಿದೆ. ರೂ. 7,89,900 (ಎಕ್ಸ್-ಶೋರೂಂ) ಆರಂಭಿಕ ಬೆಲೆಗಳೊಂದಿಗೆ, ಹೊಚ್ಚ ಹೊಸ ಹುಂಡೈ ವೆನ್ಯೂವನ್ನು ಈಗ ಗ್ರಾಹಕರು ಖರೀದಿಸಬಹುದಾಗಿದೆ.
ಬಾಹ್ಯ ವಿನ್ಯಾಸ: 3995 ಮಿ.ಮೀ ಉದ್ದ, 1800 ಮಿ.ಮೀ ಅಗಲ, 1665 ಮಿ.ಮೀ ಎತ್ತರ ಹಾಗೂ 2520 ಮಿ.ಮೀ ವೀಲ್‌ಬೇಸ್ ಹೊಂದಿದೆ. ಕ್ವಾಡ್ ಬೀಮ್ LED ಹೆಡ್‌ಲ್ಯಾಂಪ್‌ಗಳು, ಟ್ವಿನ್ ಹಾರ್ನ್ LED DRLಗಳು, ಹಾರಿಜಾನ್ LED ಪೊಸಿಷನಲ್ ಲ್ಯಾಂಪ್, ಹಿಂಭಾಗದ ಹಾರಿಜಾನ್ LED ಟೈಲ್ ಲ್ಯಾಂಪ್‌ಗಳು, ಡಾರ್ಕ್ ಕ್ರೋಮ್ ರೇಡಿಯೇಟರ್ ಗ್ರಿಲ್, ಸಿಗ್ನೇಚರ್ C-ಪಿಲ್ಲರ್ ಡಿಸೈನ್ ಹೊಂದಿದೆ.

ಸ್ಟೈಲಿಶ್ ಇಂಟೀರಿಯರ್: ಇದು ಸ್ಟೈಲಿಶ್ ಮತ್ತು ವಿಶಾಲವಾದ ಒಳಾಂಗಣವನ್ನು ಹೊಂದಿದ್ದು, ಆಧುನಿಕ ವಿನ್ಯಾಸ ಮತ್ತು ಪ್ರೀಮಿಯಂ ವಸ್ತುಗಳ ಮಿಶ್ರಣವನ್ನು ಪಡೆದಿದೆ. ಮುಂಭಾಗ ಮತ್ತು ಹಿಂಭಾಗದ ಪ್ರಯಾಣಿಕರಿಬ್ಬರಿಗೂ ವಿಶಾಲವಾದ ಸ್ಥಳಾವಕಾಶವನ್ನು ನೀಡುತ್ತದೆ. 12.3 ಇಂಚಿನ ಎರಡು ಕರ್ವ್ ಪನೋರಮಿಕ್ ಡಿಸ್ಪ್ಲೇಗಳು, ಹಿಂಭಾಗದ ವಿಂಡೋ ಸನ್‌ಶೇಡ್, VENUE ಬ್ರ್ಯಾಂಡಿಂಗ್‌ನೊಂದಿಗೆ ಡ್ಯುಯಲ್ ಟೋನ್ ಲೆದರ್ ಸೀಟುಗಳನ್ನು ಒದಗಿಸಲಾಗಿದೆ.
ಇವಿಷ್ಟೆ ಅಲ್ಲದೆ ಸುತ್ತುವರಿದ ಆಂಬಿಯೆಂಟ್ ಲೈಟಿಂಗ್‌ನೊಂದಿಗೆ ಕಾಫಿ ಟೇಬಲ್ ಸೆಂಟರ್ ಕನ್ಸೋಲ್, ಕ್ರ್ಯಾಶ್ ಪ್ಯಾಡ್‌ನಲ್ಲಿ ಆಂಬಿಯೆಂಟ್ ಲೈಟಿಂಗ್ (ಮೂನ್ ವೈಟ್), ಟೆರಾಝೋ-ಟೆಕ್ಸ್ಚರ್ಡ್ ಕ್ರ್ಯಾಶ್ ಪ್ಯಾಡ್ ಫಿನಿಶ್, ಪ್ರೀಮಿಯಂ ಲೆದರ್ ಆರ್ಮ್‌ರೆಸ್ಟ್, ಡಿ-ಕಟ್ ಸ್ಟೀರಿಂಗ್ ವೀಲ್, ಎಲೆಕ್ಟ್ರಿಕ್ 4-ವೇ ಡ್ರೈವರ್ ಸೀಟ್, 2-ಸ್ಟೆಪ್ ಒರಗುವ ಹಿಂಭಾಗದ ಸೀಟುಗಳು, ಹಿಂಭಾಗದ AC ವೆಂಟ್‌ಗಳನ್ನು ನೀಡಲಾಗಿದೆ.

ಆಧುನಿಕ ಫೀಚರ್ಸ್: ಬೋಸ್ ಪ್ರೀಮಿಯಂ ಸೌಂಡ್ 8 ಸ್ಪೀಕರ್ ಸಿಸ್ಟಮ್, ಮುಂದಿನ ಸಾಲಿನ ವೆಂಟಿಲೇಟೆಡ್ ಸೀಟುಗಳು, ಸರೌಂಡ್ ವ್ಯೂ ಮಾನಿಟರ್ (SVM), ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್‌ಪ್ಲೇ, ಧ್ವನಿ ಸಕ್ರಿಯಗೊಳಿಸಿದ ಸ್ಮಾರ್ಟ್ ಎಲೆಕ್ಟ್ರಿಕ್ ಸನ್‌ರೂಫ್, ಓವರ್-ದಿ-ಏರ್ (OTA) ನವೀಕರಣ, 70 ಹುಂಡೈ ಬ್ಲೂ ಲಿಂಕ್ ಕನೆಕ್ಟೆಡ್ ಫೀಚರ್ಸ್, ಬ್ಲೈಂಡ್ ಸ್ಪಾಟ್ ವ್ಯೂ ಮಾನಿಟರ್ (BVM) ನಂತಹ ಆಧುನಿಕ ಫಿಚರ್ಸ್ ನೀಡಲಾಗಿದೆ.
ಹೊಸ ಹುಂಡೈ ವೆನ್ಯೂನಲ್ಲಿ ಸುರಕ್ಷತೆಯು ಗಮನ ಸೆಳೆಯುತ್ತದೆ, ಎಲ್ಲಾ ವೇರಿಯೆಂಟ್‌ಗಳಲ್ಲಿ 33 ಸುರಕ್ಷತಾ ವೈಶಿಷ್ಟ್ಯಗಳನ್ನು ಪ್ರಮಾಣಿತವಾಗಿ ಒಳಗೊಂಡಂತೆ 65 ಕ್ಕೂ ಹೆಚ್ಚು ಸುಧಾರಿತ ಸೇಫ್ಟಿ ಫೀಚರ್ಸ್ ನೀಡಲಾಗಿದೆ. ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ (ESC), ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC), ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಸರೌಂಡ್ ವ್ಯೂ ಮಾನಿಟರ್ (SVM) ನೀಡಲಾಗಿದೆ.

ಇವಿಷ್ಟೆ ಅಲ್ಲದೆ ಎಲ್ಲಾ 4-ಡಿಸ್ಕ್ ಬ್ರೇಕ್‌ಗಳು, 6 ಏರ್‌ಬ್ಯಾಗ್‌ಗಳು, ಟೈರ್ ಒತ್ತಡ ಮೇಲ್ವಿಚಾರಣಾ ವ್ಯವಸ್ಥೆ (tpms) - ಹೈಲೈನ್, ಟೆಲಿಮ್ಯಾಟಿಕ್ಸ್ ಸ್ವಿಚ್‌ಗಳೊಂದಿಗೆ ಎಲೆಕ್ಟ್ರೋ ಕ್ರೋಮಿಕ್ ಮಿರರ್ (ECM), ಎಲ್ಲಾ ಸೀಟುಗಳಿಗೆ ರಿಮೈಂಡರ್‌ನೊಂದಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ರೋಲ್‌ಓವರ್ ಸೆನ್ಸರ್ ನೀಡುವ ಮೂಲಕ ಈಗ ಹೊಸ ವೆನ್ಯೂ ಅತ್ಯಂತ ಸುರಕ್ಷಿತ ವಾಹನಗಳಲ್ಲಿ ಒಂದಾಗಿದೆ.
ಎಂಜಿನ್ ವಿಶೇಷತೆಗಳು: ವೆನ್ಯೂನಲ್ಲಿ ಗ್ರಾಹಕರು ಆಯ್ಕೆ ಮಾಡಲು ಬಹು ಪವರ್‌ಟ್ರೇನ್‌ಗಳನ್ನು ನೀಡಲಾಗಿದೆ, ಅವುಗಳಲ್ಲಿ ಕಪ್ಪಾ 1.2 l MPi ಪೆಟ್ರೋಲ್, ಕಪ್ಪಾ 1.0 l ಟರ್ಬೊ GDi ಪೆಟ್ರೋಲ್ ಮತ್ತು U2 1.5 l CRDi ಡೀಸೆಲ್ ಸೇರಿವೆ. ಕಪ್ಪಾ 1.2 ಲೀಟರ್ MPi ಪೆಟ್ರೋಲ್ ದೈನಂದಿನ ಚಾಲನೆಗೆ ನಯವಾದ, ವಿಶ್ವಾಸಾರ್ಹ ಮತ್ತು ಪರಿಪೂರ್ಣ ಪವರ್‌ಟ್ರೇನ್ ಆಗಿದ್ದು, 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.
ಕಪ್ಪಾ 1.0 ಲೀಟರ್ ಟರ್ಬೊ GDi ಪೆಟ್ರೋಲ್ ಎಂಜಿನ್ ಹೆಚ್ಚು ಶಕ್ತಿಶಾಲಿ ಅನುಭವವನ್ನು ಬಯಸುವವರಿಗೆ ಸೂಕ್ತವಾಗಿದೆ. 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು ಐಡಲ್ ಸ್ಟಾಪ್ ಮತ್ತು ಗೋ (ISG) ಹೊಂದಿರುವ ಸುಧಾರಿತ 7 ಸ್ಪೀಡ್ DCT ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. ಇನ್ನು ಕೊನೆಯು U2 1.5 ಲೀಟರ್ CRDi ಡೀಸೆಲ್ ಎಂಜಿನ್ ರಾಜಿ ಇಲ್ಲದೆ ಕಾರ್ಯಕ್ಷಮತೆಯನ್ನು ಬಯಸುವವರಿಗಾಗಿ ವಿನ್ಯಾಸಗೊಳಿಸಲಾಗಿದೆ.


Click it and Unblock the Notifications








